ಬ್ಯಾಕ್ ಟು ಬ್ಯಾಕ್ ಸಕ್ಸಸ್‌ಫುಲ್ ಸೀರಿಯಲ್ ಲಾಂಚ್‌ಗಳ ನಂತರ ಈಗ ಜೀ ಕನ್ನಡ ಮತ್ತೊಂದು ಹೊಸ ಸೀರಿಯಲ್ ಲಾಂಚ್‌ಗೆ ರೆಡಿ ಮಾಡಿಕೊಂಡಿದೆ. ಜೀ ಕನ್ನಡದ ಹೊಸ ಸೀರಿಯಲ್‌ನ ಪ್ರೋಮೋ ಈಗ ರಿಲೀಸ್ ಆಗಿದೆ. ಸದ್ಯ ರಿವೀಲ್ ಆಗಿರೋ ಹೊಸ ಸೀರಿಯಲ್‌ಗೆ ಕರ್ಣ ಅಂತ ಹೆಸರಿಡಲಾಗಿದೆ. ಈ ಮೂಲಕ ಇಷ್ಟು ದಿನ ನಾಯಕಿ ಪ್ರಧಾನ ಸೀರಿಯಲ್‌ಗಳನ್ನೇ ಆಯ್ಕೆ ಮಾಡ್ತಿದ್ದ ಜೀ ಕನ್ನಡ, ತುಂಬಾ ದಿನಗಳ ನಂತರ ನಾಯಕ ಪ್ರಧಾನ ಕಥೆಯೊಂದನ್ನು ಆಯ್ಕೆ ಮಾಡಿದೆ. ಇದಕ್ಕೆ ಕಿರುತೆರೆಯ ಆಲ್‌ಟೈಮ್ ಕ್ರಶ್ ಅಂತಲೇ ಕರೆಸಿಕೊಳ್ಳೋ ಕಿರಣ್ ರಾಜ್‌ರನ್ನ ಟೈಟಲ್ ರೋಲ್‌ಗೆ ಆಯ್ಕೆ ಮಾಡಿಕೊಂಡಿದೆ.
ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಸೀರಿಯಲ್‌ನ ಬಳಿಕ ಒಂದು ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ಕಿರಣ್ ರಾಜ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದರು, ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ ರಿಲೀಸ್ ಕೂಡ ಆಯ್ತು, ಆದ್ರೆ ರಾನಿ ಹೇಳಿಕೊಳ್ಳುವಂತಾ ರೆಸ್ಪಾನ್ಸ್ ಪಡೆದಿಲ್ಲ. ಈಗ ರಾನಿ ಸಿನಿಮಾದ ಬಳಿಕ ಕಿರಣ್ ರಾಜ್ ಕರ್ಣ ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸ್ಸಾಗಿದ್ದಾರೆ. ಅಂದಹಾಗೆ ಈ ಸೀರಿಯಲ್‌ನಲ್ಲಿ ಕಿರಣ್ ರಾಜ್ ಡಾಕ್ಟರ್ ಕರ್ಣನ ಪಾತ್ರದಲ್ಲಿ ನಟಿಸ್ತಾ ಇದ್ದಾರೆ. ಮೊದಲ ಟೀಸರ್‌ನಲ್ಲಿ ನಾಯಕ ಕರ್ಣ ಒಬ್ಬ ವೈದ್ಯನ ಪಾತ್ರದಲ್ಲಿ ನಟಿಸ್ತಾ ಇದ್ದಾರೆ. ಸ್ತ್ರೀರೋಗ ತಜ್ಞನಾಗಿರ್ತಾನೆ ಅನ್ನೋದನ್ನ ರಿವೀಲ್ ಮಾಡಿದೆ ಜೀ ಕನ್ನಡ.
ಬಹುತಾರಾಗಣದ ಸೀರಿಯಲ್‌ಗಳಿಗೆ ಫೇಮಸ್ ಆಗಿರೋ ಜೀ ಕನ್ನಡ ಈ ಸೀರಿಯಲ್‌ನಲ್ಲೂ ಭರ್ಜರಿ ಸ್ಟಾರ್ ಕಾಸ್ಟ್‌ನೇ ಆಯ್ಕೆ ಮಾಡಿಕೊಂಡಿದೆ. ಕರ್ಣನ ತಂದೆ ಪಾತ್ರದಲ್ಲಿ ಖ್ಯಾತ ನಿರ್ದೇಶಕ, ನಟ ನಾಗಾಭರಣ ನಟಿಸ್ತಾ ಇದ್ದಾರೆ, ತುಂಬಾ ದಿನಗಳ ನಂತರ ಕನ್ನಡ ಸಿನಿಮಾದ ಖ್ಯಾತ ಪೋಷಕ ನಟಿ ಆಶಾಲತಾ ಅಜ್ಜಿ ಪಾತ್ರದಲ್ಲಿ ನಟಿಸಿದ್ದಾರೆ, ಸೀನಿಯರ್ ಆಕ್ಟರ್ ಅಶೋಕ್ ತಾತನ ಪಾತ್ರದಲ್ಲಿದ್ರೆ ಸುಂದರ್ ವೀಣಾ ಮಾವನಾಗಿ ಕಾಣಿಸಿಕೊಳ್ಳಲಿದ್ದಾರೆ.. ಉಳಿದಂತೆ ಸದ್ಯ ಸೀರಿಯಲ್ ದುನಿಯಾದಲ್ಲಿ ಹೆಸರು ಮಾಡಿರೋ ಸ್ಟಾರ್ ಕಾಸ್ಟ್ ಈ ಧಾರಾವಾಹಿಯಲ್ಲಿದೆ.
ಜಗತ್ತಿನ ಪ್ರತಿಷ್ಠಿತ ವೈದ್ಯನಾಗಿರೋ ಕರ್ಣನಿಗೆ ಮನೆಯವ್ರೇ ಎಲ್ಲಾ, ಆದರೆ ಕರ್ಣ ಮನೆಯವರಿಗೆಲ್ಲಾ ಕೆಲಸದ ಆಳಿನಂತೆ. ಮನೆಯವರೆಲ್ಲಾ ಕರ್ಣನನ್ನು ಹೀಗೆ ನಡೆಸಿಕೊಳ್ಳಲು ಏನ್ ಕಾರಣ ಅನ್ನೋದನ್ನೂ ಮೊದಲ ಟೀಸರ್ ನಲ್ಲೇ ರಿವೀಲ್ ಮಾಡಲಾಗಿದೆ.
ಸದ್ಯ ಜೀ ಕನ್ನಡದಲ್ಲಿ ಸಂಜೆ 5.30ರಿಂದ ರಾತ್ರಿ 10.30ರೆವರೆಗೆ ಸೀರಿಯಲ್‌ಗಳು ಜಾಮ್ ಪ್ಯಾಕ್ ಆಗಿದ್ದು, ಎಲ್ಲಾ ಸೀರಿಯಲ್‌ಗಳಿಗೂ ಸಖತ್ ರೆಸ್ಪಾನ್ಸ್ ಸಿಕ್ತಾ ಇದೆ, ಹಾಗಾದ್ರೆ ಈ ಹೊಸ ಸೀರಿಯಲ್ ಅನ್ನು ಯಾವ ಟೈಮ್ ಗೆ ಪ್ರಸಾರ ಮಾಡೋ ಪ್ಲಾನ್ ಮಾಡಿಕೊಂಡಿದೆ ಅನ್ನೋದಿನ್ನು ರಿವೀಲ್ ಆಗಿಲ್ಲ, ಆದ್ರೆ ಸದ್ಯ ರಾತ್ರಿ 8ಕ್ಕೆ ಪ್ರಸಾರವಾಗ್ತಾ ಇರೋ ಲಕ್ಷ್ಮಿ ನಿವಾಸ ಸೀರಿಯಲ್ ಒಂದು ಗಂಟೆಯ ಸೀರಿಯಲ್ ಆಗಿದ್ದು, ಅದನ್ನು ಅರ್ಧಗಂಟೆಗೆ ಇಳಿಸಿ, 8.30ಕ್ಕೆ ಕರ್ಣ ಸೀರಿಯಲ್ ಟೆಲಿಕಾಸ್ಟ್ ಮಾಡುವ ಸಾಧ್ಯತೆ ಇದೆ. ಈ ಸೀರಿಯಲ್‌ನ ಸಾಕಷ್ಟು ಹಿಟ್ ವೀಡಿಯೋಗಳನ್ನು ಶೃತಿ ನಾಯ್ಡು ಅವ್ರೇ ನಿರ್ಮಾಣ ಮಾಡ್ತಿದ್ದಾರೆ.