ಬಾಲಿವುಡ್ ಬಾದ್‌ಷಾ ಶಾರೂಖ್ ಖಾನ್ ಬರ್ತ್ ಡೇ ಹಿನ್ನೆಲೆಯಲ್ಲಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಕಿಂಗ್ ಚಿತ್ರದ ಟೀಸರ್ ಲಾಂಚ್ ಆಗಿದೆ. ಹೊಚ್ಚ ಹೊಸ ಶಾರೂಖ್ ಸಿಕ್ಕಾಪಟ್ಟೆ ವಿಧ್ವಂಸಕನಾಗಿದ್ದು, ನೆಕ್ಸ್ಟ್ ವೆಲೆವ್ ಮೇಕಿಂಗ್ ವ್ಹಾವ್ ಫೀಲ್ ಕೊಡ್ತಿದೆ.
ಬಾಲಿವುಡ್‌ನ ಮೋಸ್ಟ್ ಸ್ಟೈಲಿಶ್ ಆ್ಯಕ್ಟರ್, ಕಿಂಗ್ ಖಾನ್ ಶಾರೂಖ್ ತಮ್ಮ 60ನೇ ಬರ್ತ್ ಡೇ ಹಿನ್ನೆಲೆ ಬಹುನಿರೀಕ್ಷಿತ ಕಿಂಗ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಯೆಸ್.. ಇದು ಶಾರೂಖ್ ಹೋಮ್ ಪ್ರೊಡಕ್ಷನ್ ರೆಡ್ ಚಿಲ್ಲೀಸ್ ಬ್ಯಾನರ್‌ನಡಿ ತಯಾರಾಗಿರೋ ಔಟ್ ಅಂಡ್ ಔಟ್ ಆ್ಯಕ್ಷನ್ ಎಂಟರ್‌ಟೈನರ್ ಆಗಿದೆ. ಮಾಸ್ ಸಿನಿಮಾಗಳ ಮಾಂತ್ರಿಕ ಸಿದ್ದಾರ್ಥ್ ಆನಂದ್ ಈ ಕಿಂಗ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮಾಸ್ ಎಲಿಮೆಂಟ್ಸ್ ಜೊತೆ ಶಾರೂಖ್‌ನ ತೋರಿಸಿದ್ದಾರೆ.

ವಿಧ್ವಂಸಕನಾದ ‘ಕಿಂಗ್’.. ನ್ಯೂ ಶಾರೂಖ್ ಸೆನ್ಸೇಷನ್..!
ಇದು ಶೋ ಟೈಂ.. ಬಿಟೌನ್ ಬಾದ್‌ಷಾ ಮಾಸ್ ಮಂತ್ರ

ನಾನ್ಯಾಕೆ ಇಷ್ಟೊಂದು ಮಂದಿಯನ್ನ ಕೊಲ್ಲುತ್ತಿದ್ದೀನಿ. ಅವ್ರು ಒಳ್ಳೆಯವ್ರಾ ಅಥ್ವಾ ಕೆಟ್ಟವರಾ ಗೊತ್ತಿಲ್ಲ. ಆದ್ರೆ ಅವರಲ್ಲಿ ಒಂದು ಭಯ ಎದ್ದು ಕಾಣ್ತಿದೆ. ಈ ರೀತಿ ನನಗೆ ವಿಶ್ವದಾದ್ಯಂತ ಕನಿಷ್ಟ 100 ರಾಷ್ಟ್ರಗಳಲ್ಲಾದ್ರೂ ಭಯ ಪಡುವಂತಾಗಬೇಕು. ನಾನು ಬರೀ ಭಯ ಅಲ್ಲ.. ವಿಧ್ವಂಸಕ ಅಂತ ಹೊಚ್ಚ ಹೊಸ ಶಾರೂಖ್ ಖಾನ್ ಶೋ ಬಿಗಿನ್ಸ್ ಅಂತ ಟೀಸರ್ ಝಲಕ್‌ನಲ್ಲಿ ತೋರಿಸಲಾಗಿದೆ.

ಕಿಂಗ್ ಖಾನ್ ಲುಕ್, ಕಾಸ್ಟ್ಯೂಮ್ಸ್, ಹೇರ್ ಸ್ಟೈಲ್, ಹೇರ್ ಕಲರ್, ಗನ್ ಹಿಡಿದು ಘರ್ಜಿಸೋ ಪರಿ, ಇಂಟರ್‌ನ್ಯಾಷನಲ್ ಕಲಾವಿದರು ಹೀಗೆ ಎಲ್ಲವೂ ಇಂಪ್ರೆಸ್ಸೀವ್ ಆಗಿದೆ. 2026ಕ್ಕೆ ಕಿಂಗ್ ಸಿನಿಮಾ ರಿಲೀಸ್ ಆಗಲಿದ್ದು, ಶಾರೂಖ್ ತನಗೆ ಸಿಕ್ಕಿರೋ ಬಿರುದಿನ ಟೈಟಲ್ ಮೇಲೆ ಸಿನಿಮಾ ಮಾಡ್ತಿರೋದು ಅತೀವ ನಿರೀಕ್ಷೆ ಮೂಡಿಸಿದೆ. ಆದ್ರೆ ಶಾರೂಖ್ ಲುಕ್ ಹಾಲಿವುಡ್‌ನಿಂದ ಕದ್ದಿದ್ದು ಅನ್ನೋ ಟಾಕ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

100 ದೇಶಗಳನ್ನ ಕಬ್ಜ ಮಾಡುವ ಧಾವಂತದಲ್ಲಿ ‘ಕಿಂಗ್’
ಸ್ಟೈಲಿಶ್ ಲುಕ್ಸ್.. ಪಠಾಣ್ ಡೈರೆಕ್ಟರ್ ಜೊತೆ ಅದೇ ಲಕ್

2023ರಲ್ಲಿ ಪಠಾಣ್ ಹಾಗೂ ಜವಾನ್ ಸಿನಿಮಾಗಳ ಸಕ್ಸಸ್‌ನಿಂದ ಶಾರೂಖ್ ಜೊತೆ ಬಾಲಿವುಡ್‌ಗೆ ಹಿಡಿದಿದ್ದ ಗ್ರಹಣ ಕೂಡ ದೂರವಾಯ್ತು. ಆದ್ರೆ ಕಿಂಗ್ ಖಾನ್‌ಗೆ ಪಠಾಣ್ ಮುಖೇನ ಸಿದ್ದಾರ್ಥ್ ಆನಂದ್ ಅವರೇ ಬಿಗ್ ಬ್ರೇಕ್ ನೀಡಿದ್ರು. ಇನ್ ಫ್ಯಾಕ್ಟ್ ಖಾನ್‌ನ ಇಂಪ್ರೆಸ್ಸೀವ್ ಲುಕ್ಸ್‌ನಲ್ಲಿ ದೀಪಿಕಾ ಜೊತೆ ತೋರಿಸಿದ್ರು. ಇದೀಗ ನ್ಯೂ ಲುಕ್ ಜೊತೆ ನಯಾ ಶಾರೂಖ್‌ನ ನಿಮ್ಮ ಮುಂದೆ ತರ್ತಿದ್ದಾರೆ ಅದೇ ಡೈರೆಕ್ಟರ್.
ಪಠಾಣ್ ಹಾಗೂ ಜವಾನ್ ಹಿಟ್ಸ್ ಬಳಿಕ ಡಂಕಿ ಮೂಲಕ ಡುಮ್ಕಿ ಹೊಡೆದ ಶಾರೂಖ್, ಎರಡು ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ರು. ಇದೀಗ ಈ ವರ್ಷಾಂತ್ಯದಲ್ಲಿ ಕಿಂಗ್ ಕಹಳೆ ಮೊಳಗಿಸಿದ್ದಾರೆ. ಟೀಸರ್‌ಗೆ ಎಲ್ಲೆಡೆಯಿಂದ ಅಭೂತಪೂರ್ವವಾದ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಮೂಡಿ ಬರ್ತಿದ್ದು, 2026ರಲ್ಲಿ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾರೆ ಕಿಂಗ್.





