ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ, ಮಾರ್ಕ್ ರಿಲೀಸ್ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್.. ಹೀಗೆ ಎಲ್ಲವನ್ನೂ ಮುಗಿಸಿ, ಈಗಷ್ಟೇ ರಿಲ್ಯಾಕ್ಸ್ ಮೂಡ್‌ನಿಂದ ಹೊರಬರ್ತಿದ್ದಾರೆ ಬಾದ್‌ಷಾ ಕಿಚ್ಚ ಸುದೀಪ್. ಹಾಗಾದ್ರೆ ಯಾವುದಾಗುತ್ತೆ ಕಿಚ್ಚನ ನೆಕ್ಸ್ಟ್ ವೆಂಚರ್..? ಅನೂಪ್ ಭಂಡಾರಿ, ಸಂತೋಷ್ ಆನಂದ್‌ರಾಮ್, ಸುಕುಮಾರ್ ಶಿಷ್ಯ.. ಯಾರಿಗೆ ಸಿಗುತ್ತೆ ಬಾದ್‌ಷಾ ಡೇಟ್ಸ್..?
ಆಲ್ ಇಂಡಿಯಾ ಕಟೌಟ್ ಬಾದ್‌ಷಾ ಕಿಚ್ಚ ಸುದೀಪ್.. 54ರ ಹರೆಯದಲ್ಲೂ 24ರ ಹುಮ್ಮಸ್ಸು. ದಣಿವಾಗದೆ ಹಗಲಿರುಳು ಕಲೆಗಾಗಿ ದುಡಿಯೋ ಜೀವ. ಮ್ಯಾಕ್ಸ್ ಹಾಗೂ ಮಾರ್ಕ್ ಚಿತ್ರಗಳ ಬಳಿಕ ಕಿಚ್ಚನ ನೆಕ್ಸ್ಟ್ ವೆಂಚರ್ ಬಗ್ಗೆ ಬಹಳ ನಿರೀಕ್ಷೆಯಿದೆ. ಸುದೀಪ್ ಮುಂದಿನ ನಡೆಗಾಗಿ ಅಭಿಮಾನಿಗಳ ಜೊತೆ ಕನ್ನಡ ಚಿತ್ರಪ್ರೇಮಿಗಳು ಕೂಡ ಬಹಳ ಕಾತರದಿಂದ ಕಾಯ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಅನೂಪ್, ಸಂತು, ಸುಕ್ಕು ಶಿಷ್ಯ.. ಯಾರಿಗೆ ಬಾದ್‌ಷಾ ಡೇಟ್ಸ್?
ಕಿಕ್‌ಸ್ಟಾರ್ಟ್ ಖುಷಿಯಲ್ಲಿ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷ’
ಮಾರ್ಕ್ ಚಿತ್ರದ ಶೂಟಿಂಗ್ ಶುಭಾರಂಭ ಆಗೋಕೆ ಮೊದಲೇ ಬಿಲ್ಲ ರಂಗ ಬಾಷ ಸೆಟ್ಟೇರಿತ್ತು. ಈ ಹಿಂದೆ ಕಿಂಗ್ ಕಿಚ್ಚನಿಗೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ಅನೂಪ್ ಭಂಡಾರಿ ಅವ್ರೇ ಬಿಆರ್‌ಬಿಗೂ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅನೂಪ್ ಹಾಗೂ ಸುದೀಪ್ ನಡುವೆ ಒಬ್ಬ ಡೈರೆಕ್ಟರ್-ಹೀರೋ ಅನ್ನೋದಕ್ಕಿಂತ ಹೆಚ್ಚಾಗಿ ಒಳ್ಳೆಯ ಸ್ನೇಹ ಸಂಬಂಧ ಏರ್ಪಟ್ಟಿದೆ. ಹೀಗಾಗಿ ಸದ್ಯ ವೆಕೇಷನ್ ಮೂಡ್‌ನಿಂದ ಹೊರಬರ್ತಿರೋ ಕಿಚ್ಚ, ಬಿಲ್ಲ ರಂಗ ಬಾಷ ಸಿನಿಮಾನ ಕಿಕ್‌ಸ್ಟಾರ್ಟ್ ಮಾಡ್ತಾರಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.
ಅಲ್ಲದೆ, ಪಕ್ಕದ ಟಾಲಿವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ಸುಕುಮಾರ್ ಶಿಷ್ಯನ ರಾಮ್‌ಕಾಮ್ ಜಾನರ್ ಚಿತ್ರಕ್ಕೆ ಕಿಚ್ಚ ಗ್ರೀನ್ ಸಿಗ್ನಲ್ ನೀಡಿದ್ರು. ಸದಾ ಭಿನ್ನ ವಿಭಿನ್ನ ಜಾನರ್‌ಗಳನ್ನ ಟ್ರೈ ಮಾಡೋ ಸುದೀಪ್, ಆ್ಯಕ್ಷನ್ ಹಾಗೂ ಮಾಸ್‌ನಿಂದ ರೊಮ್ಯಾನ್ಸ್ ವಿತ್ ಕಾಮಿಡಿ ಜಾನರ್ ಚಿತ್ರ ಮಾಡೋ ಮನಸ್ಸು ಮಾಡಿದ್ರು. ಆದ್ರೀಗ ಆ ಸಿನಿಮಾ ಕೂಡ ಸೆಟ್ಟೇರುವ ಹಂತದಲ್ಲಿದೆ.
ಸುಕುಮಾರ್ ಶಿಷ್ಯನ ರಾಮ್‌ಕಾಮ್ ವೆಂಚರ್ ಸೆಟ್ಟೇರುತ್ತಾ..?
ಸಂತೋಷ್ ಆನಂದ್‌ರಾಮ್ ಕಥೆಗೆ ಏನಂದ್ರು ಕಿಂಗ್ ಕಿಚ್ಚ..?!
ಈ ಮಧ್ಯೆ ರಾಮಾಚಾರಿ, ರಾಜಕುಮಾರ ಸಿನಿಮಾಗಳ ಖ್ಯಾತಿಯ ಸಕ್ಸಸ್‌ಫುಲ್ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ಕೂಡ ಸುದೀಪ್‌ಗೆ ಕಥೆ ಹೇಳಿದ್ದಾರೆ. ಬಾದ್‌ಷಾ ಸುದೀಪ್‌ಗೆ ಕಥೆ ಇಷ್ಟವಾಗಿದ್ದು, ಸಿನಿಮಾ ಮಾಡೋ ಭರವಸೆ ಕೂಡ ನೀಡಿದ್ದಾರೆ ಎನ್ನಲಾಗ್ತಿದೆ. ಸಂತೋಷ್ ಆನಂದ್‌ರಾಮ್ ಅತ್ತ ತಮಿಳಿನ ಶಿವಕಾರ್ತಿಕೇಯನ್‌ಗೂ ಕಥೆ ಸಿದ್ಧಗೊಳಿಸ್ತಿದ್ದಾರೆ ಅನ್ನೋದು ಗೊತ್ತೇಯಿದೆ. ಹೀಗಾಗಿ ಸಂತು ನಡೆ ಮೊದಲು ಯಾರ ಕಡೆ ಅನ್ನೋದು ಸಸ್ಪೆನ್ಸ್.
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ, ಮಾರ್ಕ್ ಚಿತ್ರದ ರಿಲೀಸ್, ಪ್ರಮೋಷನ್ಸ್ ಜೊತೆ ಜೊತೆಗೆ ಸಿಸಿಎಲ್‌ನಲ್ಲೂ ತೊಡಗಿಸಿಕೊಂಡು, ಕರ್ನಾಟಕಕ್ಕೆ ಸಿಸಿಎಲ್ ಗರಿ ತಂದಿದ್ರು ಕಿಚ್ಚ. ಇದೀಗ ಈ ಮೂವರು ಡೈರೆಕ್ಟರ್‌ಗಳಲ್ಲಿ ತಮ್ಮ ಡೇಟ್ಸ್‌ನ ಮೊದಲು ಯಾರಿಗೆ ಕೊಡ್ತಾರೆ ಅನ್ನೋದೇ ಯಕ್ಷ ಪ್ರಶ್ನೆ. ಯಾರಿಗಾದ್ರೂ ಕೊಡಲಿ, ಆದ್ರೆ ಮತ್ತೆ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್, ಮತ್ತೊಂದು ಮಗದೊಂದು ಅಂತ ಬಾದ್‌ಷಾ ಬ್ಯುಸಿ ಆಗದಿದ್ರೆ ಅಷ್ಟೇ ಸಾಕು. ಮೊದಲು ಸಿನಿಮಾ. ಕ್ರಿಕೆಟ್ ಅವ್ರ ಸೆಕೆಂಡ್ ಚಾಯ್ಸ್ ಆದ್ರೆ ಚಿತ್ರರಂಗಕ್ಕೆ ಒಳಿತಾಗಲಿದೆ.





