ಕೋಟಿ ಕೋಟಿ ರೆಮ್ಯುನರೇಷನ್ ಪಡೆದ ಮಾತ್ರಕ್ಕೆ ಕಲಾವಿದರು ಸೂಪರ್ ಸ್ಟಾರ್ ಗಳು ಆಗೋಕೆ ಆಗಲ್ಲ. ಅದು ಕೋಟ್ಯಂತರ ಮಂದಿ ಅಭಿಮಾನಿಗಳ ಹೃದಯ ಗೆಲ್ಲೋದ್ರಿಂದ ಮಾತ್ರ ಸಾಧ್ಯ. ಇತ್ತೀಚೆಗೆ ನಟ ಕಿಚ್ಚ ಸುದೀಪ್ ಹಾಗೂ ಧ್ರುವ ಸರ್ಜಾ ಮಾಡಿದ ಸಾಮಾಜಿಕ ಕಾರ್ಯಗಳು, ಸಮಾಜದಲ್ಲಿ ಅವ್ರ ಘನತೆ, ಗೌರವವನ್ನು ಮತ್ತಷ್ಟು ಹೆಚ್ಚಿಸಿವೆ. ಇಷ್ಟಕ್ಕೂ ಅವರಿಬ್ಬರೂ ಅಂಥದ್ದೇನು ಮಾಡಿದ್ರು ಅಂತೀರಾ..? ಜಸ್ಟ್ ವಾಚ್.
ಒಂದು ವರ್ಷ 10 ತಿಂಗಳ ಈ ಪುಟ್ಟ ಕಂದಮ್ಮನ ಹೆಸರು ಕೀರ್ತನ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಆಫೀಸರ್ ಕಿಶೋರ್ ಹಾಗೂ ನಾಗಶ್ರೀ ಎಂಬುವವರ ಮುದ್ದಿನ ಮಗಳು. ತಾನು ಯಾರು..? ತನ್ನವಱರು ಅನ್ನೋದನ್ನ ಅರಿತುಕೊಳ್ತಿರೋ ಈ ಮುಗ್ಧ ಮಗುವಿನ ಬಾಳಲ್ಲಿ ಆ ವಿಧಿ ಆಟ ಶುರುವಿಟ್ಟಿದೆ. ಹೌದು.. ಕೀರ್ತನಾಗೆ SMA ಅನ್ನೋ ಅಪರೂಪದ ಕಾಯಿಲೆಯಿದೆ. ಅದಕ್ಕೇನೋ ಚಿಕಿತ್ಸೆ ಹಾಗೂ ಔಷಧ ಎರಡೂ ಇದೆ. ಆದ್ರೆ ಅದ್ರ ಬೆಲೆ ಬರೋಬ್ಬರಿ 16 ಕೋಟಿ ಅಂದ್ರೆ ನೀವು ನಂಬಲೇಬೇಕು.
ಈಗಾಗ್ಲೇ ಮಗುವನ್ನ ಉಳಿಸಿಕೊಳ್ಳಲು ಕೀರ್ತನ ತಂದೆ-ತಾಯಂದಿರು ಇರೋ ಮನೆ, ಆಸ್ತಿ-ಪಾಸ್ತಿಯನ್ನೆಲ್ಲಾ ಮಾರಿಕೊಂಡಿದ್ದಾರೆ. 16 ಕೋಟಿ ಅಂದ್ರೆ ತಮಾಷೆಯೇ..? ಇದೀಗ ಈ ಮಗುವಿಗಾಗಿ ಕಿಚ್ಚ ಸುದೀಪ್ ಅವರೇ ಸಾರ್ವಜನಿಕರ ಬಳಿ ಕೈಲಾದಷ್ಟು ಸಹಾಯ ಮಾಡಲು ವಿನಂತಿಸಿ, ವಿಡಿಯೋವೊಂದನ್ನ ಮಾಡಿದ್ದಾರೆ. ಹೌದು.. ತಾನು ಕೂಡ ದೊಡ್ಡ ಮೊತ್ತದ ಆರ್ಥಿಕ ನೆರವು ನೀಡಿ, ಜನಕ್ಕೂ ಕೈಲಾದಷ್ಟು ಸಹಾಯ ಮಾಡಿ ಅಂತ QR ಕೋಡ್, ಆ ಮಗುವಿನ ಪೋಷಕರ ಫೋನ್ ಪೇ ಹಾಗೂ G ಪೇ ನಂಬರ್ಸ್ ನ ಆ ವಿಡಿಯೋ ಮುಖೇನ ಶೇರ್ ಮಾಡಿದ್ದಾರೆ.
ಇಲ್ಲಿ ಖುಷ್ ಖುಷಿಯಾಗಿ ಅಪ್ಪ, ಅಮ್ಮನನ್ನ ಮುದ್ದಾಡ್ತಾ, ನಗು ಚೆಲ್ಲಿರೋ ಈ ಹುಡ್ಗನ ಹೆಸರು ಚಿರು. ನೋಟ ಕಳೆದುಕೊಳ್ಳೋ ಮೂಲಕ ಇನ್ಮೇಲೆ ತನ್ನ ಇಡೀ ಜೀವನ ಕಗ್ಗತ್ತಲು ಅಂತಲೇ ಭಾವಿಸಿದ್ದ 4 ವರ್ಷದ ಪುಠಾಣಿ ಕಂದ, ಸದ್ಯ ಎಲ್ಲರಂತೆ ಪ್ರಪಂಚವನ್ನು ಕಾಣ್ತಿದ್ದಾನೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಧ್ರುವ ಸರ್ಜಾ.
ಹೌದು.. ಯಾದಗಿರಿಯ ಕುಗ್ರಾಮವೊಂದರಿಂದ ಗಾರೆ ಕೆಲಸ ಮಾಡಿ, ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಶಂಕರ, ಅಲ್ಲೇ ಗಾರೆ ಕೆಲಸ ಮಾಡುವ ಬೆಂಗಾಳಿ ಹುಡ್ಗಿಯನ್ನ ಪ್ರೀತಿಸಿ, ಮದ್ವೆ ಆಗಿದ್ದರು. ಅದಕ್ಕೆ ಸಾಕ್ಷಿಯೇ ಈ ಚಿರು. ತಾಯಿಗಿದ್ದ ಹೆರಿಡಿಟರಿ ಪ್ರಾಬ್ಲಂನಿಂದ ತನಗೂ ಕಣ್ಣಿನ ಸಮಸ್ಯೆ ಎದುರಾಗಿದೆ. ಬರ್ತಾ ಬರ್ತಾ ಎರಡೂ ನಯನಗಳು ಪೊರೆ ಬಂದು, ಕಂಪ್ಲೀಟ್ ಕಾಣದಂತಾಗಿದೆ. ಇದು ಧ್ರುವ ಸರ್ಜಾ ಅವ್ರ ಗಮನಕ್ಕೆ ಬರ್ತಿದ್ದಂತೆ ಕೂಡಲೇ ಎರಡೂ ಕಣ್ಣುಗಳ ಶಸ್ತ್ರ ಚಿಕಿತ್ಸೆ ಮಾಡಿಸಿ, ಅದ್ರ ಕಂಪ್ಲೀಟ್ ಖರ್ಚು ವೆಚ್ಚಗಳನ್ನ ತಾವೇ ಭರಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಂದಹಾಗೆ ಧ್ರುವ ಸರ್ಜಾ ಇಲ್ಲಿಯವರೆಗೆ ಸುಮಾರು 60ಕ್ಕೂ ಅಧಿಕ ಮಂದಿ ಅಸಹಾಯಕರ ಬಾಳಿಗೆ ಬೆಳಕಾಗಿದ್ದಾರೆ. ತಮ್ಮ ಮನೆಯ ಬಳಿಯೇ ಇರೋ ಅಂತಹ ಆಪ್ತರೂ ಆದಂತಹ ಆಪ್ಟಮಾಲಜಿಸ್ಟ್ ಡಾ. ಚೇತನ್ ಅವರಿಗೆ ಹೇಳಿ ಇಷ್ಟೊಂದು ಸರ್ಜರಿಗಳನ್ನ ಮಾಡಿಸಿದ್ದಾರೆ. ಸದ್ಯ ಚಿರು ಅವರ ಕಣ್ಣುಗಳ ಶಸ್ತ್ರಚಿಕಿತ್ಸೆ ಕೂಡ ಅವ್ರೇ ಮಾಡಿದ್ದಾರೆ. ಇದಲ್ಲವೇ ಒಬ್ಬ ಸ್ಟಾರ್ ನಟನ ಸಾರ್ಥಕ ಜೀವನ..?
ಕಲಾವಿದರು ಕೋಟಿ ಕೋಟಿ ಸಂಭಾವನೆ ಪಡೆಯೋದ್ರಿಂದ ಹೀರೋಗಳು ಆಗೋದ್ರಲ್ಲಿ ಮಜಾ ಏನಿದೆ..? ಅದೇ ಕೋಟಿ ಮನಸುಗಳನ್ನ ಗೆಲ್ಲುವ ತಾರೆಯರಾಗಬೇಕು. ಅದೇ ನಿಜವಾದ ಹೀರೋಯಿಸಂ. ಕೋಟಿ ಕೋಟಿ ರೆಮ್ಯುನರೇಷನ್ ಪಡೆಯೋ ಇವರುಗಳು ತೆರೆ ಮೇಲೆ ಮಾತ್ರ ಹೀರೋಯಿಸಂ ತೋರಿಸಿದ್ರೆ ಸಮಾಜ ಕೂಡ ಅದನ್ನ ಡೈಜೆಸ್ಟ್ ಮಾಡಿಕೊಳ್ಳಲ್ಲ. ಇಂತಹ ಅಸಹಾಯಕರಿಗಾಗಿ ಮಿಡಿದಾಗ, ಮಾನವೀಯತೆ ತೋರಿಸಿದಾಗ ಮಾತ್ರ ಅವ್ರನ್ನ ಹೀರೋಗಳು ಅಂತ ಒಪ್ಪುತ್ತೆ.
ಅಂದಹಾಗೆ ಸುದೀಪ್ ಅವರು ಈ ರೀತಿ ದಶಕಗಳಿಂದ ಹತ್ತು ಹಲವು ಕಾರ್ಯಗಳನ್ನ ಮಾಡ್ತಾ ಬರ್ತಿದ್ದಾರೆ. ಸದ್ಯ ಆ ಮಗುವಿಗೆ ಸಕಾಲಕ್ಕೆ ಮೆಡಿಸಿನ್ ಸಿಕ್ಕರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿರಲ್ಲ. ಇನ್ನು ಹಿರಿಯರನ್ನ ಫಾಲೋ ಮಾಡ್ತಿರೋ ಧ್ರುವ ಸರ್ಜಾ ಕೂಡ ಕಿಚ್ಚನ ಹಾದಿಯಲ್ಲಿ ನಡೆಯುತ್ತಿರೋದು ಶ್ಲಾಘನೀಯ. ಇವರಿಗೆ ಆ ಭಗವಂತ ಮತ್ತಷ್ಟು, ಮಗದಷ್ಟು ಅಸಹಾಯಕರನ್ನ ಕೈ ಹಿಡಿಯೋ ಶಕ್ತಿ ನೀಡಲಿ ಅನ್ನೋದು ನಮ್ಮ ಆಶಯ. ಸದ್ಯ ಇಡೀ ಕರುನಾಡೇ ಸುದೀಪ್- ಧ್ರುವ ಮಾಡಿದ ಈ ಕೆಲಸಗಳನ್ನ ಪ್ರಶಂಸಿಸುತ್ತಿದೆ. ಜೈ ಕಿಚ್ಚ.. ಜೈ ಧ್ರುವ.. ಜೈ ಆಂಜನೇಯ.