ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಸಿಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2025 ನಲ್ಲಿ ಸತತ 3 ಪಂದ್ಯಗಳನ್ನು ಗೆದ್ದು ನೇರವಾಗಿ ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ. ಈ ಟೂರ್ನಮೆಂಟ್ ಉದ್ಘಾಟನಾ ಸಮಾರಂಭವನ್ನು ಬೆಂಗಳೂರು ನಲ್ಲಿ ಆಯೋಜಿಸಲಾಯಿತು. ಉದ್ಘಾಟನಾ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಮಣಿಸಿ, ಹೈದ್ರಾಬಾದ್‌ನಲ್ಲಿ ನಡೆದ ಎರಡು ಪಂದ್ಯಗಳಲ್ಲೂ ಜಯಗಳಿಸಿತ್ತು. ಈ ಗೆಲುವುಗಳು ಚೆನ್ನೈ ಹಾಗೂ ಮುಂಬೈ ತಂಡಗಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು.
ಈಗಾಗಲೇ ಟೂರ್ನಮೆಂಟ್‌ನ ಅತ್ಯಂತ ಹಾಟ್ ಫೇವರಿಟ್ ತಂಡವಾಗಿ ಬೆಳೆದಿರುವ ಕರ್ನಾಟಕ ಬುಲ್ಡೋಜರ್ಸ್, ಸೆಮಿ ಫೈನಲ್ಸ್ ಮತ್ತು ಫೈನಲ್ಸ್ ಪಂದ್ಯಗಳನ್ನು ಮೈಸೂರಿನಲ್ಲಿ ಆಡಲು CCL ಮ್ಯಾನೇಜ್ಮೆಂಟ್ ಗೆ ಕಿಚ್ಚ ಸುದೀಪ್ ಮನವಿ ಮಾಡಿದ್ದರು. ಕಿಚ್ಚನ ಕನ್ನಡಾಭಿಮಾನ ಮತ್ತು ಕನ್ನಡಿಗರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 1 & 2 ರಂದು ನಡೆಯಲಿರುವ CCL 2025 ಸೆಮಿ ಫೈನಲ್ಸ್ ಮತ್ತು ಫೈನಲ್ಸ್ ಪಂದ್ಯಗಳನ್ನು ಮೈಸೂರಿನಲ್ಲಿ ಆಯೋಜಿಸಲು ಸಿಸಿಎಲ್ ಮ್ಯಾನೇಜ್ಮೆಂಟ್ ಒಪ್ಪಿಕೊಂಡಿದೆ.
ಹೀಗಾಗಿ, ಈ ಪ್ರಮುಖ ಪಂದ್ಯಗಳಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾರತೀಯ ಕ್ರಿಕೆಟ್ ಐಕಾನ್ ಎಂ.ಎಸ್. ಧೋನಿಯನ್ನು ಆಹ್ವಾನಿಸಲು ಕಿಚ್ಚನ ಪ್ಲಾನ್ ಆಗಿದೆ. ಇನ್ನು ಈ ಬಗ್ಗೆ ಗ್ಯಾರಂಟಿ ನ್ಯೂಸ್‌ಗೆ ಅಧಿಕೃತ ಮಾಹಿತಿ ದೊರೆಕಿದೆ. ಸದ್ಯ, ಕಿಚ್ಚ ನಟನೆಯ “MAX” ಸಿನಿಮಾ OTT ನಲ್ಲಿ ಟ್ರೆಂಡಿಂಗ್ ಆಗಿದ್ದು, ಕನ್ನಡ ಸಿನಿಪ್ರೇಮಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಇದು ಡಬಲ್ ಖುಷಿ ಸಿಕ್ಕಿದಂತಾಗಿದೆ.