ಮಾನ್ಸ್ಟರ್ ರಾಕಿಭಾಯ್ ಸತ್ತಿಲ್ಲ.. ಎಲ್ ಡೊರಾಡೋ ಕಥೆ ಕೂಡ ಇನ್ನೂ ಮುಗಿದಿಲ್ಲ. ಸಬ್ ಮರೇನ್ ಮೂಲಕ ಎಸ್ಕೇಪ್ ಆಗಿರೋ ಭಾಯಿಜಾನ್, ಮತ್ತೆ ಯುದ್ಧಕ್ಕೆ ಸನ್ನದ್ಧನಾಗ್ತಿದ್ದಾನೆ. ಕೆಜಿಎಫ್-2 ತೆರೆಕಂಡ ಮೂರು ವರ್ಷಗಳಾದ ಹಿನ್ನೆಲೆ ಕೆಜಿಎಫ್ ಮೂರನೇ ಭಾಗ ಅಫಿಶಿಯಲಿ ಅನೌನ್ಸ್ ಆಗಿದೆ. ಆದ್ರೆ ಈ ಬಾರಿ ರಾಕಿ ವರ್ಸಸ್ ಅಧೀರ ಅಲ್ಲ..ರಾಕಿ ವರ್ಸಸ್ ತಲಾ.
ವಿಶ್ವ ಸಿನಿದುನಿಯಾದಲ್ಲಿ ಕೆಜಿಎಫ್- 2ಗೆ ಸಿಕ್ಕ ಅಭೂತಪೂರ್ವ ಯಶಸ್ಸು ಚಾಪ್ಟರ್-3 ಕನಸನ್ನು ಮತ್ತಷ್ಟು ಜೀವಂತವಾಗಿಸಿದೆ. ಕೆಜಿಎಫ್ ಸಿನಿಮಾ ಒಂದು ದಂತಕಥೆಯಾಗಿ ಇತಿಹಾಸದ ಪುಟಗಳಲ್ಲಿ ರಾರಾಜಿಸ್ತಿದೆ. ಅದ್ರಲ್ಲೂ ಮಾನ್ಸ್ಟರ್ ರಾಕಿಭಾಯ್ ಸ್ವ್ಯಾಗ್ಗೆ ಎಲ್ರೂ ಕ್ಲೀನ್ ಬೋಲ್ಡ್ ಅಗಿಬಿಟ್ಟಿದ್ದಾರೆ. ಅಷ್ಟೊಂದು ಸ್ಟೈಲಿಶ್ ಆಗಿ, ಯುನಿಕ್ ಸ್ಟೈಲು, ಮ್ಯಾನರಿಸಂನಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಭಾಯ್ ಯಶ್.
ಪ್ರಧಾನಿ ರಮಿಕಾ ಸೇನ್ ಮಾನ್ಸ್ಟರ್ ರಾಕಿಭಾಯ್ ವಿರುದ್ಧ ಯುದ್ಧ ಸಾರುತ್ತಾರೆ. ಚಿನ್ನವನ್ನು ಹೊತ್ತು ಸಮುದ್ರಮಾರ್ಗದಲ್ಲಿ ವಿದೇಶಕ್ಕೆ ಹೊರಟು ನಿಂತಿದ್ದ ರಾಕಿ ಮೇಲೆ ಇನ್ನಿಲ್ಲದೆ ದಾಳಿ ಮಾಡ್ತಾರೆ. ಆಗ ನೀರಿನಾಳಕ್ಕೆ ಜಾರೋ ರಾಕಿಯ ದೇಹ ಹಾಗೂ ಫಳಫಳನೆ ಹೊಳೆಯೋ ಚಿನ್ನದ ಬಿಸ್ಕೆಟ್ಗಳನ್ನ ತೋರಿಸುತ್ತಾ ಚಾಪ್ಟರ್-3 ಹಿಂಟ್ ನೀಡ್ತಾರೆ ಮೇಕರ್ಸ್.
ಇಷ್ಟು ಮಾತ್ರಕ್ಕೆ ರಾಕಿಭಾಯ್ ಯುಗಾಂತ್ಯವಾಗಿಲ್ಲ. ಎಲ್ ಡೊರಾಡೋ ಕಥೆಯೂ ಮುಗಿದಿಲ್ಲ. ಅದಿನ್ನೂ ಮುಂದುವರೆಯಲಿದೆ ಅನ್ನೋದ್ರ ಸೂಚನೆ ಸಿಕ್ಕಿದೆ. ಸಬ್ ಮರೇನ್ ಮುಖೇನ ರಾಕಿಭಾಯ್ ಚಿನ್ನದ ಸಮೇತ ವಿದೇಶಕ್ಕೆ ಎಸ್ಕೇಪ್ ಆಗ್ತಾರೆ. ರಾಕಿ ವರ್ಚಸ್ಸು ದುನಿಯಾದಲ್ಲಿ ಎಷ್ಟರ ಮಟ್ಟಿಗೆ ಇರಲಿದೆ ಅನ್ನೋದನ್ನ ಚಾಪ್ಟರ್-2ನಲ್ಲೇ ಡೈರೆಕ್ಟರ್ ಪ್ರಶಾಂತ್ ನೀಲ್ ತೋರಿಸಿದ್ರು. ಇನ್ನು ಅಷ್ಟು ದೊಡ್ಡ ವ್ಯಕ್ತಿ ಸಬ್ ಮರೇನ್ನಿಂದ ತಪ್ಪಿಸಿಕೊಳ್ಳೋದ್ರಲ್ಲಿ ಅಚ್ಚರಿಯಿಲ್ಲ.
ಸದ್ಯ ಕೆಜಿಎಫ್ ಚಾಪ್ಟರ್-2 ತೆರೆಕಂಡು ಮೂರು ವರ್ಷಗಳಾದ ಹಿನ್ನೆಲೆ, ಕೆಜಿಎಫ್ ಚಾಪ್ಟರ್-3 ಅನೌನ್ಸ್ ಮಾಡಿದೆ ಹೊಂಬಾಳೆ ಫಿಲಂಸ್. ಹೌದು..ವಿಜಯ್ ಕಿರಗಂದೂರು ಅವರು ಈ ಹಿಂದೆಯೇ ಹೇಳಿದಂತೆ ಕೆಜಿಎಫ್-3ಗೆ ಕಥೆ ಸಿದ್ದವಾಗಬೇಕಿತ್ತು. ಇದೀಗ ಪ್ರಶಾಂತ್ ನೀಲ್- ಯಶ್- ವಿಜಯ್ ಕಿರಗಂದೂರು ಚಾಪ್ಟರ್-3ಗೆ ಚಾಲನೆ ನೀಡುವ ಸೂಚನೆ ಕೊಟ್ಟಿದ್ದಾರೆ. ಎರಡನೇ ಚಾಪ್ಟರ್ 3 ವರ್ಷ ಪೂರೈಸಿದ ಹಿನ್ನೆಲೆ ಒಂದು ಬ್ಯೂಟಿಫುಲ್ ವಿಡಿಯೋ ರಿಲೀಸ್ ಮಾಡಿದ್ದು, ಅದ್ರಲ್ಲಿ ಖಚಿತವಾಗಿ ಫ್ರಾಂಚೈಸ್‌ನ ಮೂರನೇ ಭಾಗ ಬರೋದನ್ನ ಅಧಿಕೃತವಾಗಿಯೇ ಬಹಿರಂಗಪಡಿಸಿದೆ.
ಈ ಹಿಂದೆಯೇ ಚಾಪ್ಟರ್-3 ಕುರಿತ ಪೋಸ್ಟರ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದವು. ಆದ್ರೆ ಅದ್ಯಾವ ಪೋಸ್ಟರ್ ಕೂಡ ಚಿತ್ರತಂಡ ರಿವೀಲ್ ಮಾಡಿರೋ ಅಧಿಕೃತ ಫಸ್ಟ್ಲುಕ್ ಪೋಸ್ಟರ್ಗಳಲ್ಲ. ಕೆಜಿಎಫ್ ಹಾಗೂ ಯಶ್ ಅಭಿಮಾನಿಗಳೇ ತರಹೇವಾರಿ ಪೋಸ್ಟರ್ಗಳನ್ನ ಡಿಸೈನ್ ಮಾಡಿ ಅಪ್ಲೋಡ್ ಮಾಡಿದ್ದರು.
ತಲಾ ಅಜಿತ್..ತಮಿಳು ಚಿತ್ರರಂಗದ ಮೋಸ್ಟ್ ಹ್ಯಾಂಡ್ಸಮ್, ಸ್ಟೈಲಿಶ್ ಹಾಗೂ ವರ್ಸಟೈಲ್ ಆ್ಯಕ್ಟರ್. ಬಿಗ್ ಫ್ಯಾನ್ ಫಾಲೋಯಿಂಗ್ ಇರೋ ಅಜಿತ್, ತಮ್ಮ ಯಾವುದೇ ಸಿನಿಮಾನ ಪ್ರಮೋಷನ್‌ನಲ್ಲಿ ಭಾಗಿಯಾಗಲ್ಲ. ಆದ್ರೂ ಸಹ ಇವ್ರ ಸಿನಿಮಾಗಳು ನೂರಾರು ಕೋಟಿ ಲೂಟಿ ಮಾಡುತ್ವೆ. ಈಗಾಗ್ಲೇ ಹೊಂಬಾಳೆ ಫಿಲಂಸ್ ಅಜಿತ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಈ ಸುದ್ದಿ ನಿರ್ಮಾಣ ಸಂಸ್ಥೆಯಿಂದಲೇ ಹೊರಬೀಳಲಿದೆ. ಅಲ್ಲಿಗೆ ಈ ಬಾರಿ ರಾಕಿಭಾಯ್ ಜೊತೆ ಬಡಿದಾಡುವುದು ಅಧೀರ ಅಲ್ಲ, ತಲಾ ಅಜಿತ್ ಅನ್ನೋದು ಪಕ್ಕಾ ಆಗಿದೆ.
ಇಬ್ಬರು ಅದ್ಭುತ ಕಲಾವಿದರು ಹೀರೋ- ವಿಲನ್ ಆಗಿ ತೆರೆಹಂಚಿಕೊಳ್ಳೋದು ನಿಜಕ್ಕೂ ಇಂಟರೆಸ್ಟಿಂಗ್ ಅನಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದ್ದ ಚಾಪ್ಟರ್-2, ಚಾಪ್ಟರ್-3 ಮೂಲಕ ತೂಫಾನ್ ನಂತೆ ವಿಶ್ವ ಸಿನಿದುನಿಯಾಗೆ ಲಗ್ಗೆ ಇಡೋದ್ರಲ್ಲಿ ಅನುಮಾನವೇ ಇಲ್ಲ. ಅದು ಆದಷ್ಟು ಬೇಗ ಆಗಲಿ ಅನ್ನೋದು ನಮ್ಮ ಆಶಯ.