ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದ KD ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ವಿವಾದಕ್ಕೆ ಇದೀಗ ಬಹು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ದಿನದಿಂದ ದಿನಕ್ಕೆ ಗರಿಗೆದರುತ್ತಿದ್ದ ವಿವಾದಕ್ಕೆ ನಿರ್ದೇಶಕ ಜೋಗಿ ಪ್ರೇಮ್ ಅವ್ರೇ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಹಾಡಿನ ಎಲ್ಲಾ ವರ್ಷನ್ ಸದ್ಯ ಡಿಲೀಟ್ ಆಗಿದೆ. ಒಂದ್ಕಡೆ ನೋರಾ ಫತೇಹಿ ಪ್ರೇಮ್ ವಿರುದ್ಧ ಸಿಡಿದ್ರೆ, ಇನ್ನೊಂದ್ಕಡೆ ಪ್ರೇಮ್ ಬಾಂಬ್ ಶೆಲ್ ನೋರಾಗೆ ಫುಲ್ ಕ್ಲಾಸ್ ತಗೊಂಡಿದ್ದಾರೆ. ಕನ್ನಡಿಗರಿಗೆ ಕ್ಷಮೆ ಕೇಳಿರೋ ಪ್ರೇಮ್, ಇಡೀ ಕರುನಾಡ ಅಟೆನ್ಷನ್ ಗಳಿಸಿದ್ದಾರೆ. ಹಾಗಾದ್ರೆ ಪ್ರೇಮ್ ನೆಕ್ಸ್ಟ್ ಪ್ಲಾನ್ ಏನು..? ಹೇಳ್ತೀವಿ ಈ ಸ್ಟೋರಿ ನೋಡಿ.
- ಸರ್ಸೆ ಸಾಂಗ್ ಎಲ್ಲಾ ವರ್ಷನ್ ಯೂಟ್ಯೂಬ್‌ನಿಂದ ಡಿಲೀಟ್
- ಪ್ರೇಮ್ ವಿರುದ್ಧ ನೋರಾ ಫೈಯರ್.. AI ದುರ್ಬಳಕೆ ಆರೋಪ
- ಅವಕಾಶ ಕೊಟ್ಟ ಕನ್ನಡಿಗನಿಗೇ ಉಲ್ಟಾ ಹೊಡೆದ ನೋರಾ..!
- ಕ್ಷಮೆಯಾಚಿಸಿದ ಪ್ರೇಮ್.. ನೋರಾಗೆ ತಗೊಂಡ್ರು ಕ್ಲಾಸ್..!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾ ರಿಲೀಸ್‌ಗೂ ಮುಂಚೆನೇ ಕಾಂಟ್ರವರ್ಸಿ ಮೂಲಕ ಭಾರಿ ಹೈಪ್ ಕ್ರಿಯೇಟ್ ಮಾಡಿದೆ. ಅದರಲ್ಲೂ ‘ಸರ್ಸೆ ಸರ್ಸೆ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕ್ಷಣದಿಂದಲೇ ಟೀಕೆಗಳ ಮಳೆ ಸುರಿಯಲು ಶುರುವಾಯಿತು. ಸಾಹಿತ್ಯ ಮತ್ತು ದೃಶ್ಯಗಳ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆ, ಚಿತ್ರತಂಡ ಫುಲ್ ಡ್ಯಾಮೇಜ್ ಕಂಟ್ರೋಲ್ ಮಾಡಲು ಎಲ್ಲಾ ವರ್ಷನ್ ಹಾಡುಗಳನ್ನ ಸಂಪೂರ್ಣವಾಗಿ ಡಿಲೀಟ್ ಮಾಡಿದೆ.
ಈ ಮಧ್ಯೆ ಬಾಲಿವುಡ್ ನಟಿ ನೋರಾ ಫತೇಹಿ ವಿಡಿಯೋ ಮೂಲಕ ಶಾಕ್ ಕೊಟ್ಟಿದ್ದಾರೆ. “ಈ ಹಾಡು ಮೂರ್ ವರ್ಷಗಳ ಹಿಂದೆ ಶೂಟ್ ಮಾಡಿದ್ದು. ನನಗೆ ಇದು ನಾಯಕ್ ನಹೀ.. ಕಲ್‌ನಾಯಕ್ ಹೂ ಮೇ ರಿಮೇಕ್ ಅಂತ ಹೇಳಲಾಗಿತ್ತು. ಆದರೆ ನನ್ನ ಅನುಮತಿ ಇಲ್ಲದೇ ಲೈಕಲ್ ಹಾಡಿಗೆ ಫೋಟೋಸ್ ಬಳಸಿದ್ದಾರೆ. AI ಮೂಲಕ ನನ್ನ ಹಾಗೂ ಸಂಜಯ್ ದತ್ ಅವರ ಇಮೇಜ್ ಕ್ರಿಯೇಟ್ ಮಾಡಿದ್ದಾರೆ. ನಾನು AI ಬಳಕೆ ವಿರುದ್ಧ ಇದ್ದೇನೆ ಅಂತ ಸ್ಪಷ್ಟವಾಗಿ ಆರೋಪಿಸಿದ್ದಾರೆ. ಇಷ್ಟೇ ಅಲ್ಲ, ತಮ್ಮ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಪ್ರೇಮ್ ಎಂದು ನೋರಾ ಗಂಭೀರವಾಗಿ ಆರೋಪ ಮಾಡಿದ್ದಾರೆ.
ನೋರಾ ಹೇಳಿಕೆ ವೈರಲ್ ಆಗ್ತಿದ್ದಂತೆ, ಕೆಲವೇ ಗಂಟೆಗಳಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ಕೆಟ್ಟ ಉದ್ದೇಶದಿಂದ ಹಾಡು ಬರೆಯಲಿಲ್ಲ. ಆದರೆ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ” ಅಂತ ಹೇಳಿ ಸಾಫ್ಟ್ ಟೋನ್ ನಲ್ಲಿ ಹೇಳಿದ್ದಾರೆ. ಜೊತೆಗೆ, ಹೊಸದಾಗಿ ಸಾಹಿತ್ಯ ಬರೆದು ಮತ್ತೆ ಸಾಂಗ್ ರೆಕಾರ್ಡ್ ಮಾಡಿ ರಿಲೀಸ್ ಮಾಡ್ತೀನಿ. ಈ ಬಾರಿ ಯಾರಿಗೂ ನೋವಾಗದಂತೆ ನೋಡಿಕೊಳ್ಳುತ್ತೀನಿ ಅಂತ ಹೇಳಿದ್ದಾರೆ. ಇನ್ನೂ ಪ್ರೇಮ್ ನೋರಾ ಹೇಳಿಕೆ ಬಗ್ಗೆ ಕೂಡ ರಿಯಾಕ್ಟ್ ಮಾಡಿದ್ದು, ನೋರ ಮಾತಾಡಿದ್ದು ತುಂಬಾ ತಪ್ಪು, ಸಾಹಿತ್ಯ ಗೊತ್ತಿಲ್ಲದೇ ಎಕ್ಸ್‌ಪ್ರೆಷನ್ ಹೇಗೆ ಕೊಡ್ತಾರೆ? ಮೊದಲು ಹಾಡು ಬಗ್ಗೆ ಖುಷಿಯಿಂದ ಮಾತನಾಡಿದವರು ಈಗ ಯಾಕೆ ಬದಲಾಗಿದ್ದಾರೆ ಗೊತ್ತಿಲ್ಲ. ವಿವಾದ ತಪ್ಪಿಸಿಕೊಳ್ಳಲು ಹೀಗೆ ಹೇಳಿರಬಹುದು ಅಂತ ಹೇಳಿದ್ದಾರೆ. ಈ ಮಾತುಗಳು ಈಗ ಮತ್ತೊಂದು ಹೊಸ ಚರ್ಚೆಗೆ ಕಾರಣವಾಗಿವೆ.
ಇದ್ರ ನಡುವೆ, ವಿವಾದ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕೂಡ ಕಠಿಣ ಕ್ರಮ ತೆಗೆದುಕೊಂಡಿದೆ. ‘ಸರ್ಸೆ ಸರ್ಸೆ’ ಹಾಡನ್ನು ಅಧಿಕೃತವಾಗಿ ಬ್ಯಾನ್ ಮಾಡಲಾಗಿದ್ದು, ಸಂಸತ್ತಿನಲ್ಲೇ ಈ ಘೋಷಣೆ ಮಾಡಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು, ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಇದೇ ವೇಳೆ, ಹಿಂದಿ ವರ್ಷನ್ ಹಾಡಿದ ಗಾಯಕಿ ಮಂಗ್ಲಿ ಕೂಡ ಕ್ಷಮೆ ಕೇಳಿದ್ದಾರೆ. ಇನ್ನೂ ಹಿಂದಿ ವರ್ಷನ್ ಸಾಹಿತ್ಯ ಬರೆದ ಚಿತ್ರಸಾಹಿತಿ, ಇಲ್ಲಿ ನಂದೇನಿಲ್ಲ.. ಪ್ರೇಮ್ ಅವರ ಸಾಹಿತ್ಯವನ್ನ ತರ್ಜುಮೆ ಮಾಡಿದ್ದೇನಷ್ಟೇ ಎಂದಿದ್ದಾರೆ.
ಇಂದಿನ ಕಾಲದಲ್ಲಿ ಒಂದು ಹಾಡು ಕೇವಲ ಎಂಟರ್ಟೈನ್‌ಮೆಂಟ್ ಅಲ್ಲ, ಜವಾಬ್ದಾರಿಯೂ ಹೌದು. ಸಣ್ಣ ತಪ್ಪು ಕೂಡ ದೊಡ್ಡ ಮಟ್ಟದ ಪ್ರತಿಕ್ರಿಯೆಗೆ ಕಾರಣವಾಗಬಹುದು ಅನ್ನೋದನ್ನ ಈ ಘಟನೆ ತೋರಿಸಿದೆ. ಈಗ ಪ್ರೇಮ್ ಹೊಸದಾಗಿ ಬರೆಯಲಿರುವ ಹಾಡು ಕೇವಲ ಸಾಹಿತ್ಯ, ಮ್ಯೂಸಿಕ್ ಮಾತ್ರವಲ್ಲ.. ಡ್ಯಾಮೇಜ್ ಆಗಿರೋ ಅವ್ರ ಇಮೇಜ್ ಪರೀಕ್ಷೆ ಕೂಡ ಆಗಲಿದೆ. ಒಟ್ಟಿನಲ್ಲಿ, ‘ಕೆಡಿ’ ಸಿನಿಮಾದ ಒಂದೇ ಹಾಡು ಇಡೀ ದೇಶದ ಗಮನ ಸೆಳೆಯುವ ಮಟ್ಟಿಗೆ ಕಾಂಟ್ರವರ್ಸಿ ಹುಟ್ಟುಹಾಕಿದ್ದು, ಈಗ ಎಲ್ಲರ ಕಣ್ಣು ಹೊಸ ವರ್ಷನ್ ಸಾಂಗ್ ಮೇಲೆ ನೆಟ್ಟಿದೆ.





