ಸುದೀಪ್ ಮಾರ್ಕ್ ಸಿನಿಮಾದ ವೇಗ ನೋಡಿ, ಧ್ರುವ ಸರ್ಜಾ ಕೆಡಿಗೂ ಒಳ್ಳೆಯ ಯೋಗ ಬರ್ತಿದೆ. ಯೆಸ್.. ಅಪ್ಡೇಟ್ಸ್ ನೀಡದೆ ಸೈಲೆಂಟ್ ಆಗಿದ್ದ ಟೀಂ ಕೆಡಿ, ಇದೇ ತಿಂಗಳಾಂತ್ಯಕ್ಕೆ ಹಾಡೊಂದನ್ನ ಲಾಂಚ್ ಮಾಡೋ ಯೋಜನೆಯಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಬೇಗ ಮುಗಿಸಿ, ಪ್ರೇಕ್ಷಕರ ಮುಂದೆ ತರೋ ಯೋಜನೆಯಲ್ಲಿದೆ. ಆ ಫಾಸ್ಟ್‌ಟ್ರ್ಯಾಕ್ ಕುರಿತ ಲೇಟೆಸ್ಟ್ ಅಪ್ಡೇಟ್ ನಿಮ್ಮ ಮುಂದೆ.
ಕೆವಿಎನ್ ಪ್ರೊಡಕ್ಷನ್ಸ್.. ಹೊಂಬಾಳೆ ಫಿಲಂಸ್ ರೀತಿ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಫಿಲ್ಮ್ ಪ್ರೊಡಕ್ಷನ್ ಆಗಿ ಪ್ಯಾನ್ ಇಂಡಿಯಾ ಸದ್ದು ಮಾಡ್ತಿರೋ ಕನ್ನಡದ ನಿರ್ಮಾಣ ಸಂಸ್ಥೆ. ಕನ್ನಡದ ಜೊತೆ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದೆ. ಸದ್ಯ ಯಶ್ ಟಾಕ್ಸಿಕ್, ವಿಜಯ್‌ರ ಜನನಾಯಗನ್ ಎರಡೂ ಬಿಗ್ ಬಜೆಟ್ ಚಿತ್ರಗಳೇ. ಅವುಗಳ ಮಧ್ಯೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಅಪ್ಡೇಟ್ಸ್ ನೀಡದೆ, ರಿಲೀಸ್ ತಡ ಮಾಡ್ತಿದ್ದಾರೆ ಎನ್ನಲಾಗಿತ್ತು.
ಸುದೀಪ್ ಮಾರ್ಕ್ ವೇಗ.. ಧ್ರುವ ಸರ್ಜಾ KDಗೂ ಯೋಗ
ವರ್ಷಾಂತ್ಯಕ್ಕೆ ಕೆಡಿ ನ್ಯೂ ಸಾಂಗ್.. ಸದ್ಯದಲ್ಲೇ ರಿಲೀಸ್ ಡೇಟ್
ಅಕ್ಷಯ್ ಕುಮಾರ್, ಸೈಫ್ ಆಲಿ ಖಾನ್ ನಟನೆಯ ಹೈವಾನ್ ಸಿನಿಮಾನ ಇದೇ ಕೆವಿಎನ್ ಸಂಸ್ಥೆ ಇತ್ತೀಚೆಗೆ ಕಿಕ್‌ಸ್ಟಾರ್ಟ್ ಮಾಡಿ, ಕ್ವಿಕ್ ಆಗಿ ಶೂಟಿಂಗ್ ಕೂಡ ಮಾಡಿ, ಮುಗಿಸಿದೆ. ಆದ್ರೆ ಮೂರು ವರ್ಷಗಳಿಂದ ತಯಾರಾಗ್ತಿರೋ ಕೆಡಿ ಸಿನಿಮಾ ಮಾತ್ರ ಹಾಗೆಯೇ ಉಳಿದಿದೆ. ಜೋಗಿ ಪ್ರೇಮ್ ಕೂಡ ನಿರ್ಮಾಣ ಸಂಸ್ಥೆ ಮೇಲೆ ಪ್ರೆಶರ್ ಹಾಕ್ತಿದ್ದು, ಇದೇ ಡಿಸೆಂಬರ್ ತಿಂಗಳಾಂತ್ಯಕ್ಕೆ ಕೆಡಿ ಸಿನಿಮಾದ ನ್ಯೂ ಸಾಂಗ್ ಲಾಂಚ್ ಮಾಡೋ ಯೋಜನೆಯಲ್ಲಿದೆಯಂತೆ ಟೀಂ.
ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಕೂಡ ಫಾಸ್ಟ್‌ಟ್ರ್ಯಾಕ್ ಮೂಲಕ ನಡೆಯಲಿದ್ದು, ಸದ್ಯದಲ್ಲೇ ಕೆಡಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಲಿದೆಯಂತೆ. ಧ್ರುವ ಸರ್ಜಾ ಜೊತೆ ಸಂಜಯ್ ದತ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಅಂತಹ ಬಿಗ್ ಸ್ಟಾರ್ಸ್ ಇರೋ ಮೆಗಾ ಮಲ್ಟಿ ಸ್ಟಾರರ್ ಸಿನಿಮಾ ಕೆಡಿ, ಸದ್ಯ ಸ್ಯಾಂಪಲ್ಸ್‌ನಿಂದ ಹುಬ್ಬೇರಿಸಿದೆ. ಅಂದಹಾಗೆ ಕೆವಿಎನ್ ಸಂಸ್ಥೆ ಕೊನೆಗೂ ಎಚ್ಚೆತ್ತುಕೊಂಡು, ಬೇಗ ಕೆಡಿ ಸಿನಿಮಾನ ರಿಲೀಸ್ ಮಾಡೋಕೆ ಮುಂದಾಗ್ತಿರೋದಕ್ಕೆ ಸ್ಫೂರ್ತಿ ಆಸುದೀಪ್‌ರ ಮಾರ್ಕ್.
ಮೊನ್ನೆ ಕಿಕ್ ಸ್ಟಾರ್ಟ್ ಆದ ಹೈವಾನ್ ಶೂಟಿಂಗ್ ಕಂಪ್ಲೀಟ್
ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಡ್ತಾರಾ KVN..?
ಯೆಸ್.. ಮಾರ್ಕ್ ಸಿನಿಮಾನ ಜಸ್ಟ್ 107 ದಿನದಲ್ಲಿ 166 ಕಾಲ್‌ಶೀಟ್‌ಗಳಿಂದ ಮಾಡಿ ಮುಗಿಸಿದ್ದಾರೆ ಸುದೀಪ್. ಕಿಚ್ಚನ ಈ ಫಾಸ್ಟ್ ಫಾರ್ವರ್ಡ್ ವರ್ಕ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರಿಗೂ ಸ್ಫೂರ್ತಿ ಆಗ್ತಿದೆ. ಅದೇ ಕಾರಣದಿಂದ ಎಲ್ಲಾ ಸೂಪರ್ ಸ್ಟಾರ್ಸ್ ವರ್ಷಕ್ಕೆ ಕನಿಷ್ಟ ಎರಡೆರಡು ಮಾಡದಿದ್ರೂ ಪರವಾಗಿಲ್ಲ. ಒಂದು ಸಿನಿಮಾ ಕೊಟ್ರೆ ಸಾಕು ಇಂಡಸ್ಟ್ರಿ ಸಮೃದ್ಧವಾಗಿ, ಸಂತುಷ್ಟವಾಗಿರಲಿದೆ.





