KD.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾ ಮೆಗಾ ಕಾಂಬೋನಿಂದಲೇ ಸಖತ್ ಸಂಚಲನ ಮೂಡಿಸಿದೆ. ಮೇಕಿಂಗ್ ಹಂತದಲ್ಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಕೆಡಿ ಸಿನಿಮಾ, ಎಲ್ಲಾ ಆ್ಯಂಗಲ್ ನಿಂದ ಪವರ್ ಫುಲ್ ಮಾಸ್, ಮಸಾಲ ಎಂಟರ್ ಟೈನರ್ ಅನಿಸಿದೆ.
ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ ನಾಯಕನಟಿಯಾಗಿ ಬಣ್ಣ ಹಚ್ಚಿದ್ದು, ಬಾಲಿವುಡ್ ನಟ ಸಂಜಯ್ ದತ್, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಹೀಗೆ ದೊಡ್ಡ ತಾರಾಗಣ ಚಿತ್ರಕ್ಕಿದೆ. ಇನ್ನು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಸಿನಿಮಾಗಿದ್ದು, ಜೋಗಿ ಪ್ರೇಮ್ ಸಿನಿಮಾದ ಹಾಡುಗಳು ದೊಡ್ಡ ಮಟ್ಟಕ್ಕೆ ಹಿಟ್ ಆಗುತ್ವೆ ಅನ್ನೋದು ಎಲ್ಲರಿಗೂ ಗೊತ್ತೇಯಿದೆ.
ಸದ್ಯ ಕೆಡಿ ಸಿನಿಮಾದ ಫಸ್ಟ್ ಸಿಂಗಲ್ ಶಿವ ಶಿವ ಸಾಂಗ್ ಬಿಗ್ ಹಿಟ್ ಆಗಿದೆ. ಅದ್ರ ಲಿರಿಕಲ್ ವಿಡಿಯೋನೇ ಬರೋಬ್ಬರಿ 42 ಮಿಲಿಯನ್ ವೀವ್ಸ್ ಅಗಿದೆ. ಅಂದ್ರೆ ನಾಲ್ಕು ಕೋಟಿಯ ಗಡಿ ದಾಟಿದೆ. ಇನ್ನು ವಿಡಿಯೋ ಸಾಂಗ್ ಬಿಟ್ಟಿದಿದ್ರೆ ಕಥೆನೇ ಬೇರೆ ಇರ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಶಿವ ಶಿವ ಸಾಂಗ್ ಗೆ ರೀಲ್ಸ್ ಮಾಡಿದೋರ ಸಂಖ್ಯೆ ಕೂಡ ದೊಡ್ಡದಿದೆ. ಅಷ್ಟರ ಮಟ್ಟಿಗೆ ಕೇಳುಗರನ್ನ ಮೋಡಿ ಮಾಡಿದೆ ಶಿವ ಶಿವ ಸಾಂಗ್.
ಇದೀಗ ಕೆಡಿ ಸಿನಿಮಾದ ಆಲ್ಬಮ್ ನಿಂದ ಎರಡನೇ ಸಾಂಗ್ ಹೊರಬರ್ತಿದೆ. ಅದ್ರ ಟೀಸರ್ ಸಖತ್ ಸಂಚಲನ ಮೂಡಿಸಿದೆ. ಹೌದು.. ಸೆಟ್ ಆಗಲ್ಲ ಹೋಗೇ.. ನಂಗೂ ನಿಂಗೂ ಅನ್ನೋ ಸಾಹಿತ್ಯದ ಈ ಹಾಡು ಕೇಳೋಳೆ ಮಸ್ತ್ ಮಜಾ ಅನಿಸ್ತಿದೆ. ಸಣ್ಣ ಟೀಸರ್ ನಿಂದಲೇ ಸಂಗೀತಪ್ರಯರನ್ನ ಗುಂಗಿಡಿಸ್ತಿರೋ ಈ ಹಾಡಿಗೆ ಕನ್ನಡದಲ್ಲಿ ಸ್ವತಃ ಜೋಗಿ ಪ್ರೇಮ್ ಅವರೇ ಸಾಹಿತ್ಯ ಒದಗಿಸಿದ್ದಾರೆ. ಅರ್ಜುನ್ ಜನ್ಯ, ಈ ಹಾಡಿನಲ್ಲೂ ಕೇಳುಗರನ್ನ ಮೋಡಿ ಮಾಡೋ ಅಂತಹ ಟ್ಯೂನ್ಸ್ ನೀಡಿದ್ದು, ಮಿಕಾ ಸಿಂಗ್- ಅರ್ಜುನ್ ಜನ್ಯ ಆರ್ಕೆಸ್ಟ್ರಾ ಜೊತೆ ಹಾಡಿರೋ ಪರಿ ಅದ್ಭುತ ಅನಿಸಿದೆ. ಅಂದಹಾಗೆ ಈ ಸೆಟ್ ಆಗಲ್ಲ ಸಾಂಗ್ ಎಂಥವ್ರಿಗೂ ಸೆಟ್ ಆಗುವ ಲಕ್ಷಣ ತೋರಿದ್ದು, ಇದೇ ಮಾರ್ಚ್ 29ರ ಬೆಳಗ್ಗೆ 11.04ಕ್ಕೆ ಫುಲ್ ಸಾಂಗ್ ರಿಲೀಸ್ ಆಗ್ತಿದೆ.
ಶಿವ ಶಿವ ಸಾಂಗ್ ನಾಲ್ಕು ಕೋಟಿ 20 ಲಕ್ಷ ವೀವ್ಸ್ ಮೂಲಕ ಹೊಸ ದಾಖಲೆ ಬರೆದಿದೆ. ಈ ಹಾಡು ಕೂಡ ಕೆಡಿ ಸಿನಿಮಾಗೆ ಮತ್ತಷ್ಟು ಬೂಸ್ಟ್ ನೀಡಲಿದ್ದು, ಯೂಟ್ಯೂಬ್ ನಲ್ಲಿ ಮತ್ತೊಂದು ರೆಕಾರ್ಡ್ ಮಾಡಲಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್, ಈ ಹಾಡಿಗಾಗಿ ಕಾತರರಾಗಿದ್ದು, ಜೋಗಿ ಪ್ರೇಮ್ ಮತ್ತೊಮ್ಮೆ ಒಳ್ಳೆಯ ಮ್ಯೂಸಿಕ್ ತೆಗಿಸೋದ್ರಲ್ಲಿ ಪಂಟರ್ ಅನಿಸಿಕೊಳ್ತಿದ್ದಾರೆ.