ಕೆಡಿ ಸಿನಿಮಾ ಮತ್ತೆ ರೀ-ಸ್ಟಾರ್ಟ್ ಆಗಿದೆ. ಗ್ಯಾರಂಟಿ ನ್ಯೂಸ್ ಸುದ್ದಿ ಮಾಡಿದ ಬಳಿಕ ಎಚ್ಚೆತ್ತುಕೊಂಡ ಟೀಂ, ಕೆಲಸ ಕಾರ್ಯಗಳನ್ನ ತ್ವರಿತ ಗತಿಯಲ್ಲಿ ಮುಗಿಸೋಕೆ ಸಜ್ಜಾಗಿದೆ. ಇಯರ್ ಎಂಡ್‌ನಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕಾತರದಿಂದ ಕಾಯ್ತಿರೋರಿಗೆ ಒಂದೊಳ್ಳೆ ಜೋಡೆತ್ತು ಸಾಂಗ್ ಕೊಟ್ಟಿದ್ದಾರೆ ಜೋಗಿ ಪ್ರೇಮ್. ಆ್ಯಕ್ಷನ್ ಪ್ರಿನ್ಸ್ ಜೊತೆ ಸಾಕಷ್ಟು ಮಂದಿ ಸ್ಟಾರ್‌ಗಳು ಬಣ್ಣ ಹಚ್ಚಿದ್ದು, ಧ್ರುವಗೆ ಸಾಥ್ ಕೊಟ್ಟಿರೋ ಜೋಡೆತ್ತು ಯಾರು ಅನ್ನೋದರ ಡಿಟೈಲ್ಸ್ ಇಲ್ಲಿದೆ.
- KD ರೀ-ಸ್ಟಾರ್ಟ್.. ಅಣ್ತಮ್ಮ ಜೋಡೆತ್ತು ಪ್ರೇಮ ಕಣೋ..!
- ಗ್ಯಾರಂಟಿ ನ್ಯೂಸ್ ಇಂಪ್ಯಾಕ್ಟ್.. ಫಾಸ್ಟ್ ಪೋಸ್ಟ್ ಪ್ರೊಡಕ್ಷನ್
- ಧ್ರುವಗೆ ಸಾಥ್ ಕೊಟ್ಟಿರೋ ಜೋಡೆತ್ತು ಯಾರು ಗೊತ್ತಾ..?
- ಮಲ್ಟಿಸ್ಟಾರರ್ ರೆಟ್ರೋ ಭೂಗತಲೋಕದ ಕಥಾನಕ ಈ ಕೆಡಿ
ಕೆಡಿ.. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಧ್ರುವ ಸರ್ಜಾ ಕರಿಯರ್‌ನ ಬಿಗ್ಗೆಸ್ಟ್ ವೆಂಚರ್ ಇದಾಗಿದ್ದು, ರೆಟ್ರೋ ಅಂಡರ್‌ವರ್ಲ್ಡ್ ಕಥೆಯನ್ನ ಹೇಳುವ ಈ ಸಿನಿಮಾ ಸ್ಯಾಂಪಲ್ಸ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಅದ್ರಲ್ಲೂ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಅಂದಾಗ ನಿರೀಕ್ಷೆಗಳು ಕೊಂಚ ಜಾಸ್ತಿನೇ ಇರುತ್ತವೆ.
ಇತ್ತೀಚೆಗೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿಲ್ಲ ಅಂತ ಗ್ಯಾರಂಟಿ ನ್ಯೂಸ್ ಸುದ್ದಿ ಬಿತ್ತರಿಸಿತ್ತು. ಅದ್ರ ಇಂಪ್ಯಾಕ್ಟ್ ಚಿತ್ರತಂಡ ಫಟಾಫಟ್ ಅಂತ ಕೆಲಸ ಕಾರ್ಯಗಳನ್ನ ಮುಗಿಸಲು ಸಜ್ಜಾಗಿದೆ. ಅಷ್ಟೇ ಅಲ್ಲ, ಇಯರ್ ಎಂಡ್‌ನಲ್ಲಿ ನ್ಯೂ ಇಯರ್ ಪಾರ್ಟಿಗೆ ಕಾಯ್ತಿರೋ ಚಿತ್ರಪ್ರೇಮಿಗಳಿಗೆ ಕೆಡಿ ಆಲ್ಬಮ್‌ನಿಂದ ಹೊಚ್ಚ ಹೊಸ ಸಾಂಗ್ ರಿಲೀಸ್ ಆಗಿದೆ.
ಯೆಸ್.. ಶಿವ ಶಿವ ಹಾಗೂ ಸೆಟ್ ಆಗಲ್ಲ ಸಾಂಗ್ಸ್ ದೊಡ್ಡ ಮಟ್ಟಕ್ಕೆ ಹಿಟ್ ಆದ ಬಳಿಕ ಮೂರನೇ ಸಾಂಗ್ ಬಿಡುಗಡೆ ಆಗಿದೆ. ಇದು ಒನ್ಸ್ ಅಗೈನ್ ಜೋಗಿ ಪ್ರೇಮ್ ಕಂಠದಲ್ಲಿ ಮೂಡಿ ಬಂದಿರೋ ಅಣ್ತಮ್ಮ ಜೋಡೆತ್ತು ಕಣೋ ಅನ್ನೋ ಗೀತೆಯಾಗಿದೆ. ಇಲ್ಲಿ ಧ್ರುವ ಹವಾಯ್ ಚಪ್ಪಲಿಯನ್ನ ಕೈಲಿ ಹಿಡಿದು ಅದು ಕೂಡ ಜೋಡೆತ್ತು ಅಂತ ಸಾರುತ್ತಾರೆ. ಅಲ್ಲದೆ ಸಿನಿಮಾದಲ್ಲಿ ಸುದೀಪ್, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್ ಅಂತಹ ಘಟಾನುಘಟಿ ಕಲಾವಿದರ ದಂಡಿದ್ದು, ಅವರೆಲ್ಲರೂ ಧ್ರುವ ಸರ್ಜಾಗೆ ಜೋಡೆತ್ತಿನಂತೆ ಸಾಥ್ ನೀಡಿದ್ದಾರೆ.
ಈ ಜೋಡೆತ್ತು ಸಾಂಗ್‌ಗೆ ಮಂಜುನಾಥ್ ಸಾಹಿತ್ಯ ರಚಿಸಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ಶಿವ ಶಿವ ಸಾಂಗ್‌ನ ಕೈಲಾಶ್ ಖೇರ್ ಜೊತೆಗೂಡಿ ಹಾಡಿದ್ದ ಪ್ರೇಮ್, ಈ ಹಾಡನ್ನ ಕಂಪ್ಲೀಟ್ ಆಗಿ ಪ್ರೇಮ್ ಅವರೇ ಹಳ್ಳಿ ಶೈಲಿಯ ಸ್ಲ್ಯಾಂಗ್‌ನಲ್ಲಿ ಹಾಡಿರೋದು ಗಮನಾರ್ಹ. ಪ್ರೇಮ್ ಅವರು ತಮ್ಮ ಸಿನಿಮಾಗಳಲ್ಲಿನ ಸಂಗೀತ ಹಾಗೂ ಸಾಹಿತ್ಯಕ್ಕೆ ಜಾಸ್ತಿ ಒತ್ತು ನೀಡಲಿದ್ದು, ಈ ಸಿನಿಮಾದ ಸಾಂಗ್ಸ್ ಒಂದಕ್ಕಿಂತ ಒಂದು ಜೋರಿವೆ.
ಮೂಲಗಳ ಪ್ರಕಾರ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾಗೆ ರಮೇಶ್ ಅರವಿಂದ್ ಜೋಡೆತ್ತು. ಅಂದ್ರೆ ರಕ್ತಸಂಬಂಧದಲ್ಲಿ ಧ್ರುವ-ರಮೇಶ್ ಅರವಿಂದ್ ಸಹೋದರರು ಎನ್ನಲಾಗ್ತಿದೆ. ಟ್ರೈಲರ್ ಅಥ್ವಾ ಸಿನಿಮಾ ಬರೋವರೆಗೂ ಅದು ರಿವೀಲ್ ಆಗೋದು ಕಷ್ಟ. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಡಿ ಬಂದಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
ಧ್ರುವ ಸರ್ಜಾ ಸ್ಟೆಪ್ಸ್ ಮಸ್ತ್ ಕಿಕ್ ಕೊಡ್ತಿದ್ದು, ಅಣ್ತಮ್ಮ ಜೋಡೆತ್ತು ಸಾಂಗ್ ಕೂಡ ಹಿಟ್ ಲಿಸ್ಟ್ ಸೇರುವ ಸೂಚನೆ ಸಿಕ್ಕಿದೆ. ಒಟ್ಟಾರೆ ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ ಅಂತಹ ಗ್ಲಾಮರ್ ರಂಗು ಕೂಡ ಸಿನಿಮಾಗಿದ್ದು, ವಿಭಿನ್ನ ಪ್ರಯತ್ನ ಅನ್ನೋದನ್ನ ಸ್ಯಾಂಪಲ್ಸ್‌ನಿಂದ ಅರ್ಥೈಸಿದೆ ಚಿತ್ರತಂಡ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





