ಡಾಲಿ ಪ್ರೊಡ್ಯೂಸ್ ಮಾಡಿದ ಜೆಸಿ ಸಿನಿಮಾದಲ್ಲಿ ಅಂಡರ್‌ವರ್ಲ್ಡ್ ಡಾನ್ ಕವಳನ ಸಣ್ಣದೊಂದು ಎಳೆ ಎತ್ತು. ಇದೀಗ ಕವಳ ಟೈಟಲ್‌ನಲ್ಲೇ ಸಿನಿಮಾವೊಂದು ಸೆಟ್ಟೇರಲು ಸಜ್ಜಾಗಿದೆ. ದೊಡ್ಮನೆ ದೊರೆ ಶಿವಣ್ಣ ಲಾಂಚ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ ಕವಳದ ಹಕೀಕತ್ತು ಏನು..? ರೌಡಿಸಂ ಬೇಸ್ಡ್ ಸಿನಿಮಾಗಳಿಂದ ಸಮಾಜಕ್ಕೇನು ಸಂದೇಶ..? ಹೀರೋ ಯಾರು ಅಂತೀರಾ..?
ಇದು ಫೆಬ್ರವರಿ 26ಕ್ಕೆ ಸೆಟ್ಟೇರುವ ಮೂಲಕ ಸಿನಿಮಾ ಶೂಟಿಂಗ್ ಕಿಕ್‌ಸ್ಟಾರ್ಟ್ ಮಾಡೋಕೆ ಸಜ್ಜಾಗಿರೋ ಸಿನಿಮಾ ಕವಳ. ಇತ್ತೀಚೆಗೆ ಶಿವರಾತ್ರಿ ಹಬ್ಬದಂದೇ ನಟ ಶಿವರಾಜ್‌ಕುಮಾರ್ ಈ ಸಿನಿಮಾದ ಟೈಟಲ್‌ನ ತಮ್ಮ ನಾಗವಾರದ ಶ್ರೀಮುತ್ತು ನಿವಾಸದಲ್ಲಿ ಲಾಂಚ್ ಮಾಡಿ, ಇಡೀ ತಂಡಕ್ಕೆ ಶುಭ ಕೋರಿದ್ರು. ಅಷ್ಟೇ ಅಲ್ಲ, ಟೈಟಲ್ ತುಂಬಾ ಚೆನ್ನಾಗಿದೆ ಅಂತ ಡೈರೆಕ್ಟರ್, ಹೀರೋ ಹಾಗೂ ಪ್ರೊಡ್ಯೂಸರ್‌ಗೆ ಬೆನ್ನು ತಟ್ಟಿದ್ರು.

ಬೆಳ್ಳಿತೆರೆ ಬೆಳಗುತ್ತಾ ರೌಡಿ ಕವಳನ ಕಥೆ..? ಶಿವ ಮೆಚ್ಚಿದ ಕವಳ
ಶಿವರಾತ್ರಿ ಹಬ್ಬದಂದೇ ಡಾ. ಶಿವಣ್ಣನಿಂದ ಟೈಟಲ್ ಲಾಂಚ್..!!
ಅಂದಹಾಗೆ ಕವಳ ಅಂದಾಕ್ಷಣ ನೆನಪಾಗೋದೇ ಅಂಡರ್‌ವರ್ಲ್ಡ್ ಡಾನ್ ಕವಳನ ಹೆಸರು. ಈ ಸಿನಿಮಾ ಕೂಡ ಮಾಸ್ ವೆಂಚರ್ ಆಗಿದ್ದು, ಇದು ಅದೇ ರೌಡಿಯ ರಿಯಲ್ ಕಥೆನಾ ಅನ್ನೋ ಅನುಮಾನ ಶುರುವಾಗಿದೆ. ಇತ್ತೀಚೆಗೆ ಡಾಲಿ ಧನಂಜಯ ನಿರ್ಮಾಣ ಮಾಡಿದ ಜೆಸಿ ಚಿತ್ರ ಕೂಡ ಭೂಗತಲೋಕದ ನಂಟನ್ನು ಹೊಂದಿತ್ತು. ಅದ್ರಲ್ಲಿ ಕವಳನ ಕುರಿತ ಸಣ್ಣ ಎಳೆ ಕೂಡ ಇತ್ತು. ಇದೀಗ ಆ ಕವಳನೇ ಸಿನಿಮಾ ಆಗ್ತಿದೆಯಾ ಎನ್ನಲಾಗ್ತಿದೆ.
ಇಂಟರೆಸ್ಟಿಂಗ್ ಅಂದ್ರೆ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದ ನಟ ಸಂದೀಪ್ ಈ ಚಿತ್ರದ ನಾಯಕನಟ. ಸಂದೀಪ್ ಅಂದ್ರೆ ಪಕ್ಕಾ ಯಶ್ ಹುಡುಗ. ಗೂಗ್ಲಿ ಚಿತ್ರದಲ್ಲಿ ಸ್ವತಃ ಯಶ್ ಅವರೇ ಈತನ ಕಾಲಿಗೆ ಬಿದ್ದು ಕ್ಷಮೆ ಕೇಳ್ತಾರೆ. ಅಂತಹ ಪಾತ್ರ ಮಾಡಿದ್ರು ಸಂದೀಪ್.

ಯಶ್ ಹುಡುಗ, ಹಾಫ್ ಮೆಂಟ್ಲು ಸಂದೀಪ್ ಈಸ್ ಬ್ಯಾಕ್
RX ಸೂರಿ, ಭೈರಾದೇವಿ ಶ್ರೀಜೈ ನಿರ್ದೇಶನದ ಮಾಸ್ ವೆಂಚರ್
ಅಲ್ಲದೆ, ಹಾಫ್ ಮೆಂಟ್ಲು ಅನ್ನೋ ಸಿನಿಮಾದ ನಾಯಕನಟನೂ ಹೌದು. ಇಂತಿ ನಿನ್ನ ಪ್ರೀತಿಯ ಫೇಮ್ ಸೋನು ಗೌಡ ಜೊತೆ ಹಾಫ್ ಮೆಂಟ್ಲು ಸಿನಿಮಾ ಮಾಡಿದ್ರು. ಅದರ ಜೀವ ಹಾನಿ ಆಗೋ ಮುನ್ನ ಸಾಂಗ್ ಇಂದಿಗೂ ಎವರ್‌ಗ್ರೀನ್.

ರಾಧಾಕೃಷ್ಣ ಆರ್ಟ್ಸ್ ಹಾಗೂ ಡ್ರೀಮ್ ವರ್ಲ್ಡ್ ಸಿನಿಮಾಸ್ ಮೂಲಕ ಲೋಕೇಶ್ ಬಿ. ಹಾಗೂ ಅಡವಯ್ಯ ಪೂಜಾರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀ ಜೈ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದುನಿಯಾ ವಿಜಯ್ ಅಭಿನಯದ RX ಸೂರಿ, ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀ ಜೈ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ. ನೀಲ ವರ್ಣದ ರುದ್ರಾಕ್ಷಿ ಧರಿಸಿದ ಕೈಯಲ್ಲಿ ಮಚ್ಚು ಹಿಡಿದಿರೋದು ಫಸ್ಟ್ ಲುಕ್ ಕುತೂಹಲ ಮೂಡಿಸಿದೆ.





