ರಾಜಮೌಳಿಯಂತೆ ನಮ್ಮ ರಿಷಬ್ ಶೆಟ್ಟಿ ಕೂಡ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಅತ್ಯದ್ಭುತ ಟೆಕ್ನಿಷಿಯನ್. ಆದ್ರೀಗ ಈ ಇಬ್ಬರು ಸೆನ್ಸೇಷನಲ್ & ಸಕ್ಸಸ್‌ಫುಲ್ ಡೈರೆಕ್ಟರ್‌ಗಳ ಸಿನಿಮಾಗಳು ಒಂದೇ ದಿನ ಮುಖಾಮುಖಿ ಆಗ್ತಿವೆ. ಪ್ರೇಕ್ಷಕರ ಒಲವು ಯಾರ ಕಡೆ..? ಗೆಲುವು ಯಾರಿಗಾಗಲಿದೆ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ.
ಭಾರತೀಯ ಚಿತ್ರರಂಗದ ದಿಕ್ಕು, ದೆಸೆ ಬದಲಿಸಿದ ರಾಜಮೌಳಿಯ ಫಿಲ್ಮ್ ಮೇಕಿಂಗ್ ಹಾಗೂ ಬಾಹುಬಲಿ ಸಿನಿಮಾಗಳ ಸಕ್ಸಸ್ ಒಂದ್ಕಡೆ. ಸದ್ಯ ಕಾಂತಾರ ಸಿನಿಮಾದಿಂದ ನಮ್ಮ ನೆಲದ ಮಣ್ಣಿನ ಸೊಗಡು, ಸೊಬಗು ದೇಶ ವಿದೇಶಗಳ ಮಂದಿ ಮೆಚ್ಚುವಂತೆ ಮಾಡಿದ ರಿಷಬ್ ಶೆಟ್ಟಿಯ ಫಿಲ್ಮ್ ಮೇಕಿಂಗ್ ಸ್ಟೈಲ್ ಮತ್ತೊಂದ್ಕಡೆ. ಇವರಿಬ್ಬರೂ ಸಹ ಗ್ಲಾಮರ್ ಲೋಕದ ಗ್ರಾಮರ್ ಬದಲಿಸಿದ್ರು ಅಂದ್ರೆ ತಪ್ಪಾಗಲ್ಲ. ಅದ್ರಲ್ಲೂ ರಿಯಾಲಿಟಿಗೆ ಹತ್ತಿರ ಇರೋ ವಿಷಯಗಳನ್ನ ತೆರೆಮೇಲೆ ಮೂಡಿಸಿದ ವಿಚಾರಕ್ಕೆ ರಿಷಬ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ರಾಜಮೌಳಿ- ರಿಷಬ್ ಗೆಲುವು.. ಯಾರಿಗೆ ಪ್ರೇಕ್ಷಕರ ಒಲವು..?!
ಕಾಂತಾರ-ಬಾಹುಬಲಿ ಮುಖಾಮುಖಿ.. ಯಾರ ಪ್ರಭಾವ ಎಷ್ಟು?
850 ಕೋಟಿ ಗಳಿಸೋದ್ರ ಮೂಲಕ ಕಾಂತಾರ-1 ನೂತನ ದಾಖಲೆ ಬರೆದಿದೆ. ಇದೀಗ ಆ ಸಿನಿಮಾ ಅಕ್ಟೋಬರ್ 31ರಿಂದ ಹಿಂದಿ ಹೊರತುಪಡಿಸಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಓಟಿಟಿಗೂ ಲಗ್ಗೆ ಇಡ್ತಿದೆ ಕಾಂತಾರ-1. ಇನ್ನೂ ಥಿಯೇಟರ್‌ನಲ್ಲಿ ನೋಡದ ಚಿತ್ರರಸಿಕರು ಕಾಂತಾರ ಚಿತ್ರವನ್ನ ಮನೆಯಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ.
ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ, ಕಾಂತಾರ-1 ಓಟಿಟಿಗೆ ಬರ್ತಿರೋ ಅಕ್ಟೋಬರ್ 31ರಂದೇ ದಿ ಎಪಿಕ್ ಬಾಹುಬಲಿ ಸಿನಿಮಾ ಕೂಡ ರಿಲೀಸ್ ಆಗ್ತಿದೆ. ಆದ್ರೆ ಅದು ಈ ಬಾರಿ ಥಿಯೇಟರ್‌ಗೆ ಬರ್ತಿದೆ. ಯೆಸ್.. ಎರಡು ಬಾಹುಬಲಿಗಳ ಮಿಶ್ರಣದಿಂದ ಹುಟ್ಟಿರೋ ಎಪಿಕ್ ಬಾಹುಬಲಿ ಮೂರು ಮುಕ್ಕಾಲು ಗಂಟೆ ರನ್ ಟೈಂನಿಂದ ಬೆಳ್ಳಿಪರದೆ ಬೆಳಗುತ್ತಿದ್ದು, ಜನ ಬಾಹುಬಲಿ ನೋಡ್ತಾರಾ ಅಥ್ವಾ ಕಾಂತಾರ ನೋಡ್ತಾರಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.
ಕಾಂತಾರ ಸ್ಪ್ಯಾನಿಶ್ ಟ್ರೈಲರ್ ಔಟ್.. ಗ್ಲೋಬಲ್ ಭಾಷೆ ಗಮ್ಮತ್ತು
ಟಾಲಿವುಡ್ ರಾಜಮೌಳಿ ಹಾದಿಯಲ್ಲೇ ನಮ್ಮ ರಿಷಬ್ ಸೆನ್ಸೇಷನ್
ಈ ಎಲ್ಲದರ ನಡುವೆ ಇಡೀ ಕನ್ನಡಿಗರು ಹೆಮ್ಮೆ ಪಡುವ ವಿಷಯ ಮತ್ತೊಂದಿದೆ. ಕಾಂತಾರ-1 ಸಿನಿಮಾ ಸ್ಪ್ಯಾನಿಶ್ ಭಾಷೆಯಲ್ಲಿ ಕೂಡ ಬರ್ತಿದೆ. ಅದ್ರ ಟ್ರೈಲರ್ ಲಾಂಚ್ ಆಗಿದ್ದು, ಗ್ಲೋಬಲ್ ಲಾಂಗ್ವೇಜ್ ಆಗಿ ಸುಮಾರು 20ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮಾತನಾಡುವಂತಹ ಈ ಭಾಷೆಗೆ ಕಾಂತಾರ ಬರ್ತಿರೋದು ನಿಜಕ್ಕೂ ಖುಷಿಯ ವಿಚಾರ. ಈ ಮೂಲಕ ಭಾಷೆ ಬಾರದ ಮಂದಿಗೂ ಅವರದ್ದೇ ಭಾಷೆಯಲ್ಲಿ ನಮ್ಮ ನೆಲದ ಕಥೆಯನ್ನ ಉಣಬಡಿಸೋ ಕಾರ್ಯ ಮಾಡ್ತಿದ್ದಾರೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್.
ಅಂದಹಾಗೆ ಬಾಹುಬಲಿ ಹಾಗೂ ಕಾಂತಾರ ಎರಡೂ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ಸ್. ಈಗಾಗ್ಲೇ ಗೆದ್ದಿರೋ ಸಿನಿಮಾಗಳಲ್ಲಿ ಯಾವ ಸಿನಿಮಾಗೆ ಜನರು ಒಲವು ತೋರಿಸ್ತಾರೆ ಅನ್ನೋ ಕ್ಯೂರಿಯಸಿಟಿ ಎಲ್ಲರಲ್ಲೂ ಮನೆ ಮಾಡಿದೆ.
 
			
 
					




 
                             
                             
                             
                            