ಈ ವರ್ಷ ಬರೋಬ್ಬರಿ 255 ಸಿನಿಮಾಗಳ ಪ್ರೊಡಕ್ಷನ್‌ನಿಂದ ನೂತನ ದಾಖಲೆ ಬರೆದಿದೆ ಕನ್ನಡ ಚಿತ್ರರಂಗ. ಆದ್ರೆ ಅವುಗಳಲ್ಲಿ ಎಷ್ಟು ಸಿನಿಮಾ ಗೆದ್ದಿವೆ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತವೆ. ರಿಷಬ್ ಶೆಟ್ರ ಕಾಂತಾರ, ರಾಜ್ ಬಿ ಶೆಟ್ರ ಸು ಫ್ರಮ್ ಸೋ ಬಿಟ್ರೆ ಉಳಿದದ್ದೆಲ್ಲಾ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಸ್ಯಾಂಡಲ್‌ವುಡ್ ಎಡವಿದ್ದೆಲ್ಲಿ..? ಪರಭಾಷಾ ಇಂಡಸ್ಟ್ರಿಗಳಿಗೆ ಕಂಪೇರ್ ಮಾಡಿದ್ರೆ ಪಾತಾಳಕ್ಕೆ ಕುಸಿದಿರೋದ್ಯಾಕೆ ನಮ್ಮ ಇಂಡಸ್ಟ್ರಿಯ ಸಕ್ಸಸ್ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.
- 250+ ಕನ್ನಡ ಮೂವೀಸ್.. ಗೆದ್ದವಱರು ಸೋತವಱರು?
- ಶೆಟ್ರು ಬಿಟ್ರೆ ಮಾಸ್ ಹೀರೋಗಳಿಗಿಲ್ಲ ಬ್ಲಾಕ್‌ಬಸ್ಟರ್ ಸಕ್ಸಸ್
- ಪ್ರೊಡಕ್ಷನ್‌ನಲ್ಲಿ ದಾಖಲೆ.. ಕಥೆಯಲ್ಲಿಲ್ಲ ಧಮ್ & ರಿಧಮ್
- ಬರಹಗಾರರ ಕೊರತೆ.. ಸ್ಯಾಂಡಲ್‌ವುಡ್ ಎಡವಿದ್ದೇ ಇಲ್ಲಿ
ಈ ವರ್ಷ ಆಲ್ಮೋಸ್ಟ್ ಡೆಡ್ ಎಂಡ್‌ಗೆ ಬಂದಾಗಿದೆ. ಎಲ್ಲರೂ ಹೊಸ ವರ್ಷವನ್ನ ವೆಲ್ಕಮ್ ಮಾಡಿ, ಪಾರ್ಟಿ ಮಾಡೋದ್ರ ಮೂಲಕ ಕುಣಿದು ಕುಪ್ಪಳಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಜನ ಈ ವರ್ಷ ಆಗಿರೋ ತಪ್ಪುಗಳನ್ನ, ಮಾಡಿರೋ ಎಡವಟ್‌ಗಳನ್ನ ಹೊಸ ವರ್ಷದಲ್ಲಿ ಮಾಡದಿರಲು ಆತ್ಮಾವಲೋಕನ ಮಾಡಿಕೊಳ್ಳೋ ಸಮಯವಿದು. ಅದೇ ರೀತಿ ಚಿತ್ರರಂಗಕ್ಕೂ ಅದು ಅನ್ವಯಿಸುತ್ತೆ. ಸಿನಿಮಾನ ಮೂಲ ಉದ್ದೇಶ ಮನರಂಜನೆಯೇ ಆದ್ರೂ ಸಹ, ಅದೂ ಕೂಡ ಒಂದು ಉದ್ಯಮ. ಆ ನಿಟ್ಟಿನಲ್ಲಿ ಈ ವರ್ಷ ನಮ್ಮ ಕನ್ನಡ ಚಿತ್ರರಂಗದ ಬರೋಬ್ಬರಿ 255 ಸಿನಿಮಾಗಳ ಬಿಡುಗಡೆ ಆಗಿದೆ.
ಸಿನಿಮಾಗಳ ಪ್ರೊಡಕ್ಷನ್ 200 ಪ್ಲಸ್ ಆಗ್ತಿತ್ತು. ಆದ್ರೆ ಇದೇ ವರ್ಷ ಇಷ್ಟೊಂದು ದೊಡ್ಡ ಮಟ್ಟದ ಸಂಖ್ಯೆಯಲ್ಲಿ ಚಿತ್ರಗಳು ನಿರ್ಮಾಣಗೊಂಡು ತೆರೆಗಪ್ಪಳಿಸಿವೆ. ಅವುಗಳ ಪೈಕಿ ದುಡ್ಡು ಮಾಡಿದ್ದು, ಚಿತ್ರಪ್ರೇಮಿಗಳ ಮನಸ್ಸು ಗೆದ್ದಿದ್ದು ಹತ್ತಾರು ಅಷ್ಟೇ. ಅದರಲ್ಲೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್-1 ಹಾಗೂ ರಾಜ್ ಬಿ ಶೆಟ್ಟಿ ಅವ್ರ ಸು ಫ್ರಮ್ ಸೋ ಚಿತ್ರಗಳು ಬಿಟ್ರೆ ಬೇಱವ ಸ್ಟಾರ್‌ಗಳೂ ಸಹ ನಿರೀಕ್ಷಿತ ಮಟ್ಟದ ಗೆಲುವು ತಂದುಕೊಡಲೇ ಇಲ್ಲ.
ಕಥೆಯಲ್ಲಿ ಧಮ್, ಮೇಕಿಂಗ್‌ನಲ್ಲಿ ರಿಧಮ್ ಇದ್ದು ಪಾತ್ರಗಳಲ್ಲಿ ಜೀವಂತಿಕೆ ಇದ್ರೆ ಕಂಡಿತ ಅವು ಗೆದ್ದೇ ಗೆಲ್ಲುತ್ತವೆ. ಆದ್ರೆ ನಮ್ಮಲ್ಲಿ ಸಿದ್ದ ಸೂತ್ರಗಳನ್ನೇ ಇಟ್ಕೊಂಡು ಸಿನಿಮಾ ಮಾಡ್ತಿದ್ದಾರೆ. ಹಾಗಾಗಿ ಸಕ್ಸಸ್ ಅನ್ನೋದು ನೆಲಕಚ್ಚಿದೆ. ಮುಖ್ಯವಾಗಿ ನಮ್ಮಲ್ಲಿ ಬರಹಗಾರರ ಕೊರತೆ ಇದೆ ಅನ್ನೋದನ್ನ ಮನರವರಿಕೆ ಮಾಡಿಕೊಳ್ಳಬೇಕು. ಕಥೆಗಳಿವೆ. ಆದ್ರೆ ಅವುಗಳಿಗೆ ಸ್ಕ್ರೀನ್ ಪ್ಲೇ ಮಾಡುವಲ್ಲಿ ಎಡವುತ್ತಿದ್ದೇವೆ. ಅವುಗಳ ನಿರ್ದೇಶನ ಹಾಗೂ ನಿರೂಪಣೆಯಲ್ಲಿ ಎಡವುತ್ತಿದ್ದೇವೆ.
ಫಾಸ್ಟ್ ಫುಡ್, ಫಾಸ್ಟ್ ಲೈಫ್ ರೀತಿ ಫಾಸ್ಟ್ ಆಗಿ ಸಿನಿಮಾ ಮಾಡಿ, ದುಡ್ಡು ಮಾಡ್ಬೇಕು ಅಂದ್ರೆ ಫೇಲ್ಯೂರ್ ಕೂಡ ಅಷ್ಟೇ ಫಾಸ್ಟ್ ಆಗಿ ದಕ್ಕುತ್ತೆ. ಅಂದಹಾಗೆ ಈ ವರ್ಷ ಸಿನಿರಸಿಕರನ್ನ ಗೆದ್ದ ಕನ್ನಡದ ಸಿನಿಮಾಗಳ ಪಟ್ಟಿ ಇಲ್ಲಿದೆ. ಗ್ರಾಫಿಕಲ್ ಪ್ರೆಸೆಂಟೇಷನ್ ಮೂಲಕ ತೋರಿಸ್ತೀವಿ ಕಣ್ತುಂಬಿಕೊಳ್ಳಿ.
| ಸಿನಿಮಾದ ಹೆಸರು (Movie Name) | ಗಳಿಕೆ (ಕೋಟಿ ರೂಗಳಲ್ಲಿ) Collection (in Crore ₹) |
|---|---|
| ಕಾಂತಾರ ಚಾಪ್ಟರ್-1 | 900 ಕೋಟಿ |
| ಸು ಫ್ರಮ್ ಸೋ | 125 ಕೋಟಿ |
| ದಿ ಡೆವಿಲ್ | 36 ಕೋಟಿ |
| ಮಾರ್ಕ್ (ನಾಟೌಟ್) | 22 ಕೋಟಿ |
| ಎಕ್ಕ | 15.4 ಕೋಟಿ |
| 45 (ನಾಟೌಟ್) | 13.5 ಕೋಟಿ |
| ಜೂನಿಯರ್ | 12.75 ಕೋಟಿ |
| ಮಾದೇವ | 8.65 ಕೋಟಿ |
| ಛೂ ಮಂಥರ್ | 7.5 ಕೋಟಿ |
ಯೆಸ್.. ಇನ್ನೂರ ಐವತ್ತೈದು ಸಿನಿಮಾಗಳಲ್ಲಿ ಹೀಗೆ ಒಂಬತ್ತೇ ಒಂಬತ್ತು ಚಿತ್ರಗಳು ಸೌಂಡ್ ಮಾಡುತ್ತವೆ ಅಂದ್ರೆ ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಇವು ಜನರ ಮನಸ್ಸನ್ನು ಗೆದ್ದಿರಬಹುದು. ಆದ್ರೆ ನಿರ್ಮಾಪಕರ ಜೇಬು ತುಂಬಿಸಿಲ್ಲ ಅನ್ನೋದು ಅಷ್ಟೇ ಸತ್ಯ.
- ಈ ವರ್ಷ ಅತಿಹೆಚ್ಚು ಗಳಿಸಿದ ರಿಷಬ್ ಶೆಟ್ರ ಕಾಂತಾರ-1
- ಸು ಫ್ರಮ್ ಸೋ ಮೋಡಿಗೆ ಅಕ್ಷಯ್, ದೇವಗನ್ ಫಿದಾ
ಬಹುಶಃ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಇಬ್ಬರೇ ಸಿದ್ದ ಸೂತ್ರಗಳನ್ನ ಬಿಟ್ಟು ಕಂಟೆಂಟ್ ಮೇಲೆ ವರ್ಕ್ ಮಾಡಿದ ಚಿತ್ರಕರ್ಮಿಗಳು. ಹೌದು.. ಹಾಗಾಗಿಯೇ ಸಕ್ಸಸ್ ಇವರಿಬ್ಬರಿಗೇ ಹೇರಳವಾಗಿ ಸಿಕ್ತು. ಅದನ್ನ ಇತರರು ಕೂಡ ಒಪ್ಪಿಕೊಳ್ಳಬೇಕಾಗಿದೆ. ನಾಲ್ಕು ಫೈಟ್, ನಾಲ್ಕು ಸಾಂಗ್, ಒಂದು ಐಟಂ ಡ್ಯಾನ್ಸ್, ಸಿಜಿ, ಗ್ರಾಫಿಕ್ಸ್ ಅಂದ್ರೆ ರೊಟೀನ್. ಅದನ್ನೆಲ್ಲಾ ನೋಡೋಕೆ ಜನ ತಯಾರಿಲ್ಲ. ಸಿಕ್ಕಾಪಟ್ಟೆ ಬುದ್ಧಿವಂತರಿದ್ದಾರೆ. ಕೊರೋನಾ ಬಳಿಕ ಓಟಿಟಿಗಳು ನಾಯಿ ಕೊಡಗಳಂತೆ ಎದ್ದಿವೆ. ಚಿತ್ರಪ್ರೇಮಿಗಳನ್ನ ಅಕ್ಷರಶಃ ವಶೀಕರಣ ಮಾಡಿಕೊಂಡಿವೆ.
ಆದಾಗ್ಯೂ ಕೂಡ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ-1, ರಿಷಬ್ ಬರವಣಿಗೆ, ನಟನೆ, ನಿರ್ದೇಶನ, ದೈವಿಕ ಅಂಶಗಳು ಒನ್ಸ್ ಅಗೈನ್ ವಿಶ್ವ ಸಿನಿದುನಿಯಾದ ಗಮನ ಸೆಳೆದವು. ರಿಷಬ್ ಡಿವೈನ್ ಸ್ಟಾರ್ ಅಷ್ಟೇ ಅಲ್ಲ, ನ್ಯಾಷನಲ್ ಸ್ಟಾರ್ ಪಟ್ಟ ಕೂಡ ಪಡೆದರು. ಅಮಿತಾಬ್ ಬಚ್ಚನ್, ಗೋವಾ, ಡೆಲ್ಲಿ ಸಿಎಂ ಸೇರಿದಂತೆ ಕೇಂದ್ರ ಸರ್ಕಾರದ ಗಮನ ಕೂಡ ಸೆಳೆದರು ರಿಷಬ್. ಸದ್ಯ ಅವರ ಬಕೆಟ್‌ನಲ್ಲೀಗ ಜೈ ಹನುಮಾನ್, ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾಗಳಿವೆ.
ಇನ್ನೂ ರಾಜ್ ಬಿ ಶೆಟ್ಟಿ ಐದು ಕೋಟಿ ಬಜೆಟ್ ಹಾಕಿ ನೂರ ಇಪ್ಪತ್ತೈದು ಕೋಟಿ ಲೂಟಿ ಮಾಡ್ತಾರೆ ಅಂದ್ರೆ ಅವರ ಚಾಣಾಕ್ಷತನಕ್ಕೆ ಸಲಾಂ ಹೇಳಲೇಬೇಕು. ಸು ಫ್ರಮ್ ಸೋ ಬರೀ ಸಿನಿಮಾ ಅಲ್ಲ. ನೈಜತೆ ಹಾಗೂ ಸ್ವಾಭಾವಿಕತೆಯ ಕೈಗನ್ನಡಿ. ಇದು ಹಳ್ಳಿ ಸೊಗಡಿನ ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌ಟೈನರ್. ಈ ಸಿನಿಮಾ ನೋಡಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್, ಅಜಯ್ ದೇವಗನ್ ಅಂತಹ ಸ್ಟಾರ್‌ಗಳೇ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಾಗಾಗಿಯೇ ಒಳ್ಳೆಯ ಕಥೆಗಳಿದ್ರೆ ಹೇಳಿ ಶೆಟ್ರೆ ನಿಮ್ಮ ಜೊತೆ ಕೊಲ್ಯಾಬೊರೇಟ್ ಆಗ್ತೀವಿ ಅಂತ ಓಪನ್ ಆಫರ್ ನೀಡಿದ್ದಾರೆ.
- ಸುದೀಪ್ ಮಾರ್ಕ್ & ಶಿವಣ್ಣ-ಉಪ್ಪಿ-ರಾಜ್ 45 ನಾಟೌಟ್
- ಕಾಟೇರದಷ್ಟು ಕಮಾಲ್ ಮಾಡಲೇ ಇಲ್ಲ ಡಿ ಬಾಸ್ ಡೆವಿಲ್
ಮಾಸ್ ಹೀರೋ ಆಗಿ ಸುದೀಪ್ ಮಾರ್ಕ್ ಚಿತ್ರದಿಂದ ನೋಡುಗರಿಗೆ ಮನರಂಜನೆ ನೀಡ್ತಿರೋದು ನಿಜ. ಅದು ಇತ್ತೀಚೆಗೆ ರಿಲೀಸ್ ಆಗಿದ್ದು, ಎರಡೇ ದಿನಕ್ಕೆ 22 ಕೋಟಿ ಗಳಿಸಿತ್ತು. ನಿರ್ಮಾಪಕರು ಸೇಫ್ ಆಗಿದ್ದು, ಇನ್ಮೇಲೆ ಬರೋದೆಲ್ಲಾ ಲಾಭದಾಯಕ ಎನ್ನಲಾಗಿದೆ. ಶಿವಣ್ಣ-ಉಪೇಂದ್ರ ಹಾಗೂ ರಾಜ್ ಶೆಟ್ರ 45 ಸಿನಿಮಾ ಕೂಡ ಇನ್ನೂ ಥಿಯೇಟರ್‌ನಲ್ಲಿದೆ. ಗರುಡ ಪುರಾಣದ ಕಥೆಯನ್ನ ಜನಕ್ಕೆ ಉಣಬಡಿಸ್ತಿರೋ ಅರ್ಜುನ್ ಜನ್ಯ ಹಾಗೂ ರಮೇಶ್ ರೆಡ್ಡಿಯ ಕನಸು ನಿಜಕ್ಕೂ ಮೆಚ್ಚುವಂಥದ್ದು. ಆದ್ರೆ ಆ ಕನಸನ್ನ ಜನ ನನಸು ಮಾಡಬೇಕಿದೆ. ನಿರಂತರ ಹಾಲಿಡೇಸ್ ಇರೋದ್ರಿಂದ ಜನ ಮುಗಿಬಿದ್ದು ನೋಡ್ತಿದ್ದಾರೆ. ಪರಭಾಷ ಚಿತ್ರಪ್ರೇಮಿಗಳಿಗೆ ಜನವರಿ ಒಂದರಿಂದ 45 ಮನರಂಜನೆ ನೀಡಲಿದೆ.