ಪ್ರತಿಭಾವಂತ ಕಲಾವಿದರ ತಂಡದಿಂದ ಬರ್ತಿರೋ ಕಮಲ್ ಶ್ರೀದೇವಿ ಚಿತ್ರದ ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿದೆ. ಒಂದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾನ ಕಟ್ಟಿಕೊಟ್ಟಿರೋ ಟೀಂ, ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿದೆ. ಹಾಗಾದ್ರೆ ಟ್ರೈಲರ್ ಹೇಗಿದೆ..? ಸಚಿನ್-ಸಂಗೀತಾ ಕಂಬ್ಯಾಕ್ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದ್ರ ಡೀಟೈಲ್ಸ್ ಇಲ್ಲಿದೆ.
- ರೇಪ್ & ಮರ್ಡರ್ ಮಿಸ್ಟರಿ.. ‘ಕಮಲ್ ಶ್ರೀದೇವಿ’ ಕಮಾಲ್..!
- ಸಚಿನ್- ಸಂಗೀತಾ ಭಟ್ ಕಂಬ್ಯಾಕ್.. ಕಿಶೋರ್ ಖಾಕಿ ಖದರ್
- ಸೆ- 19ಕ್ಕೆ ಅದೃಷ್ಟ ಪರೀಕ್ಷೆ.. ಥಿಯೇಟರ್ಸ್‌ಗೆ ಗ್ರ್ಯಾಂಡ್ ಎಂಟ್ರಿ..!
- ರಾಜವರ್ಧನ್ ನ್ಯೂ ಇನ್ನಿಂಗ್ಸ್.. ಸಂಗೀತಾ ರಿಸ್ಕಿ ಪರ್ಫಾಮೆನ್ಸ್
ಇತ್ತೀಚೆಗೆ ಬಿಡುಗಡೆಯಾದ ಕಮಲ್ ಶ್ರೀದೇವಿ ಚಿತ್ರದ ಟ್ರೈಲರ್ ಭಾರೀ ನಿರೀಕ್ಷೆ ಹುಟ್ಟಿಸಿದೆ. ಒಂದು ವಿಭಿನ್ನ ಪೋಸ್ಟರ್ ಹಾಗೂ ಟೀಸರ್‌ನಿಂದ ವಿಶಿಷ್ಟವಾಗಿ ಗಮನ ಸೆಳೆದಿದ್ದ ಕಮಲ್ ಶ್ರೀದೇವಿ ಚಿತ್ರತಂಡ, ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ. ಇಲ್ಲಿಯವರೆಗೂ ಸ್ಯಾಂಪಲ್ಸ್ ಎಷ್ಟು ನಿರೀಕ್ಷೆ ಹುಟ್ಟಿಸಿತ್ತೋ, ಈಗ ಅದಕ್ಕೆ ಹತ್ತುಪಟ್ಟು ಹೆಚ್ಚು ಚಿತ್ರದ ಮೇಲೆ ಭರವಸೆ ಹುಟ್ಟಿದೆ. ತಾಂತ್ರಿಕ ಗುಣಮಟ್ಟ, ಪಾತ್ರಗಳ ವಿಶೇಷತೆಯಿಂದ ಕಮಲ್ ಶ್ರೀದೇವಿ ಚಿತ್ರ ಉದ್ಯಮದಲ್ಲಿ ಸಂಚಲನ ಸೃಷ್ಟಿಸೋ ಸೂಚನೆ ಕೊಡ್ತಿದೆ.ಈಗಾಗ್ಲೇ ಎಲ್ಲರಿಗೂ ಗೊತ್ತಿರುವಂತೆ ಕಮಲ್ ಶ್ರೀದೇವಿ ಸಿನಿಮಾನ ಎನ್ ಚಲುವರಾಯ ಸ್ವಾಮಿ ಅರ್ಪಿಸಿ, ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್‌ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಿಸಿ, ಬಾರ್ನ್ ಸ್ವಾಲನ್ ಕಂಪನಿಯ ರಾಜವರ್ಧನ್ ಸಹ ನಿರ್ಮಾಣದಲ್ಲಿ ತಯಾರಾಗಿರೋ ಚಿತ್ರ. ಈ ಚಿತ್ರದಲ್ಲಿ ಸಚಿನ್ ಚಲುವರಾಯಸ್ವಾಮಿ ನಾಯಕನಟನಾಗಿ ಅಭಿನಯಿಸಿದ್ದು, ಬಹಳ ದಿನಗಳ ನಂತ್ರ ಮತ್ತೆ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ.
ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿದಂತೆ ಸಾಕಷ್ಟು ಪ್ರತಿಭಾವಂತ ಕಲಾವಿದರ ದಂಡಿರೋ ಈ ಚಿತ್ರವನ್ನ ವಿ. ಎ. ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಅವರೇ ಹೊತ್ತಿಕೊಂಡಿರೋದು ಇಂಟರೆಸ್ಟಿಂಗ್. ಈ ಮೂಲಕ ನಟನೆ ಜೊತೆ ತೆರೆ ಹಿಂದೆಯೂ ನ್ಯೂ ಇನ್ನಿಂಗ್ಸ್ ಆರಂಭಿಸಿರೋದು ಮಹತ್ವದ ನಿರ್ಧಾರ. ಅಂದಹಾಗೆ ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಸಂಗೀತಾ ಭಟ್ ಪರ್ಫಾಮೆನ್ಸ್ ನೆಕ್ಸ್ಟ್ ಲೆವೆಲ್‌ಗಿದೆ.
ಇನ್ನು ಸಚಿನ್ ಪೊಲೀಸ್ ಸ್ಟೇಷನ್‌ನಲ್ಲಿ ಒದೆ ತಿನ್ನೋ ದೃಶ್ಯಗಳು ರೋಮಾಂಚಕ. ಮಿನಿಸ್ಟರ್ ಮಗ ಆಗಿದ್ದುಕೊಂಡು ಇಂತಹ ಪ್ರಯೋಗಾತ್ಮಕ ಪಾತ್ರ ಮಾಡಿರೋದನ್ನು ಮೆಚ್ಚಲೇಬೇಕು. ಅಲ್ಲದೆ, ಎಂದಿನಂತೆ ಕಿಶೋರ್ ಇಲ್ಲಿಯೂ ಖಾಕಿ ಖದರ್ ತೋರಿದ್ದಾರೆ. ರಾಘು ಶಿವಮೊಗ್ಗ ಕೂಡ ಒನ್ಸ್ ಅಗೈನ್ ಪೊಲೀಸ್ ಕಾಪ್ ಆಗಿ ಕಾಣಸಿಗಲಿದ್ದಾರೆ. ರೇಪ್ ಅಂಡ್ ಮರ್ಡರ್ ಮಿಸ್ಟರಿ ಕಥಾನಕವಿರೋ ಕ್ರೈಂ ಥ್ರಿಲ್ಲರ್ ಇದಾಗಿದ್ದು, ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.
ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಸಹ ನಿರ್ಮಾಪಕ ರಾಜವರ್ಧನ್ ನಟಿ ಸಂಗೀತಾ ಭಟ್ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಎಲ್ಲಾ ಪ್ರಶಸ್ತಿಗಳು ಇವ್ರಿಗೆ ಸಲ್ಲಬೇಕೆಂದು ಹಾರೈಸಿದ್ರು. ಆದ್ರೆ ಈ ಕೊಂಡಾಡುವಿಕೆಯ ಹಿಂದೆ ನನ್ನ ಟಾರ್ಚರ್ ಇದೆ. ವೇಷ್ಯೆಯಾಗಿ ‘ಸಂಗೀತಾ ಭಟ್’ ದಿಟ್ಟ ಕಲಾಸ್ಫೂರ್ತಿಗೆ ಸಲಾಂ ಅಂತ ರಾಜವರ್ಧನ್ ಧನ್ಯತಾ ಮಾತುಗಳನ್ನಾಡಿದ್ರು.
ನಾನು ಫೇಲ್ಯೂರ್ ಆಗಿದ್ದೀನಿ. ಆದರೆ ಇದು ಗೆಲ್ಲುವ ಮತ್ತು ನಿಲ್ಲುವ ಕಂಟೆಂಟ್. ಕಾಡುವ ಪಾತ್ರಗಳು ಸಿನಿಮಾದ ಕ್ವಾಲಿಟಿ ಹೆಚ್ಚಿಸಲಿದ್ದು, ಅವೇ ಇದಕ್ಕೆ ಹೈಲೈಟ್ ಅಂತಾರೆ ನಟ ಸಚಿನ್ ಚಲುವರಾಯಸ್ವಾಮಿ.
ಶ್ರೀದೇವಿಯ ಸಂಕಟ ವೃತ್ತಿ ಬದುಕಿಗೆ ತಿರುವು ನೀಡಲಿದೆ ಅಂತ ಮನಬಿಚ್ಚಿದ ಮಾತನಾಡಿದ್ರು ಸಂಗೀತ. ಈ ಪಾತ್ರ ರಿಸ್ಕ್.. ಆದ್ರೆ ವೃತ್ತಿಪರತೆ ಮೀರಿಲ್ಲ ಅಂತ ತನ್ನ ಪಾತ್ರ ಹಾಗೂ ಸಿನಿಮಾದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.
ಅಂದಹಾಗೆ ಸಿನಿಮಾ ಇದೇ ಸೆಪ್ಟೆಂಬರ್ 19ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದ್ದು, ಒಂದೊಳ್ಳೆ ಕಂಟೆಂಟ್ ಬೇಸ್ಡ್ ಸಿನಿಮಾ ಆಗಿ ನಿಲ್ಲುವ ಲಕ್ಷಣ ತೋರಿದೆ. ಸಚಿನ್-ಸಂಗೀತಾ ಹೊಸ ಇನ್ನಿಂಗ್ಸ್ ಹಾಗೂ ರಾಜವರ್ಧನ್ ಅನ್ನದಾತನಾಗಿ ಇಟ್ಟಿರೋ ದಿಟ್ಟ ಹೆಜ್ಜೆಗೆ ಕನ್ನಡ ಕಲಾಪ್ರೇಮಿಗಳು ಸಾಥ್ ಕೊಡ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.