ತಮಿಳುನಾಡು ವಿಧಾನಸಭಾ ಎಲೆಕ್ಷನ್ಸ್‌ಗೆ ಇನ್ನೂ ಕೇವಲ 10 ದಿನಗಳಷ್ಟೇ ಬಾಕಿ ಉಳಿದಿದೆ. ಚುನಾವಣಾ ಕಣ ಗರಿಗೆದರಿದ್ದು, ಒಂದ್ಕಡೆ ವಿಜಯ್ ಮತ್ತೊಂದ್ಕಡೆ ಸ್ಟಾಲಿನ್ ನಾನಾ-ನೀನಾ ಫೈಟ್ ಜೋರಾಗಿದೆ. ಇಂಟರೆಸ್ಟಿಂಗ್ ಅಂದ್ರೆ ವಿಜಯ್ ವಿರುದ್ಧ ಕಮಲ್ ಹಾಸನ್ ಕ್ಯಾಂಪೇನ್ ಮಾಡೋಕೆ ಸಜ್ಜಾಗಿದ್ದಾರೆ. ಇದು ಫ್ಯಾನ್ಸ್ ವಾರ್ ಜೊತೆ ಚಿತ್ರರಂಗದ ಒಡಕಿಗೂ ಮುನ್ನುಡಿ ಬರೆಯೋ ಮುನ್ಸೂಚನೆ ನೀಡಿದೆ.
ಜನ ನಾಯಗನ್ ಸಂಪೂರ್ಣ ಸಿನಿಮಾ ಪೈರಸಿ ಆಗಿಬಿಟ್ಟಿದೆ. ಫುಲ್ ಹೆಚ್‌ಡಿ ಪ್ರಿಂಟ್ ಮೊಬೈಲ್‌ಗಳಿಗೆ ಲಗ್ಗೆ ಇಟ್ಟಾಗಿದೆ. ಎಷ್ಟೇ ಲಿಂಕ್‌ಗಳನ್ನ ಡಿ ಆ್ಯಕ್ಟಿವೇಟ್ ಅಥ್ವಾ ಡಿಲೀಟ್ ಮಾಡಿದ್ರೂ ಸಹ ಪೈರಸಿಯನ್ನ ತಡೆಯುವಲ್ಲಿ ಚಿತ್ರತಂಡ ಹಾಗೂ ವ್ಯವಸ್ಥೆ ವಿಫಲವಾಗಿದೆ. ಸೆನ್ಸಾರ್‌ಗೆ ಅಂತ ನೀಡಿದ್ದ ಸಿನಿಮಾ ಕಾಪಿ ಅದ್ಹೇಗೆ ಲೀಕ್ ಆಯ್ತು ಅಂತ ಚಿರಂಜೀವಿ, ಕಮಲ್ ಹಾಸನ್ ಸೇರಿದಂತೆ ಸಾಕಷ್ಟು ಮಂದಿ ವಿಜಯ್ ಬೆಂಬಲಕ್ಕೆ ನಿಂತಿದ್ರು. ಇಂತಹ ಘಟನೆಗಳು ಮರುಕಳಿಸಬಾರದು ಎಂದಿದ್ರು.

ವಿಜಯ್ ವಿರುದ್ಧ ಕಮಲ್ ಕ್ಯಾಂಪೇನ್.. ಸ್ಟಾಲಿನ್ ಖುಷ್!
ದಳಪತಿ ಕಂಟೆಸ್ಟ್ ಮಾಡ್ತಿರೋ ಕ್ಷೇತ್ರಗಳೇ ಅವರ ಟಾರ್ಗೆಟ್
ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಕೂಡ ಪೈರಸಿ ಮಾಡೋರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಅಂತ ಎಚ್ಚರಿಕೆ ಸಹ ನೀಡಿದೆ. ಆದ್ರೆ ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿರೋ ಜನನಾಯಗನ್‌ಗೆ ನಾಯಗನ್ ಕಮಲ್ ಹಾಸನ್ ಕೂಡ ಸಾಥ್ ನೀಡಿದ್ರು. ಆದ್ರೀಗ ವಿಜಯ್ ವಿರುದ್ಧವೇ ಸಮರಕ್ಕೆ ನಿಂತಿದ್ದಾರೆ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್.

ಸಿನಿಮಾ ಬೇರೆ ರಾಜಕೀಯ ಬೇರೆ ಅನ್ನೋದನ್ನ ಕಮಲ್ ಇಲ್ಲಿ ಪ್ರೂವ್ ಮಾಡಲು ಹೊರಟಿದ್ದಾರೆ. ಯಾಕಂದ್ರೆ ಇದೇ ಏಪ್ರಿಲ್ 23ಕ್ಕೆ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಅಲ್ಲಿ ಟಿವಿಕೆ ವಿಜಯ್ ಹಾಗೂ ಡಿಎಂಕೆ ಸ್ಟಾಲಿನ್ ನಡುವೆ ಟಫ್ ಫೈಟ್ ಕೂಡ ಆಗಲಿದೆ. ಸಿಎಂ ಸ್ಟಾಲಿನ್‌ಗೆ ಕಮಲ್ ಹಾಸನ್ ಆಪ್ತರಾಗಿದ್ದು, ಅವರಿಬ್ಬರ ಸಿದ್ಧಾಂತಗಳು ಕೂಡ ಬಹುತೇಕ ಒಂದೇ ಆಗಿರೋದ್ರಿಂದ ಸದ್ಯ ಕಮಲ್ ವಿಜಯ್ ವಿರುದ್ಧ ಎಲೆಕ್ಷನ್ ಕ್ಯಾಂಪೇನ್ ಮಾಡಲು ಮುಂದಾಗಿದ್ದಾರೆ.

ಚೆನ್ನೈನ ಪೆರಂಬೂರ್ & ತಿರುಚಿ ಪೂರ್ವದಲ್ಲಿ ಮೆಗಾ ಫೈಟ್
ಜನ ನಾಯಗನ್‌ಗೆ ಸಪೋರ್ಟ್ ಮಾಡಿದ ಕಮಲ್ ಉಲ್ಟಾ
ದಳಪತಿ ವಿಜಯ್ ಚೆನ್ನೈನ ಪೆಂಬೂರ್ ಹಾಗೂ ತಿರುಚಿ ಪೂರ್ವ.. ಹೀಗೆ ಎರಡೆರಡು ಕ್ಷೇತ್ರಗಳಲ್ಲಿ ಎಲೆಕ್ಷನ್‌ಗೆ ಕಂಟೆಸ್ಟ್ ಮಾಡ್ತಿದ್ದು, ಕಮಲ್ ಹಾಸನ್ ಆ ಎರಡೂ ಕ್ಷೇತ್ರಗಳಲ್ಲಿ ಡಿಎಂಕೆ ಪರ ಕ್ಯಾಂಪೇನ್ ಮಾಡಲಿದ್ದಾರಂತೆ. ಇದು ಒಂಥರಾ ಸ್ಟಾರ್ ವಾರ್, ಫ್ಯಾನ್ಸ್ ವಾರ್‌ಗೆ ಮುನ್ನುಡಿ ಬರೆಯೋ ಸೂಚನೆ ನೀಡಿದೆ.





