ಕನ್ನಡಿಗರನ್ನ ಕೆಣಕಿದ್ರೆ ಏನಾಗುತ್ತೆ ಅನ್ನೋದಕ್ಕೆ ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ಜ್ವಲಂತ ನಿದರ್ಶನವಾಗಿದೆ. ಕನ್ನಡಿಗರಿಂದ ಛೀ ಥೂ ಅನಿಸಿಕೊಂಡ ಯೂನಿವರ್ಸಲ್ ಸ್ಟಾರ್‌ಗೆ ಕೋರ್ಟ್‌ಗಳು ಕೂಡ ಛೀಮಾರಿ ಹಾಕಿವೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಡಿಸಾಸ್ಟರ್ ಆಗಿದ್ದು, ಸೋತು ಸುಣ್ಣವಾಗಿರೋ ಕಮಲ್‌ಗೆ ಎಲ್ಲಿಲ್ಲದ ಅವಮಾನವಾಗಿದೆ. ಇದ್ರಿಂದ ನಿವೃತ್ತಿ ಪಡೀತಾರಾ ಕಮಂಗಿ ಕಮಲ್ ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮ್ಮ ಮುಂದೆ.
- ಹದ್ದು ಮೀರಿದ್ರೆ ಹುಷಾರ್.. ಕಮಲ್‌ಗೆ ಆದ ಗತಿ ತಪ್ಪಲ್ಲ !
- ಕನ್ನಡಿಗರಿಂದ ಛೀಮಾರಿ.. ಕೋರ್ಟ್‌ನಲ್ಲೂ ಮುಖಭಂಗ
- ಕಲೆಕ್ಷನ್‌ನಲ್ಲಿ ಅಟ್ಟರ್ ಫ್ಲಾಪ್.. ಬಂಡವಾಳ ಕೂಡ ಬಂದಿಲ್ಲ
- ಕರ್ನಾಟಕ ಮಾರ್ಕೆಟ್‌ನ ಎದುರು ಹಾಕ್ಕೊಂಡ್ರೆ ಖೇಲ್ ಖತಂ
ಕಮಲ್ ಹಾಸನ್ ಅದ್ಭುತ ಕಲಾವಿದ. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಅವರ ಸಿದ್ದಾಂತಗಳು, ನಡೆ, ಆಚಾರ, ವಿಚಾರ, ಆಡುವ ಮಾತುಗಳು ಎಲ್ಲವೂ ಅವ್ರಲ್ಲಿರೋ ಆ ಅಭಿನಯ ಚತುರನನ್ನ ಕೊಲ್ಲುತ್ತಿವೆ. ನಟಸಾರ್ವಭೌಮ ಡಾ ರಾಜ್‌ಕುಮಾರ್ ವ್ಯಕ್ತಿತ್ವವನ್ನು ಅನುಸರಿಸಿದ ರಜನೀಕಾಂತ್ ನಿಜ ಜೀವನದಲ್ಲೂ ಸರಳತೆಯಿಂದ ಸೂಪರ್ ಸ್ಟಾರ್ ಅನಿಸಿಕೊಂಡ್ರು. ದುರಹಂಕಾರದಿಂದ ದೌಲತ್ತು ತೋರಿದ ಕಮಲ್ ಹಾಸನ್, ಎಷ್ಟೇ ಎತ್ತರಕ್ಕೆ ಬೆಳೆದರೂ ವ್ಯಕ್ತಿತ್ವದಲ್ಲಿ ಬಹಳ ಸಂಕುಚಿತ ಅನಿಸಿಕೊಂಡ್ರು.
ಪರ್ಸನಲ್ ಲೈಫ್‌ನಲ್ಲಿ ಕೂಡ ಎಡವಿರೋ ಕಮಲ್ ಹಾಸನ್, ವಿಶ್ವರೂಪಂ-2 ಬಳಿಕ ಸೋತು ಸುಣ್ಣವಾಗಿದ್ರು. ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರದಿಂದ ಫೀನಿಕ್ಸ್‌ನಂತೆ ಎದ್ದು ಬಂದರು. ಆದ್ರೆ ಮತ್ತೆ ಸೋಲಿನ ಸುಳಿಗೆ ಸಿಲುಕಿದ್ದಾರೆ. ಇಂಡಿಯನ್ 2 ಅಟ್ಟರ್ ಫ್ಲಾಪ್ ಆಗಿತ್ತು. ಇದೀಗ ಥಗ್ ಲೈಫ್ ಕೂಡ ಅದೇ ಹಾದಿ ಹಿಡಿದಿದೆ. ಅದಕ್ಕೆ ಕಾರಣ ಅವ್ರ ಓವರ್ ಕಾನ್ಫಿಡೆನ್ಸ್, ಉದ್ದಟತನದ ಮಾತುಗಳು, ತಾನು ಮಾಡಿದ್ದೇ ಸರಿ ಎನ್ನುವ ಧೋರಣೆಗಳು.
ಇತ್ತೀಚೆಗೆ ಥಗ್ ಲೈಫ್ ಸಿನಿಮಾದ ಪ್ರಮೋಷನ್ಸ್ ವೇಳೆ ತಮಿಳಿಂದ ಕನ್ನಡ ಹುಟ್ಟಿದೆ ಎಂದ ಕಮಲ್, ಕನ್ನಡ ವಿರೋಧಿ ಹೇಳಿಕೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದರು. ಕರ್ನಾಟಕದಲ್ಲಿ ಸಿನಿಮಾ ಬ್ಯಾನ್ ಆಗುವ ಮಟ್ಟಕ್ಕೆ ವಿವಾದ ಮೈ ಮೇಲೆ ಎಳೆದುಕೊಂಡರು. ಬಹುಶಃ ಒಂದು ಕ್ಷಮೆ ಕೇಳಿದ್ರೆ ಅವರು ದೊಡ್ಡ ವ್ಯಕ್ತಿ ಅನಿಸಿಕೊಳ್ತಿದ್ರು. ಆದ್ರೆ ಕ್ಷಮೆ ಯಾಚಿಸದೆ ಹೈ ಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಅಲ್ಲಿಯೂ ಛೀಮಾರಿ ಹಾಕಿಸಿಕೊಂಡು, ತಮ್ಮ ಘನತೆ, ಗೌರವಕ್ಕೆ ಧಕ್ಕೆ ಬರುವಂತೆ ಮಾಡಿಕೊಂಡಿದ್ದಾರೆ.
ಇದ್ರಿಂದ ಆತ ಸಾಧಿಸಿದ್ದಾದ್ರೂ ಏನು..? ಹೋಗಲಿ ಥಗ್ ಲೈಫ್ ಸಿನಿಮಾ ಹಿಟ್ ಆಯಿತೇ..? ನೋ. ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಸಿನಿಮಾ ಡಿಸಾಸ್ಟರ್ ಅನಿಸಿಕೊಂಡಿದೆ. ರಿಲೀಸ್ ಆದ ನಾಲ್ಕು ದಿನಗಳಲ್ಲಿ ಸಿನಿಮಾ ಗಳಿಸಿದ್ದು ಕೇವಲ 36 ಕೋಟಿ ಅಂದ್ರೆ ಇದಕ್ಕಿಂತ ದೊಡ್ಡ ಅವಮಾನ ಮತ್ತೇನು ಬೇಕು ಅಲ್ಲವೆ..? ಅದಕ್ಕೆ ಪ್ರಮುಖ ಕಾರಣ ಕನ್ನಡಿಗರನ್ನ ಎದುರು ಹಾಕಿಕೊಂಡು ಕರ್ನಾಟಕ ಮಾರ್ಕೆಟ್‌ಗೆ ಸಿನಿಮಾ ಬಾರದೆ ಇರೋದು.
ಪರಭಾಷಾ ಸೂಪರ್ ಸ್ಟಾರ್ಸ್‌ಗೆ ಕರ್ನಾಟಕ ಅದ್ರಲ್ಲೂ ಬೆಂಗಳೂರು ಬಿಗ್ ಮಾರ್ಕೆಟ್. ಇಲ್ಲಿ ಸಿನಿಮಾಗಳನ್ನ ಜನ ಒಪ್ಪಿಕೊಂಡ್ರೆ ವಿಶ್ವದ ಎಲ್ಲೆಡೆ ಒಪ್ಪಿಕೊಳ್ತಾರೆ ಅನ್ನೋದು ಅಕ್ಷರಶಃ ನಿಜವಾಗಿದೆ. ನಾವು ಕನ್ನಡಿಗರು.. ವಿಶಾಲ ಹೃದಯದವರು. ಎಲ್ಲಾ ಭಾಷೆಯ ಸಿನಿಮಾಗಳನ್ನ ಸಮಾನವಾಗಿ ಸ್ವೀಕರಿಸುತ್ತೇವೆ. ಹಾಗಂತ ಹದ್ದು ಮೀರಿದ್ರೆ, ಹೆಡೆಮುರಿ ಕಟ್ಟೋದು ಕೂಡ ಗೊತ್ತಿದೆ. ಅದನ್ನ ಥಗ್ ಲೈಫ್ ಸಿನಿಮಾ ವಿಷಯದಲ್ಲಿ ಮಾಡಿ ತೋರಿಸಿದ್ದೇವೆ.
ಕಮಲ್ ಹಾಸನ್ ನಡೆ, ಥಗ್ ಲೈಫ್ ಸಿನಿಮಾಗೆ ಕೋರ್ಟ್‌ಗಳಿಂದ ಹಿಡಿದು ಕನ್ನಡಿಗರು ಛೀಮಾರಿ ಹಾಕಿದ ಪರಿ ನಿಜಕ್ಕೂ ಒಂದು ಎಕ್ಸಾಂಪಲ್ ಸೆಟ್ ಮಾಡಿದೆ. ಇನ್ಮೇಲೆ ಯಾರೇ ಆಗಲಿ ಕನ್ನಡಿಗರನ್ನ ಎದುರು ಹಾಕ್ಕೊಂಡ್ರೆ ಖೇಲ್ ಖತಂ ಅನ್ನೋದು ಕಾತರಿ ಆಗಿದೆ. ಇದೊಂಥರಾ ಎಚ್ಚರಿಕೆ ಗಂಟೆಯಾಗಿದ್ದು, ಈ ಬೆಳವಣಿಗೆ ಇಡೀ ದೇಶಕ್ಕೆ ಮಾದರಿ ಅನಿಸಿದೆ. ಸೋ.. ಇನ್ಮೇಲೆ ಕನ್ನಡಿಗರನ್ನ ಹಗುರವಾಗಿ ಪರಿಗಣಿಸೋ ಸಾಹಸ ಯಾರೂ ಮಾಡಲಾರರು.