ಕೈದಿ, ವಿಕ್ರಮ್ & ಲಿಯೋ.. ಮೂರೂ ಚಿತ್ರಗಳ ಕ್ಲೈಮ್ಯಾಕ್ಸ್ ಇನ್‌ಕಂಪ್ಲೀಟ್. ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ನಿಂದ ಅವುಗಳಿಗೊಂದು ತಾರ್ಕಿಕ ಅಂತ್ಯ ನೀಡಲು ಕೈದಿ-2 ಬರಲಿದೆ. ಈ ವಿಷಯ ಹಳೆಯದಾದ್ರೂ, ಸೂರ್ಯ-ಕಾರ್ತಿ ಸಹೋದರರನ್ನ ಒಂದೇ ಫ್ರೇಮ್‌ನಲ್ಲಿ ತೋರಿಸೋಕೆ ಲೋಕಿ ಪಣ ತೊಟ್ಟಿದ್ದಾರೆ. ಸೋ.. ಇಲ್ಲಿದೆ ಕೈದಿ-2 ಲೇಟೆಸ್ಟ್ ಅಪ್ಡೇಟ್.
- 35 ಪೇಜ್ ಕೈದಿ ಸೀಕ್ವೆಲ್ ರೆಡಿ.. ಕೂಲಿ ನಂತ್ರ ಕೈದಿ-2 ಸ್ಟಾರ್ಟ್
- ಸೂರ್ಯ-ಕಾರ್ತಿ ಫೈಟ್ ಜೋರು, ದಿಲ್ಲಿ- ರೋಲೆಕ್ಸ್ ದರ್ಬಾರು
- LCUನಲ್ಲಿ ಸಹೋದರರ ಸವಾಲ್.. ಹೈ- ವೋಲ್ಟೇಜ್ ವೆಂಚರ್
- ಲೋಕೇಶ್ ಕನಕರಾಜ್‌ನ ರಾಜಮೌಳಿಗೆ ಹೋಲಿಸಿದ ತಲೈವಾ
ಕೈದಿ.. 2019ರಲ್ಲಿ ಡ್ರಗ್ ದುನಿಯಾ ಮೇಲೆ ತಯಾರಾದ ಕಾಲಿವುಡ್ ಬ್ಲಾಕ್ ಬಸ್ಟರ್ ಎಂಟರ್‌ಟೈನರ್. ಕಾರ್ತಿ ಲೀಡ್ ರೋಲ್‌ನಲ್ಲಿ ನಟಿಸಿದ್ದ ಈ ಚಿತ್ರಕ್ಕೆ ಲೋಕೇಶ್ ಕನಕರಾಜ್ ಡೈರೆಕ್ಟರ್. ದಿಲ್ಲಿ ಅನ್ನೋ ಪಾತ್ರವನ್ನು ಸೃಷ್ಠಿಸಿ, ಒಂದು ನೈಟ್‌ನಲ್ಲಿ ನಡೆಯೋ ಕಥೆಯನ್ನ ಬಹಳ ಸೊಗಸಾಗಿ ತೋರಿಸುವಲ್ಲಿ ಯಶಸ್ವಿ ಆಗಿದ್ರು ಲೋಕೇಶ್. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ LCU ಶುರು ಮಾಡಿದ್ರು.
2022ರಲ್ಲಿ ವಿಕ್ರಮ್, 2023ರಲ್ಲಿ ಲಿಯೋ ಸಿನಿಮಾಗಳನ್ನ ಮಾಡಿದಂತಹ ಲೋಕೇಶ್, ಇವೆರಡೂ ಸಹ ಎಲ್‌ಸಿಯುಗೆ ಒಳಪಡಿಸಿದ್ರು. ಅಂದ್ರೆ ಒಂದಕ್ಕೊಂದು ಲಿಂಕ್ ಇರೋ ರೀತಿ ಕಥೆಯನ್ನ ಜೋಡಿಸಿದ್ರು. ಆದರಲ್ಲೂ ಕಮಲ್ ಹಾಸನ್, ಫಹದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಜೋಡಿಯ ವಿಕ್ರಮ್ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ರೋಲೆಕ್ಸ್ ಎಂಟ್ರಿ ನೆಕ್ಸ್ಟ್ ಲೆವೆಲ್‌ಗಿದೆ.
ಡ್ರಗ್ ಮಾಫಿಯಾದ ಬಿಗ್ಗೆಸ್ಟ್ ಕಿಂಗ್‌ಪಿನ್ ರೋಲೆಕ್ಸ್ ಪಾತ್ರದಲ್ಲಿ ಸೂರ್ಯ ಅಭಿನಯಿಸಿದ್ರು. ಇದೀಗ ಕೈದಿ ಸೀಕ್ವೆಲ್‌ಗೆ ಲೋಕೇಶ್ ಕನಕರಾಜ್ ಪೀಠಿಕೆ ಹಾಕಿದ್ದು, ದಿಲ್ಲಿ ಪಾತ್ರಧಾರಿ ಕಾರ್ತಿ ಹಾಗೂ ರೋಲೆಕ್ಸ್ ಪಾತ್ರಧಾರಿ ಸೂರ್ಯರನ್ನ ಒಟ್ಟುಗೂಡಿಸಿ ಸಿನಿಮಾ ಮಾಡ್ತಿದ್ದಾರೆ. ಸಹೋದರರ ದರ್ಬಾರು ಈ ಬಾರಿ ಜೋರಿರಲಿದ್ದು, ಎರಡು ಪವರ್‌ಫುಲ್ ಮಾಸ್ ಪಾತ್ರಗಳಿಗೆ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.
ಈಗಾಗ್ಲೇ 30ರಿಂದ 35 ಪುಟಗಳಷ್ಟು ಕೈದಿ-2 ಸಿನಿಮಾದ ಸ್ಕ್ರಿಪ್ಟ್ ಬರೆದಿರೋ ಡೈರೆಕ್ಟರ್ ಲೋಕೇಶ್, ಕೂಲಿ ಸಿನಿಮಾ ರಿಲೀಸ್ ಆಗ್ತಿದ್ದಂತೆ ಕೈದಿ ಸೀಕ್ವೆಲ್‌ನ ಕೈಗೆತ್ತಿಕೊಳ್ಳಲಿದ್ದಾರಂತೆ. ಸದ್ಯ ರಜನೀಕಾಂತ್ ಜೊತೆ ನಾಗಾರ್ಜುನ್, ಉಪೇಂದ್ರ, ಆಮೀರ್ ಖಾನ್ ಅಂತಹ ಸ್ಟಾರ್‌ಗಳ ಕಾಂಬೋದಲ್ಲಿ ಕೂಲಿ ಸಿನಿಮಾ ಮಾಡಿರೋ ಲೋಕಿ, ಇದೇ ಆಗಸ್ಟ್ 14ಕ್ಕೆ ಪ್ರೇಕ್ಷಕರಿಗೆ ಆ ಮಾಸ್ ಮಸಾಲ ಅಡುಗೆ ಉಣಬಡಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.
ದಳಪತಿ ವಿಜಯ್ ನಟನೆಯ ಲಿಯೋ, ಕಾರ್ತಿ ಅಭಿನಯದ ಕೈದಿ ಹಾಗೂ ಕಮಲ್ ಹಾಸನ್‌ರ ವಿಕ್ರಮ್ ಚಿತ್ರಗಳ ಕ್ಲೈಮ್ಯಾಕ್ಸ್ ಇನ್‌ಕಂಪ್ಲೀಟ್. ಅಲ್ಲದೆ ನೋಡುಗರ ತಲೆಗೆ ಹುಳ ಬಿಟ್ಟಿರೋ ಮಾಸ್ಟರ್‌ಮೈಂಡ್ ಲೋಕಿ, ಇದೀಗ ಕೈದಿ-2 ಮೂಲಕ ಅವೆಲ್ಲಕ್ಕೂ ಒಂದು ಹೊಸ ಪ್ರಪಂಚ ಸೃಷ್ಠಿಸೋಕೆ ಸಜ್ಜಾಗಿದ್ದಾರೆ. ಇದು ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಹೆಚ್ಚು ಮಾಸ್ ಎಲಿಮೆಂಟ್ಸ್‌ನಿಂದ ಕೂಡಿರಲಿದ್ದು, ಆ್ಯಕ್ಷನ್ ಬ್ಲಾಕ್ಸ್ ಊಹಿಸಿರದ ರೇಂಜ್‌ನಲ್ಲಿ ಇರಲಿವೆ ಎನ್ನಲಾಗ್ತಿದೆ. ಇದನ್ನೆಲ್ಲಾ ನೋಡಿಯೇ ತಲೈವಾ ರಜನೀಕಾಂತ್ ಡೈರೆಕ್ಟರ್ ಲೋಕೇಶ್‌ರನ್ನ ಸೋಲಿಲ್ಲದ ಸರದಾರ ಅಂತ ರಾಜಮೌಳಿಗೆ ಹೋಲಿಸಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್