ಭಾರತಕ್ಕೆ ಆಸ್ಕರ್ ಬರೋಕೆ ಕಾರಣಕರ್ತರಾದ ಟಾಲಿವುಡ್ ಅಂಗಳದ ನಾಟು ನಾಟು ಸ್ಟಾರ್‌ಗಳ ಘಾಟು ಮತ್ತೆ ಹೆಚ್ಚಾಗಿದೆ. ಅರೇ ತ್ರಿಬಲ್ ಆರ್ ಸಿನಿಮಾ ಬಂದು ಸುಮಾರು ದಿನಗಳಾಯ್ತಲ್ವಾ..? ಈಗ ಯಾಕೆ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.
- ಮತ್ತೆ ಟ್ರೆಂಡಿಂಗ್‌ನಲ್ಲಿ ‘ನಾಟು ನಾಟು’ ಜೋಡಿ ಮೋಡಿ..!
- ಚರಣ್ ಪೆದ್ದಿ ತಾರಕ್ ಡ್ರ್ಯಾಗನ್.. ಟಾಕ್ ಆಫ್ ದಿ ಟೌನ್
ಯೆಸ್.. ರಾಜಮೌಳಿಯ RRR ಸಿನಿಮಾದಲ್ಲಿ ಒಟ್ಟೊಟ್ಟಿಗೆ ತೆರೆ ಹಂಚಿಕೊಂಡು, ಮಿಂಚು ಹರಿಸಿದ್ದ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಹಾಗೂ ಚಿರು ತನಕ ರಾಮ್ ಚರಣ್ ಸದ್ಯ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಅಪ್‌ಕಮಿಂಗ್ ಪ್ರಾಜೆಕ್ಟ್ಸ್. ಚರಣ್ ಪೆದ್ದಿ ಚಿತ್ರದಲ್ಲಿ ಬ್ಯುಸಿಯಾಗಿದ್ರೆ, ತಾರಕ್ ಡ್ರ್ಯಾಗನ್ ಮೂಲಕ ಕಮಾಲ್ ಮಾಡ್ತಿದ್ದಾರೆ.
ಇತ್ತೀಚೆಗೆ ಚಿರು ತನಯ ಚರಣ್ ನಟನೆಯ ಪೆದ್ದಿ ಸಿನಿಮಾದ ಟ್ರೈಲರ್ ಲಾಂಚ್ ಆಗಿತ್ತು. ಕ್ರಿಕೆಟ್ ಹಾಗೂ ಕುಸ್ತಿ ಆಧರಿಸಿದ ಲೋಕಲ್ ಸ್ಪೋರ್ಟ್ಸ್ ಡ್ರಾಮಾ ಕಥಾನಕ ಪೆದ್ದಿಗಾಗಿ ಚರಣ್ ಈ ಹಿಂದೆ ಆಮೀರ್ ಖಾನ್ ದಂಗಲ್ ಹಾಗೂ ಸಲ್ಮಾನ್ ಖಾನ್ ಸುಲ್ತಾನ್‌ಗಾಗಿ ಹಾಕಿರೋ ಎಫರ್ಟ್‌ಗಳನ್ನ ಹಾಕಿದ್ದಾರೆ. ದೇಹವನ್ನ ಸಿಕ್ಕಾಪಟ್ಟೆ ದಂಡಿಸಿ, ಪ್ರಾಮಿಸಿಂಗ್ ಕಂಟೆಂಟ್‌ನಿಂದ ಇದೇ ಜೂನ್ 4ಕ್ಕೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದಾರೆ.
ಜೂನಿಯರ್ ಎನ್‌ಟಿಆರ್ 43ನೇ ಬರ್ತ್ ಡೇ ವಿಶೇಷ ನಮ್ಮ ಕೆಜಿಎಫ್ ಸಾರಥಿ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಡ್ರ್ಯಾಗನ್ ಚಿತ್ರದ ಫಸ್ಟ್ ಟೀಸರ್ ಲಾಂಚ್ ಆಗಿದೆ. ಕೋಟ್ಯಂತರ ವೀವ್ಸ್ ಕಂಡಿರೋ ಈ ಸಿನಿಮಾ, ಸ್ವತಂತ್ರ ನಂತರದ ಭಾರತದಲ್ಲಿ ಓಪಿಯಮ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್‌ಗಾಗಿ ಆಫ್ಘಾನ್ ಟ್ರೇಡಿಂಗ್ ಕಂಪನಿಯಲ್ಲಿ ನಡೆಯೋ ಗ್ಯಾಂಗ್‌ಸ್ಟರ್ ವಾರ್ ಕಥೆ ಆಧರಿಸಿದೆ. ಇಲ್ಲಿ ತಾರಕ್ ಸಾಕಷ್ಟು ಎಫರ್ಟ್ ಹಾಕಿ, 15 ಕೆಜಿ ತೂಕ ಇಳಿಸಿಕೊಂಡು ಲೂಗರ್ ರೋಲ್‌ಗೆ ಬಣ್ಣ ಹಚ್ಚಿದ್ದಾರೆ. ಸಿನಿಮಾ 2027ರ ಜೂನ್ 11ಕ್ಕೆ ತೆರೆಗೆ ಬರಲಿದ್ದು, ಎರಡು ಭಾಗಗಳಲ್ಲಿ ತಯಾರಾಗ್ತಿದೆ. ಒಟ್ಟಾರೆ ನಾಟು ನಾಟು ಜೋಡಿ ಮತ್ತೊಮ್ಮೆ ಎಲ್ಲೆಡೆ ಘಾಟು ಹಬ್ಬಿಸಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





