ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರಂತೆ ಜೋಗಿ ಪ್ರೇಮ್ ಕೂಡ ಪ್ರಾಣಿಪ್ರಿಯರು. ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನ ಸಾಕಿರೋ ಪ್ರೇಮ್, ಗುಜರಾತ್‌ನ ಗಿರ್ ಎಮ್ಮೆಗಳನ್ನ ತರಿಸೋ ವಿಚಾರದಲ್ಲಿ ಮೋಸ ಹೋಗಿದ್ದರಂತೆ. ಈ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ ಶೋಮ್ಯಾನ್.
- ಎಮ್ಮೆ ಬಂತು ನೋ ಟೆನ್ಸನ್.. ಪ್ರೇಮ್ ಗ್ಯಾರಂಟಿ ಟಾಕ್..!
- ಲಕ್ಷಾಂತರ ರೂ ವಂಚಿಸಿ, ಫೋನ್ ಸ್ವಿಚ್ ಆಫ್ ಮಾಡಿದ್ದ ಭೂಪ
- ಕೆಡಿ ತೆಲುಗು ಡಬ್ಬಿಂಗ್‌ನಲ್ಲಿ ಶೋಮ್ಯಾನ್ ಜೋಗಿ ಪ್ರೇಮ್
- 12 ದಿನದ ಹಿಂದೆಯೇ ಸಮಸ್ಯೆ ಬಗೆಹರಿದಿದೆ.. ಸಿಕ್ತು ಸ್ಪಷ್ಟನೆ
ಸ್ಯಾಂಡಲ್‌ವುಡ್‌ನ ಶೋಮ್ಯಾನ್ ಜೋಗಿ ಪ್ರೇಮ್ ಈಗಾಗ್ಲೇ ಕೆಡಿ ಸಿನಿಮಾನ ಅಂದುಕೊಂಡ ಡೇಟ್‌ಗೆ ರಿಲೀಸ್ ಮಾಡೋಕೆ ಆಗ್ತಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿಲ್ಲ. ರಿಲೀಸ್ ಡೇಟ್ ಅನೌನ್ಸ್ ಮಾಡಿ, ಪ್ರಮೋಷನ್ಸ್ ಶುರು ಮಾಡಲಿಲ್ಲ ಅಂತೆಲ್ಲಾ ಸಿಕ್ಕಾಪಟ್ಟೆ ಟೆನ್ಷನ್‌ನಲ್ಲಿದ್ದಾರೆ. ಈ ಮಧ್ಯೆ ಎಮ್ಮೆ ಖರೀದಿ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿ, ವ್ಯಕ್ತಿಯೊಬ್ಬ ಮತ್ತಷ್ಟು ಟೆನ್ಷನ್ ನೀಡಿದ್ದಾರೆ.
ಈ ಬಗ್ಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ತಮ್ಮ ಮ್ಯಾನೇಜರ್ ದಶಾವರ ಚಂದ್ರು ಮೂಲಕ ದೂರು ನೀಡಿ, ವಂಚಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೊರೆ ಹೋಗಿದ್ರು ಜೋಗಿ ಪ್ರೇಮ್. ಹೌದು.. ನಟ ದರ್ಶನ್ ರೀತಿ ಪ್ರೇಮ್‌ಗೂ ಪ್ರಾಣಿ ಪಕ್ಷಿಗಳಂದ್ರೆ ಎಲ್ಲಿಲ್ಲದ ಪ್ರೀತಿ, ಪ್ರೇಮ. ತಮ್ಮ ಫಾರ್ಮ್ ಹೌಸ್‌ನಲ್ಲಿ ಪ್ರತೀ ವರ್ಷ ಸಂಕ್ರಾಂತಿ ಸೆಲೆಬ್ರೇಷನ್ ಮಾಡುವ ವಿಡಿಯೋಗಳನ್ನ ನೋಡಿದ್ರೆ ಅದಕ್ಕೆ ಉತ್ತರ ಸಿಗಲಿದೆ.
ಗುಜರಾತ್‌ನಿಂದ ಗಿರ್ ತಳಿಯ ಎರಡು ಎಮ್ಮೆಗಳನ್ನ ತರಿಸಲು 4.5 ಲಕ್ಷ ರೂಪಾಯಿಗಳನ್ನ ವನರಾಜ್ ಭಾಯ್ ಅನ್ನೋ ವ್ಯಕ್ತಿಗೆ ಆನ್‌ಲೈನ್ ಮೂಲಕ ಪೇಮೆಂಟ್ ಮಾಡಿದ್ರಂತೆ ಪ್ರೇಮ್. ಆದ್ರೆ ಹಣ ಅಕೌಂಟ್‌ಗೆ ಕ್ರೆಡಿಟ್ ಆಗ್ತಿದ್ದಂತೆ ಫೋನ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ ವನರಾಜ್. ವಾಟ್ಸಾಪ್ ಮೂಲಕ ಎಮ್ಮೆಗಳ ವಿಡಿಯೋ ತೋರಿಸಿ, ಪ್ರೇಮ್ ನಂಬಿಕೆ ಗಿಟ್ಟಿಸಿಕೊಂಡಿದ್ದ ವನರಾಜ್ ಕೊನೆಗೆ ಕೈಕೊಟ್ಟಿದ್ದ. ಹಾಗಾಗಿ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದ ಪ್ರೇಮ್, ಹುಡುಗರನ್ನ ಗುಜರಾತ್‌ಗೆ ಕಳಿಸಿ, ಆತನನ್ನ ಹುಡುಕಿ ಎಮ್ಮೆಗಳನ್ನ ಕೂಡ ಡೆಲಿವರಿ ತೆಗೆದುಕೊಂಡಿದ್ದಾರೆ. ಸಮಸ್ಯೆ ಬಗೆಹರಿದಿದ್ದು, ಇದೆಲ್ಲಾ ಆಗಿ 12 ದಿನ ಆಯ್ತು. ಈಗ ಹೇಗೆ ವಿಷ್ಯ ಹೊರಗೆ ಬಂತೋ ಗೊತ್ತಿಲ್ಲ ಅಂತ ಗ್ಯಾರಂಟಿ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ ಪ್ರೇಮ್.
ಅಂದಹಾಗೆ ಹೈದ್ರಾಬಾದ್‌ನಲ್ಲಿ ಸದ್ಯ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ತೆಲುಗು ಡಬ್ಬಿಂಗ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಪ್ರೇಮ್. ಜೋಗಿ, ಕರಿಯ, ಎಕ್ಸ್‌ಕ್ಯೂಸ್ ಮೀ ಅಂತಹ ಮಾಸ್ಟರ್‌ಪೀಸ್ ಸಿನಿಮಾಗಳನ್ನ ನೀಡಿದ ಪ್ರೇಮ್, ಅಂಥದ್ದೇ ಮತ್ತೊಂದು ಮಹತ್ವದ ಸಿನಿಮಾನ ಪ್ರೇಕ್ಷಕರಿಗೆ ಉಣಬಡಿಸೋ ಧಾವಂತದಲ್ಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





