ಜೋಗಿ ಪ್ರೇಮ್.. ಸ್ಯಾಂಡಲ್‌ವುಡ್‌ನ ಶೋಮ್ಯಾನ್, ಸೆನ್ಸೇಷನಲ್ ಡೈರೆಕ್ಟರ್, ಸಕ್ಸಸ್‌ಫುಲ್ ಸಿನಿಮಾಗಳ ಸರದಾರ. ಇವ್ರ ಸಿನಿಮಾಗಳು ಹಾಗೂ ಸಾಂಗ್ಸ್ ಪ್ರೇಕ್ಷಕರನ್ನ ಇನ್ನಿಲ್ಲದೆ ಕಾಡುತ್ತವೆ. ಆಫ್ಟರ್ ಎ ಲಾಂಗ್ ಲಾಂಗ್ ಗ್ಯಾಪ್, ಬಾದ್ ಷಾ ಕಿಚ್ಚ ಸುದೀಪ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಪ್ರೇಮ್. ಯಾವ ಸಿನಿಮಾ..? ಯಾವಾಗಿಂದ ಅನ್ನೋದ್ರ ಇನ್‌ಸೈಡ್ ಮ್ಯಾಟರ್ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
- ಬಾದ್‌ಷಾ ಸುದೀಪ್‌ಗೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್..!!
- ದಿ ವಿಲನ್ ಬಳಿಕ ಮತ್ತೆ ಒಂದಾದ ಸೆನ್ಸೇಷನಲ್ ಕಾಂಬೋ
- ಕಿಚ್ಚ ಅಂದ್ರೆ ಪ್ರೇಮ್‌ಗೆ ಅಚ್ಚುಮೆಚ್ಚು.. ಸ್ನೇಹದ ಪ್ರತೀಕವಿದು
- ಕೆಡಿ ಕಿಂಗ್‌ಡಮ್‌ಗೆ ಆಲ್ ಇಂಡಿಯಾ ಕಟೌಟ್ ಎಂಟ್ರಿ..!
ಮ್ಯಾಕ್ಸ್ ರಿಲೀಸ್ ಆಗಿದ್ದು 2024ರ ವರ್ಷಾಂತ್ಯದಲ್ಲಿ. ಆದ್ರೆ ಅದಾದ ಬಳಿಕ ಆರು ತಿಂಗಳೇ ಮುಗೀತಿದೆ. ಸ್ಯಾಂಡಲ್‌ವುಡ್ ಅಂಗಳದಲ್ಲಿ ಇಲ್ಲಿಯವರೆಗೂ ಆ ರೀತಿ ಸೌಂಡ್ ಮಾಡಿದ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಒಂದೂ ಇಲ್ಲ. ಅದ್ರಲ್ಲೂ ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲವೇ ಇಲ್ಲ. ಬಾದ್ ಷಾ ಕಿಚ್ಚ ಸುದೀಪ್ ಕರಿಯರ್‌ನ ಬಿಗ್ಗೆಸ್ಟ್ ಹಿಟ್ ಮೂವಿ ಅನಿಸಿಕೊಂಡ ಮ್ಯಾಕ್ಸ್, ನೋಡುಗರಿಗೆ ಮ್ಯಾಕ್ಸಿಮಮ್ ಎಂಟರ್‌ಟೈನ್ಮೆಂಟ್ ನೀಡಿತ್ತು.
ಸದ್ಯ ಆಲ್ ಇಂಡಿಯಾ ಕಟೌಟ್ ಬಿಲ್ಲ ರಂಗ ಬಾಷ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಹೌದು.. ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳ್ತಿರೋ ಫ್ಯಾಂಟಸಿ ಎಂಟರ್‌ಟೈನರ್ ಇದಾಗಲಿದ್ದು, ಶೂಟಿಂಗ್ ಭರದಿಂದ ಸಾಗ್ತಿದೆ. ಅದಾದ ಬಳಿಕ ತಮಿಳು ಡೈರೆಕ್ಟರ್ ಛೇರನ್‌ಗೂ ಕಿಚ್ಚನ ಡೇಟ್ಸ್ ಇದೆ. ಆದ್ರೀಗ ಅದಕ್ಕೂ ಮುನ್ನ ಮತ್ತೊಂದು ಸಿನಿಮಾ ಕೇಳಿಬರ್ತಿದೆ. ಅದೂ ನಮ್ಮ ಕನ್ನಡದ ಡೈರೆಕ್ಟರ್ ಜೊತೆ ಅನ್ನೋದು ಇಂಟರೆಸ್ಟಿಂಗ್.
ಯೆಸ್.. ಕಿಚ್ಚ ಸುದೀಪ್ ಬಿಲ್ಲ ರಂಗ ಬಾಷ ಸಿನಿಮಾದ ಜೊತೆ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಅದು ಶೊಮ್ಯಾನ್ ಜೋಗಿ ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಅನ್ನೋದು ಸದ್ಯದ ಟಾಕ್. ಅಂದಹಾಗೆ ಪ್ರೇಮ್ ಜೊತೆ ಸುದೀಪ್ ನಟಿಸ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಪ್ರೇಮ್ ಡೈರೆಕ್ಟ್ ಮಾಡಿದ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಜೊತೆ ಕಿಚ್ಚ ಕೂಡ ಕಮಾಲ್ ಮಾಡಿದ್ರು.
ದಿ ವಿಲನ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದರೂ ಸಹ, ಅಭಿನಯ ಚಕ್ರವರ್ತಿಯನ್ನ ಸಖತ್ ಸ್ಟೈಲಿಶ್ ಆಗಿ ತೋರಿಸಿದ್ರು ಪ್ರೇಮ್. ಒಳ್ಳೊಳ್ಳೆಯ ಲುಕ್ಸ್ ಆ್ಯಂಡ್ ಕಾಸ್ಟ್ಯೂಮ್ಸ್ ಟ್ರೈ ಮಾಡಿಸಿದ್ರು. ಇಂದಿಗೂ ಐ ಆ್ಯಮ್ ವಿಲನ್ ಸಾಂಗ್ ಮತ್ತೆ ಮತ್ತೆ ಗುನುಗಬೇಕೆನಿಸೋ ಹಾಡಾಗಿದೆ. ಅಂದಹಾಗೆ ಪ್ರೇಮ್ ಕೆಡಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರಲ್ವಾ..? ಸುದೀಪ್ ಅವರು ಕೂಡ ಬಿಲ್ಲ ರಂಗ ಬಾಷದಲ್ಲಿ ಬ್ಯುಸಿ. ಇವರಿಬ್ಬರ ಕಾಂಬೋ ಹೇಗೆ ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಯಾಕಂದ್ರೆ ಕಿಚ್ಚನಿಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿರೋದು ಕೆಡಿ ಸಿನಿಮಾದಲ್ಲೇ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
ಯೆಸ್.. ಕೆವಿಎನ್ ಪ್ರೊಡಕ್ಷನ್ಸ್‌ನಲ್ಲಿ ತಯಾರಾಗ್ತಿರೋ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವಿದೆ. ಇದೀಗ ಆ ಲಿಸ್ಟ್‌ಗೆ ನಮ್ಮ ಬಾದ್ ಷಾ ಕಿಚ್ಚ ಸುದೀಪ್ ಹೊಸ ಸೇರ್ಪಡೆ ಆಗ್ತಿದೆ. ಶೂಟಿಂಗ್ ಸದ್ಯದಲ್ಲೇ ಕಿಕ್‌ಸ್ಟಾರ್ಟ್ ಆಗಲಿದ್ದು, ಇದು ಕಿಚ್ಚನ ಸ್ಪೆಷಲ್ ಅಪಿಯರೆನ್ಸ್ ಎನ್ನಲಾಗ್ತಿದೆ.
ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದ ಟೀಂ ಕೆಡಿ, ಅಲ್ಲಿ ಸೆಟ್ಟಾಗಲ್ಲ ಹೋಗೆ ನಂಗೂ ನಿಂಗೂ ಸಾಂಗ್ ಚಿತ್ರಿಸಿಕೊಂಡು ಬಂದಿದೆ. ಸದ್ಯ ಕಿಚ್ಚನ ಸ್ಪೆಷಲ್ ಎಂಟ್ರಿ ಸೀನ್ಸ್ ಮುಗಿದ್ರೆ ಸಿನಿಮಾದ ಪ್ರಮೋಷನ್ಸ್ ಶುರು ಮಾಡಲಿದೆ. ಅಂದಹಾಗೆ ಟೀಸರ್ ಹಾಗೂ ಎರಡು ಸಾಂಗ್ಸ್ ಈಗಾಗ್ಲೇ ದೊಡ್ಡ ಮಟ್ಟಕ್ಕೆ ಹಿಟ್ ಆಗಿವೆ. ಸೋ ಕಿಚ್ಚನ ಎಂಟ್ರಿಯಿಂದ ಕೆಡಿ ಟೀಂಗೆ ಆನೆಬಲ ಬಂದಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್