ತೆಲುಗು ಚಿತ್ರರಂಗದಲ್ಲಿ ಈಗ ತಲೈವರ್ ಹವಾ ಮಾಮೂಲಾಗಿಲ್ಲ, ಕೋಟಿ ಕೋಟಿ ಹಣದ ಆಫರ್ ಶುರುವಾಗಿದೆ. ಜೈಲರ್ 2 ಸಿನಿಮಾ ರಿಲೀಸ್ ಆಗೋಕು ಮುಂಚೆಯೇ ವಿತರಕರ ಮಧ್ಯೆ ರಕ್ತಚರಿತ್ರೆ ಬರೆಯೋಕೆ ಇಬ್ಬರು ತೆಲುಗು ಕಿಂಗ್ಪಿನ್ಗಳು ಮುಖಾಮುಖಿ ನಿಂತಿದ್ದಾರೆ. ಯಾರು ಆ ಬಿಗ್ ಡಿಸ್ಟ್ರಿಬ್ಯೂಟರ್ಸ್..?
ಜೈಲರ್ 2 ರೈಟ್ಸ್ಗಾಗಿ ದಿಲ್ ರಾಜು-ನಾಗವಂಶಿ ನಡುವೆ ಬಿಗ್ ಫೈಟ್
ಆಂಧ್ರ-ತೆಲಂಗಾಣ ರೈಟ್ಸ್ಗೆ ₹45 ಕೋಟಿ ಆಫರ್ ಕೊಟ್ಟ ನಾಗವಂಶಿ
ಕೂಲಿ ಕೈತಪ್ಪಿದ ಬೆನ್ನಲ್ಲೇ ಜೈಲರ್ 2 ಗಾಗಿ ನಾಗವಂಶಿ ಪಟ್ಟು..!
₹45 ಕೋಟಿ vs ₹30 ಕೋಟಿ..ಯಾರ ಪಾಲಾಗುತ್ತೆ ಜೈಲರ್ 2 ರೈಟ್ಸ್.?
ರಜನಿಕಾಂತ್ ಅಭಿನಯಿಸಿದ್ದ ಜೈಲರ್ ಮೊದಲ ಭಾಗ ತೆಲುಗು ಅಂಗಳದಲ್ಲೇ ಬರೋಬ್ಬರಿ 45 ಕೋಟಿ ಕಲೆಕ್ಷನ್ ಮಾಡಿ ಸುನಾಮಿ ಎಬ್ಬಿಸಿತ್ತು. ಈಗ ಸೀಕ್ವೆಲ್ ಸರದಿ, ರಜನಿಕಾಂತ್ ಮತ್ತೆ ಹುಕುಮ್ ಚಲಾಯಿಸೋಕೆ ಬರ್ತಿದ್ದಂತೆ, ಆಂಧ್ರ ಮತ್ತು ತೆಲಂಗಾಣದ ಥಿಯೇಟ್ರಿಕಲ್ ರೈಟ್ಸ್ ಕಬಳಿಸೋಕೆ ಟಾಲಿವುಡ್ನ ಇಬ್ಬರು ಖ್ಯಾತ ಟೈಕೂನ್ಗಳಾದ ದಿಲ್ ರಾಜು ಮತ್ತು ಸಿತಾರ ನಾಗವಂಶಿ ನಡುವೆ ಕುಸ್ತಿ ನಡೀತಿದೆ.
ಒಂದೆಡೆ ಸಿತಾರ ನಾಗವಂಶಿ ಏನೇ ಆದ್ರೂ ಸರಿ, ಜೈಲರ್ 2 ಸಿನಿಮಾ ನನ್ನದೇ ಅಂತ ಬರೊಬ್ಬರಿ 45 ಕೋಟಿ ರೂಪಾಯಿ + GST ಚೆಕ್ ಹಿಡಿದು ನಿಂತಿದ್ದಾರೆ. ಮೊನ್ನೆ ಮೊನ್ನೆ ‘ಕೂಲಿ’ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದಕ್ಕೆ, ಈ ಬಾರಿ ಜೈಲರ್-2 ಯಾವುದೇ ಕಾರಣಕ್ಕೂ ಕೈಬಿಡಬಾರದು ಅನ್ನೋದು ಅವರ ಹಠ. ಇನ್ನೊಂದೆಡೆ, ಸೈಲೆಂಟ್ ಆಗಿ ಎಂಟ್ರಿ ಕೊಟ್ಟಿರೋ ಬಾಕ್ಸ್ ಆಫೀಸ್ ಜಾದೂಗಾರ ದಿಲ್ ರಾಜು 30 ಕೋಟಿ + GST ಆಫರ್ ಬಿಸಾಕಿ ಗೇಮ್ ಚೇಂಜ್ ಮಾಡೋಕೆ ನೋಡ್ತಿದ್ದಾರೆ.
ಆದ್ರೆ ಅತ್ತ ಚನ್ನೈನಲ್ಲಿ ಕುಳಿತಿರೋ ಸನ್ ಪಿಕ್ಚರ್ಸ್ ಆಟವೇ ಬೇರೆ. “ನಮ್ಮ ಹತ್ರ ಇರೋದು ಕೇವಲ ರಜನಿ ಸಿನಿಮಾವಲ್ಲ, ಕಲೆಕ್ಷನ್ ಬಾಂಬ್ ಅಂತ ನೇರವಾಗಿ 55 ಕೋಟಿ + GST ಡಿಮಾಂಡ್ ಇಟ್ಟು ಪ್ರೊಡ್ಯೂಸರ್ಸ್ಗೆ ಶಾಕ್ ಕೊಟ್ಟಿದ್ದಾರೆ. ದಸರಾ ಹಬ್ಬದ ಲಾಂಗ್ ವೀಕೆಂಡ್, ಸೂಪರ್ಸ್ಟಾರ್ ಜಾದೂ, ಈಗಾಗಲೇ ಹೈಪ್ ಹೆಚ್ಚಿಸಿರೋ ala bolelo ಸಾಂಗ್ ನೋಡ್ತಿದ್ರೆ, ಜೈಲರ್-2 ಬಾಕ್ಸ್ ಆಫೀಸ್ ಚಿಂದಿ ಉಡಾಯಿಸೋದು ಫಿಕ್ಸ್ ಅಂತಿದ್ದಾರೆ ರಜನಿ ಫ್ಯಾನ್ಸ್. ಆದ್ರೆ ಸನ್ ಪಿಕ್ಚರ್ಸ್ ಇಟ್ಟಿರೋ ಈ ಬಿಗ್ ರಿಸ್ಕ್ ತಗೊಂಡು, ತಲೈವರ್ ಸಾಮ್ರಾಜ್ಯವನ್ನು ತನ್ನದಾಗಿಸಿಕೊಳ್ಳೋ ಆ ರಿಯಲ್ ಸುಲ್ತಾನ್ ಯಾರು ಅನ್ನೋದೇ ಈಗ ಸೌತ್ ಚಿತ್ರರಂಗದ ಹಾಟ್ ಟಾಪಿಕ್.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





