ಡಿಬಾಸ್ ದರ್ಶನ್ ಭಂಟ ಧನ್ವೀರ್ ಗೌಡ ಹಯಗ್ರೀವನಾಗಿ ಬೆಳ್ಳಿತೆರೆ ಮೇಲೆ ಆರ್ಭಟಿಸೋಕೆ ಬರ್ತಿದ್ದಾರೆ. ಇತ್ತೀಚೆಗೆ ದರ್ಶನ್ ಬರ್ತ್ ಡೇ ಹಿನ್ನೆಲೆ ಚಿತ್ರದ ಆ್ಯಕ್ಷನ್ ಟೀಸರ್ ಲಾಂಚ್ ಆಗಿತ್ತು. ಇದೀಗ ಟ್ರೈಲರ್ ಲಾಂಚ್ ಇವೆಂಟ್‌ಗೆ ಸಕ್ಕರೆ ನಾಡು ಮಂಡ್ಯ ಸಾಕ್ಷಿ ಆಗಲಿದೆ. ಅದು ಯಾವಾಗ..? ಅದಕ್ಕೆ ಬರ್ತಿರೋ ಸ್ಪೆಷಲ್ ಚೀಫ್ ಗೆಸ್ಟ್ ಯಾರು ಅಂತೀರಾ..?
ಹಯಗ್ರೀವ..ಸ್ಯಾಂಡಲ್‌ವುಡ್ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ಸಮೃದ್ಧಿ ಮಂಜುನಾಥ್ ನಿರ್ಮಾಣದ, ರಘುಕುಮಾರ್ ನಿರ್ದೇಶನದ ಹಯಗ್ರೀವ ಇದೇ ಫೆಬ್ರವರಿ 27ಕ್ಕೆ ತೆರೆಗಪ್ಪಳಿಸುತ್ತಿದ್ದು, ಸ್ಯಾಂಪಲ್ಸ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಇತ್ತೀಚೆಗೆ ರಿಲೀಸ್ ಆದ ಆ್ಯಕ್ಷನ್ ಟೀಸರ್ ಹುಬ್ಬೇರಿಸುವಂತಿದೆ.
ಡಿಬಾಸ್ ಬರ್ತ್ ಡೇಗೆ ಹಯಗ್ರೀವ ಆ್ಯಕ್ಷನ್ ಟೀಸರ್..!
ಬೇರ್ ಬಾಡಿಯಲ್ಲಿ ಧನ್ವೀರ್ ಮಾಸ್ ಖದರ್ ಜೋರು
ಫಾರಿನ್ ಆರ್ಟಿಸ್ಟ್‌ಗಳು ಏಯ್ ಕಿಡ್ ಅನ್ನೋ ಡೈಲಾಗ್‌ಗೆ ಕಿಡ್ ತರಹನಾ ಕಾಣ್ತಾರಾ ಅಂತ ಗಿಲ್ಲಿ ಹೊಡೆಯೋ ಡೈಲಾಗ್, ಅದೇ ಸಮಯಕ್ಕೆ ಸಿಕ್ಸ್ ಪ್ಯಾಕ್ ಬೇರ್ ನಾಡಿಯಲ್ಲಿ ನಿಲ್ಲುವ ಧನ್ವೀರ್ ಡ್ಯಾಶಿಂಗ್ ಲುಕ್ ಇಂಪ್ರೆಸ್ಸೀವ್ ಆಗಿದೆ. ಮಾಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಧನ್ವೀರ್ ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ ನೀಡೋದು ಕನ್ಫರ್ಮ್.
ಅಂದಹಾಗೆ ಈ ಟೀಸರ್‌ನ ಆರಂಭದಲ್ಲಿ ಡಿಬಾಸ್ ದರ್ಶನ್‌ಗೆ ಒಂದು ಟ್ರಿಬ್ಯೂಟ್ ಕೂಡ ನೀಡಿದೆ ಚಿತ್ರತಂಡ. ಅದೇ ಕಾರಣಕ್ಕೆ ದರ್ಶನ್ ಬರ್ತ್ ಡೇ ಹಿನ್ನೆಲೆ ಅದೇ ದಿನ ಈ ಹೈ ವೋಲ್ಟೇಜ್ ಆ್ಯಕ್ಷನ್ ಟೀಸರ್ ಬಿಡುಗಡೆ ಕೂಡ ಆಗಿದೆ.
ಫಾರಿನ್ ಕಿಡ್ಸ್ ಜೊತೆ ಶೋಕ್ದಾರ್ ಆಟ..ಗಿಲ್ಲಿ ಡೈಲಾಗ್
ಮಂಡ್ಯದಲ್ಲಿ ಟ್ರೈಲರ್ ಲಾಂಚ್..ವಿಜಿ ದರ್ಶನ್, ವಿನೀಶ್ ಗೆಸ್ಟ್
ಕಬ್ಬಿಣದ ಬಾಗಿಲುಗಳು ನಿಮ್ಮನ್ನು ದೂರ ಮಾಡಿರಬಹುದು. ಆದ್ರೆ ಈ ಜನರ ಹೃದಯಗಳಲ್ಲಿ ನೀವು ಇನ್ನೂ ನಮ್ಮ ಹೆಮ್ಮೆಯಾಗಿ ಉಳಿದಿದ್ದೀರಿ. ಒಬ್ಬ ಮನುಷ್ಯನನ್ನ ಗೋಡೆಗಳ ಹಿಂದೆ ಇಡಬಹದು. ಆದ್ರೆ ಒಂದು ಹೆಸರನ್ನ, ಆ ಪ್ರಭಾವವನ್ನ ಯಾರು ತಾನೆ ಬಂಧಿಸೋಕೆ ಸಾಧ್ಯ..? ನೀವು ಇಂದು ಹೋರಾಟದಲ್ಲಿದ್ದೀರಿ. ಆದ್ರೆ ಈ ಜನ, ಈ ಪ್ರೀತಿ, ಈ ನಂಬಿಕೆ ನಿಮ್ಮ ಕವಚವಾಗಿದೆ. ಕಾಲ ಪರೀಕ್ಷಿಸಬಹುದು. ಆದ್ರೆ ಇತಿಹಾಸ ತೀರ್ಪು ಕೊಡುತ್ತದೆ. ಇದು ಅಂತ್ಯವಲ್ಲ.. ಮತ್ತೊಂದು ಮಹಾ ಆರಂಭ. ದರ್ಶನ್ ಅಂದ್ರೆ ಕೇವಲ ಹೆಸರಲ್ಲ. ಲಕ್ಷಾಂತರ ಮಂದಿಗೆ ಸ್ಫೂರ್ತಿ, ಧೈರ್ಯ, ಪ್ರೀತಿ, ನಂಬಿಕೆ. ನೀವು ಕೇವಲ ನಟ ಅಲ್ಲ. ನಮ್ಮ ಹೆಮ್ಮೆ. ಉಸಿರಿರೋವರೆಗೂ ಇರ್ತೀವಿ ನಿಮ್ಮ ಹಿಂದೆ ಅಂತ ಟ್ರಿಬ್ಯೂಟ್ ನೀಡಿದ್ದಾರೆ ಧನ್ವೀರ್ ಗೌಡ.
ಸಂಜನಾ ಆನಂದ್ ನಾಯಕನಟಿಯಾಗಿ ಬಣ್ಣ ಹಚ್ಚಿರೋ ಈ ಚಿತ್ರದಲ್ಲಿ ಈಗಾಗ್ಲೇ ಸಾಂಗ್ಸ್ ಕೂಡ ದೊಡ್ಡ ಮಟ್ಟಕ್ಕೆ ಹಿಟ್ ಆಗಿವೆ. ಅಂದಹಾಗೆ ಇದೇ ಫೆಬ್ರವರಿ 21ಕ್ಕೆ ಅಂದ್ರೆ ಇದೇ ಶನಿವಾರ ಸಂಜೆ ಸಕ್ಕರೆನಾಡು ಮಂಡ್ಯದಲ್ಲಿ ಅದ್ದೂರಿ ಟ್ರೈಲರ್ ಲಾಂಚ್ಗ ಇವೆಂಟ್ ನಡೆಯಲಿದೆ. ಅದಕ್ಕೆ ಚೀಫ್ ಗೆಸ್ಟ್‌ಗಳಾಗಿ ವಿಜಯಲಕ್ಷ್ಮೀ ದರ್ಶನ್ ಹಾಗೂ ವಿನೀಶ್ ದರ್ಶನ್ ಹೋಗ್ತಿರೋದು ವಿಶೇಷ. ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಆಗಮಿಸೋ ಸಾಧ್ಯತೆಯಿದೆ. ಇನ್ನೂ ಅಪಾರ ಸಂಖ್ಯೆಯ ದರ್ಶನ್ ಅಭಿಮಾನಿಗಳು ಹಯಗ್ರೀವ ಟ್ರೈಲರ್ ಲಾಂಚ್ ಇವೆಂಟ್‌ಗೆ ಸಾಕ್ಷಿ ಆಗಲಿದ್ದಾರೆ.





