ಟೀಸರ್‌ನಿಂದ ಹಯಗ್ರೀವನ ಅಬ್ಬರ, ಆರ್ಭಟ ಶುರುವಾಗಿತ್ತು. ಇದೀಗ ಚಾಮರಾಜನಗರದಲ್ಲಿ ಮೊದಲ ಸಾಂಗ್ ಲಾಂಚ್ ಮಾಡೋ ಮೂಲಕ ಸಿನಿಮಾದ ಪ್ರಮೋಷನ್ಸ್ ಮತ್ತಷ್ಟು ವೇಗ ಪಡೆದುಕೊಂಡಿದೆ. ಧನ್ವೀರ್-ಸಂಜನಾ ರೊಮ್ಯಾಂಟಿಕ್ ಮೆಲೋಡಿ ಟ್ರ್ಯಾಕ್ ಹೇಗಿದೆ..? ವೇದಿಕೆಯಲ್ಲಿ ಡಿ ಬಾಸ್ ಬಗ್ಗೆ ಧನ್ವೀರ್ ಹೇಳಿದ್ದಾದ್ರೂ ಏನು ಅನ್ನೋದನ್ನ ನೀವೇ ಕಣ್ತುಂಬಿಕೊಳ್ಳಿ.
ಇದು ಹಯಗ್ರೀವ ಸಿನಿಮಾದ ಆಲ್ಬಮ್‌ನ ಮೊಟ್ಟ ಮೊದಲ ಗೀತೆ. ಸ್ಯಾಂಡಲ್‌ವುಡ್ ಶೋಕ್ದಾರ್ ಧನ್ವೀರ್ ಗೌಡ ಹಾಗೂ ಎಕ್ಕ ಚಿತ್ರದ ನಾಯಕನಟಿ ಬ್ಯಾಂಗಲ್ ಬಂಗಾರಿ ಖ್ಯಾತಿಯ ಸಂಜನಾ ಆನಂದ್ ಜೋಡಿ ಮೋಡಿ ಮಾಡ್ತಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆಯ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಒದಗಿಸಿದ್ದು, ಸಂಜೀತ್ ಹೆಗ್ಡೆ ಹಾಗೂ ಲಹರಿ ಮಹೇಶ್ ಹಾಡಿದ್ದಾರೆ.

ಹಯಗ್ರೀವನ ವೇದಿಕೆಯಲ್ಲಿ ಡಿಬಾಸ್ ಹವಾ.. ‘D’ ಧನ್ವೀರ್..!
ಬ್ಯಾಂಗಲ್ ಬಂಗಾರಿ ಸಂಜನಾ ಜೊತೆ ಶೋಕ್ದಾರ್ ರೊಮ್ಯಾನ್ಸ್

ಹಂಡ್ರೆಡ್ ಪರ್ಸೆಂಟ್ ರೊಮ್ಯಾಂಟಿಕ್ ಮೆಲೋಡಿ ಸಾಂಗ್ ಇದಾಗಿದೆ. ಇಲ್ಲಿ ಗಂಡ-ಹೆಂಡತಿಯ ಮುದ್ದಾದ ಪ್ರೀತಿ, ಪೊಲೀಸ್ ಕಾಪ್ ಆಗಿದ್ರೂ ಗಾಯಗೊಂಡು ಹಾಸಿಗೆ ಹಿಡಿದಿರೋ ಹೆಂಡ್ತಿಯನ್ನ ನೋಡಿಕೊಳ್ಳೋ ಪರಿ ಇಂಪ್ರೆಸ್ಸೀವ್ ಆಗಿದೆ. ಅವ್ರ ಕೆಮಿಸ್ಟ್ರಿ ಕೂಡ ಮನ ಮುಟ್ಟುವಂತಿದ್ದು, ಕಣ್ಮನ ತಣಿಸುತ್ತಿದೆ ಈ ಹಯಗ್ರೀವ ಸಾಂಗ್.

ರಘು ಕುಮಾರ್ ನಿರ್ದೇಶನದ ಈ ಸಿನಿಮಾನ ಸಮೃದ್ಧಿ ಮಂಜುನಾಥ್ ಪತ್ನಿ ಪದ್ಮಾ ಅವರು ನಿರ್ಮಾಣ ಮಾಡಿದ್ದು, ಈ ಹಾಡನ್ನ ಚಾಮರಾಜನಗರದ ಭ್ರಮರಾಂಬ ಥಿಯೇಟರ್‌ನಲ್ಲಿ ಲಾಂಚ್ ಮಾಡಲಾಯಿತು. ನಾಯಕನಟ ಧನ್ವೀರ್ ಹಾಗೂ ಸಂಜನಾ ಆನಂದ್ ಸೇರಿದಂತೆ ಇಡೀ ತಂಡಕ್ಕೆ ಅಭೂತಪೂರ್ವ ಸ್ವಾಗತ ನೀಡಿದ್ರು ಚಾಮರಾಜನಗರದ ಜನ. ಜೆಸಿಬಿಗಳ ಮೂಲಕ ಹೂವಿನ ಸುರಿಮಳೆಗೈದರು. ಅದರಲ್ಲೂ ಬಾಸ್ ಬಾಸ್ ಡಿ ಬಾಸ್ ಅನ್ನೋ ಘೋಷಣೆಗಳು ಮಾರ್ದನಿಸಿದವು. ಅಭಿಮಾನಿಯೊಬ್ಬ ನೀಡಿದ ದರ್ಶನ್ ಭಾವಚಿತ್ರ ಹಿಡಿದು ಧನ್ವೀರ್ ಕೊನೆ ಉಸಿರಿರೋವರೆಗೂ ಜೊತೆಗಿರ್ತೀನಿ ಅಂತ ಅದೇ ಪ್ರೀತಿ, ವಿಶ್ವಾಸ, ಗೌರವ ತೋರಿದ್ರು.

ಮೊದಲನೆ ಮಾತು ತೊದಲುವೆ ನಾನು ಎಂದ ಧನ್ವೀರ್ ಗೌಡ
ಚಾಮರಾಜನಗರದಲ್ಲಿ ರಂಗೇರಿದ ಹಯಗ್ರೀವ ಗಾನಬಜಾನ..!

ಔಟ್ ಆಫ್ ದಿ ಬಾಕ್ಸ್ ಸಿನಿಮಾ ಮಾಡಿರೋ ಚಿತ್ರತಂಡ, ನಿಜಕ್ಕೂ ಭಿನ್ನ ಅಲೆಯ ಸಿನಿಮಾ ಮಾಡಿ ಪ್ರೇಕ್ಷಕರಿಗೆ ಉಣಬಡಿಸೋಕೆ ಸಜ್ಜಾಗಿದೆ. ಗಿರೀಶ್ ಗೌಡ ಸಿನಿಮಾಟೋಗ್ರಫಿ ಮೆಚ್ಚುವಂತಿದ್ದು, ಮೇಕಿಂಗ್ ಸಖತ್ ರಿಚ್ ಆಗಿ ಮೂಡಿಬಂದಿದೆ. ಡಿಫರೆಂಟ್ ಡ್ಯಾನಿ, ರವಿವರ್ಮಾ, ಅರ್ಜುನ್ ರಾಜ್ ಸ್ಟಂಟ್ಸ್ ಸಿನಿಮಾಗಿದ್ದು, ಭೂಷಣ್ ಕೊರಿಯೋಗ್ರಫಿ ಚಿತ್ರಕ್ಕಿದೆ.
ಚಿತ್ರದಲ್ಲಿ ಸಾಧು ಕೋಕಿಲ, ಶರತ್ ಲೋಹಿತಾಶ್ವ, ರಮೇಶ್ ಭಟ್, ಶೊಭರಾಜ್, ಅಶ್ವಿನಿ ಗೌಡ, ಸಂಗೀತಾ, ಅಶ್ವಿನ್ ಹಾಸನ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರಿದ್ದು, ಹಯಗ್ರೀವ ಸಿನಿಮಾ ಇದೇ ಫೆಬ್ರವರಿ 27ಕ್ಕೆ ತೆರೆಗೆ ಬರ್ತಿದೆ.





