ಸ್ಯಾಂಡಲ್‌ವುಡ್‌ಗೆ ಹಲ್ಕಾ ಡಾನ್ ಎಂಟ್ರಿ ಆಗಿದ್ದು, ಆತನಿಗೆ ಶುಭ ಕೋರಲು ದೊಡ್ಡ ದೊಡ್ಡ ಸೂಪರ್ ಸ್ಟಾರ್‌ಗಳೆಲ್ಲಾ ಬಂದು ಹೋಗಿರೋದು ಇಂಟರೆಸ್ಟಿಂಗ್. ಯೆಸ್.. ಶಿವಣ್ಣ, ಸುದೀಪ್, ಸಾಯಿಕುಮಾರ್, ದುನಿಯಾ ವಿಜಯ್ ಸೇರಿದಂತೆ ಇಡೀ ಚಿತ್ರರಂಗ ಹಲ್ಕಾ ಡಾನ್ ಬೆನ್ನಿಗೆ ನಿಂತಿದೆ. ವಿಡಿಯೋ ಲೀಕ್‌ನಿಂದ ವಿವಾದದ ಸುಳಿಗೆ ಸಿಲುಕಿದ್ದ ಜ್ಯೋತಿ ಪೂರ್ವಜ್ ಕೂಡ ಇದಕ್ಕೆ ಸಾಕ್ಷಿ ಆಗಿರೋದು ವಿಶೇಷ.
- ಸಲಾರ್ ಪ್ರಮೋದ್ ಈಗ ‘ಹಲ್ಕಾ ಡಾನ್’.. ಹೊಸ ಪರ್ವ..!!
- ಡಾನ್‌ಗೆ ಶುಭ ಕೋರಿದ ಶಿವಣ್ಣ, ಕಿಚ್ಚ & ದುನಿಯಾ ವಿಜಯ್
- ಹಾಟ್ ಬ್ಯೂಟಿ ಜ್ಯೋತಿ ಕನ್ನಡಕ್ಕೆ ಕಂಬ್ಯಾಕ್.. ಅಮೃತ ಘಳಿಗೆ
- ಟಗರು, ಸಲಗದ KP ಹೊಸ ಹೆಜ್ಜೆ.. ಪ್ರಮೋದ್‌ಗೆ ಪ್ರಮೋಷನ್
ಹಲ್ಕಾ ಡಾನ್.. ಹೀಗೊಂದು ಡಿಫರೆಂಟ್ ಟೈಟಲ್‌ನಲ್ಲಿ ಸಿನಿಮಾ ಸೆಟ್ಟೇರಿದೆ. ಇಂದು ಬಂಡೆ ಮಹಾಕಾಳಿ ಆಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಸಮಾಗಮಕ್ಕೆ ಸಾಕ್ಷಿ ಆಯ್ತು. ಸಲಾರ್ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಮಂಡ್ಯ ಹೈದ ಪ್ರಮೋದ್ ಪಂಜು ಈ ಸಿನಿಮಾದ ನಾಯಕನಟ. ಹೌದು.. ಹಲ್ಕಾ ಡಾನ್ ರೋಲ್‌ನಲ್ಲಿ ಅವರೇ ನಟಿಸ್ತಿದ್ದು, ಮಂಗಳೂರಿನ ಡಾನ್ ಆಗಿ ಕಮಾಲ್ ಮಾಡಲಿದ್ದಾರೆ. ಕಾನ್ಸೆಪ್ಟ್ ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಸಿನಿಮಾ ಇದಕ್ಕಿಂತ ಜಾಸ್ತಿನೇ ಮಜಾ ಕೊಡಲಿದೆ ಅಂತಿದೆ ಟೀಂ.
ಟಗರು, ಸಲಗ ಹಾಗೂ ಯುಐ ಖ್ಯಾತಿಯ ಮೋಸ್ಟ್ ಪ್ಯಾಷನೇಟ್ ಪ್ರೊಡ್ಯೂಸರ್ ಕೆಪಿ ಶ್ರೀಕಾಂತ್ ನಿರ್ಮಾಣದ ಹಲ್ಕಾ ಡಾನ್ ಸಿನಿಮಾಗೆ ಇಡೀ ಚಿತ್ರರಂಗವೇ ಸಾಥ್ ನೀಡಿದ್ದು ವಿಶೇಷ. ವೀನಸ್ ಎಂಟರ್‌ಟೈನರ್ ಬ್ಯಾನರ್‌ನಡಿ ಮೂಡಿ ಬರ್ತಿರೋ ನಾಲ್ಕನೇ ಚಿತ್ರ ಇದಾಗಿದೆ. ಶಿವಣ್ಣ-ಗೀತಾ ದಂಪತಿ, ಸುದೀಪ್, ರಚಿತಾ ರಾಮ್, ದುನಿಯಾ ವಿಜಯ್, ವಿನಯ್ ರಾಜ್ ಕುಮಾರ್, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಹಲವು ತಾರೆಯರು ತಂಡಕ್ಕೆ ಶುಭ ಕೋರಿದ್ರು. ಇದೇ ವೇಳೆ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರೋ ಡೈಲಾಗ್ ಕಿಂಗ್ ಸಾಯಿ ಕುಮಾರ್‌ರನ್ನ ಟೀಂ ಗೌರವಿಸಿತು.
ಕಿಚ್ಚ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ರೆ, ಗೀತಾಕ್ಕ ಹಾಗೂ ರಚಿತಾ ರಾಮ್ ಕ್ಯಾಮೆರಾಗೆ ಚಾಲನೆ ನೀಡಿದ್ರು. ಶಿವಣ್ಣ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ತುಂಬು ಹೃದಯದಿಂದ ಹರಿಸಿದರು. ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ರಮೇಶ್ ಇಂದಿರಾ, ಜ್ಯೋತಿ ರೈ ತಾರಾಬಳಗದಲ್ಲಿದ್ದಾರೆ. ಅಂದಹಾಗೆ ಖಾಸಗಿ ವಿಡಿಯೋ ಲೀಕ್ ಆಗಿ ವಿವಾದಕ್ಕೆ ಸಿಲುಕಿದ್ದ ಹಾಟ್ ಬ್ಯೂಟಿ ಜ್ಯೋತಿ ರೈ ಈ ಚಿತ್ರದ ಮೂಲಕ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
ಶ್ರೀಕಾಂತ್ ಸರ್ ಮೇಲೆ ಪ್ರೀತಿ, ಕೋಪ ಎರಡೂ ಇದೆ. ಸಿನಿಮಾ ಮಾಡದೇ ಇದ್ದಾಗ ಕೋಪ, ಮಾಡಿದಾಗ ಖುಷಿ ಇರುತ್ತದೆ. ನಾನು ಒಂದು ಹಂತದಿಂದ ದೊಡ್ಡ ಮಟ್ಟಕ್ಕೆ ಹೋಗಲು ಕಾರಣ ಶ್ರೀಕಾಂತ್ ಸರ್ ಬ್ಯಾನರ್. ಸಲಗ ಸಿನಿಮಾ ಬಳಿಕ ಭೀಮ ಸಿನಿಮಾ. ನನಗೆ ಮತ್ತೊಂದು ಜನ್ಮ ಕೊಟ್ಟ ಪ್ರೊಡಕ್ಷನ್ ಹೌಸ್. ಹಲ್ಕಾ ಡಾನ್ ಸಿನಿಮಾ ಸೂಪರ್ ಹಿಟ್ ಆಗಲಿ. ಈ ಚಿತ್ರದ ಕಾಂಬಿನೇಷನ್ ಸೂಪರ್ ಆಗಿದೆ. ಸತ್ಯ ಹೆಗ್ಡೆ ಹಾಗೂ ಸೂರಿ ಅವರನ್ನು ನಾನು ಯಾವತ್ತೂ ಮರೆಯುವ ಆಗಿಲ್ಲ. ಹರಿಕೃಷ್ಣ ಸೂಪರ್ ಹಿಟ್ ಹಾಡು ಕೊಟ್ಟವರು ಅಂತ ದುನಿಯಾ ವಿಜಯ್ ತಂಡಕ್ಕೆ ಶುಭ ಕೋರಿದ್ರು.
ನಿರ್ಮಾಪಕರಾದ ಶ್ರೀಕಾಂತ್ ಮಾತನಾಡಿ, ಹಲ್ಕಾ ಡಾನ್ ಸಿನಿಮಾದ ಮುಹೂರ್ತ ನೋಡಿದ್ರೆ ಗ್ರೇಟ್ ಎನರ್ಜಿ ಅನಿಸ್ತಿದೆ. ಮುಂದೆ ಶಿವಣ್ಣ ಹಾಗೂ ವಿಜಯ್ ಜೊತೆ ಸಿನಿಮಾ ಮಾಡ್ತೇನೆ. ಅವರಿಬ್ಬರ ಜೊತೆ ಹರಿಕೃಷ್ಣ ಮ್ಯೂಸಿಕ್ ಇರಲಿದೆ. ಕಾಲರ್ ಎತ್ಕೊಂಡು ಕನ್ನಡ ಪ್ರೇಕ್ಷಕರು ಸಿನಿಮಾ ನೋಡಬಹುದು. ನಮ್ಮ ಸಂಸ್ಥೆಗೆ ಈ ಎನರ್ಜಿ ಇರಲು ಕಾರಣರಾದವರಲ್ಲಿ ವಿಜಿ ಸರ್ ಕೂಡ ಒಬ್ರು. ನನ್ನ ಹಿಂದೆ ಒಳ್ಳೆ ತಂಡ ಇದೆ. ಎಲ್ಲರ ಆಶೀರ್ವಾದದಿಂದ ಸಿನಿಮಾ ಚೆನ್ನಾಗಿ ಆಗಲಿದೆ. ಹಲ್ಕಾ ಡಾನ್ ಎಂಬುದು ಆಡು ಭಾಷೆ. ಚಿತ್ರದಲ್ಲಿ ಪ್ರಮೋದ್ ಅವರು ಸಾಯಿ ಕುಮಾರ್ ಫ್ಯಾನ್ ಎಂದರು.
ನನ್ನ ಮೊದಲ ಸಿನಿಮಾಗೆ ನಾನು ಇಷ್ಟು ಟೆನ್ಷನ್ ಮಾಡಿಕೊಂಡಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಟೆನ್ಷನ್ ಜೊತೆಗೆ ಒಂದೊಳ್ಳೆ ವೈಬ್ರೇಷನ್ ಸಿಕ್ಕಿದೆ. ಶಿವಣ್ಣ ಜೊತೆ ಶ್ರೀಕಾಂತ್ ಸರ್ ಸಿನಿಮಾ ಮಾಡಿದಾಗ ನನ್ನ ಹಾಕಿಕೊಳ್ಳಿ. ನಾನು ಶಿವಣ್ಣ ಬಳಿ ಏಟು ತಿನ್ನಬೇಕು. ಅಂದ್ರೆ ಅವರ ಜೊತೆ ನಟಿಸಬೇಕು ಎಂಬ ಆಸೆ ಇದೆ. ಸುದೀಪ್ ಸರ್ ನನ್ನ ಆಕ್ಟಿಂಗ್ ಬಗ್ಗೆ ಹೊಗಳಿದ್ದಕ್ಕೆ ನನಗೆ ಸಾರ್ಥಕತ ಅನಿಸಿದೆ. ವಿಜಿ ಸರ್, ಗಣೇಶ್ ಸರ್ ನಮಗೆಲ್ಲಾ ಕಾನ್ಫಿಡೆನ್ಸ್ ನೀಡುತ್ತಾರೆ. ನಾನು ಐದಾರು ಬಾರಿ ಈ ಸಿನಿಮಾದ ಕಥೆ ಕೇಳಿದ್ದೇನೆ. ಡೈರೆಕ್ಟರ್ ತುಂಬಾ ಚೆನ್ನಾಗಿ ಕಥೆ ಬರೆದಿದ್ದಾರೆ ಅಂದ್ರು ನಾಯಕನಟ ಪ್ರಮೋದ್.
ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಹಲ್ಕಾ ಡಾನ್ ಸಿನಿಮಾ ನಿರ್ಮಾಣವಾಗುತ್ತಿದ್ದು, ಚಿತ್ರಕ್ಕೆ ಚಲಾ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





