ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಗ್ಲಾಮರ್ ಟ್ಯಾಲೆಂಟ್ ಜೊತೆಗೆ ಅದೃಷ್ಟವೂ ಇದ್ರೆ ಮಾತ್ರ ಒಂದು ಸಿನಿಮಾ ಗೆಲ್ಲುತ್ತೆ ಅನ್ನೋದು ಕಿಸಿಕ್ ಬ್ಯೂಟಿ ಶ್ರೀಲೀಲಾ ವಿಚಾರದಲ್ಲಿ ಪ್ರೂವ್ ಆಗಿದೆ.. ಶ್ರೀಲೀಲಾ ನಾಯಕಿಯಾಗಿ ಗೆಲ್ಲುವ ಮೆಟರಿಯಲ್ ಅಲ್ಲ ಅನ್ನೋದು ಆಗಾಗ ಕೇಳಿ ಬರೋ ಮಾತು.. ಅದಕ್ಕೆ ತಕ್ಕಂತೆ ಶ್ರೀಲೀಲಾ ನಟನೆಯಲ್ಲಿ ಬಂದ ಎಷ್ಟೋ ಸಿನಿಮಾಗಳು ಅಟರ್ ಫ್ಲಾಪ್ ಆಗಿವೆ.. ಈಗ ಮತ್ತೊಂದು ಸಿನಿಮಾ ಆ ಸಾಲಿಗೆ ಸೇರ್ಪಡೆಯಾಗಿದೆ.. ಎಂಬಂತೆ ರವಿತೇಜಾ ಜೊತೆಗಿನ ಮಾಸ್ ಜಾತರ ಸಿನಿಮಾ ಸಹ ಫ್ಲಾಪ್ ಆಗುವತ್ತ ಹೆಜ್ಜೆ ಇಟ್ಟಿದೆ.
ಕಿಸಿಕ್ ಬ್ಯೂಟಿ ಶ್ರೀಲೀಲಾಗೆ ಗ್ಲಾಪ್ ಬ್ಯೂಟಿ ಟ್ಯಾಲೆಂಟ್ ಇದ್ರೂ ಅದೃಷ್ಟ ಮಾತ್ರ ಅವರ ಕೈ ಹಿಡಿಯುತ್ತಿಲ್ಲ ಅನ್ನೋದು ಮತ್ತೊಮ್ನೆ ಪ್ರೂವ್ ಆಗಿದೆ.. ಟಾಲಿವುಡ್ನಲ್ಲಿ ಬಹಳ ಬೇಗ ಹೆಸರು ಮಾಡಿದ ಶ್ರೀಲೀಲಾ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದು, ಬಹಳ ಕಡಿಮೆ ಶ್ರೀಲೀಲಾ ನಾಯಕಿಯಾಗಿ ಗೆಲ್ಲುವ ಮೆಟರಿಯಲ್ ಅಲ್ಲ ಅನ್ನೋದು ಆಗಾಗ ಕೇಳಿ ಬರೋ ಮಾತು.. ಅದಕ್ಕೆ ತಕ್ಕಂತೆ ಶ್ರೀಲೀಲಾ ನಟನೆಯಲ್ಲಿ ಬಂದ ಎಷ್ಟೋ ಸಿನಿಮಾಗಳು ಅಟರ್ ಫ್ಲಾಪ್ ಆಗಿವೆ.. ಈಗ ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಎಂಬಂತೆ ರವಿತೇಜಾ ಜೊತೆಗಿನ ಮಾಸ್ ಜಾತರ ಸಿನಿಮಾ ಸಹ ಫ್ಲಾಪ್ ಆಗುವತ್ತ ಹೆಜ್ಜೆ ಇಟ್ಟಿದೆ.
ಕಿಸ್ ಬ್ಯೂಟಿ ಶ್ರೀಲೀಲಾಗೆ ಮತ್ತೆ ಕೈ ಕೊಟ್ಟ ಆದೃಷ್ಟ..!
ಶ್ರೀಲೀಲಾ ಸಿನಿಮಾಗಳು ಫ್ಲಾಪ್ ಆಗ್ತಿರೋದ್ಯಾಕೆ..?
ಹೌದು, ರವಿತೇಜಾ ಅವರ ಮಾಸ್ ಜಾತರ ಸಿನಿಮಾ ತೆರೆಗೆ ಬಂದಿದ್ದು, ಸಿನಿಮಾ ನೋಡಿದವರು ಸಿನಿಮಾದ ಕಥೆಯಲ್ಲಿ ಏನು ಇಲ್ಲ.. ಚಿತ್ರಕಥೆಯಲ್ಲೂ ತಾಜಾತನವಿಲ್ಲ ಅಂತಿದ್ದಾರೆ.. ಹಾಗೆ ರವಿತೇಜ ಎನರ್ಜಿಟಿಕ್ ನಟನೆ ಬಿಟ್ರೆ ಬೇರೆನು ಇಲ್ಲ ಅನ್ನೋದು ಕೂಡ ಸಿನಿಮಾ ಬಗೆಗಿನ ನೆಗೆಟಿವ್ ರಿವ್ಯೂ. ಅಲ್ಲಿಗೆ ಮಿಕ್ಸ್ಡ್ ಟಾಕ್ ಪಡ್ಕೊಂಡಿರೋ ಮಾಸ್ ಜಾತರ ಸಿನಿಮಾ ಸಕ್ಸಸ್ ಕಾಣೋದು ತುಂಬಾ ಕಷ್ಟ ಅಂತ್ಲೇ ಭಾವಿಸಲಾಗ್ತಿದೆ. ಈವರೆಗೂ ಶ್ರೀಲೀಲಾ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದ್ರೆ ಧಮಾಕ ಹಾಗೂ ಭಗವಂತ ಕೇಸರಿ ಬಿಟ್ರೆ ಯಾವ ಸಿನಿಮಾ ಸಹ ಸೂಪರ್ ಡೂಪರ್ ಹಿಟ್ ಆದ ಉದಾಹರಣೆ ಇಲ್ಲ.
ಪುಷ್ಪ-2 ಚಿತ್ರದ ಕಿಸಿಕ್ ಹಾಡಿಗೆ ಹೆಜ್ಜೆ ಹಾಕಿದ ಬಳಿಕ ಶ್ರೀಲೀಲಾ ಪ್ಯಾಪುಲಾರಿಟಿ ಮತಷ್ಟು ಹೆಚ್ಚಾಯ್ತು.. ಇನ್ನು ಡ್ಯಾನ್ಸ್ ವಿಚಾರಕ್ಕೆ ಬಂದ್ರೆ ಶ್ರೀಲೀಲಾ ಎಂತಹ ಸ್ಟಾರ್ ಹೀರೋಗಳನ್ನೇ ಮೀರಿಸುವ ಮಟ್ಟಕ್ಕೆ ಡ್ಯಾನ್ಸ್ ಮಾಡುತ್ತಾರೆ.. ಆದ್ರೆ ಸಿನಿಮಾ ಸ್ಕ್ರೀಪ್ಟ್ ಆಯ್ಕೆ ವಿಚಾರದಲ್ಲಿ ಶ್ರೀಲೀಲಾ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು ಅನ್ನೋದು ಹಲವರ ಸಲಹೆ.. ಮುಖ್ಯವಾಗಿ ತೆಲುಗು ಹುಡುಗಿಯಾಗಿರೋದ್ರಿಂದ ಶ್ರೀಲೀಲಾಗೆ ಟಿಟೌನ್ನಲ್ಲಿ ಬೆಳೆಯೋದು ಮತ್ತಷ್ಟು ಸುಲಭವಾಯ್ತು.. ಆದ್ರೆ ಅದರನ್ನ ಅವರು ಯಾವ ರೀತಿ ಕಾಪಾಡಿಕೊಂಡು ಹೋಗುತ್ತಾರೆ ಅನ್ನೋದು ಇಲ್ಲಿ ಮುಖ್ಯವಾಗುತ್ತೆ.
ಶ್ರೀಲೀಲಾ ಬಹುತೇಕ ಸಿನಿಮಾಗಳು ಅಟ್ಟರ್ ಫ್ಲಾಪ್..!
ಡ್ಯಾನ್ಸ್ ಮಾತ್ರವಲ್ಲ, ಸ್ಟೋರಿ ಕಡೆ ಗಮನ ಹರಿಸಿ ಎಂದ ಫ್ಯಾನ್ಸ್..!
ಇನ್ನು ಸಿನಿಮಾ ಫ್ಲಾಪ್ ಆಗಿರುವ ಕಾರಣಕ್ಕೆ ಅವರಿಗೆ ಅಫರ್ಸ್ ಏನು ಕಡಿಮೆಯಾಗಿಲ್ಲ.. ಬಾಲಿವುಡ್ನ ಸಾಲು ಸಾಲು ಸಿನಿಮಾಗಳಲ್ಲಿ ಲೀಲಾ ಫುಲ್ ಬ್ಯುಸಿಯಾಗಿದ್ದಾರೆ.. ಅಲ್ಲೂ ಅವರ ಯಾವ ಸಿನಿಮಾ ಕೂಡ ಇನ್ನೂ ರಿಲೀಸ್ ಆಗಿಲ್ಲ.. ಸದ್ಯ ಅಲ್ಲಿ ಶ್ರೀಲೀಲಾ ಹೇಗೆ ತಮ್ಮ ಪಾತ್ರದ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋದು ಸಿನಿಮಾ ರಿಲೀಸ್ ಬಳಿಕ ಗೊತ್ತಾಗಬೇಕಿದೆ.. ಬಾಲಿವುಡ್ ಸಿನಿಮಾಗಳ ಒಪ್ಪಿಕೊಳ್ಳುತ್ತಿರುವ ಕಾರಣಕ್ಕೆ ಶ್ರೀಲೀಲಾ ಟಾಲಿವುಡ್ ಸಿನಿಮಾಗಳನ್ನ ರಿಜೆಕ್ಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
ಒಟ್ನಲ್ಲಿ, ಶ್ರೀಲೀಲಾಗೆ ಮತ್ತೆ ಅದೃಷ್ಟ ಕೈ ಕೊಟ್ಟಿದೆ.. ಹೀಗಾಗಿ ಶ್ರೀಲೀಲಾ ಅಭಿಮಾನಿಗಳು ಡ್ಯಾನ್ಸ್ ಮಾತ್ರವಲ್ಲ, ಸ್ಟೋರಿ ಸೆಲೆಕ್ಷನ್ನತ್ತವೂ ಗಮನ ಹರಿಸಿ ಅಂತ ಹೇಳುತ್ತಿದ್ದಾರೆ. ಸದ್ಯ ಶ್ರೀಲೀಲಾ ನಟನೆಯ ಪವರ್ಸ್ಟಾರ್ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಮತ್ತು ಶಿವಕಾರ್ತಿಯೇನ್ ಜೊತೆಗೆ ನಟಿಸಿರುವ ಪರಾಶಕ್ತಿ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. .





