ಗಣೇಶ ಹಬ್ಬ.. ಸೆಲೆಬ್ರೇಷನ್‌ಗೆ ಕೇರ್ ಆಫ್ ಅಡ್ರೆಸ್. ಅದ್ರಲ್ಲೂ ಸೆಲೆಬ್ರಿಟಿಗಳು ಬಹಳ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸ್ತಾರೆ. ಈ ವರ್ಷ ಆರ್ಗ್ಯಾನಿಕ್ ಹಾಗೂ ಮಣ್ಣಿನ ಗಣಪನನ್ನ ಕೂರಿಸಿ, ಸಮಾಜಕ್ಕೂ ಸಂದೇಶ ನೀಡಿದ್ದಾರೆ ತಾರೆಯರು. ಹಾಗಾದ್ರೆ ಯಾವ್ಯಾವ ಸ್ಟಾರ್ ಹೇಗೆಲ್ಲಾ ಸೆಲೆಬ್ರೇಟ್ ಮಾಡಿದ್ರು ಗಣೇಶ ಚೌತಿ ಅಂತೀರಾ..? ಇದನ್ನೊಮ್ಮೆ ನೀವು ಓದಲೇಬೇಕು.
- ಗ್ಯಾರಂಟಿ ನ್ಯೂಸ್‌ನಲ್ಲಿ ಸೆಲೆಬ್ರಿಟಿಗಳ ಅದ್ಧೂರಿ ಗಣೇಶೋತ್ಸವ..!
- ಆರ್ಗ್ಯಾನಿಕ್ ಮಣ್ಣಿನ ಗಣಪ.. ಸಮಾಜಕ್ಕೆ ತಾರೆಯರ ಸಂದೇಶ
- ಕಡುಬು, ಹೋಳಿಗೆ, ಸಿಹಿ ಜೊತೆ ಕಲರ್‌ಫುಲ್ ಫೋಟೋಶೂಟ್
- ಗಲಾಟೆ, ತಂಟೆ-ತಕರಾರು ಬೇಡ.. ವಿಸರ್ಜನೆ ವೇಳೆ ಇರಲಿ ಜಾಗ್ರತೆ
ವಿಘ್ನ ನಿವಾರಕ ಗಣೇಶ ಹಬ್ಬ ಮನೆ ಮನಗಳಲ್ಲಿ, ದೇಶದ ಬೀದಿ ಬೀದಿಗಳಲ್ಲಿ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಸಿನಿಮಾ ತಾರೆಯರು ಅದರಲ್ಲೂ ಮುಖ್ಯವಾಗಿ ಬಾಲಿವುಡ್ ನಟ-ನಟಿಯರು ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಮ್ಮ ಕಲಾವಿದರು ಆರ್ಗಾನಿಕ್ ಮಣ್ಣಿನ ಗಣಪನ ಮೊರೆ ಹೋಗಿದ್ದಾರೆ. ಸಿನಿಮಾದಲ್ಲಿ ಸಂದೇಶ ಕೊಡೋದಲ್ಲದೆ ನಿಜ ಜೀವನದಲ್ಲೂ ಫ್ಯಾನ್ಸ್ ಗೆ ಮಾದರಿಯಾಗೋ ಕೆಲಸ ಮಾಡ್ತಿದ್ದಾರೆ ಕನ್ನಡ ಸ್ಟಾರ್ಸ್. ಸ್ಯಾಂಡಲ್‌ವುಡ್ ಸ್ಟಾರ್‌ಗಳ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲರೂ ತಮ್ಮ ಮನೆಯಲ್ಲಿ ಗಣೇಶನನ್ನ ಕೂರಿಸಿ ಸಂಭ್ರಮಿಸಿದ್ದಾರೆ. ಎಸ್, ಸ್ಯಾಂಡಲ್ ವುಡ್ ಚೆಲುವೆ ಅಮೂಲ್ಯ ಸಿನಿಮಾ ಮಾಡದೇ ಇದ್ರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಜೊತೆಗೆ ಗಣೇಶ ಹಬ್ಬವನ್ನ ಆಚರಣೆ ಮಾಡಿದ್ದಾರೆ.
ಇನ್ನು ನಟಿ ಹರ್ಷಿಕಾ ಪೂಣಚ್ಚ ಇದೆ ವರ್ಷ ಮಗಳಿಗೆ ಜನ್ಮ ನೀಡಿದ್ದು ಮೊದಲ ಗಣೇಶ್ ಹಬ್ಬವನ್ನ ಮಗಳ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ಹಾಗೂ ನಟಿ ಕಾರುಣ್ಯ ರಾಮ್ ಕೂಡ ಗೌರಿ ಗಣೇಶ ಹಬ್ಬಕ್ಕಾಗಿಯೇ ವಿಶೇಷ ಫೋಟೋ ಶೂಟ್ ಮಾಡಿಸಿ ಮಣ್ಣಿನ ಗಣಪನ ಜೊತೆ ಮಿಂಚಿದ್ದಾರೆ.
ಅವಳಿ ಸ್ಟಾರ್ಸ್ ಆಗಿರೋ ಅದ್ವಿತಿ ಹಾಗು ಅಶ್ವಿತಿ ಶೆಟ್ಟಿ ಟ್ರಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡು ಕೈಯಲ್ಲಿ ಮಣ್ಣಿನ ಗಣಪ ಹಿಡಿದು ಸಿಂಪಲ್ ಆಗಿ ಹಬ್ಬ ಆಚರಿಸಿದ್ದಾರೆ. ಅಂದಹಾಗೆ ಸ್ವತಃ ಸುಮಲತಾ ಅಂಬರೀಶ್ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಎಂದಿನಂತೆ ಈ ವರ್ಷವೂ ಗಣಪತಿ ಇಟ್ಟಿದ್ದಾರೆ. ಸದಾಶಿವನಗರದ ಹೊಸ ಮನೆಯಲ್ಲಿಯೇ ಗಣಪತಿ ಇಟ್ಟು. ಮಗಳು ಐಶ್ವರ್ಯ ಜೊತೆ ಸ್ಪೆಷಲ್ ಆಗಿಯೇ ಸಂಭ್ರಮಿಸಿದ್ದಾರೆ.
ನಟಿ ಮಯೂರಿ ಖ್ಯಾತರಿ ತಮ್ಮ ಮಗನೊಂದಿಗೆ ಫೋಟೋ ಶೂಟ್ ಮಾಡಿ ಮಿಂಚಿದ್ದಾರೆ. ಇನ್ನು ನಟಿ ನಿಕ್ಕಿ galrani ಪತಿ ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ನಿರೂಪಕ ನಿರಂಜನ ದೇಶಪಾಂಡೆ ಪತ್ನಿ ಹಾಗು ಮುದ್ದಾದ ನಾಯಿ ಜೊತೆ ಹಬ್ಬ ಎಂಜಾಯ್ ಮಾಡಿರೋ ಫೋಟೋ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.
ತುಪ್ಪದ ಬೆಡಗಿ ರಾಗಿಣಿ ಸೀರೆಯಲ್ಲಿ ಟ್ರಡಿಷನಲ್ ಲುಕ್ ಕೊಟ್ಟು ಫೋಟೋಶೂಟ್ ಮಾಡಿಸಿ ಗಣೇಶ ಹಬ್ಬ ಆಚರಿಸಿದ್ದಾರೆ.
ಇನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಣೇಶ ಮೂರ್ತಿಯನ್ನು ಮನೆಗೆ ಸ್ವಾಗತಿಸುವುದರಿಂದ ಹಿಡಿದು ಪೂಜೆ ಮಾಡಿ ನೀರಿಗೆ ವಿಸರ್ಜನೆ ಮಾಡುವವರೆಗೆ ಶಿಲ್ಪಾ ಮನೆಯಲ್ಲಿ ಹಬ್ಬದ ಸಡಗರ ಜೋರಾಗಿರುತ್ತದೆ. ಮನೆ ಬಳಿ ಡ್ಯಾನ್ಸ್ ಮಾಡುತ್ತಲೇ ಗಣೇಶನನ್ನು ಸ್ವಾಗತಿಸುತ್ತಾರೆ. ವಿಸರ್ಜನೆ ವೇಳೆ ಕೂಡ ಹೆಜ್ಜಾ ಹಾಕುತ್ತಾರೆ.
ಈ ಬಾರಿಯೂ ಜೋರಾಗಿ ಹಬ್ಬ ಆಚರಿಸಿದ್ದಾರೆ. ಒಟ್ಟಾರೆ ತಾರೆಯರು ಕಡುಬು, ಹೋಳಿಗೆ ಸಿಹಿ ಜೊತೆ ಉತ್ತಮ ಸಂದೇಶ ಕೂಡ ಕೊಟ್ಟಿದ್ದಾರೆ. ಗಣೇಶ ವಿಸರ್ಜನೆ ವೇಳೆ ಗಲಾಟೆ ಬೇಡ ಜಾಗ್ರತೆ ಇರಲಿ ಎಂದಿದ್ದಾರೆ
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್