ಕಿಸ್ ಬ್ಯೂಟಿ ಶ್ರೀಲೀಲಾ ಕ್ಯೂಟ್ ಕ್ವೀನ್ ಆಗಿ ಎಲ್ಲರಿಗೂ ಪರಿಚಯ. ಅದರಲ್ಲೂ ಪುಷ್ಪ ಚಿತ್ರದಿಂದ ಕಿಸಿಕ್ ಡಾಲ್ ಆಗಿ ಮತ್ತಷ್ಟು ಫೇಮಸ್ ಆದ್ರು. ಟಾಲಿವುಡ್‌ನ ಎಲ್ಲಾ ಸ್ಟಾರ್‌ಗಳಿಗೆ ಈಕೆಯೇ ಹಾರ್ಟ್ ಫೇವರಿಟ್. ಆದ್ರೆ ನಾವು, ನೀವು ನೋಡದ ಮತ್ತೊಂದು ಮುಖ ಈ ಚೆಲುವೆಗಿದೆ. ಅದೇನು ಅನ್ನೋ ಕ್ಯೂರಿಯಾಸಿಟಿಗೆ ಈ ಸ್ಟೋರಿನ ನೀವು ಓದಲೇಬೇಕು.
- ನಿಮಗೆ ಗೊತ್ತಿರದ ಕನ್ನಡತಿ ಶ್ರೀಲೀಲಾ ಇನ್ನೊಂದು ಮುಖ
- ಗ್ಲಾಮರ್ ಬೊಂಬೆಗೆ ಸಾಮಾಜಿಕ ಕಳಕಳಿಯ ಗ್ರಾಮರ್ ಗೊತ್ತು
ಶ್ರೀಲೀಲಾ ಅಪಟ್ಟ ಕನ್ನಡತಿ. ಆದ್ರೆ ಐದಾರು ಭಾಷೆ ಗೊತ್ತಿರೋ ಮೋಸ್ಟ್ ಟ್ಯಾಲೆಂಟೆಡ್ ನಟಿ. ಕಿಸ್ ಚಿತ್ರದಿಂದ ಶುರು ಮಾಡಿದ ಕರಿಯರ್, ಸದ್ಯ ಬಾಲಿವುಡ್‌ವರೆಗೂ ವಿಸ್ತರಿಸಿದೆ. ಹೌದು, ಕ್ಯೂಟ್ ಕ್ವೀನ್ ಶ್ರೀಲೀಲಾ ತೆಲುಗು, ಹಿಂದಿಯಲ್ಲಿ ಬಹುದೊಡ್ಡ ಛಾಪು ಮೂಡಿಸ್ತಿದ್ದಾರೆ. ಪುಷ್ಪ ಚಿತ್ರದ ಕಿಸಿಕ್ ಸಾಂಗ್‌ನಿಂದ ಸಿಕ್ಕಾಪಟ್ಟೆ ಪಾಪ್ಯುಲರ್ ಆದ್ರು. ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದ ಈಕೆ, ಅಮ್ಮನಂತೆ ಡಾಕ್ಟರ್ ಆಗುವ ಕನಸು ಕಂಡಿದ್ರು. ಅದರ ಜೊತೆ ಜೊತೆಗೆ ನಟನೆಯಲ್ಲೂ ಸೂಪರ್ ಅನಿಸಿಕೊಂಡು, ಡ್ಯಾನ್ಸ್‌ನಲ್ಲಿ ಸೂಪರ್ ಸ್ಟಾರ್‌ಗಳನ್ನೇ ಹುಬ್ಬೇರಿಸಿದ್ರು.
ಸದ್ಯ ತೆಲುಗು ಹಾಗೂ ಹಿಂದಿಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರೋ ಈಕೆ, ಇತ್ತೀಚೆಗೆ ಟಾಲಿವುಡ್‌ನ ಟಾಕ್ ಶೋ ಒಂದಕ್ಕೆ ಹೋಗಿದ್ದಾರೆ. ಜಗಪತಿ ಬಾಬು ನಡೆಸಿಕೊಡೋ ಆ ಶೋನಲ್ಲಿ ಶ್ರೀಲೀಲಾ ಭಾಗಿಯಾಗಿ ಸಾಕಷ್ಟು ಸಿನಿಮಾ ಹಾಗೂ ಸಿನಿಮೇತರ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಆ ವೇಳೆ ನಮಗೆ ನಿಮಗೆ ಗೊತ್ತಿಲ್ಲದಂತಹ ಶ್ರೀಲೀಲಾ ಮತ್ತೊಂದು ಮುಖವನ್ನು ಜಗಪತಿ ಬಾಬು ಪರಿಚಯಿಸಿದ್ದಾರೆ. ಹೌದು, ಶ್ರೀಲೀಲಾ ಎಷ್ಟು ಕ್ಯೂಟ್ ಆಗಿದ್ದಾರೋ ಆಕೆಯ ಮನಸ್ಸು ಅದಕ್ಕಿಂತ ಜಾಸ್ತಿ ಸ್ವೀಟ್. ಅದಕ್ಕೆ ಮಕ್ಕಳನ್ನು ದತ್ತು ಪಡೆದು ಸಾಕ್ತಿರೋ ಶ್ರೀಲೀಲಾ ಸಾಮಾಜಿಕ ಕಾರ್ಯಗಳೇ ಸಾಕ್ಷಿ.
ಇನ್ನು ಈ ವಿಷಯವನ್ನು ಶ್ರೀಲೀಲಾ ಎಲ್ಲೂ ಜಾಸ್ತಿ ಹಂಚಿಕೊಂಡಿಲ್ಲ. ತಾನು ಮಾಡುವ ಸಾಮಾಜಿಕ ಕಾರ್ಯಗಳು ಬೇರೆಯವರಿಗೆ ಗೊತ್ತಾಗಬೇಕು ಅಂತೇನಿಲ್ಲ. ತನಗೆ ಖುಷಿ ಕೊಟ್ರೆ ಸಾಕು ಅಂತ, ತಾನು ದುಡಿಯುವ ಒಂದಷ್ಟು ಹಣದಲ್ಲಿ ಇಂತಹ ಹತ್ತಾರು ಒಳ್ಳೆಯ ಕಾರ್ಯಗಳನ್ನ ಮಾಡ್ತಿದ್ದಾರೆ. ಇದು ನಿಜಕ್ಕೂ ಸ್ಫೂರ್ತಿದಾಯಕ ಹಾಗೂ ಇತರೇ ಸ್ಟಾರ್‌ಗಳಿಗೂ ಮಾದರಿ ಆಗಬಲ್ಲಂತಹ ನಡೆ.