ಮಾರ್ಟಿನ್ ಚಿತ್ರದಿಂದ ಪ್ಯಾನ್ ಇಂಡಿಯಾ ಗತ್ತು ತೋರಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಸದ್ಯ ಕೆಡಿ ಚಿತ್ರದಿಂದ ಗ್ಲೋಬಲ್ ಆಡಿಯೆನ್ಸ್‌ನ ರೀಚ್ ಆಗಲು ಸಜ್ಜಾಗಿದ್ದಾರೆ. ಈ ಮಧ್ಯೆ ಇವ್ರ ಮೇಲೆ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. ಮುಂಬೈನಲ್ಲಿ FIR ಕೂಡ ಆಗಿದ್ದು, ದೂರು ದಾಖಲಿಸಿದ್ಯಾರು..? ಇದು ನಿಜಾನಾ ಸುಳ್ಳಾ ಅನ್ನೋದ್ರ ಜೊತೆಗೆ ಇದ್ರ ಕಂಪ್ಲೀಟ್ ಇನ್‌ಸೈಡ್ ಡಿಟೈಲ್ಸ್ ಇಲ್ಲಿದೆ.
- 3.15 ಕೋಟಿ ವಂಚನೆ.. ಡೇಟ್ಸ್ ಕೊಡಲಿಲ್ವಾ ಧ್ರುವ ಸರ್ಜಾ..?
- ಏನಿದು ವಿವಾದ..? ಕನ್ನಡ ಚಿತ್ರ ಮಾಡಲ್ಲ ಅಂದ್ರಾ ಡೈರೆಕ್ಟರ್..?
- ಜಗ್ಗುದಾದಾ ಡೈರೆಕ್ಟರ್ ವಿರುದ್ಧ ಧ್ರುವ ಸರ್ಜಾ ಕಾನೂನು ಸಮರ
- ಸುಳ್ಳು ಆರೋಪ, ಅಮರನ್ ಕಥೆ ಬಗ್ಗೆ ಧ್ರುವ ಮ್ಯಾನೇಜರ್ ಸ್ಪಷ್ಟನೆ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಲೇಟ್ ಆದ್ರೂ ಲೇಟೆಸ್ಟ್ ಆಗಿ ಸಿನಿಮಾಗಳನ್ನ ಮಾಡ್ತಾ, ಚಿತ್ರ ಪ್ರೇಮಿಗಳನ್ನು ರಂಜಿಸುತ್ತಾ ಬರ್ತಿದ್ದಾರೆ. ಬಹಳ ಕಡಿಮೆ ಕಾಲಾವಧಿಯಲ್ಲಿ ತನ್ನ ಹಾರ್ಡ್‌ವರ್ಕ್ ಹಾಗೂ ಅದ್ಭುತ ಅಭಿನಯದ ಮೂಲಕ ಬಹುದೊಡ್ಡ ಅಭಿಮಾನಿಗಳನ್ನ ಸಂಪಾದಿಸಿಕೊಂಡ ಸ್ಟಾರ್ ಕೂಡ ಹೌದು. ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್. ಮಾಸ್ ಡೈಲಾಗ್ಸ್, ಮಾಸ್ ಮಸಾಲ ಎಂಟರ್‌ಟೈನರ್‌ಗಳಿಂದ ಮಾಸ್ ಆಡಿಯೆನ್ಸ್ ದಿಲ್ ದೋಚಿದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾರಾಜಿಸ್ತಿದ್ದಾರೆ.
ಪೊಗರು ಸಿನಿಮಾದ ಹಾಡುಗಳಿಂದ ಪ್ಯಾನ್ ಇಂಡಿಯಾ ಚಿತ್ರಪ್ರೇಮಿಗಳಿಗೆ ಪರಿಚಿತರಾದ ಆ್ಯಕ್ಷನ್ ಪ್ರಿನ್ಸ್, ಮಾರ್ಟಿನ್ ಚಿತ್ರದ ಮೂಲಕ ಅಕ್ಷರಶಃ ನ್ಯಾಷನಲ್ ಸ್ಟಾರ್ ಆದ್ರು. ಮುಂಬೈಗೆಲ್ಲಾ ಹೋಗಿ ಇಂಟರ್‌ನ್ಯಾಷನಲ್ ಪ್ರೆಸ್ ಕಾನ್ಫರೆನ್ಸ್ ಮಾಡಿದ್ರು. ಮಾರ್ಟಿನ್ ಬಳಿಕ ಸದ್ಯ ಕೆಡಿ ಸಿನಿಮಾ ಗ್ಲೋಬಲ್ ಲೆವೆಲ್‌ನಲ್ಲಿ ತಯಾರಾಗ್ತಿದ್ದು, ಭಾರತೀಯ ಚಿತ್ರರಂಗದ ಬೆಸ್ಟ್ ಆ್ಯಕ್ಟರ್‌ಗಳ ಸಮಾಗಮದಿಂದ ತಯಾರಾಗಿದೆ. ಇತ್ತೀಚೆಗೆ ಲಾಂಚ್ ಆದ ಟೀಸರ್ ಅದಕ್ಕೆ ಪ್ರತ್ಯಕ್ಷ ಸಾಕ್ಷಿ.
ಇನ್ನು ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ರಿಲೀಸ್ ಆಗ್ತಿದ್ದಂತೆ ಧ್ರುವ ಒಂದಲ್ಲ ಎರಡಲ್ಲ ಸುಮಾರು ಮೂರ್ನಾಲ್ಕು ಚಿತ್ರಗಳಿಗೆ ಡೇಟ್ಸ್ ನೀಡಿದ್ದಾರೆ. ಕೆರೆಬೇಟೆ ಡೈರೆಕ್ಟರ್, ಮಫ್ತಿ ನರ್ತನ್ ಸೇರಿದಂತೆ ಸಾಕಷ್ಟು ಮಂದಿಗೆ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅವರಲ್ಲಿ ರಾಘವೇಂದ್ರ ಹೆಗಡೆ ಕೂಡ ಒಬ್ರು. ಹೌದು.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಜಗ್ಗುದಾದಾ ಸಿನಿಮಾ ಮಾಡಿದ್ದ ಅದೇ ರಾಘವೇಂದ್ರ ಹೆಗಡೆ. 2018ರಲ್ಲೇ ಸಿನಿಮಾ ಮಾಡ್ತೀನಿ ಅಂತ ಧ್ರುವ ಸರ್ಜಾ ಬಳಿ ಬಂದಿದ್ದ ಡೈರೆಕ್ಟರ್, ಅದಕ್ಕಾಗಿ ಮೂರು ಕೋಟಿ 15 ಲಕ್ಷ ದುಡ್ಡು ಕೂಡ ಅಡ್ವಾನ್ಸ್ ರೂಪದಲ್ಲಿ ನೀಡಿದ್ದರಂತೆ.
ಅಡ್ವಾನ್ಸ್ ನೀಡಿ 7 ವರ್ಷಗಳಾದ್ರೂ ಇಂದಿಗೂ ಸಿನಿಮಾ ಕಥೆ ಸಿದ್ಧಗೊಳಿಸಿಲ್ಲ. ಕಥೆ ರೆಡಿ ಇಲ್ಲದೆ, ಸಿನಿಮಾಗೆ ಡೇಟ್ಸ್ ಕೊಡ್ತಿಲ್ಲ. ನನಗೆ ಮೂರು ಕೋಟಿ 15 ಲಕ್ಷ ವಂಚನೆ ಮಾಡಿದ್ದಾರೆ ಅಂತೆಲ್ಲಾ ಧ್ರುವ ವಿರುದ್ಧವೇ ಮುಂಬೈನಲ್ಲಿ FIR ದಾಖಲಿಸಿದ್ದಾರೆ. ಹೌದು.. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪದಡಿ ಕೇಸ್ ಫೈಲ್ ಮಾಡಿದ್ದಾರೆ ರಾಘವೇಂದ್ರ ಹೆಗಡೆ.
ಆದ್ರೆ ಧ್ರುವ ಸರ್ಜಾ ಹಣ ವಂಚಿಸಿಲ್ಲ. ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು. ನಾವು ಕಾನೂನಿನಾತ್ಮಕವಾಗಿ ಹೋರಾಡಲು ಸಿದ್ಧ. ಆರೇಳು ವರ್ಷಗಳಿಂದ ಕಥೆ ಮಾಡದೆ ಅಗೋ ಇಗೋ ಅಂತಿದ್ದಾರೆ. ಕಥೆ ಮಾಡಿಕೊಂಡು ಬರದೆ ಹೋದ್ರೆ ಡೇಟ್ ಕೊಡೋಕೆ ಹೇಗೆ ಸಾಧ್ಯ ಅಂತ ರಾಘವೇಂದ್ರ ಹೆಗಡೆ ಮಾಡ್ತಿರೋ ಆರೋಪಗಳಿಗೆಲ್ಲಾ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್, ನಮ್ಮ ಗ್ಯಾರಂಟಿ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ ಸೋಲ್ಜರ್ ಕಥೆ ಮಾಡ್ತೀನಿ ಅಂದಿದ್ದ ರಾಘವೇಂದ್ರ ಹೆಗಡೆ, ನಂತ್ರ ನಾ ಮಾಡಿಕೊಂಡ ಕಥೆ ತಮಿಳಲ್ಲಿ ಶಿವಕಾರ್ತಿಕೇಯನ್ ಮಾಡಿಬಿಟ್ರು. ಅಮರನ್ ರೀತಿಯ ಕಥೆ ಮಾಡ್ತಿದ್ದೆ ಎಂದರಂತೆ. ಆ ನಂತರ ನಾನು ಮಾಡುವ ಕಥೆ ಕನ್ನಡಕ್ಕೆ ಸೂಟ್ ಆಗಲ್ಲ. ತೆಲುಗು ಅಥ್ವಾ ಹಿಂದಿಯಲ್ಲಿ ಸ್ಟ್ರೈಟ್ ಮಾಡೋಣ ಆಮೇಲೆ ಕನ್ನಡಕ್ಕೆ ಡಬ್ ಮಾಡೋಣ ಎಂದರಂತೆ. ಕನ್ನಡ ನಾಡಿನಲ್ಲೇ ಹುಟ್ಟಿ, ಮುಂಬೈಗೆ ಹೋಗಿ ಸೆಟಲ್ ಆಗಿರೋ ರಾಘವೇಂದ್ರ ಹೆಗಡೆಗೆ ಕನ್ನಡದ ಮೇಲೆ ಅಭಿಮಾನ ಇಲ್ಲದಿರೋದು ದುರಂತ.
ಯಾವಾಗ ಕನ್ನಡದಲ್ಲಿ ಬೇಡ ಅಂದ್ರೋ ಆಗ ಧ್ರುವ ಸರ್ಜಾ ಪಿತ್ತ ನೆತ್ತಿಗೇರಿದೆ. ನಾನು ಕನ್ನಡದ ನಟ. ಡೈರೆಕ್ಟ್ ಬೇರೆ ಭಾಷೆಗೆ ಬೇಡ. ಇಲ್ಲಿಂದಲೇ ಸಿನಿಮಾ ಪರಭಾಷೆಗೆ ಹೋಗಬೇಕು ಅಂತ ರಾಘವೇಂದ್ರ ಹೆಗಡೆಗೆ ತಿಳಿ ಹೇಳಿದ್ದಾರೆ. ಈ ಕುರಿತು ಇಬ್ಬರ ನಡುವೆ ಸಾಕಷ್ಟು ವಾಕ್ಸಮರಗಳು ನಡೆದಿದ್ದು, ಸಂಧಾನ ವಿಫಲವಾದ ಹಿನ್ನೆಲೆ, ಧ್ರುವ ಸರ್ಜಾ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಬೇಕು ಅಂತಲೇ ಹೀಗೆ ಮಾಡ್ತಿದ್ದಾರೆ ಅನ್ನೋದು ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಅವರ ಮಾತಾಗಿದೆ.
ಇದೆಲ್ಲಾ ಏನೇ ಇರಲಿ, ಕನ್ನಡಿಗನಾಗಿದ್ದುಕೊಂಡು ಕನ್ನಡದಲ್ಲಿ ಸಿನಿಮಾ ಮಾಡೋದು ಬೇಡ ಎಂದಿರೋ ರಾಘವೇಂದ್ರ ಹೆಗಡೆ ಮಾತು ನಿಜಕ್ಕೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ. ಕನ್ನಡದ ಸಿನಿಮಾಗಳು ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸ್ಟ್ಯಾಂಡರ್ಡ್‌ಗಳನ್ನ ಸೆಟ್ ಮಾಡ್ತಿರುವಾಗ ಈತ ಕಂಡಿತಾ ಇಂತಹ ಮಾತು ಆಡಬಾರದಿತ್ತು. ಅವ್ರ ಮಾತನ್ನ ಹಿಂಪಡೆದು, ಒಳ್ಳೆಯ ಕಥೆ ಮಾಡಿ, ಸಿನಿಮಾ ಮಾಡಿದ್ರೆ ಒಳಿತಾಗಲಿದೆ.
ಅಂದಹಾಗೆ ಶಕ್ತಿಮಾನ್ ಅನ್ನೋ ಟೈಟಲ್‌ನಲ್ಲಿ ಹೊಸ ಸಿನಿಮಾಗೆ ಸ್ವತಃ ಧ್ರುವ ಸರ್ಜಾ ಅವರೇ ಕಥೆ ಮಾಡಿಸುತ್ತಿದ್ದರು. ಅದನ್ನ ರಾಘವೇಂದ್ರ ಹೆಗಡೆ ಬ್ಯಾನರ್‌ಗೆ ಮಡಲು ಧ್ರುವ ಮನಸ್ಸು ಮಾಡಿದ್ರು. ಯಾವಾಗ ರಾಘವೇಂದ್ರ ಹೆಗಡೆ ಧ್ರುವ ಸರ್ಜಾ ವಿರುದ್ಧ ಉಲ್ಟಾ ಹೊಡೆದ್ರೋ, ಈಗ ಸಿನಿಮಾ ಆಗೋದು ಡೌಟು. ಆದ್ರೆ ಇವರಿಬ್ಬರ ಕಾಂಬೋನಲ್ಲಿ ಸಿನಿಮಾ ಆಗಬೇಕಿದೆ. ಲೇಟ್ ಆದ್ರೂ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಸಿನಿಮಾ ಮಾಡಿದ್ರೆ ಒಳ್ಳೆಯ ಬೆಳವಣಿಗೆ. ಇಲ್ಲ ಅಂದ್ರೆ ಕೆಡಿ ಸಾಂಗ್ ಸೆಟ್ ಆಗಲ್ಲ ಹೋಗೋ ನಂಗೆ ನಂಗೆ ಅನ್ನುವಂತಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್