ಕಿಚ್ಚ-ದಚ್ಚು.. ಒಂದು ಕಾಲದ ಕುಚಿಕು ಗೆಳೆಯರು. ಆದ್ರೀಗ ಅವರಿಬ್ಬರು ನಾನೊಂದು ತೀರಾ.. ನೀನೊಂದು ತೀರಾ ಆಗಿದ್ದಾರೆ. ಸದ್ಯ ಅವರುಗಳ ಡೆವಿಲ್ ಹಾಗೂ ಮಾರ್ಕ್ ಸಿನಿಮಾಗಳು ಇದೇ ತಿಂಗಳು ತೆರೆಗಪ್ಪಳಿಸುತ್ತಿದ್ದು, ಟ್ರೈಲರ್ ವೀವ್ಸ್ ವಿಚಾರ ಸಖತ್ ಸದ್ದು ಮಾಡ್ತಿದ್ದಾರೆ. ಮೂರು ದಿನದಲ್ಲಿ ದಚ್ಚು ಡೆವಿಲ್ ಮಾಡಿದ ಟ್ರೈಲರ್ ವೀವ್ಸ್ ದಾಖಲೆಯನ್ನ ಜಸ್ಟ್ ಇಪ್ಪತ್ತೇ ನಿಮಿಷದಲ್ಲಿ ಸರಿಗಟ್ಟಿದೆ ಕಿಚ್ಚನ ಮಾರ್ಕ್.
ಚಿತ್ರರಂಗದಲ್ಲಿ ಕಾಂಪಿಟೇಷನ್ ಅನ್ನೋದು ಇರಬೇಕು. ಆಗಲೇ ಯಾರ ಗತ್ತು, ಗಮ್ಮತ್ತು ಏನು ಅನ್ನೋದು ಗೊತ್ತಾಗೋಕೆ ಸಾಧ್ಯ. ಆದ್ರೆ ಅದು ಆರೋಗ್ಯಕರವಾಗಿದ್ರೆ ತುಂಬಾ ಒಳ್ಳೆಯದು. ನಾವು ಆರಂಭದಲ್ಲೇ ಹೇಳ್ತಿದ್ದೀವಿ ಈ ಸುದ್ದಿ ಇಬ್ಬರು ಸೂಪರ್ ಸ್ಟಾರ್‌ಗಳ ನಡುವೆ ಆಗಲಿ, ಅವ್ರ ಫ್ಯಾನ್ಸ್ ಮಧ್ಯೆ ಆಗಲಿ ತಂದಿಡೋ ಕಾರ್ಯ ಅಲ್ಲವೇ ಅಲ್ಲ. ಬದಲಿಗೆ ಕಂಟೆಂಟ್ ಹಾಗೂ ಖದರ್‌ಗೆ ಸಿಕ್ಕ ಯೂಟ್ಯೂಬ್ ವೀವ್ಸ್ ದಾಖಲೆಯ ವಸ್ತನಿಷ್ಠ ರಿಪೋರ್ಟ್ ಆಗಿದೆ.
ದಚ್ಚು 3 ದಿನದ ದಾಖಲೆ.. ಕಿಚ್ಚನಿಗೆ ಜಸ್ಟ್ 20ಗಂಟೆ ಸಾಕಲೇ
ಡೆವಿಲ್ v/s ಮಾರ್ಕ್.. ಯೂಟ್ಯೂಬ್ ಸಖತ್ ಸೆನ್ಸೇಷನ್
ಯೆಸ್.. ಇತ್ತೀಚೆಗೆ ಡಿಬಾಸ್ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಚಿತ್ರದ ಟ್ರೈಲರ್ ಬಿಡುಗಡೆ ಆಗಿತ್ತು. ಇದೀಗ ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಆದ್ರೆ ದಚ್ಚು ಚಿತ್ರದ ಡೆವಿಲ್ 3 ದಿನದಲ್ಲಿ ಮಾಡಿರೋ ಯೂಟ್ಯೂಬ್ ವೀವ್ಸ್ ದಾಖಲೆಯನ್ನ ಕಿಚ್ಚನ ಮಾರ್ಕ್ ಟ್ರೈಲರ್ ಜಸ್ಟ್ 20 ಗಂಟೆಯಲ್ಲೇ ಸರಿಗಟ್ಟಿ ಆಲ್ ಟೈಂ ರೆಕಾರ್ಡ್ ಬರೆದಿದೆ.
ಡೆವಿಲ್ ಮೂರು ದಿನದ ಟ್ರೈಲರ್ ವೀವ್ಸ್ ಸಂಖ್ಯೆ ಒಂದು ಕೋಟಿ 10 ಲಕ್ಷ. ಮಾರ್ಕ್ ಟ್ರೈಲರ್ 20 ಗಂಟೆಯಲ್ಲಿ ಬರೋಬ್ಬರಿ 1 ಕೋಟಿ 40 ಲಕ್ಷ ವೀವ್ಸ್ ಪಡೆದಿದೆ. ಸದ್ಉ ಇವೆರಡೂ ಟ್ರೈಲರ್‌ಗಳು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಅವರುಗಳ ಡೈ ಹಾರ್ಡ್ ಫ್ಯಾನ್ಸ್ ಜೊತೆ ಕನ್ನಡ ಚಿತ್ರಪ್ರೇಮಿಗಳು ಕೂಡ ಮುಗಿಬಿದ್ದು ನೋಡ್ತಿದ್ದಾರೆ. ಡೆವಿಲ್ ಡಿಸೆಂಬರ್ 11ಕ್ಕೆ ತೆರೆಗೆ ಬರ್ತಿದ್ರೆ, ಮಾರ್ಕ್ ಡಿಸೆಂಬರ್ 25ಕ್ಕೆ ರಿಲೀಸ್ ಆಗ್ತಿದೆ.
ಮೂರು ದಿನದಲ್ಲಿ ಡೆವಿಲ್ ಟ್ರೈಲರ್‌ಗೆ 1.1 ಕೋಟಿ ವೀವ್ಸ್..!
ರಿಲೀಸ್ ಆದ 20ಗಂಟೆಯಲ್ಲಿ ಮಾರ್ಕ್ 1.4 ಕೋಟಿ ವೀವ್ಸ್
ಅಂದಹಾಗೆ ಸುದೀಪ್ ಮಾರ್ಕ್ ಚಿತ್ರ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಿದೆ. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಬರ್ತಿದೆ. ಆದ್ರೆ ದರ್ಶನ್ ಸಿನಿಮಾ ಕನ್ನಡ ಒಂದರಲ್ಲೇ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಅಲ್ಲದೆ ಕಿಚ್ಚ ಆಲ್ ಇಂಡಿಯಾ ಕಟೌಟ್ ಆಗಿರೋದ್ರಿಂದ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿಗಳಿದ್ದಾರೆ.
ಇದೆಲ್ಲವೂ ವೀವ್ಸ್‌ಗೆ ಮ್ಯಾಟರ್ ಆಗಿರಲಿದೆ. ಇನ್ನು ಡೆವಿಲ್-ಮಾರ್ಕ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಎಷ್ಟೆಷ್ಟು ಕೋಟಿ ಲೂಟಿ ಮಾಡುತ್ತವೆ ಅನ್ನೋದನ್ನ ನಿರೀಕ್ಷಿಸಬೇಕಿದೆ.





