ಡೆವಿಲ್ ಸಿನಿಮಾ ಹತ್ತು, ಹಲವು ದಾಖಲೆಗಳನ್ನ ಬರೆದಿದೆ. ಆ ಪೈಕಿ ರಿಲೀಸ್‌ಗೆ ಇನ್ನು 9 ದಿನ ಇರುವಾಗ ಚಿತ್ರತಂಡ ಮೊದಲ ಸುದ್ದಿಗೋಷ್ಠಿ ನಡೆಸಿದ್ದು ಕೂಡ ಒಂದು. ದರ್ಶನ್ ಇಲ್ಲದೆ ಡೆವಿಲ್ ಗೋಷ್ಠಿ ಹೇಗಾಯ್ತು..? ಟೀಂ ಭಾವುಕಗೊಂಡಿದ್ಯಾಕೆ..? 2018ರಲ್ಲೇ ಡೆವಿಲ್‌ಗೆ ಕಮಿಟ್ ಆಗಿದ್ದ ದಚ್ಚು, 9 ಸಿನಿಮಾಗಳು ಆದ ಬಳಿಕ ಈ ಚಿತ್ರ ಮಾಡಿದ್ಯಾಕೆ..? ಡೈರೆಕ್ಟರ್ ಪ್ರಕಾಶ್, ನಟಿ ರಚನಾ ಏನು ಹೇಳಿದ್ರು..? ಹುಲಿ ಕಾರ್ತಿಕ್ ಅತ್ತಿದ್ಯಾಕೆ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ.

2018ರಲ್ಲೇ ಡೆವಿಲ್‌ಗೆ ದಚ್ಚು ಕಮಿಟ್..
9 ಚಿತ್ರಗಳ ಬಳಿಕ ತೆರೆಗೆ
ದರ್ಶನ್ ಜೊತೆಗಿದ್ದಿದ್ರೆ ಆನೆ ಬಲ.. ಕಂಪ್ಲೀಟ್ ಟೀಂ ಭಾವುಕ
ಡೆವಿಲ್.. ಇದೇ ಡಿಸೆಂಬರ್ 11ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ. ಸಾರಥಿ ಬಳಿಕ ಮತ್ತೊಮ್ಮೆ ಅಂಥದ್ದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಸದ್ಯ ಚಿತ್ರತಂಡ ಅವರ ಅನುಪಸ್ಥಿತಿಯಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸಿತು. ಅಲ್ಲಿ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಪ್ರಕಾಶ್ ವೀರ್ ಮಾತನಾಡುತ್ತಾ, ದರ್ಶನ್‌ಗೆ ನಾನು ಡೆವಿಲ್ ಕಥೆಯನ್ನ 2018ರಲ್ಲೇ ಹೇಳಿದ್ದೆ. ಎಷ್ಟು ಟೈಂ ಬೇಕಾದ್ರೂ ತಗೊಳಿ. ನಿಧಾನಕ್ಕೆ ರೆಡಿ ಮಾಡಿ ಅಂದಿದ್ರು. ಹಾಗಾಗಿ 9 ಚಿತ್ರಗಳನ್ನ ಮಾಡಿದ್ರೂ ಸಹ ಏಳು ವರ್ಷ ಕಾದು ಈ ಸಿನಿಮಾ ಮಾಡಿದೆ ಎಂದರು.
ಅಲ್ಲದೆ, ದರ್ಶನ್ ವೈಯಕ್ತಿಕ ವಿಚಾರಗಳನ್ನ ಸಿನಿಮಾಗೆ ತರದೆ ಪ್ರೊಫೆಷನಲಿಸಂ ತೋರಿದ ಪರಿಯನ್ನ ಪ್ರಕಾಶ್ ವಿವರಿಸಿದ್ರು. ಅವರು ಇದ್ದಾಗಲೇ ಸಿನಿಮಾದ ಸುದ್ದಿಗೋಷ್ಠಿ ಮಾಡಬೇಕೆಂದುಕೊಂಡಿದ್ದೆವು. ಅಕ್ಟೋಬರ್‌ನಲ್ಲೇ ಸಿನಿಮಾ ತೆರೆಗೆ ತರಬೇಕು ಅಂದಿದ್ರು. ಆದ್ರೆ ತಡ ಆಯ್ತು. ಅವರ ಅನುಪಸ್ಥಿತಿ ತುಂಬಾ ಕಾಡುತ್ತಿದೆ ಎಂದರು. ಜೊತೆಗೆ ದರ್ಶನ್ ಫ್ಯಾನ್ಸ್ ಹಾಗೂ ಮಾಧ್ಯಮಗಳಿಗೆ ಸಿಕ್ಕಾಪಟ್ಟೆ ಧನ್ಯವಾದ ಕೂಡ ಹೇಳಿದ್ರು.

ಮೀಡಿಯಾ ಸಪೋರ್ಟ್‌ಗೆ EP, ವಸ್ತ್ರ ವಿನ್ಯಾಸಕಿ ತಶ್ವಿನಿ ಮನವಿ
ಡಿಬಾಸ್ ಬಗ್ಗೆ ಮಾತಾಡ್ತಾ ಮಾತಾಡ್ತಾ ಹುಲಿ ಕಾರ್ತಿಕ್ ಕಣ್ಣೀರು
ಡೆವಿಲ್ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕೂಡ ಆಗಿರೋ ಪ್ರಕಾಶ್ ವೀರ್ ಪತ್ನಿ ತಶ್ವಿನಿ ಮಾತಾಡ್ತಾ, ಮಾಧ್ಯಮಗಳ ಬಳಿ ಮನವಿ ಮಾಡ್ತಿದ್ದೇನೆ. ದಯವಿಟ್ಟು ಈ ಸಿನಿಮಾಗೆ ನೆಮ್ಮಲ್ಲದ ಸಹಕಾರ ಜಾಸ್ತಿ ಬೇಕು. ಬರೀ ಡೆವಿಲ್ ಅಷ್ಟೇ ಅಲ್ಲ, ಎಲ್ಲಾ ಕನ್ನಡ ಸಿನಿಮಾಗಳಿಗೆ ಸಹಕರಿಸಿ. ಜೊತೆ ಜೊತೆಗೆ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡೋಣ ಅಂತ ಮನವಿ ಮಾಡಿದ್ರು.
ನಾಯಕನಟಿ ರಚನಾ ರೈ ಮಾತಾಡ್ತಾ ಎರಡೆರಡು ಸಿನಿಮಾಗಳ ಅವಕಾಶಗಳನ್ನ ಬಿಟ್ಟು, ದರ್ಶನ್ ಡೆವಿಲ್ ಸಿನಿಮಾ ಆರಿಸಿಕೊಂಡ ವಿಚಾರ ನೆನೆದರು. ಅಲ್ಲದೆ, ದರ್ಶನ್ ಹಾಗೂ ಪ್ರಕಾಶ್ ವೀರ್ ಆಕೆಯ ಸಿನಿಯಾನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸ್ತಾರೆ ಅನ್ನೋದನ್ನ ಹಂಚಿಕೊಂಡರು.

ಕನ್ನಡ ಸಿನಿಮಾಗಳಿಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿರೋ ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ನಟ ಹುಲಿ ಕಾರ್ತಿಕ್, ಮಗುವಂತೆ ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು.
ಹಿರಿಯನಟ ಅಚ್ಯುತ್ ಕುಮಾರ್, ಶೋಭ ರಾಜ್ ಮಾತಾಡ್ತಾ ದರ್ಶನ್ ಜೊತೆಗಿನ ಬಾಂಧವ್ಯ ನೆನೆದರು. ಡಿಬಾಸ್ ಜೊತೆ ಅಚ್ಯುತ್‌ಗಿದು 4ನೇ ಸಿನಿಮಾ ಆದ್ರೆ ಶೋಭರಾಜ್‌ಗೆ 2ನೇ ಸಿನಿಮಾ.
ನವಗ್ರಹ ಸಿನಿಮಾದಲ್ಲಿ ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಶರ್ಮಿಳಾ ಮಾಂಡ್ರೆ, 18 ವರ್ಷಗಳ ಬಳಿಕ ಡೆವಿಲ್‌ನಲ್ಲಿ ನಟಿಸಿರೋದ್ರ ಬಗ್ಗೆ ಮಾತನಾಡಿದ್ರು.

ಡಿ-10ರ ನೈಟ್ ಶೋ ಇಲ್ಲ.. ಬೆಳಗ್ಗೆ 6.30ಕ್ಕೆ ‘ಡೆವಿಲ್’ ಆಟ!
350ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಡಿಬಾಸ್ ಡೆವಿಲ್ ತೆರೆಗೆ
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಡೆವಿಲ್ ಸಿನಿಮಾ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಆಗ್ತಿದ್ದು, ಈ ಬಗ್ಗೆ ಡಿಸ್ಟ್ರಿಬ್ಯೂಟರ್ ಸುಪ್ರೀತ್ ಮಾತನಾಡಿದ್ರು. ನೈಟ್ ಶೋಗೆ ಅನುಮತಿ ಇಲ್ಲ. ಹಾಗಾಗಿ ಡಿಸೆಂಬರ್ 10ರ ರಾತ್ರಿ ಡೆವಿಲ್ ಪ್ರದರ್ಶನ ಇರಲ್ಲ. ಆದ್ರೆ ಡಿಸೆಂಬರ್ 11ರ ಮುಂಜಾನೆ 6.30ರಿಂದಲೇ ಶೋಗಳು ಆರಂಭ ಆಗಲಿವೆ ಎಂದರು. ಸುಮಾರು 350ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾನ ರಿಲೀಸ್ ಮಾಡೋದಾಗಿ ಹೇಳಿದ್ರು.
![]()
ಡೆವಿಲ್ ಸಿನಿಮಾಗೆ ಹಾಡುಗಳನ್ನ ಬರೆದಿರೋ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಚಿತ್ರ ಸಾಹಿತಿ ಕಮ್ ಗಾಯಕ ಅನಿರುದ್ದ್ ಶಾಸ್ತ್ರಿ, ಸಂಕಲನಕಾರ ಹರೀಶ್ ಕೊಮ್ಮೆ, ಡೈಲಾಗ್ ರೈಟರ್ ಕಾಂತರಾಜು, ಆರ್ಟ್ ಡೈರೆಕ್ಟರ್ ಮೋಹನ್ ಬಿ ಕೆರೆ ಸೇರಿದಂತೆ ಸಾಕಷ್ಟು ಮಂದಿ ತಂತ್ರಜ್ಞರು ಹಾಗೂ ಕಲಾವಿದರು ಭಾಗಿಯಾಗಿದ್ದರು. ಮೊದಲಿಗೆ ಡೆವಿಲ್ ದಿ ಹೀರೋ ಅಂತ ಇದ್ದ ಸಿನಿಮಾ ಟೈಟಲ್ ಸದ್ಯ ದಿ ಡೆವಿಲ್ ಅಂತ ಬದಲಾಗಿದೆ.





