ಬಾ ಬಾ ಬಾ..ನಾವ್ ರೆಡಿ ಅಂತಿದ್ದಾರೆ ಡಿಬಾಸ್ ದರ್ಶನ್ ಫ್ಯಾನ್ಸ್. ಅದಕ್ಕೆ ಕಾರಣ ಡೆವಿಲ್. ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಡೆವಿಲ್ ಥಿಯೇಟರ್ ದರ್ಶನಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಅದನ್ನ ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಖಚಿತ ಪಡಿಸಿದೆ. ಬಾಕ್ಸ್ ಆಫೀಸ್ ಸುಲ್ತಾನನನ್ನು ಹೆಗಲ ಮೇಲೆ ಹೊತ್ತು ಮೆರೆಸೋಕೆ ಸಜ್ಜಾಗಿರೋ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ. ಹಾಗಾದ್ರೆ ಯಾವಾಗ ಅಂತೀರಾ..?
ಕಾಟೇರ ಸಿನಿಮಾ ತೆರೆಕಂಡು ಒಂದೂವರೆ ವರ್ಷ ಕಳೆಯಿತು. ಅಂದಿನಿಂದ ಇಂದಿನವರೆಗೆ ಡಿಬಾಸ್ ದರ್ಶನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. ಯಾವುದೇ ಅಡ್ಡಿ, ಆತಂಕಗಳು ಇರಲಿಲ್ಲ ಅಂದಿದ್ರೆ ಇಷ್ಟೊತ್ತಿಗಾಗ್ಲೇ ಡೆವಿಲ್ ಸಿನಿಮಾ ರಿಲೀಸ್ ಆಗಿ ಮತ್ತೊಂದು ಸಿನಿಮಾ ಮುಕ್ತಾಯದ ಹಂತಕ್ಕೆ ಬರ್ತಿತ್ತು. ಆದ್ರೆ ವಿಧಿಯ ಆಟ ಬಲ್ಲವಱರು ಅಲ್ಲವೇ..? ನಾವು ಅಂದುಕೊಳ್ಳೋದು ಒಂದಾದ್ರೆ, ಅದು ಆಗೋದೇ ಮತ್ತೊಂದು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ಆದ ಹಿನ್ನೆಲೆ ಡೆವಿಲ್ ಸಿನಿಮಾ ತಡ ಆಗಿದೆ. ಕೊಂಚ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರುವ ಸೂಚನೆ ಸಿಕ್ಕಾಗಿದೆ. ಪ್ರಕಾಶ್ ವೀರ್ ನಿರ್ದೇಶಿಸಿ, ನಿರ್ಮಾಣ ಮಾಡ್ತಿರೋ ಡೆವಿಲ್ ಸಿನಿಮಾ ಟೀಸರ್ ಸ್ಯಾಂಪಲ್ಸ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿತ್ತು. ಕಾನೂನಿನ ತೊಡಕಿನಿಂದಾಗಿ ಶೂಟಿಂಗ್ ಶೆಡ್ಯೂಲ್‌ಗಳ ಪ್ಲಾನ್ಸ್ ಕೂಡ ಏರುಪೇರಾಗಿತ್ತು. ಆದ್ರೀಗ ಆಲ್ಮೋಸ್ಟ್ ಆಲ್ ಮುಕ್ತಾಯದ ಹಂತ ತಲುಪಿದೆ.
ಬೆಂಗಳೂರಿನ ಪ್ಯಾಲೆಸ್‌ನಲ್ಲಿ ಒಂದು ಫೈಟ್ ಸೀಕ್ವೆನ್ಸ್ ಚಿತ್ರಿಸುತ್ತಿರೋ ಟೀಂ, ಸದ್ಯದಲ್ಲೇ ಫಾರಿನ್‌ಗೆ ಹಾರಲಿದೆ. ಅಲ್ಲಿ ಸುಮಾರು 25 ದಿನಗಳ ಕಾಲ ಚಿತ್ರೀಕರಣ ನಡೆಸಲಿರೋ ಡೆವಿಲ್ ಟೀಂ, ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆಯಂತೆ. ಈ ಡೇಟ್‌ನ ನಾವು ಹೇಳ್ತಿರೋದಲ್ಲ, ಚಿತ್ರಕ್ಕೆ ಡೈಲಾಗ್ಸ್ ಬರೆದಿರೋ ಕಾಂತರಾಜು ಅವರೇ ಸಂದರ್ಶನವೊಂದರಲ್ಲಿ ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ.
ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಡಿಬಾಸ್ ಅಸಂಖ್ಯಾತ ಅಭಿಮಾನಿಗಳು ದಿಲ್‌ಖುಷ್ ಆಗಿದ್ದಾರೆ. ತಮ್ಮ ನೆಚ್ಚಿನ ನಾಯಕನಟನನ್ನ ಬರಮಾಡಿಕೊಳ್ಳೋಕೆ ಕಾತರರಾಗಿದ್ದಾರೆ. ಉತ್ಸವ ಮೂರ್ತಿಯಂತೆ ಪ್ರತಿ ಥಿಯೇಟರ್‌ಗೂ ಕಟೌಟ್ ಹಾಕಿ, ಹಾಳಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ, ಕೇಕೆ-ಶಿಳ್ಳೆ-ಚಪ್ಪಾಳೆಗಳಿಂದ ಡೆವಿಲ್ ದರ್ಶನಕ್ಕೆ ಸಜ್ಜಾಗ್ತಿದ್ದಾರೆ. ಯಾಕಂದ್ರೆ ದರ್ಶನ್ ಕರಿಯರ್ ಮುಗಿದೇ ಹೋಯ್ತು ಎನ್ನಲಾಗಿತ್ತು. ಆದ್ರೀಗ ಫೀನಿಕ್ಸ್‌ನಂತೆ ಮೈ ಕೊಡವಿ ಎದ್ದು ಬಂದಿದ್ದಾರೆ ದಚ್ಚು. ಹಾಗಾಗಿ ಅವ್ರನ್ನ ಬಿಗ್ ಸ್ಕ್ರೀನ್‌ಗೆ ಬರಮಾಡಿಕೊಳ್ಳೋ ಪರಿ ನೆಕ್ಸ್ಟ್ ಲೆವೆಲ್‌ಗೆ ಇರಲಿದೆ.
ಅಂದಹಾಗೆ ಈ ಬಾರಿ ಬಾಕ್ಸ್ ಆಫೀಸ್ ಸುಲ್ತಾನನ ಎಂಟ್ರಿ ಮಾಮೂಲಿ ಇರಲ್ಲ. ಒಂದೊಳ್ಳೆ ಹೈ ವೋಲ್ಟೇಜ್ ಮಾಸ್ ಮಸಾಲ ಎಂಟರ್‌ಟೈನರ್ ಸಿನಿಮಾ ಮಾಡ್ತಿರೋ ಮಿಲನ ಪ್ರಕಾಶ್, ಈ ಹಿಂದೆ ತಾರಕ್ ಮೂಲಕ ಇವ್ರ ಕಾಂಬೋ ಎಂಥದ್ದು ಅನ್ನೋದನ್ನ ತೋರಿಸಿದ್ರು. ಅಲ್ಲದೆ, ದರ್ಶನ್‌ರ ಈ ಹಿಂದಿನ ರಾಬರ್ಟ್ ಹಾಗೂ ಕಾಟೇರ ಎರಡೂ ಸಿನಿಮಾಗಳು ಬಿಗ್ ಸಕ್ಸಸ್ ಕಂಡಿದ್ದವು. ಆ ನಿಟ್ಟಿನಲ್ಲಿ ಬ್ಯುಸಿನೆಸ್ ದೊಡ್ಡ ಮಟ್ಟಕ್ಕೆ ಆಗಲಿದ್ದು, ಬಾಕ್ಸ್ ಆಫೀಸ್ ಬ್ಯಾಂಗ್ ಆಗೋದು ಪಕ್ಕಾ.

ಎಲ್ಲಕ್ಕಿಂತ ಹೆಚ್ಚಾಗಿ ಸಾರಥಿ ಸಿನಿಮಾ ರಿಲೀಸ್ ಟೈಮಲ್ಲೂ ಡಿಬಾಸ್ ದಚ್ಚು ಫ್ಯಾಮಿಲಿ ಗಲಾಟೆಯಿಂದಾಗಿ ಜೈಲಿಗೆ ಹೋಗಿ ಬಂದಿದ್ದರು. 2011ರಲ್ಲಿ ಜೈಲಿಗೆ ಹೋಗಿ ಬಂದ ದಚ್ಚು ಹಣೆಬರಹ ಜೋರಿತ್ತು. ಸಾರಥಿ ಸಿನಿಮಾ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಈಗಲೂ ಜೈಲಿಗೆ ಹೋಗಿಬಂದಿರೋ ದಾಸನಿಗೆ ಡೆವಿಲ್ ಸಿನಿಮಾ ದೊಡ್ಡ ಸಕ್ಸಸ್ ತಂದುಕೊಡಲಿದೆ ಎನ್ನಲಾಗ್ತಿದೆ. ಹಾಗಾದಲ್ಲಿ ಹಿಸ್ಟರಿ ರಿಪೀಟ್ ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.





