ಲೇಖಕರು: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಟಾಲಿವುಡ್ನ ಕಲ್ಕಿ ಹಾಗೂ ಸ್ಪಿರಿಟ್ ಸಿನಿಮಾಗಳಿಂದ ಹೊರಬಂದಿರೋ ವಿಚಾರ ಗೊತ್ತೇಯಿದೆ. ದೀಪಿಕಾ ಅವರ ಡಿಮ್ಯಾಂಡ್ ಹಾಗೂ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ ಕಂಡೀಷನ್ನಿಂದಲೇ ಈ ರೀತಿ ಆಯ್ತು ಎಂಬ ಮಾತು ಕೇಳಿಬಂದಿತ್ತು.. ಹಾಗೇ ಅನೇಕರು ಈ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಕೂಡ ಮಾಡಿದ್ರು.. ಆದ್ರೀಗ ಕೊನೆಗೂ ಡಿಪ್ಪಿ ಈ ಬಗ್ಗೆ ಮೌನ ಮುರಿದಿದ್ದು, ತಮ್ಮ ಬಗ್ಗೆ ಮಾತನಾಡಿವರಿಗೆ ಕೌಂಟರ್ ಕೊಟ್ಟಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾದ ಬಳಿಕ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.. ಈ ನಡುವೆಯೂ ಡಿಪ್ಪಿ ಕೆಲ ಸಿನಿಮಾಗಳಿಗೆ ಸೈನ್ ಮಾಡಿದ್ದಾರೆ.. ಈ ನಡುವೆ ಅವರು ಪ್ರಭಾಸ್ಕಲ್ಕಿ ಹಾಗೂ ಸ್ಪಿರಿಟ್ ಸಿನಿಮಾದಿಂದ ಹೊರಬಂದ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.. ದೀಪಿಕಾ ಅವರ ಭಾರೀ ಡಿಮ್ಯಾಂಡ್ ಹಾಗೂ ದುಬಾರಿ ಸಂಭಾವನೆ ಮತ್ತು ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಹಾಕಿದ್ದ ಕಂಡೀಷನ್ನಿಂದಲೇ ಆಯಾ ಚಿತ್ರತಂಡಗಳು ದೀಪಿಕಾಗೆ ಗೇಟ್ ಪಾಸ್ ನೀಡಿತ್ತು ಅನ್ನೋ ವಿಚಾರ ಜೋರಾಗಿ ಚರ್ಚೆ ಆಗಿತ್ತು.
ಕಲ್ಕಿ ಹಾಗೂ ಸ್ಪಿರಿಟ್ ಸಿನಿಮಾಗಳಿಂದ ದೀಪಿಕಾಗೆ ಗೇಟ್ ಪಾಸ್..!
ವಿವಾದ ಬಗ್ಗೆ ಕೊನೆಗೂ ಮೌನ ಮುರಿದ ಬಾಲಿವುಡ್ ಪದ್ಮಾವತಿ..!
ಫ್ಲೋ..ವೈಜಯಂತಿ ಫಿಲ್ಮ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಅವರನ್ನ ಚಿತ್ರದಿಂದ ಹೊರಗಿಟ್ಟ ವಿಚಾರ ಅನೌನ್ಸ್ ಮಾಡಿದ ಬೆನ್ನಲ್ಲೆ ಹಲವರು ದೀಪಿಕಾ ಅವರ ಬಗ್ಗೆ ಕಮೆಂಟ್ ಮಾಡಲು ಶುರು ಮಾಡಿದ್ರು.. ದೀಪಿಕಾ ಅವರ ಅಹಂ ದುರಹಂಕಾರದಿಂದಲೇ ಈ ರೀತಿ ಆಗುತ್ತಿದೆ ಎಂಬ ಮಾತುಗಳು ಕೇಳಿಬಂತು.. ಆದ್ರೆ ಈ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನದ ದೀಪಿಕಾ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ಮಾತನಾಡಿದವರಿಗೆ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ.
ನಾನು ಹಲವು ಹಂತಗಳಲ್ಲಿ ಈ ಹೋರಾಟವನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಸಂಭಾವನೆ ವಿಷಯ ಹಾಗೂ ಅದರೊಂದಿಗೆ ಬರುವ ಎಲ್ಲಾ ಸಮಸ್ಯೆಯನ್ನು ನಾನು ಎದುರಿಸಬೇಕಾಗಿತ್ತು. ಅದನ್ನು ಏನು ಕರೆಯಬೇಕೆಂದು ನನಗೆ ತಿಳಿದಿಲ್ಲ. ಆದರೆ ನಾನು ಯಾವಾಗಲೂ ನನ್ನ ಹೋರಾಟಗಳನ್ನು ಮೌನವಾಗಿ ಮಾಡಿದ್ದೇನೆ. ಕೆಲವೊಮ್ಮೆ ಅವು ಸಾರ್ವಜನಿಕವಾಗುತ್ತವೆ. ಅದು ನನಗೆ ತಿಳಿದಿರುವ ರೀತಿಯಲ್ಲಿ ಅಲ್ಲ ಮತ್ತು ನಾನು ಬೆಳೆದ ರೀತಿಯಲ್ಲಿ ಅಲ್ಲ. ನನ್ನ ಹೋರಾಟಗಳನ್ನು ಮೌನವಾಗಿ ಮತ್ತು ಗೌರವಯುತ ರೀತಿಯಲ್ಲಿ ಹೋರಾಡುವುದು ನನಗೆ ತಿಳಿದಿರುವ ಮಾರ್ಗ’ ಎಂದಿದ್ದಾರೆ.
8ಗಂಟೆ ಶಿಫ್ಟ್ ಬೇಡಿಕೆ.. ಬದಲಾಗದ ನಿಲುವು..!
ಟಾರ್ಗೆಟ್ ಮಾಡಿದವರಿಗೆ ಕೌಂಟರ್ ಕೊಟ್ಟ ಡಿಪ್ಪಿ..!
ಹಾಗೇ ಈ ವೇಳೆ ದಿನಕ್ಕೆ 8 ಗಂಟೆ ಕೆಲಸ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ ಮಹಿಳೆಯಾಗಿರುವುದೇ ಒತ್ತಡ. ನಟಿಯಾಗಿ ನನಗೆ ಅನಾನುಕೂಲವಾಗಿದ್ದರೆ, ನಾನು ಅದನ್ನು ಸ್ವೀಕರಿಸುವುದಿಲ್ಲ. ಭಾರತೀಯ ಚಲನಚಿತ್ರೋದ್ಯಮದ ಅನೇಕ ಸೂಪರ್‌ಸ್ಟಾರ್‌ಗಳು ಮತ್ತು ನಾಯಕರು ಹಲವು ವರ್ಷಗಳಿಂದ ಕೇವಲ 8 ಗಂಟೆ ಕೆಲಸ ಮಾಡುತ್ತಿದ್ದಾರೆ. ಇದು ರಹಸ್ಯವಲ್ಲ. ಆದರೆ ಅದು ಎಂದಿಗೂ ಸುದ್ದಿಯಲ್ಲಿಲ್ಲ. ನಾನು ಈಗ ಅವರ ಹೆಸರುಗಳನ್ನು ಉಲ್ಲೇಖಿಸಿ ಇದನ್ನು ಬದಲಾಯಿಸಲು ಬಯಸುವುದಿಲ್ಲ. ಆದರೆ ಅನೇಕ ನಾಯಕರು ದಿನಕ್ಕೆ ಕೇವಲ 8 ಗಂಟೆ ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅವರು ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಕೇವಲ ಎಂಟು ಗಂಟೆ ಕೆಲಸ ಮಾಡುತ್ತಾರೆ. ಅವರು ವಾರಾಂತ್ಯದಲ್ಲಿ ಕೆಲಸ ಮಾಡುವುದಿಲ್ಲ.
ಒಟ್ನಲ್ಲಿ ಈಗ ದೀಪಿಕಾ ಅವರ ಹೇಳಿಕೆಗಳು ಮತ್ತೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಹೀರೋಗಳು ಮಾತ್ರ ದಿನಕ್ಕೆ 8 ಗಂಟೆ ಕೆಲಸ ಮಾಡುತ್ತಾರೆ. ಆದ್ರೆ ಒಬ್ಬ ಮಹಿಳೆಯಾಗಿ ತಾಯಿಯಾಗಿ 8 ಗಂಟೆ ಕೆಲಸ ಮಾಡಿದ್ರೆ ಅದು ತಪ್ಪು ಎಂಬಂತೆ ಹಲವರು ಮಾತನಾಡುತ್ತಾರೆ. ಈ ಬಗ್ಗೆ ದೀಪಿಕಾ ಅಸಮಾಧಾನ ವ್ಯಕ್ತಪಡಿಸಿದ್ದು, ಅನೇಕರು ಡಿಪ್ಪಿಗೆ ಸಪೋರ್ಟ್ ಮಾಡಿದ್ದಾರೆ.