ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ದರೂ ಚರ್ಚೆ ಮಾತ್ರ ಕಡಿಮೆಯಾಗಿಲ್ಲ. ಇದೇ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ನಟ ಧನ್ವೀರ್ ದಿಢೀರ್ ಭೇಟಿ ನೀಡಿ ಕೆಲ ನಿಮಿಷ ಮಾತುಕತೆ ನಡೆಸಿದ್ದಾರೆ. ಇನ್ನೊಂದೆಡೆ ಪ್ರಕರಣದಲ್ಲಿ ಉಳಿದ ಆರೋಪಿಗಳಿಗೆ ಬೇಲ್ ಗೊಂದಲ ಮುಂದುವರಿದಿದ್ದು, ಈ ಬೆಳವಣಿಗೆ ದರ್ಶನ್ ಗೆ ಯಾವ ರೀತಿ ಎಫೆಕ್ಟ್ ಆಗುತ್ತೆ..?ಸಂಕಷ್ಟದ ನಡುವೆ ಸ್ನೇಹದ ಬಲ ತೋರಿಸಿದ ಧನ್ವೀರ್ ಭೇಟಿ ದಾಸನ ಫ್ಯಾನ್ಸ್ ಗೆ ಖುಷಿ ತಂದಿದೆ..
- ದರ್ಶನ್ ನ ನೋಡಲು ಜೈಲಿಗೆ ಬಂದ ಬಲಗೈ ಬಂಟ ಧನ್ವೀರ್
- ಪ್ರಕರಣ ಗಂಭೀರತೆ ಆರೋಪಿಗಳಿಗೆ ಬೇಲ್ ಕ್ಯಾನ್ಸಲ್..?
- ಸಂಕಷ್ಟದಲ್ಲೂ ದರ್ಶನ್ ಬೆನ್ನಿಗೆ ನಿಂತ ಧನ್ವೀರ್
- ಜೈಲಿನೊಳಗೆ ಹಯಗ್ರೀವ ಸಿನಿಮಾ ಚರ್ಚೆ ದಾಸ ಹೇಳಿದ್ದೇನು..?
ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೈಲಿನಲ್ಲಿದ್ದರೂ ಅವರ ಸುತ್ತಲಿನ ಚರ್ಚೆಗಳು ಮಾತ್ರ ಕ್ಷಣ ಕ್ಷಣಕ್ಕೂ ತೀವ್ರವಾಗುತ್ತಿವೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ವಿರುದ್ಧ ತನಿಖೆ ಮುಂದುವರಿಯುತ್ತಿದ್ದು, ಕಾನೂನು ಪ್ರಕ್ರಿಯೆ ದಿನೇದಿನೇ ಹೊಸ ತಿರುವು ಪಡೆಯುತ್ತಿದೆ. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ನಟ ಧನ್ವಿರ್ ಗೌಡ ದಿಢೀರ್ ಆಗಿ ಭೇಟಿ ನೀಡಿದ್ದು ಹೊಸ ಕುತೂಹಲ ಹುಟ್ಟಿಸಿದೆ. ಕೆಲ ನಿಮಿಷಗಳ ಕಾಲ ಮಾತುಕತೆ ಮಾತ್ರ ನಡೆದಿದ್ರೂ… ಜೈಲಿನೊಳಗೆ ಏನು ಮಾತುಗಳಾದವು? ಅನ್ನೋ ಪ್ರಶ್ನೆ ಈಗ ಸಿನಿ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ.
ಸಿನಿಮಾದಲ್ಲಿ ಮಾತ್ರವಲ್ಲ, ಆಫ್-ಸ್ಕ್ರೀನ್ನಲ್ಲೂ ದರ್ಶನ್ ಮತ್ತು ಧನ್ವೀರ್ ನಡುವಿನ ಬಾಂಧವ್ಯ ಬಹಳ ಗಟ್ಟಿಯಾಗಿದೆ. ತಮ್ಮ ಸಿನಿ ಪ್ರಯಾಣದ ಆರಂಭದಲ್ಲೇ ದರ್ಶನ್ ನೀಡಿದ ಬೆಂಬಲ ಮತ್ತು ಪ್ರೋತ್ಸಾಹವನ್ನು ಧನ್ವೀರ್ ಮರೆತಿಲ್ಲ ಅನ್ನೋದು ಈಗಿನ ಅವರ ನಡುವಳಿಕೆಯಲ್ಲೇ ಗೊತ್ತಾಗುತ್ತೆ. ಅದೇ ಕಾರಣಕ್ಕೆ ಸಂಕಷ್ಟದ ಈ ಸಮಯದಲ್ಲೂ ಧೈರ್ಯ ತುಂಬಲು ಜೈಲಿಗೆ ಬಂದ ಧನ್ವೀರ್ ತಮ್ಮ ಹಯಗ್ರೀವ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಎಸ್, ಭೇಟಿಯ ವೇಳೆ ಧನ್ವೀರ್ ಅಭಿನಯದ ಹಯಗ್ರೀವ ಸಿನಿಮಾ ವಿಚಾರವೂ ಚರ್ಚೆಗೆ ಬಂದಿದೆಯಂತೆ. ಸೆನ್ಸಾರ್ ಸಮಸ್ಯೆಗಳು ಮತ್ತು ಎದುರಾದ ಅಡೆತಡೆಗಳ ಬಗ್ಗೆ ದರ್ಶನ್ ವಿಚಾರಿಸಿದ್ದಾರಂತೆ. ಕೆಲವೇ ನಿಮಿಷಗಳ ಮಾತುಕತೆ ನಡೆದಿದ್ರೂ ಆ ಮಾತುಕತೆಯ ಒಳಾರ್ಥ ಏನು? ಅನ್ನೋ ಕುತೂಹಲ ಮಾತ್ರ ಇನ್ನಷ್ಟು ಹೆಚ್ಚಾಗಿದೆ.
ಇನ್ನೊಂದೆಡೆ ಪ್ರಕರಣದ ತನಿಖೆ ಮುಂದುವರಿಯುತ್ತಿರುವ ಹಿನ್ನೆಲೆ ಉಳಿದ ಆರೋಪಿಗಳಿಗೆ ಬೇಲ್ ಸಿಗುವ ವಿಚಾರದಲ್ಲಿ ಗಂಭೀರ ಅಡೆತಡೆಗಳು ಎದುರಾಗುತ್ತಿವೆ. ಪ್ರಕರಣದ ಗಂಭೀರತೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಾಗೂ ತನಿಖೆ ಇನ್ನೂ ಪೂರ್ಣಗೊಳ್ಳದ ಕಾರಣ ಕೋರ್ಟ್ ಬೇಲ್ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರಿಯುತ್ತಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಆರೋಪಿಗಳ ಬೇಲ್ ಪ್ರಶ್ನೆ ಇನ್ನೂ ಅನಿಶ್ಚಿತತೆಯಲ್ಲೇ ಉಳಿದಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಜೈಲಿನಲ್ಲಿರುವ ದರ್ಶನ್ ಎದುರಿಸುತ್ತಿರುವ ಪರಿಸ್ಥಿತಿಯೂ ಕಠಿಣವಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೊರಗಡೆ ನಡೆಯುತ್ತಿರುವ ಕಾನೂನು ಹೋರಾಟ, ಬೇಲ್ ಗೊಂದಲ ಮತ್ತು ಪ್ರಕರಣದ ಮುಂದಿನ ಹಂತ ಇವೆಲ್ಲವೂ ಈಗ ದೊಡ್ಡ ಕುತೂಹಲ ಹುಟ್ಟಿಸಿವೆ. ಸಂಕಷ್ಟದ ನಡುವೆ ಸ್ನೇಹದ ಬೆಂಬಲ ಸಿಗುತ್ತಿದ್ದರೂ… ಪ್ರಕರಣದ ಮುಂದಿನ ತಿರುವು ದರ್ಶನ್ ಭವಿಷ್ಯವನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತದೆ? ಕಾದು ನೋಡೋಣ
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್..
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





