ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಸಿನಿಮಾ, ಬರೋಬ್ಬರಿ 31ಕ್ಕೂ ಅಧಿಕ ಸೆಂಟರ್‌ಗಳಲ್ಲಿ ಯಶಸ್ವಿ 25 ದಿನ ಪೂರೈಸಿದೆ. ಬಾಕ್ಸ್ ಆಫೀಸ್‌ನಲ್ಲಿ ದುಡ್ಡು ಮಾಡಿಲ್ಲ, ಸಿನಿಮಾ ಲಾಸ್ ಅಂದವ್ರ ತಲೆ ಮೇಲೆ ಹೊಡೆದಂತೆ ಪೈಸಾ ವಸೂಲ್ ಮಾಡಿದೆ ಡೆವಿಲ್. ಹಾಗಾದ್ರೆ ಡಿಬಾಸ್ ಡೆವಿಲ್ ಗಳಿಸಿದ್ದೆಷ್ಟು ಕೋಟಿ..? ಲಾಭ ಎಷ್ಟು..? ಈಗಲೂ ರನ್ನಿಂಗ್ ಇರೋ ಥಿಯೇಟರ್ ಸಂಖ್ಯೆ ಎಷ್ಟು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.
2025ರ ಡಿಸೆಂಬರ್ 11ರಂದು ತೆರೆಕಂಡ ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಸಕ್ಸಸ್ ಅಥ್ವಾ ಫೇಲ್ಯೂರ್ ಬಗ್ಗೆ ಸಾಕಷ್ಟು ಕನ್ಫ್ಯೂಷನ್ಸ್ ಇದೆ. ಒಂದಷ್ಟು ಮಂದಿ ಸಿನಿಮಾ ಚೆನ್ನಾಗಿಲ್ಲ, ಬಾಕ್ಸ್ ಆಫೀಸ್‌ನಲ್ಲಿ ಅಟ್ಟರ್ ಫ್ಲಾಪ್ ಅಂತಾರೆ. ಮತ್ತೊಂದಷ್ಟು ಮಂದಿ ಇದು ದರ್ಶನ್ ಕರಿಯರ್‌ನಲ್ಲೇ ಬೆಸ್ಟ್ ಪರ್ಫಾಮೆನ್ಸ್ ಮೂವಿ. ಎಲ್ಲೆಡೆ ಹೌಸ್‌ಫುಲ್ ಓಡ್ತಿದೆ. ಕಲೆಕ್ಷನ್ ರಿಪೋರ್ಟ್ ಕೂಡ ಚೆನ್ನಾಗಿದೆ ಅಂತಾರೆ. ಆದ್ರೆ ಗ್ಯಾರಂಟಿ ಪಿಚ್ಚರ್ ಟೀಂ ಈ ವಿಷಯವನ್ನು ಒಳಹೊಕ್ಕಿ ನೋಡಿದಾಗ ಕಂಡ ಒಂದಷ್ಟು ನಿಜಾಂಶಗಳನ್ನ ನಿಮ್ಮ ಮುಂದೆ ಇಡ್ತಿದೆ.

31 ಸೆಂಟರ್ಸ್.. ಡೆವಿಲ್ 25 ಡೇಸ್.. ಗಳಿಸಿದ್ದೆಷ್ಟು ಕೋಟಿ?
ಮಲ್ಟಿಪ್ಲೆಕ್ಸ್ ಬಿಟ್ಟು 31 ಸಿಂಗಲ್ ಸ್ಕ್ರೀನ್ಸ್‌ನಲ್ಲಿ ಸಿಲ್ವರ್ ಜ್ಯುಬಿಲಿ

ನಿರ್ದೇಶಕ ಮಿಲನ ಪ್ರಕಾಶ್ ಸೆನ್ಸಿಬಲ್ ಡೈರೆಕ್ಟರ್. ಈ ಹಿಂದೆ ತಾರಕ್ ಸಿನಿಮಾನ ದರ್ಶನ್ ಜೊತೆ ಮಾಡಿ ಮಗದೊಮ್ಮೆ ಡೆವಿಲ್‌ಗೆ ಎರಡನೇ ಬಾರಿ ಕೈ ಜೋಡಿಸಿದ್ರು. ದರ್ಶನ್ ಕೊಲೆ ಪ್ರಕರಣವೊಂದರಲ್ಲಿ ಒಳಗೆ ಹೋಗೋದು, ಹೊರಗೆ ಬರೋದು ಮಾಡ್ತಿರೋ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ಈ ಸಿನಿಮಾ ಕಂಪ್ಲೀಟ್ ಆಗಿ, ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದ್ದೇ ದೊಡ್ಡ ಪವಾಡ. ಅದ್ರಲ್ಲೂ ದರ್ಶನ್‌ನ ದ್ವಿಪಾತ್ರದಲ್ಲಿ ತೋರಿಸಿರೋ ಪ್ರಕಾಶ್, ಅದಕ್ಕಾಗಿ ಹಾಕಿರೋ ಎಫರ್ಟ್ ಅಷ್ಟಿಷ್ಟಲ್ಲ.

ಸಿನಿಮಾ ಬರೀ ಫ್ಯಾನ್ಸ್‌ಗಷ್ಟೇ ರುಚಿಸಿದ್ದಿದ್ರೆ ಹಂಡ್ರೆಡ್ ಪರ್ಸೆಂಟ್ ಫ್ಲಾಪ್ ಆಗ್ತಿತ್ತು. ಆದ್ರೆ ಕನ್ನಡ ಕಲಾಭಿಮಾನಿಗಳಿಗೆ ಇಷ್ಟವಾಗಿದೆ. ಹಾಗಾಗಿಯೇ ಯಶಸ್ವೀ 25 ದಿನ ಪೂರೈಸಿದೆ. ಅದೂ ರಾಜ್ಯದ 31 ಸೆಂಟರ್‌ಗಳಲ್ಲಿ ಅನ್ನೋದು ಇಂಟರೆಸ್ಟಿಂಗ್ ವಿಷಯ. ಈ 31 ಥಿಯೇಟರ್‌ಗಳು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು. ಇವಲ್ಲದೆ ಸಾಕಷ್ಟು ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲೂ ಡೆವಿಲ್ ಅಬ್ಬರ, ಆರ್ಭಟ ಇಂದಿಗೂ ಜೋರಿದೆ. ಸೋ.. ಒಂದು ಹಿಟ್ ಸಿನಿಮಾ ಮಾತ್ರ ಈ ಕಾಲಘಟ್ಟದಲ್ಲಿ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಟ್ ಮಾಡಿಕೊಳ್ಳೋಕೆ ಸಾಧ್ಯ.

30Cr ಲಾಭದಲ್ಲಿ ಡೆವಿಲ್.. ಲಾಸ್ ಅಂದ್ರೆ ತಲೆಮೇಲೆ ತಟ್ಟಿ
ಬಂಡವಾಳ 20 ಕೋಟಿ.. 50 ಕೋಟಿ ಗಡಿಯಲ್ಲಿ ಡೆವಿಲ್..!
ಅಂದಹಾಗೆ ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್‌ನಡಿ ಡೆವಿಲ್ ಸಿನಿಮಾಗೆ ಹಾಕಿರೋ ಬಂಡವಾಳ ಜಸ್ಟ್ 20 ಕೋಟಿ. ಆದ್ರೆ ಇಂದಿಗೆ ಡೆವಿಲ್ ಕಲೆಕ್ಷನ್ 48ಕೋಟಿ ದಾಟಿದೆ. ಆಲ್ಮೋಸ್ಟ್ 50 ಕೋಟಿಯ ಗಡಿ. ಅಲ್ಲಿಗೆ ನಿರ್ಮಾಪಕರಿಗೆ 30 ಕೋಟಿ ಲಾಭ ಬಂದಂತಾಯ್ತು. ಇದು ಅಕ್ಷರಶಃ ಸತ್ಯ. ಯಾಕಂದ್ರೆ ಈ ಗಳಿಕೆ ಬರೀ ಥಿಯೇಟ್ರಿಕಲ್ ಕಲೆಕ್ಷನ್ ರಿಪೋರ್ಟ್ ಆಗಿದೆ. ಇನ್ನೂ ಓಟಿಟಿ ಹಾಗೂ ಟಿವಿ ರೈಟ್ಸ್ ಮಾತುಕತೆಯ ಹಂತದಲ್ಲೇ ಇದೆಯಂತೆ. ಅಲ್ಲಿಗೆ ಆ ಬ್ಯುಸಿನೆಸ್ ಕೂಡ ಆದ್ರೆ ನಿರ್ಮಾಪಕರಿಗೆ ನಿರೀಕ್ಷೆಗೂ ಮೀರಿದ ಲಾಭ ಗ್ಯಾಂಟಿ.

ಮತ್ತೊಂದು ಇಂಟರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ ಡಿಬಾಸ್ ದರ್ಶನ್ ಈ ಡೆವಿಲ್ ಸಿನಿಮಾಗೆ ರೆಮ್ಯುನರೇಷನ್ ಪಡೆದಿಲ್ಲ. ಅಡ್ವಾನ್ಸ್ ಬಿಟ್ರೆ, ಬಂದ ಲಾಭದಲ್ಲಿ ಶೇರ್ ಪಡೆಯಲಿದ್ದಾರೆ. ಹಾಗಾಗಿ ದರ್ಶನ್‌ಗೆ ಈ ಗಳಿಕೆಯಲ್ಲಿ ಬಹುದೊಡ್ಡ ಪಾಲೇ ಸಿಗಲಿದೆ ಅನ್ನೋದು ಕೂಡ ಕಾತರಿ. ಒಟ್ಟಾರೆ ಯಾರಾದ್ರೂ ಡೆವಿಲ್ ಲಾಸ್ ಅಂದ್ರೆ, ಅವ್ರ ತಲೆಮೇಲೆ ತಟ್ಟಿ ಹೇಳಿ 30 ಕೋಟಿ ಲಾಭ ಅನ್ನೋದನ್ನ.

ಡೆವಿಲ್ ಕ್ವೀನ್ ರಚನಾ ರೈಗೆ ಟಾಲಿವುಡ್‌ನಿಂದ ಆಫರ್
ಜೋಡೆತ್ತು ಚಿತ್ರ ಡೈರೆಕ್ಟರ್ ಆಗಿ DOP ಸುಧಾಕರ್ ಬಡ್ತಿ
ಡೆವಿಲ್ ಸಿನಿಮಾದ ಸಕ್ಸಸ್ ಬರೀ ದರ್ಶನ್ ಅಥ್ವಾ ನಿರ್ಮಾಪಕ ಪ್ರಕಾಶ್ ಅವರಿಗೆ ಖುಷಿ ತಂದುಕೊಟ್ಟಿಲ್ಲ. ಇಡೀ ಚಿತ್ರತಂಡದ ಸಿನಿಮೋತ್ಸಾಹ ಹಾಗೂ ಜೀವನೋತ್ಸಾಹವನ್ನೇ ಹೆಚ್ಚಿಸಿದೆ. ಯಾಕಂದ್ರೆ ಡೆವಿಲ್ ಕ್ವೀನ್ ರಚನಾ ರೈಗೆ ಪಕ್ಕದ ಟಾಲಿವುಡ್‌ನಿಂದ ಬಿಗ್ ಆಫರ್ ಬಂದಿದೆ. ದೊಡ್ಡ ದೊಡ್ಡ ಆ್ಯಡ್ ಕಂಪೆನಿಗಳ ಜೊತೆ ಕೆಲಸ ಮಾಡ್ತಿದ್ದಾರೆ ರಚನಾ ರೈ.

ಬಿಗ್‌ಬಾಸ್ ವಿನ್ನರ್ ಆಗಿ ರಾರಾಜಿಸಲಿದ್ದಾರೆ ನಟ ಗಿಲ್ಲಿ..!
ಇನ್ನು ಡೆವಿಲ್ ಸಿನಿಮಾಟೋಗ್ರಾಫರ್ ಸುಧಾಕರ್ ಎಸ್ ರಾಜ್ ನಟ ದರ್ಶನ್‌ರ ಅಚ್ಚುಮೆಚ್ಚಿನ ಡಿಓಪಿ ಕೂಡ ಹೌದು. ಡೆವಿಲ್ ಹಿಟ್ ಆಗ್ತಿದ್ದಂತೆ ಸುಧಾಕರ್ ಅವರು ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡ್ತಿದ್ದಾರೆ. ಚಿಕ್ಕಣ್ಣನ ಜೋಡೆತ್ತು ಸಿನಿಮಾದ ಡೈರೆಕ್ಟರ್ ಅಗಿ ಬಡ್ತಿ ಪಡೆದಿದ್ದಾರೆ. ಇನ್ನು ನಟ ಗಿಲ್ಲಿ ಡೆವಿಲ್ ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರ ಮಾಡಿದ್ರು. ಆತ ಸದ್ಯ ಈ ಬಾರಿಯ ಬಿಗ್‌ಬಾಸ್ ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿಯೋ ಚಾನ್ಸಸ್ ಕೂಡ ಇದೆ. ಇದಕ್ಕಿಂತ ದೊಡ್ಡ ಸಕ್ಸಸ್ ಇನ್ನೇನು ಬೇಕು ಅಲ್ಲವೇ..?





