ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದಿದೆ. ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ ಸುಬ್ಬ-ಸುಬ್ಬಿ. ಆದ್ರೀಗ ಸಮಯ ಹಾಗೂ ತಾಳ್ಮೆಯ ಸೀಕ್ರೆಟ್ ಬಿಚ್ಚಿಟ್ಟಿರೋ ಪವಿತ್ರಾ ಗೌಡ, ದೊಡ್ಡದಾಗಿ ಏನೋ ಸಿಗ್ನಲ್ ನೀಡಿದ್ದಾರೆ. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
- ದಚ್ಚು ಗೆಳತಿ ಸಿಗ್ನಲ್.. ಏನಿದು ಸಮಯ, ತಾಳ್ಮೆ ಸೀಕ್ರೆಟ್.. ?
- ಕೋರ್ಟ್‌ನಲ್ಲಿ ಸುಬ್ಬ- ಸುಬ್ಬಿ ನಡುವೆ ಸಂಥಿಂಗ್ ಸಂಥಿಂಗ್
- ಲಿಫ್ಟ್‌ನಲ್ಲಿ ನಂಬರ್ ಎಕ್ಸ್‌ಚೇಂಜ್..? ಮೌನ ಮುರಿದ ಪವಿತ್ರಾ
- ನಿಲ್ಲುವಂತಿಲ್ಲ ಜಡೆ ಜಗಳ.. ಹೈರಾಣಾಗದಿರಲಿ ದಚ್ಚು ಲೈಫ್..!
ಗಜ ಸಿನಿಮಾದ ಮಾತು ನನ್ನೋಳು, ಮೌನಾನು ನನ್ನೋಳು ಅನ್ನೋ ದರ್ಶನ್ ಹಾಡು ಈ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿಯವರೆಗೂ ಮೌನವ್ರತ ಪಾಠಿಸ್ತಿದ್ದ ಡಿಬಾಸ್ ದರ್ಶನ್‌ರ ಆಪ್ತ ಗೆಳತಿ ಪವಿತ್ರಾ ಗೌಡ, ಇದ್ದಕ್ಕಿದ್ದಂತೆ ಮೌನ ಮುರಿದಿದ್ದಾರೆ. ಇನ್ಸ್‌ಟಾದಲ್ಲಿ ಫೋಟೋ ಸಮೇತ ದೊಡ್ಡದಾಗಿ ಸಿಗ್ನಲ್ ನೀಡಿದ್ದಾರೆ.
ಹೌದು.. ಸಮಯ ಹಾಗೂ ತಾಳ್ಮೆಯೇ ಎಲ್ಲಕ್ಕೂ ಕೀಲಿ ಕೈ ಅಂದಿದ್ದಾರೆ. ಅಷ್ಟೇ ಅಲ್ಲ, ಮೌನವೇ ಎಲ್ಲಾ ಪ್ರಶ್ನೆಗಳಿಗೆ ಬೆಸ್ಟ್ ಆನ್ಸರ್ ಎಂದಿದ್ದಾರೆ. ಎಂಥದ್ದೇ ಪರಿಸ್ಥಿತಿಯಲ್ಲೂ ನಗ್ತಾ ಇರೋದೇ ಉತ್ತಮ ಪ್ರತಿಕ್ರಿಯೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದರ ಅರ್ಥ ಸುಬ್ಬ-ಸುಬ್ಬಿ ಒಂದಾಗಿದ್ದಾರಾ ಅಂತಲೂ ಎಲ್ಲರೂ ಪ್ರಶ್ನಿಸ್ತಿದ್ದಾರೆ.
ಅಂದಹಾಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದಾಗಿ ಜೈಲು ಸೇರಿದ ದರ್ಶನ್ ಹಾಗೂ ಪವಿತ್ರಾ, ಅದಾದ ಬಳಿಕ ಭೇಟಿ ಆದ ನಿದರ್ಶನವೇ ಇಲ್ಲ. ಅಲ್ಲದೆ, ನಿನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ಅರ್ಥದಲ್ಲಿ ಪವಿತ್ರಾ ಸಹವಾಸವೇ ಸಾಕು ಅಂತ ಪರಪ್ಪನ ಅಗ್ರಹಾರದಲ್ಲೂ ಕೂಡ ದರ್ಶನ್ ಆಕೆಯತ್ತ ಮುಖ ಎತ್ತಿ ಕೂಡ ನೋಡಿರಲಿಲ್ಲ. ಕೋರ್ಟ್‌ಗೆ ಹಾಜರಾದಾಗಲೂ ಮುಖ ಕೂಡ ನೋಡದೆ ಆಕೆಯನ್ನ ಅವಾಯ್ಡ್ ಮಾಡ್ತಿದ್ರು ದಾಸ ದರ್ಶನ್.
ತಾನಾಯ್ತು ತನ್ನ ಸಿನಿಮಾ, ಫ್ಯಾಮಿಲಿ, ಫಾರ್ಮ್ ಹೌಸ್, ಆಫ್ತ ವಲಯ ಆಯ್ತು ಅಂತ ತನ್ನ ಪಾಡಿಗೆ ತಾನಿದ್ರು ದರ್ಶನ್. ಅದು ನಿನ್ನೆ ಮೊನ್ನೆವರೆಗೂ. ಆದ್ರೀಗ ಇತ್ತೀಚೆಗೆ ಕೋರ್ಟ್‌ಗೆ ಹಾಜರಾಗಿದ್ದ ದರ್ಶನ್‌ರನ್ನ ಕೊನೆಗೂ ಮಾತನಾಡಿಸೋ ಪ್ರಯತ್ನ ಮಾಡಿ, ಸಕ್ಸಸ್ ಆಗಿದ್ದಾರೆ ಪವಿತ್ರಾ ಗೌಡ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಹಿಂದೆ ಬಿದ್ದು ಲಿಫ್ಟ್‌ನಲ್ಲಿ ಪ್ಲೀಸ್ ಪ್ಲೀಸ್ ಅಂತ ಮಾತನಾಡಿಸ್ತಾ ನಂಬರ್ ಪಡೆಯೋ ಪ್ರಯತ್ನದಲ್ಲಿ ಸಕ್ಸಸ್ ಆಗಿದ್ದಾರಂತೆ ಪವಿತ್ರಾ. ಅಲ್ಲಿಗೆ ಸುಬ್ಬ- ಸುಬ್ಬಿ ಸ್ಟೋರಿ ಟು ಬಿ ಕಂಟಿನ್ಯೂಡ್ ಅನ್ನೋದು ಗ್ಯಾರಂಟಿ.
ಕುಂಭಮೇಳ, ಟೆಂಪಲ್ ರನ್ ಅಂತ ಬ್ಯುಸಿಯಾಗಿದ್ದ ಪವಿತ್ರಾ ಗೌಡ, ದರ್ಶನ್ ನಂಬರ್ ಕೂಡ ಇಲ್ಲದೆ ಗೆಳೆಯನಿಗಾಗಿ ಹಂಬಲಿಸುತ್ತಿದ್ದರು ಅನಿಸುತ್ತೆ. ಆದ್ರೆ ಯಾವಾಗ ನಂಬರ್ ಸಿಕ್ತೋ, ಈಗ ನಿರಾಳಗೊಂಡಿದ್ದಾರೆ. ತಾಳ್ಮೆಯೇ ಎಲ್ಲಕ್ಕೂ ಉತ್ತರ ಅಂತ ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕ ಆಯ್ತು ಅನ್ನೋ ಅರ್ಥದಲ್ಲಿ ಖುಷಿಯಿಂದ ಪಾಸಿಟಿವ್ ಆಗಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಸುಬ್ಬ- ಸುಬ್ಬಿ ಒಂದಾಗಲಿ ಅಥ್ವಾ ಆಗದೆ ಹೋಗಲಿ. ಆದ್ರೆ ಜಡೆ ಜಗಳಗಳ ಮಧ್ಯೆ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಲೈಫು ಹೈರಾಣ ಆಗದಿರಲಿ ಅನ್ನೋದು ನಮ್ಮ ಆಶಯ. ಈಗಾಗ್ಲೇ ದರ್ಶನ್ ತುಂಬಾ ನೊಂದಿದ್ದಾರೆ. ಲೈಫ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಸಾಕಷ್ಟು ಬದಲಾವಣೆಗಳನ್ನ ಮಾಡಿಕೊಂಡಿದ್ದಾರೆ. ಕನ್ನಡದಲ್ಲೇ ಸಿನಿಮಾ ಮಾಡ್ತೀನಿ ಅಂತ ಸಿನಿಮಾ ಲೈಫ್‌ಗೆ ಹಿಂದಿರುಗಿದ್ದಾರೆ. ಇಂತಹ ನಟರಿಂದ ವರ್ಷಕ್ಕೆ ಎರಡೆರಡು ಸಿನಿಮಾ ಬಂದ್ರೆ, ಸಾವಿರಾರು ಮಂದಿ ಚಿತ್ರರಂಗದಲ್ಲಿ ಅನ್ನ ತಿಂತಾರೆ. ಅದಕ್ಕೆ ಅಡ್ಡಿ, ಆತಂಕಗಳು ಎದುರಾಗದಿದ್ರೆ ಅಷ್ಟೇ ಸಾಕು ಅಲ್ವಾ..?