ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆದ ಡಿಬಾಸ್ ದರ್ಶನ್ ಸದ್ಯದ ಪರಿಸ್ಥಿತಿ ನೋಡ್ತಿದ್ರೆ ಅಯ್ಯೋ ಪಾಪ ಅನಿಸ್ತಿದೆ. ಜೈಲು ಲೈಬ್ರರಿಯಿಂದ ಪುಸ್ತಕಗಳನ್ನ ಪಡೆದಿರೋ ದಾಸ, ಆಧ್ಯಾತ್ಮದತ್ತ ವಾಲಿದ್ದಾರೆ. ಅಷ್ಟೇ ಅಲ್ಲ ಜೈಲು ಕಡೆ ಬರಬೇಡ ಅಂತ ಪತ್ನಿ ವಿಜಿಗೂ ವಾರ್ನ್ ಮಾಡಿದ್ದಾರೆ. ಒಂದ್ಕಡೆ ಜೈಲಲ್ಲಿ ದರ್ಶನ್‌ಗೆ ನರಕದ ದರ್ಶನ ಆಗ್ತಿದ್ರೆ, ಮತ್ತೊಂದ್ಕಡೆ ಧರ್ಮಪತ್ನಿ ಫಾರ್ಮ್ ಹೌಸ್‌ನಲ್ಲಿರೋ ಕುದುರೆ, ಹಸುಗಳನ್ನ ಮಾರಾಟಕ್ಕೆ ಇಟ್ಟಿದ್ದಾರೆ. ಇಷ್ಟಕ್ಕೂ ಏನಾಗ್ತಿದೆ..? ಇವೆಲ್ಲಾ ಬೆಳವಣಿಗೆಗೆಳ ಎಕ್ಸ್‌ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಲೈಟ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್, ಜೂನಿಯರ್ ಆರ್ಟಿಸ್ಟ್ ಹೀಗೆ ಚಿತ್ರರಂಗದ ತಳಮಟ್ಟದಿಂದ ಬಹು ದೊಡ್ಡ ಸ್ಟಾರ್ ಆಗಿ ಬೆಳೆದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, 55ಕ್ಕೂ ಅಧಿಕ ಚಿತ್ರಗಳನ್ನ ಮಾಡಿದ್ದಾರೆ. ಬಾಕ್ಸ್ ಆಫೀಸ್ ಸುಲ್ತಾನನಾಗಿ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ದರ್ಶನ್, ಚಿತ್ರರಂಗದ ಪಾಲಿಗೆ ಶಕ್ತಿ ಆಗಿದ್ರು. ಫ್ಯಾನ್ಸ್ ಪಾಲಿಗೆ ಒಡೆಯ, ಯಜಮಾನ, ಡಿಬಾಸ್ ಆಗಿ ದಾಸ ಮಿಂಚು ಹರಿಸುತ್ತಿದ್ರು. ಆದ್ರೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ ನಟ ದರ್ಶನ್.
ದರ್ಶನ್‌ನ ಜೈಲಿಗಟ್ಟಿದ ಚಂದನ್‌ಗೆ ದೊಡ್ಮನೆಯಿಂದ ಸನ್ಮಾನ..!
ಡಾ. ರಾಜ್ ಅಕಾಡೆಮಿಯಲ್ಲಿ ರಿಯಲ್ ಹೀರೋ ACP ಚಂದನ್
ಅಂದಹಾಗೆ ದರ್ಶನ್‌ನ ಜೈಲಿಗಟ್ಟಿದ ಎಸಿಪಿ ಚಂದನ್ ರಿಯಲ್ ಹೀರೋ ಆಗಿ ಸಂಚಲನ ಮೂಡಿಸಿದ್ದಾರೆ. ಇದೀಗ ಆ ರಿಯಲ್ ಖಾಕಿ ಹೀರೋನ ನಮ್ಮ ಕನ್ನಡ ಚಿತ್ರರಂಗದ ದೊಡ್ಮನೆ ಸನ್ಮಾನಿಸಿದೆ. ಹೌದು.. ಇತ್ತೀಚೆಗೆ ಡಾ ರಾಜ್‌ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಿಂದ ಸಾಧನೆಯ ಸಂಭ್ರಮ ಅನ್ನೋ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇದಿಕೆಯಲ್ಲಿ ಎಕ್ಸಾಂ ಕ್ಲಿಯರ್ ಮಾಡಿ ಸೇವೆಗೆ ಸಜ್ಜಾಗಿರೋ ಅಕಾಡೆಮಿಯ ವಿದ್ಯಾರ್ಥಿಗಳನ್ನ ಪ್ರಶಂಸಿಸಲು ಎಸಿಪಿ ಚಂದನ್ ಅತಿಥಿಯಾಗಿ ಆಗಮಿಸಿದ್ರು.
ಈ ವೇಳೆ ಅವ್ರನ್ನ ನಟ ಯುವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಮಂಗಳಾ ರಾಘವೇಂದ್ರ ರಾಜ್‌ಕುಮಾರ್ ಸನ್ಮಾನಿಸಿದ್ದು, ಅದೀಗ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಚಂದನ್ ಮಾತನಾಡ್ತಾ, ನನ್ನ ಉಸಿರಿರೋವರೆಗೂ ಡಾ. ರಾಜ್‌ಕುಮಾರ್ ಅಕಾಡೆಮಿ ಜೊತೆ ನಾನು ಅಸೋಸಿಯೇಟ್ ಆಗಿರ್ತೀನಿ ಅನ್ನೋ ಭರವಸೆ ಕೂಡ ಇದೇ ಸಮಯದಲ್ಲಿ ನೀಡಿದ್ದು ಇಂಟರೆಸ್ಟಿಂಗ್.
ಜೈಲ್ ಲೈಬ್ರರಿಯಿಂದ 16 ಪುಸ್ತಕ.. ದಾಸನಿಗೆ ಆಧ್ಯಾತ್ಮ ದರ್ಶನ..?
ವಿವೇಕಾನಂದ, ಪರಮಹಂಸರ ಪುಸ್ತಕಗಳನ್ನ ಪಡೆದಿರೋ ದಚ್ಚು
ಕ್ವಾರಂಟೈನ್ ಸೆಲ್‌ನಲ್ಲಿ ಸಾಮಾನ್ಯ ಕೈದಿಗಳಂತೆ ದರ್ಶನ್‌ಗೂ ವ್ಯವಸ್ಥೆ ಮಾಡಲಾಗಿದೆ. ಆದ್ರೆ ದರ್ಶನ್‌ಗೆ ಅದೊಂಥರಾ ನರಕಯಾತನೆ ಆಗಿಬಿಟ್ಟಿದೆ. ಕಾರಣ ಅವ್ರು ಯಾರನ್ನೂ ಭೇಟಿ ಆಗುವಂತಿಲ್ಲ. ಮಾತನಾಡುವಂತಿಲ್ಲ. ವಾಕ್ ಮಾಡುವಂತಿಲ್ಲ. ಹೆಚ್ಚುವರಿಯಾಗಿ ಬೇಕು ಅಂತ ಕೇಳಿದ್ದ ಹಾಸಿಗೆ, ತಲೆ ದಿಂಬು ಕೂಡ ಅವರಿಗೆ ಸಿಕ್ಕಿಲ್ಲ. ಹೀಗಾಗಿ ಅಕ್ಷರಶಃ ಮೌನಕ್ಕೆ ಜಾರಿರೋ ದಾಸ, ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದಾರೆ. ಅದ್ರಲ್ಲೂ ನಾಲ್ಕು ಗೋಡೆಗಳ ಮಧ್ಯೆ ಜೈಲಿನಲ್ಲಿ ಸಮಯ ಕಳೆಯುವುದು ಸಾಮಾನ್ಯದ ಮಾತಲ್ಲ.
ಪ್ರತಿ ದಿನ ಪ್ರತಿ ಕ್ಷಣ ವಿಲ ವಿಲ ಅಂತ ಒದ್ದಾಡ್ತಿರೋ ನಟ ದರ್ಶನ್, ಇತ್ತೀಚೆಗೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡು, ಜೈಲ್ ಲೈಬ್ರರಿಯಿಂದ ಬರೋಬ್ಬರಿ 16 ಪುಸ್ತಕಗಳನ್ನ ಪಡೆದಿದ್ದಾರಂತೆ. ಅದರಲ್ಲಿ ಹೆಚ್ಚಿನವು ಆಧ್ಯಾತ್ಮದ ಪುಸ್ತಕಗಳೇ ಇದ್ದು, ಭಗವದ್ಗೀತೆ, ಸ್ವಾಮಿ ವಿವೇಕಾನಂದ ಹಾಗೂ ಪರಮಹಂಸರ ಕುರಿತ ಪುಸ್ತಕಗಳು ಕೂಡ ಇವೆ ಎನ್ನಲಾಗ್ತಿದೆ. ಇದ್ರೆ ನೆಮ್ದಿಯಾಗ್ ಇರ್ಬೇಕ್ ಎಂದಿದ್ದ ದರ್ಶನ್ ನಟನೆಯ ಡೆವಿಲ್ ಸಾಂಗ್‌ನಂತೆ ಅವರೇ ಈ ಮೂಲಕ ತಮ್ಮ ನೆಮ್ಮದಿಯನ್ನ ಹುಡುಕಿಕೊಂಡಂತಿದೆ.
ಜೈಲಲ್ಲಿ ಟೈಂ ಪಾಸ್ ಕಷ್ಟ ಕಷ್ಟ.. ಸದ್ಯಕ್ಕೆ ಪುಸ್ತಕಗಳೇ ದಾಸನ ಫ್ರೆಂಡ್ಸ್
ಇದ್ರೆ ನೆಮ್ದಿಯಾಗ್ ಇರ್ಬೇಕ್ ಅಂತ ಮೌನಕ್ಕೆ ಜಾರಿದ ದರ್ಶನ್
ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಪಾರ್ಟಿ, ಪಬ್ ಅಂತ ಸಿಕ್ಕಾಪಟ್ಟೆ ಮೋಜು ಮಸ್ತಿ ಮಾಡ್ತಿರೋ ಫೋಟೋಗಳನ್ನ ಅವರದ್ದೇ ಇನ್ಸ್‌ಟಾದಲ್ಲಿ ನೋಡಿರ್ತೀರಾ. ಅದು ದರ್ಶನ್ ಅವರ ಕಿವಿಗೂ ಮುಟ್ಟದೇ ಇರೋಕೆ ಸಾಧ್ಯವಿಲ್ಲ. ಹೆಚ್ಚುವರಿ ಹಾಸಿಗೆ, ದಿಂಬುಗಾಗಿ ಕೂಡ ಕಾನೂನು ಹೋರಾಟ ನಡೆಸ್ತಿರೋ ಗಂಡನ ಪರಿಸ್ಥಿತಿ ಹಾಗಿದ್ದುಕೊಂಡು ಕೂಡ ವಿಜಿ ಹೀಗೆ ಸುತ್ತಾಡ್ತಿರೋದು ದರ್ಶನ್‌ನ ಇನ್ನಿಲ್ಲದೆ ಕಾಡಿದೆ. ಅಲ್ಲದೆ, ಹಬ್ಬ ಹರಿದಿನಗಳನ್ನ ಮುಗಿಸಿ, ನಂತ್ರ ದಾಸನನ್ನ ಭೇಟಿ ಆಗಲು ತೆರಳಿದ ಪತ್ನಿ ಮೇಲೆ ದರ್ಶನ್‌ಗೆ ಎಲ್ಲಿಲ್ಲದ ಕೋಪ ಬಂದಿದೆ. ಅದೇ ಕಾರಣದಿಂದ ಇನ್ಮೇಲೆ ಜೈಲು ಕಡೆ ಬರಬೇಡ. ನಾನಾಗಿ ನಾನೇ ಹೇಳ್ತೀನಿ. ಅಲ್ಲಿಯವರೆಗೆ ಈ ಕಡೆ ಬರಬೇಡ ಅಂತ ಪತ್ನಿಗೆ ದಚ್ಚು ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರಂತೆ.
ಜೈಲು ಕಡೆ ಬರ್ಬೇಡ.. ಪತ್ನಿಗೆ ದಾಸ ದಚ್ಚು ಖಡಕ್ ವಾರ್ನಿಂಗ್
ಪಾರ್ಟಿ, ಪಬ್ ಸುತ್ತಾಟ.. ಹಬ್ಬ ಮುಗಿಸಿ ಬಂದ ವಿಜಿಗೆ ಶಾಕ್..!
ದರ್ಶನ್‌ಗೆ ಪ್ರಾಣಿಪಕ್ಷಿಗಳು ಅಂದ್ರೆ ಪಂಚ ಪ್ರಾಣ. ಅದ್ರಲ್ಲೂ ಕುದುರೆ ಅಂದ್ರೆ ದಾಸನಿಗೆ ಅಚ್ಚುಮೆಚ್ಚು. ತಮ್ಮ ಫಾರ್ಮ್ ಹೌಸ್‌ನಲ್ಲಿ ಒಂದಷ್ಟು ಕುದುರೆಗಳನ್ನ ಸಾಕಿದ್ದ ದಾಸ, ಆಗಾಗ ಕುದುರೆ ಸವಾರಿ ಕೂಡ ಮಾಡ್ತಿದ್ರು. ಆದ್ರೀಗ ಅವುಗಳ ಮೇಲೆ ಸವಾರಿ ಮಾಡೋ ಯಜಮಾನ ಜೈಲು ಪಾಲಾಗಿದ್ದಾರೆ. ಸೋ ಕುದುರೆಗಳೆಲ್ಲಾ ಮಾರಾಟಕ್ಕೆ ಬಂದಿವೆ. ಸ್ವತಃ ದರ್ಶನ್ ಪತ್ನಿ ವಿಜಯಲಕ್ಷ್ಮೀಯೇ ದಾಸನ ನೆಚ್ಚಿನ ಕುದುರೆಗಳನ್ನ ಸೇಲ್ಗಿಟ್ಟಿದ್ದಾರೆ.
ಹೌದು.. ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರೋ ವಿನೀಶ್ ದರ್ಶನ್ ಫಾರ್ಮ್ ಹೌಸ್ ಮುಂದೆ ಇಂಥದ್ದೊಂದು ಬೋರ್ಡ್ ಮಿರಿ ಮಿರಿ ಮಿಂಚ್ತಿದೆ. ಹಾರ್ಸ್ ಫಾರ್ ಸೇಲ್.. ಕುದುರೆ ಮಾರಾಟಕ್ಕಿದೆ ಅಂತ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲಿ ಬೋರ್ಡ್ನಲ್ಲಿ ಬರೆಯಲಾಗಿದೆ. ಅದೀಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಂದಹಾಗೆ ಇದು ಫೇಕ್ ಫೋಟೋ ಅಲ್ಲ. ಖುದ್ದು ದರ್ಶನ್ ಪತ್ನಿ ವಿಜಯಲಕ್ಷ್ಮೀ ತಮ್ಮ ಫಾರ್ಮ್ ಹೌಸ್‌ನಲ್ಲಿರೋ ಕುದುರೆಯನ್ನ ಮಾರಾಟಕ್ಕಿಟ್ಟಿದ್ದಾರೆ. ಅಲ್ಲಿಂದ ನಮ್ಮ ಮೈಸೂರು ಪ್ರತಿನಿಧಿ ಸುರೇಶ್ ನೀಡಿರೋ ಪ್ರತ್ಯಕ್ಷ ವರದಿಯನ್ನ ಒಮ್ಮೆ ನೋಡಿ.
ಡಿಬಾಸ್ ಕುದುರೆ ಮಾರಾಟಕ್ಕೆ.. ಓ ಮೈ ಗಾಡ್ ಏನ್ ನಡೀತಿದೆ..?
ವಿನೀಶ್ ದರ್ಶನ್ ಫಾರ್ಮ್.. ಹಾರ್ಸ್ ಫಾರ್ ಸೇಲ್ ಬೋರ್ಡ್
ಅಂದಹಾಗೆ ನಟ ದರ್ಶನ್‌ಗೆ ಪ್ರಾಣಿ, ಪಕ್ಷಿಗಳ ಮೇಲೆ ಅದೆಷ್ಟು ಪ್ರೀತಿ, ಪ್ರೇಮ ಅನ್ನೋದನ್ನ ಪ್ರತ್ಯೇಕವಾಗಿ ಹೇಳೋದು ಬೇಕಾಗಿಲ್ಲ. ತಮ್ಮ ಫಾರ್ಮ್ ಹೌಸ್‌ನಲ್ಲಿ ನಾನಾ ಬಗೆಯ ಪ್ರಾಣಿ ಹಾಗೂ ಪಕ್ಷಿಗಳನ್ನ ಸಾಕಿಕೊಂಡಿದ್ದಾರೆ. ಇನ್ನೂ ಕುದುರೆ ಸಾಕೋದು ಕೂಡ ದಾಸನ ನೆಚ್ಚಿನ ಹವ್ಯಾಸ. ಸಾರಥಿ, ಬೃಂದಾವನ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ಹೀರೋ ಆಗಿ ಕುದುರೆ ಸವಾರಿ ಮಾಡಿದ್ರು ದಾಸ.ಫ್ಲೋ…
ಪ್ರತೀ ವರ್ಷ ಸಂಕ್ರಾಂತಿ ಹಬ್ಬದ ದಿನ ಕುದುರೆ, ಎತ್ತು, ಹಸುಗಳನ್ನ ತೊಳೆದು, ಸಿಂಗರಿಸಿ, ಕಿಚ್ಚು ಹಾಯಿಸುತ್ತಿದ್ರು ದರ್ಶನ್. ಅದರ ವಿಡಿಯೋಗಳು ಕೂಡ ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಅಂದಹಾಗೆ ದಾಸನ ಪತ್ನಿ ವಿಜಯಲಕ್ಷ್ಮೀ ಬರೀ ಕುದುರೆಗಳನ್ನಷ್ಟೇ ಮಾರಾಟಕ್ಕೆ ಇಟ್ಟಿಲ್ಲ. ಅಲ್ಲಿರೋ ಹಸು, ಎತ್ತುಗಳನ್ನ ಕೂಡ ಮಾರಾಟ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಕಾರಣ ಆರ್ಥಿಕ ಸಂಕಷ್ಟ ಅಲ್ಲ. ಅವುಗಳನ್ನ ಮೇಂಟೇನ್ ಮಾಡೋದು ಇವರುಗಳಿಗೆ ಕಷ್ಟವಾಗ್ತಿದೆ. ಇತ್ತೀಚೆಗೆ ದಸರಾ ಹಬ್ಬದ ದಿನ ಕೂಡ ಫಾರ್ಮ್ ಹೌಸ್‌ನಲ್ಲಿ ಪೂಜೆ ಮಾಡಿ ಅಮ್ಮ-ಮಗ ಕ್ಯಾಮೆರಾಗೆ ಪೋಸ್ ನೀಡಿದ್ರು.
ಸದ್ಯ ವಿಜಯಲಕ್ಷ್ಮೀ ದರ್ಶನ್ ಬರೀ ಹಸು, ಕುದುರೆಗಳನ್ನಷ್ಟೇ ಮಾರಾಟ ಮಾಡ್ತಾರಾ ಅಥ್ವಾ ದುಬಾರಿ ಕಾರ್‌ಗಳನ್ನ ಕೂಡ ಸೇಲ್‌ಗೆ ಇಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ. ಒಟ್ಟಾರೆ ಇದೆಲ್ಲವನ್ನ ನೋಡ್ತಿದ್ರೆ ದರ್ಶನ್‌ಗೆ ಇದೆಲ್ಲಾ ಬೇಕಿತ್ತಾ ಅಂತ ಅನಿಸುತ್ತೆ. ಅದೇನೇ ಇರಲಿ, ಕಾನೂನಿಗೆ ಎಲ್ಲರೂ ಒಂದೇ. ಎಲ್ಲರೂ ಕಾನೂನನ್ನ ಗೌರವಿಸಬೇಕಿದೆ. ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ಎಲ್ಲರ ಆಶಯ.