ದರ್ಶನ್ ಜೈಲು ಸೇರಿರೋದಕ್ಕೂ.. ಆತನ ಚಿತ್ರಕ್ಕೆ ಡೆವಿಲ್ ಅಂತ ಟೈಟಲ್ ಇಟ್ಟಿರೋದಕ್ಕೂ.. ಸದ್ಯ ಕೋರ್ಟ್‌ನಲ್ಲಿ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಹೇಳ್ತಿರೋದಕ್ಕೂ ಸರಿ ಹೋಗಿದೆ. ರಿಯಲ್ ಲೈಫ್‌ನಲ್ಲಿ ಛೀ, ಥೂ ಅನಿಸಿಕೊಂಡು, ರೀಲ್‌ನಲ್ಲಿ ನಾನು ಹೀರೋ ಆಗಿ ಮಿಂಚ್ತೀನಿ ಅಂದ್ರೆ ಜನ ಒಪ್ತಾರಾ..? ಏನಿದು ಅಂತೀರಾ..? ಈ ಸ್ಟೋರಿ ನೋಡಿ.
ದುಡ್ಡು, ದೌಲತ್ತು ಹಾಗೂ ದುರಹಂಕಾರ.. ಎಲ್ಲಾ ಟೈಮ್‌ನಲ್ಲೂ ವರ್ಕ್ ಆಗಲ್ಲ. ಕರ್ಮ ಅನ್ನೋದು ಬೆಂಬಿದಡೆ ಇರಲ್ಲ. ಅದಕ್ಕೆ ನಟ ದರ್ಶನ್ ಜ್ವಲಂತ ಉದಾಹರಣೆ. ಹೌದು.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಡಿಬಾಸ್‌ಗೆ ಢವ ಢವ ಶುರುವಾಗಿದೆ. ಮಾಡೋದೆಲ್ಲಾ ಅನಾಚಾರ.. ಮನೆ ಮುಂದೆ ಬೃಂದಾವನ ಅನ್ನುವ ಹಾಗೆ ಸಿನಿಮಾಗಳಲ್ಲಿ ಮಾತ್ರ ದರ್ಶನ್ ಹೀರೋ. ನಿಜ ಜೀವನದಲ್ಲಿ ಈತ ಅಕ್ಷರಶಃ ವಿಲನ್. ಬಡಪಾಯಿ ರೇಣುಕಾಸ್ವಾಮಿಯನ್ನ ಮಸಣಕ್ಕೆ ಕಳುಹಿಸಿ, ಅದಕ್ಕೆ ಶಿಕ್ಷೆ ಅನುಭವಿಸುವ ಹಾಗಾಗಿದೆ.
ಮಾಡೋದೆಲ್ಲಾ ಅನಾಚಾರ.. ಡೆವಿಲ್‌ಗೆ ಜನ ಇಡ್ತಾರೆ ಗುನ್ನಾ..!
ರಿಯಲ್ ಲೈಫ್‌ಲಿ ಕಿಲ್ಲರ್ ಸ್ಟಾರ್.. ರೀಲ್‌ನಲ್ಲಿ ಸೂಪರ್ ಸ್ಟಾರ್
ಕಾನೂನಿಗೆ ಎಲ್ಲರೂ ಒಂದೇ. ಕಾನೂನಿನಡಿ ಯಾರ ವರ್ಚಸ್ಸು, ಯಾರ ದುಡ್ಡು, ಯಾರ ಸ್ಟಾರ್‌ಡಮ್ ಕೂಡ ನಡೆಯಲ್ಲ. ಅದರಲ್ಲೂ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಹೇಳ್ತಾ ಬರ್ತಿರೋ ದರ್ಶನ್, ತನಗೆ ಅರಿವೇ ಇಲ್ಲದಂತೆ ಬಹುದೊಡ್ಡ ಬಲೆಗೆ ಸಿಲುಕಿಕೊಂಡಿದ್ದಾರೆ. ಇನ್ಮೇಲೆ ಈತ ಏನು ಹೇಳಿದ್ರೂ ಕೋರ್ಟ್ ಕೇಳಲ್ಲ. ಯಾಕಂದ್ರೆ ಬೆನ್ನು ನೋವಿಲ್ಲ. ಕೈ ನೋವು ಇಲ್ಲ. ಫಂಗಸ್ ಆಗಿಲ್ಲ. ಜೈಲಾಧಿಕಾರಿಗಳ ಮೇಲೆ ಮಾಡಿದ ಆರೋಪಗಳೆಲ್ಲಾ ಸುಳ್ಳು. ಜಡ್ಜ್ ಅವರನ್ನೇ ಜೈಲಿಗೆ ಬಂದು ಪರಿಶೀಲಿಸಿ ಅಂದಿದ್ದು ಹೀಗೆ ಎಲ್ಲವೂ ಆತನಿಗೆ ಉರುಳಾಗ್ತಿವೆ.
ಎರಡ್ಮೂರು ಟೀಸರ್, ಮೇಕಿಂಗ್ ವಿಡಿಯೋಗಳು ಹಾಗೂ ಎರಡು ಹಾಡುಗಳಿಂದ ದರ್ಶನ್ ಮುಂದಿನ ಸಿನಿಮಾ ಡೆವಿಲ್ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಆದ್ರೆ ನಿಜಕ್ಕೂ ಸಾಂಗ್ಸ್ ಜನಕ್ಕೆ ರುಚಿಸಿದ್ಯಾ ಅಂದ್ರೆ ನೋ ವೇ. ಅದ್ಯಾಕೋ ಅಜನೀಶ್ ಮ್ಯೂಸಿಕ್ ಕಂಪೋಸ್ ಮಾಡಿದ್ರೂ ಸಹ ಡೆವಿಲ್ ಸಾಂಗ್ಸ್ ನಾಟ್ ಅಪ್ ಟು ದಿ ಮಾರ್ಕ್. ಬರೀ ಅವ್ರ ಅಭಿಮಾನಿಗಳೇ ಮೆಚ್ಚಬೇಕು ಅನ್ನುವಂತಿವೆ. ಇಂತಹ ಜಂಜಾಟದಲ್ಲಿ ಸಿನಿಮಾ ರಿಲೀಸ್ ಆಗ್ತಿರೋದೇ ಹೆಚ್ಚು, ಅದರ ಮಧ್ಯೆ ನಿರ್ಮಾಪಕ ಪ್ರಕಾಶ್ ವೀರ್ ಅವರಿಗೆ ಪ್ರೋಟೋಕಾಲ್ ಬೇರೆ ಅಂತೆ.
ಕೋರ್ಟ್‌ನಲ್ಲಿ ದರ್ಶನ್ ಸುಳ್ಳುಗಳ ಮೂಟೆ.. ಖೇಲ್ ಖತಂ..!
ಡೆವಿಲ್ ರಿಲೀಸ್ ವೇಳೆ ಫಿಲ್ಮ್ ಟೀಂಗೆ ಪ್ರೋಟೋಕಾಲ್ ಬೇರೆ
ಯೆಸ್.. ಸಿನಿಮಾಗಳ ಪ್ರಮೋಷನ್ಸ್‌ಗೆ ಚಿತ್ರತಂಡವನ್ನು ಅಪ್ರೋಚ್ ಮಾಡಿದ್ರೆ, ಅದೇನೋ ಪ್ರೋಟೋಕಾಲ್ ಇದೆ. ಪ್ರೊಡಕ್ಷನ್ ಹೌಸ್ ಪರ್ಮಿಷನ್ ಇಲ್ಲದೆ ಮಾತನಾಡುವ ಹಾಗಿಲ್ಲ ಅನ್ನೋ ರಿಯಾಕ್ಷನ್‌ಗಳು ಬೇರೆ. ಹೀಗಿರುವಾಗ ಸಿನಿಮಾ ಪ್ರಮೋಷನ್ ಆಗೋದು ಹೇಗೆ..? ಕ್ರಾಂತಿ ಸಿನಿಮಾ ಮೀಡಿಯಾ ಸಪೋರ್ಟ್ ಇಲ್ಲದೆ ಶಾಂತಿ ಆಗಿ ಬಾಕ್ಸ್ ಆಫೀಸ್‌ನಲ್ಲಿ ದಿಗ್ಭ್ರಾಂತಿಗೊಂಡಂತೆ ಡೆವಿಲ್ ಆಗದಿದ್ರೆ ಸಾಕು. ಫಿಲ್ಮ್ ಟೀಂ ಎಚ್ಚೆತ್ತುಕೊಳ್ಳಬೇಕಿದೆ. ಅಥ್ವಾ ಬೇರೆ ಯಾರಾದರೂ ಹೇಳುವ ಐಡಿಯಾಗಳನ್ನ ತೆಗೆದುಕೊಂಡು ಮುಂದುವರೆಯುವ ತುರ್ತು ಅವಶ್ಯಕತೆ ಅವರಿಗಿದೆ. ಹೀಗಾದ್ರೆ ಆ ದೇವರೇ ಕಾಪಾಡಬೇಕು.





