ರಾಮನ ಭಂಟ ಹನುಮನಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಧನ್ವೀರ್ ಗೌಡ ಪ್ರಾಮಾಣಿಕ ಭಂಟ. ಹೌದು, ಸಹೋದರನಂತಹ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲ್ ಒಳಗೆ ಇರೋದ್ರಿಂದ, ಇತ್ತ ಧನ್ವೀರ್‌ಗೂ ನೆಮ್ಮದಿ ಇಲ್ಲದಂತಾಗಿದೆ. ಅದೇ ಕಾರಣದಿಂದ ಬರ್ತ್ ಡೇ ಕೂಡ ಸೆಲೆಬ್ರೇಟ್ ಮಾಡಿಕೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ.
- ನೋ ಸೆಲೆಬ್ರೇಷನ್.. ದರ್ಶನ್ ಭಂಟ ಧನ್ವೀರ್‌ಗಿಲ್ಲ ನೆಮ್ಮದಿ
- ಜೈಲಲ್ಲಿ ದಾಸ ದಚ್ಚು.. ಬಾಸ್ ಇಲ್ಲದ ಸಂಭ್ರಮಕ್ಕೆ ಗುಡ್ ಬೈ
- ಅತ್ತಿಗೆ ವಿಜಯಲಕ್ಷ್ಮೀ ಬರ್ತ್ ಡೇ ಗಿಫ್ಟ್.. ಫ್ಯಾನ್ಸ್‌ಗೆ ಪತ್ರ..!
- ದರ್ಶನ್ ಕೈ ಹಿಡಿದರೂ ಪ್ರೇಕ್ಷಕರು ಕೈ ಹಿಡಿಯದ ವಾಮನ
ನಾಯಕನಿಲ್ಲದ ಗಜಪಡೆ ಸಪ್ಪೆ ಆಗಿಬಿಟ್ಟಿದೆ. ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅಲ್ಲಿ ಬೆಡ್ಡು, ತಲೆ ದಿಂಬು, ಮನೆಯೂಟಕ್ಕಾಗಿ ಪರದಾಡ್ತಿದ್ದಾರೆ ದಾಸ ದರ್ಶನ್. ಇತ್ತ ತಮ್ಮ ನೆಚ್ಚಿನ ಬಾಸ್ ಇಲ್ಲ ಅಂತ ಇಡೀ ಗಜಪಡೆ ಅದೇ ಬೇಸರದಲ್ಲಿ ಜೀವನ ಕಳೆಯುತ್ತಿದೆ. ಹೌದು, ದಾಸನಿಲ್ಲದೆ ಡಿ ಖಾಂದಾನ್ ಸಿಕ್ಕಾಪಟ್ಟೆ ಡಲ್ ಹೊಡೀತಿದೆ.
ಅದರಲ್ಲೂ ರಾಮನ ಭಂಟ ಹನುಮನಿದ್ದಂತೆ ಡಿಬಾಸ್‌ಗೆ ತುಂಬಾ ಅತ್ಯಾಪ್ತನಾಗಿದ್ದ ಸ್ಯಾಂಡಲ್‌ವುಡ್‌ನ ಶೋಕ್ದಾರ್ ಧನ್ವೀರ್ ಗೌಡಗೆ ಇಂದು ಬರ್ತ್ ಡೇ ಸಂಭ್ರಮ. ಆದ್ರೆ ದರ್ಶನ್ ಇಲ್ಲದೆ ಆ ಸಂಭ್ರಮಕ್ಕೆ ಬೆಲೆ ಇಲ್ಲ ಅಂತ, ಸೆಲೆಬ್ರೇಷನ್ ಮಾಡಿಕೊಳ್ಳದೆ, ಮೌನಕ್ಕೆ ಜಾರಿದ್ದಾರೆ. ಅಭಿಮಾನಿಗಳಿಗೆ ಮೊನ್ನೆಯೇ ಪ್ರೀತಿಯಿಂದ ಪತ್ರ ಬರೆದಿರೋ ಧನ್ವೀರ್ ಗೌಡ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಅನ್ನೋದನ್ನ ಮನದಟ್ಟು ಮಾಡಿದ್ರು.
ಆದಾಗ್ಯೂ ಕೂಡ ಅತ್ತಿಗೆ ವಿಜಯಲಕ್ಷ್ಮೀ ದರ್ಶನ್‌ರಿಂದ ಬರ್ತ್ ಡೇ ಶುಭಾಶಯದ ಜೊತೆಗೆ ಗಿಫ್ಟ್ ಕೂಡ ಸಿಕ್ಕಿದೆ ಎನ್ನಲಾಗ್ತಿದೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ಪೋಸ್ಟ್ ಹಾಕಿರೋ ವಿಜಯಲಕ್ಷ್ಮೀ ದರ್ಶನ್, ತುಂಬು ಹೃದಯದಿಂದ ದರ್ಶನ್ ಪರವಾಗಿ ಧನ್ವೀರ್‌ಗೆ ಶುಭಾಶಯ ಕೋರಿದ್ದಾರೆ.
ದರ್ಶನ್ ಹೊರಗೆ ಇದ್ದಾಗಲೇ ಧನ್ವೀರ್ ನಟನೆಯ ವಾಮನ ತೆರೆಕಂಡಿತ್ತು. ಡೆವಿಲ್ ಸಿನಿಮಾದ ಶೂಟಿಂಗ್ ನಡುವೆ ವಾಮನ ರಿಲೀಸ್‌ಗೆ ಹಾಗೂ ಪ್ರಮೋಷನ್ಸ್‌ಗೆ ದರ್ಶನ್ ಸಾಥ್ ನೀಡಿದ್ರು. ಆದ್ರೆ ದಾಸ ಕೈ ಹಿಡಿದರೂ ಸಹ, ಪ್ರೇಕ್ಷಕರು ಕೈ ಹಿಡಿಯದೆ ವಾಮನ ಫ್ಲಾಪ್ ಆಯ್ತು. ಸದ್ಯ ಹಯಗ್ರೀವ ಅನ್ನೋ ಸಿನಿಮಾ ಮಾಡ್ತಿರೋ ಶೋಕ್ದಾರ್, ಅದಾದ ಬಳಿಕ ಬಂಪರ್ ಸಿನಿಮಾನ ಕೈಗೆತ್ತಿಕೊಳ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಇನ್ನು ದರ್ಶನ್-ಧನ್ವೀರ್ ಸ್ನೇಹ ಬಾಂಧವ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೈವ ಚಿತ್ರದ ಪ್ರಮೋಷನ್ಸ್ ಸೇರಿದಂತೆ ಧನ್ವೀರ್ ಎಲ್ಲಾ ಚಿತ್ರಗಳಿಗೂ ದಚ್ಚು ಇದ್ದೇ ಇರ್ತಿದ್ರು. ಇತ್ತ ಧನ್ವೀರ್ ತಮ್ಮ ಸಿನಿಮಾಗಳ ಶೂಟಿಂಗ್ ಬಿಟ್ರೆ ಉಳಿದೆಲ್ಲಾ ಸಮಯವನ್ನು ದರ್ಶನ್‌ಗಾಗಿಯೇ ಮೀಸಲಿಟ್ಟಿದ್ರು. ಅದ್ರಲ್ಲೂ ದರ್ಶನ್ ಬೇಲ್ ಪಡೆದು ಹೊರ ಬರೋಕೆ ಮುನ್ನ ಇಡೀ ತೂಗುದೀಪ ಕುಟುಂಬಕ್ಕೆ ನೈತಿಕ ಬೆಂಬಲದ ಜೊತೆ ಆತ್ಮಸ್ಥೈರ್ಯ ತುಂಬಿದ್ದು ಇದೇ ಧನ್ವೀರ್. ಅಲ್ಲದೆ ಬಳ್ಳಾರಿ ಜೈಲಿಂದ ರಾಮನೊಂದಿಗೆ ಲಕ್ಷ್ಮಣನಂತೆ, ಜೊತೆಗೇ ಇದ್ದು, ಬೆಂಗಳೂರಿಗೆ ಕರೆತಂದಿದ್ದೇ ಧನ್ವೀರ್. ಆಗ ಎಲ್ಲರೂ ದಚ್ಚು-ಧನ್ವೀರ್‌ನ ಕಂಡು ರಾಮ-ಲಕ್ಷ್ಮಣರಂತೆ ಎಷ್ಟು ಅನ್ಯೋನ್ಯವಾಗಿದ್ದಾರೆ ಅಂತೆಲ್ಲಾ ಮಾತಾಡಿಕೊಂಡಿದ್ದುಂಟು.
ಅದೇನೇ ಇರಲಿ, ದರ್ಶನ್ ಇಲ್ಲದೆ ಧನ್ವೀರ್ ಸೇರಿದಂತೆ ಆಪ್ತ ವಲಯಕ್ಕೆ ನೀರಿನಲ್ಲಿರೋ ಮೀನನ್ನು ಹೊರಕ್ಕೆ ಹಾಕಿದಂತಾಗಿದೆ. ಇನ್ನು 30ನೇ ವಸಂತಕ್ಕೆ ಕಾಲಿಟ್ಟಿರೋ ಧನ್ವೀರ್‌ಗೆ ಜನುಮದ ದಿನದ ಶುಭಾಶಯಗಳನ್ನು ಕೋರುತ್ತಾ, ಅವರ ಮುಂದಿನ ಪ್ರಾಜೆಕ್ಟ್ಸ್‌ಗೆ ಆಲ್ ದಿ ಬೆಸ್ಟ್ ಹೇಳೋಣ.