ಡೆವಿಲ್ ಡೆವಿಲ್ ಡೆವಿಲ್.. ಡೆವಿಲ್ ಆಟ ಶುರು ಅಗೋಕೆ ಇನ್ನು ಆರೇ ದಿನ ಬಾಕಿ. ಹೀಗಿರುವಾಗ ಚಿತ್ರದ ಪ್ರಮೋಷನ್ಸ್‌ಗಾಗಿ ಡಿಬಾಸ್ ದರ್ಶನ್ ಪೆರೋಲ್ ಮೇಲೆ ಹೊರಗೆ ಬರ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಅದಕ್ಕೀಗ ಸ್ವತಃ ಡೈರೆಕ್ಟರ್ ಮಿಲನ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದಿಂದ ದರ್ಶನ್ ಸೋದರಳಿಯ ಚಂದುನ ಕೈ ಬಿಡೋಕೆ ಕಾರಣ ಕೂಡ ರಿವೀಲ್ ಮಾಡಿದ್ದಾರೆ ಅದೇನು ಅಂತೀರಾ ಈ ಸ್ಟೋರಿ ನೋಡಿ.
ದರ್ಶನ್ ಒಂದು ವಾರದ ಮಟ್ಟಿಗೆ ಹೊರಗೆ ಬರ್ತಾರೆ. ಡೆವಿಲ್ ಸಿನಿಮಾದ ಪ್ರಮೋಷನ್ಸ್‌ನಲ್ಲಿ ಭಾಗಿ ಆಗ್ತಾರೆ. ಅದಕ್ಕಾಗಿ ಚಿತ್ರತಂಡ ಕೋರ್ಟ್‌ಗೆ ಮನವಿ ಪತ್ರ ಸಲ್ಲಿಸಿದೆ. ಪೆರೋಲ್ ಮೇಲೆ ನಮ್ ಬಾಸ್ ಬರ್ತಾರೆ ನೋಡ್ತಿರಿ ಅಂತೆಲ್ಲಾ ಕೆಲ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ವಾಸ್ತವ ಏನಪ್ಪಾಂದ್ರೆ ದರ್ಶನ್‌ನ ಪೆರೋಲ್ ಮೇಲೆ ಹೊರಕ್ಕೆ ತರೋಕೆ ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ.
ಪೆರೋಲ್ ಮೇಲೆ ದರ್ಶನ್ ಬರ್ತಿಲ್ಲ.. ಡೈರೆಕ್ಟರ್ ಸ್ಪಷ್ಟನೆ..!
ದಚ್ಚು ಅಳಿಯನನ್ನ ಡೆವಿಲ್ ಪಾತ್ರದಿಂದ ಹೊರಗಿಟ್ಟಿದ್ಯಾಕೆ..?
ಹೌದು.. ಡೆವಿಲ್ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕರಾದ ಮಿಲನ ಪ್ರಕಾಶ್ ಅವರೇ ಈ ಬಗ್ಗೆ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ದರ್ಶನ್‌ರನ್ನ ಸಿನಿಮಾ ಪ್ರಮೋಷನ್ಸ್‌ಗೆ ಅಂತ ಪೆರೋಲ್ ಮೇಲೆ ಕರೆತರುವ ಪ್ರಯತ್ನ ನಡೆದಿಲ್ಲ ಎಂದಿದ್ದಾರೆ.
ಅಂದಹಾಗೆ ವಿಚಾರಣಾಧೀನ ಕೈದಿಗಳಿಗೆ ಪೆರೋಲ್ ನೀಡಲ್ಲ ಅನ್ನೋದು ಗೊತ್ತಿರುವ ವಿಚಾರ. ಸದ್ಯ ದರ್ಶನ್ ಆರೋಪಿ ಅಷ್ಟೇ. ಅಪರಾಧಿ ಅಲ್ಲ. ಹಾಗಾಗಿ ಅವರು ಇನ್ನೂ ವಿಚಾರಣಾಧೀನ ಕೈದಿ. ಈ ನಿಟ್ಟಿನಲ್ಲಿ ಡೆವಿಲ್ ರಿಲೀಸ್ ಆಗಬಹುದು. ಆದ್ರೆ ದರ್ಶನ್ ರಿಲೀಸ್ ಆಗಲ್ಲ ಅನ್ನೋದು ಸ್ಪಷ್ಟ.
ಚಿತ್ರತಂಡದಿಂದ ಪೆರೋಲ್‌ಗೆ ಅಪ್ಲಿಕೇಷನ್ ಹಾಕಿಲ್ಲವಂತೆ
ವಿಚಾರಣಾಧೀನ ಕೈದಿಗೆ ಪೆರೋಲ್ ಅಪ್ಲೈ ಆಗಲ್ಲ.. ದಚ್ಚು ಬರಲ್ಲ
ಇನ್ನು ದರ್ಶನ್ ಸೋದರಳಿಯ ಚಂದು ಡೆವಿಲ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇಡೀ ಸಿನಿಮಾದ ಜರ್ನಿಯಲ್ಲಿ ಅವರಿದ್ದಾರೆ. ಆದ್ರೆ ಡೆವಿಲ್ ಚಿತ್ರದಲ್ಲಿ ಅವರೊಂದು ಮುಖ್ಯವಾದ ಪಾತ್ರದಲ್ಲಿ ನಟಿಸ್ತಾರೆ ಎನ್ನಲಾಗಿತ್ತು. ಅದ್ರಿಂದ ಉದ್ದೇಶಪೂರ್ವಕವಾಗಿಯೇ ಕೈ ಬಿಡಲಾಗಿದೆ ಅಂತ ಸ್ವತಃ ಡೈರೆಕ್ಟರ್ ಮಿಲನ ಪ್ರಕಾಶ್ ಅವರು ಹೇಳಿದ್ದಾರೆ.
ಯೆಸ್.. ಚಂದುನ ಹೀರೋ ಆಗಿ ಲಾಂಚ್ ಮಾಡೋಕೆ ದರ್ಶನ್ ಹಾಗೂ ದರ್ಶನ್ ಸಹೋದರ ದಿನಕರ್ ಪ್ಲ್ಯಾನ್ ಮಾಡಿದ್ದಾರೆ. ಅದೇ ಕಾರಣದಿಂದ ಕಾಟೇರದಲ್ಲಿ ನಟಿಸಿದ್ದ ಚಂದು, ಈ ಸಿನಿಮಾದಲ್ಲಿ ನಟಿಸಿಲ್ಲ. ಬಹುಶಃ ಮುಂದಿನ ವರ್ಷ ದಿನಕರ್ ತೂಗುದೀಪ ಡೈರೆಕ್ಟ್ ಮಾಡುವ ಚಿತ್ರದಲ್ಲಿ ಚಂದು ಹೀರೋ ಆಗಿ ಲಾಂಚ್ ಆಗಲಿದ್ದಾರೆ. ನಾಳೆ ಡೆವಿಲ್ ಟ್ರೈಲರ್ ಲಾಂಚ್ ಆಗ್ತಿದ್ದು, ಎಲ್ಲರ ಚಿತ್ತ ಟ್ರೈಲರ್‌ನತ್ತ ಮೂಡಿದೆ. ಡಿಸೆಂಬರ್ 11ಕ್ಕೆ ಡೆವಿಲ್ ದರ್ಶನ ಕೂಡ ಸಿಗಲಿದೆ.





