ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
2026 ದರ್ಶನ್ ಪಾಲಿಗೆ ಸಿಹಿನಾ ಕಹಿನಾ ? ವೈಯಕ್ತಿಕ ವಿಚಾರದಲ್ಲಿ ಆದಷ್ಟು ಬೇಗ ಜೈಲಿಂದ ಹೊರ ಬಂದ್ರೆಸಾಕು ಅಂತಿರುವಾಗಲೇ. ಸಿನಿ ಜೀವನದಲ್ಲಿ ಏನಾಗುತ್ತೋ ಅನ್ನೋ ಗೊಂದಲ ಅಭಿಮಾನಿಗಳಲ್ಲಿದೆ. ಫ್ಯಾನ್ಸ್ ಆಶೀರ್ವಾದದಿಂದ ಡೆವಿಲ್ ಸೂಪರ್ ಹಿಟ್ ಆಯಿತು.. ಆದ್ರೆ ದರ್ಶನ್ ರಿಲೀಸ್ ಆದ ತಕ್ಷಣ ಯಾವ ಸಿನಿಮಾ ಒಪ್ಪಿಕೊಳ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಸಣ್ಣ ಕ್ಲೂ ಸಿಕ್ಕಿದೆ.
ADVERTISEMENT
ADVERTISEMENT
ಕಲೆಯನ್ನ ನಂಬಿ ಬದುಕು ಕಟ್ಟಿಕೊಂಡ ದರ್ಶನ್ ಈಗ ಕಂಬಿ ಹಿಂದೆ ನಿಂತಿದ್ದಾರೆ. ದಾರಿ ಕಾಣದಂತೆ ಚಡಪಡಿಸ್ತಾ ಇದ್ದಾರೆ. ದರ್ಶನ್ ಜೈಲಿಂದ ಈ ವರ್ಷವಾದರೂ ಹೊರ ಕರೆತರೋಕೆ ಪತ್ನಿ ವಿಜಯಲಕ್ಷ್ಮಿ ಶತಾಯ ಗತಾಯ ಪ್ರಯತ್ನ ಮಾಡೋದರ ಜೊತೆಗೆ ಟೆಂಪಲ್ ರನ್ ಮಾಡ್ತಾ ದೇವರ ಹರಕೆ ಕಟ್ಟಿಕೊಳ್ತಾ ಎಲ್ಲದಕ್ಕೂ ಪರಿಹಾರ ನೀಡು ದೇವರೆ ಅಂತಿದ್ದಾರೆ. ಈ ನಡುವೆ ದರ್ಶನ್ ಸಿನಿ ಕರಿಯರ್ ಬಗ್ಗೆ ಫ್ಯಾನ್ಸ್ ಚಿಂತಿಸುತ್ತಿದ್ದಾರೆ.

