ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಮ್ಯಾಜಿಕ್ ರಿಪೀಟ್ ಆಗೋ ಸಮಯ ಬಂದಿದೆ. 80-90ರ ದಶಕದಲ್ಲಿ ಕನ್ನಡ ಸಿನಿ ಲೋಕವನ್ನು ತಮ್ಮದೇ ಸ್ಟೈಲ್‌ನಲ್ಲಿ ಆಳಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸಂಗೀತ ಬ್ರಹ್ಮ ಹಂಸಲೇಖ ಜೋಡಿ ಇದೀಗ 40 ವರ್ಷಗಳ ಸಂಭ್ರಮಕ್ಕೆ ವೇದಿಕೆಯಲ್ಲಿ ಒಂದಾಗ್ತಿದ್ದಾರೆ. ‘ಕ್ರೇಜಿ ಬ್ರಹ್ಮ’ ಅನ್ನೋ ಈ ಗ್ರ್ಯಾಂಡ್ ಇವೆಂಟ್…ನಲ್ಲಿ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಾಸ್ಟಾಲ್ಜಿಯಾ ಡೋಸ್ ಕೊಡೋಕೆ ಸಿದ್ಧವಾಗಿದೆ. ಹಾಗಾದ್ರೆ ಇವೆಂಟ್ ಯಾವಾಗ.. ಸ್ಪೆಷಲಿಟಿ ಏನು..? ಹೇಳ್ತಿವಿ ಈ ಸ್ಟೋರಿ ನೋಡಿ.
- ರವಿಮಾಮನ ಬರ್ತ್ ಡೇಗೆ ಕ್ರೇಜಿ-ಬ್ರಹ್ಮ ಗ್ರೇಟೆಸ್ಟ್ ಟ್ರಿಬ್ಯೂಟ್..!
- ಮತ್ತೆ ಒಂದೇ ವೇದಿಕೆಯಲ್ಲಿ ಕ್ರೇಜಿ ಸ್ಟಾರ್ & ಮ್ಯೂಸಿಕ್ ಬ್ರಹ್ಮ
- ಹಳೆಯ ಹಿಟ್ಸ್…ಸ್ಯಾಂಡಲ್‌ವುಡ್ ಗೋಲ್ಡನ್ ಜರ್ನಿ ರಿವೈಂಡ್
- ಕ್ರೇಜಿ ಬ್ರಹ್ಮ…ಮೇ 30ರಂದು 6 ಗಂಟೆಗಳ ಲೈವ್ ಮ್ಯೂಸಿಕ್ ಫೆಸ್ಟ್
ಒಂದು ಕಾಲದಲ್ಲಿ ರವಿಚಂದ್ರನ್ – ಹಂಸಲೇಖ ಹೆಸರೇ ಸಾಕಿತ್ತು… ಸಿನಿಮಾ ಹಿಟ್ ಅನ್ನೋದು ಗ್ಯಾರಂಟಿ. ರವಿಚಂದ್ರನ್ ಡೈರೆಕ್ಷನ್ ಜೊತೆಗೆ ಹಂಸಲೇಖ ಮ್ಯೂಸಿಕ್ ಅಂದ್ರೆ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್ ಫಿಕ್ಸ್ ಆಗ್ತಿತ್ತು. ‘ಪ್ರೇಮಲೋಕ’, ‘ರಣಧೀರ’, ‘ಯುಗಪುರುಷ’ ಹೀಗೆ ಸೂಪರ್ ಹಿಟ್ ಸಿನಿಮಾಗಳ ಜೊತೆ ಓ ಪ್ರೇಮವೇ, ನಿನ್ನೇ ನಿನ್ನೇ, ಯುಗ ಯುಗಾದಿ ಎವರ್‌ಗ್ರೀನ್ ಹಾಡುಗಳು ಇಂದಿಗೂ ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಕೇಳಿಸ್ತಲೇ ಇವೆ. ಇಷ್ಟೊಂದು ವರ್ಷಗಳಾದರೂ ಈ ಜೋಡಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.
ಇದೀಗ ಅದೇ ಮ್ಯಾಜಿಕ್‌ನ್ನು ಮತ್ತೆ ಲೈವ್‌ನಲ್ಲಿ ನೋಡೋ ಅವಕಾಶ ಸಂಗೀತ ಪ್ರಿಯರಿಗೆ ಸಿಗ್ತಿದೆ. ಎಸ್, ಮೇ 30ರಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬ. ಅಂದು ಸಂಜೆ 6ರಿಂದ ರಾತ್ರಿ 12ರವರೆಗೆ ಕೆಂಗೇರಿಯ ಜೆಕೆ ಗ್ರಾಂಡ್ ಅರೇನಾದಲ್ಲಿ ‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮ ನಡೆಯಲಿದೆ. “Where Music Meets Magic” ಅನ್ನೋ ಟ್ಯಾಗ್‌ಲೈನ್ ಜೊತೆ… ಈ ಈವೆಂಟ್‌ನಲ್ಲಿ ರವಿಚಂದ್ರನ್-ಹಂಸಲೇಖ ಹಿಟ್ ಹಾಡುಗಳನ್ನ ರೀಕ್ರಿಯೇಟ್ ಮಾಡ್ತಾರೆ. ಸೌತ್ ಇಂಡಿಯಾದ ಸ್ಟಾರ್ ಕಲಾವಿದರು, ಟಾಪ್ ಸಿಂಗರ್ಸ್, ಹಾಗೂ ರವಿಚಂದ್ರನ್ ಜೊತೆ ನಟಿಸಿದ 25ಕ್ಕೂ ಹೆಚ್ಚು ನಟಿಯರು ಕೂಡ ಭಾಗವಹಿಸೋದು ಈ ಕಾರ್ಯಕ್ರಮದ ಹೈಲೈಟ್.
ಈ ಗ್ರ್ಯಾಂಡ್ ಈವೆಂಟ್ ಬಗ್ಗೆ ಮಾಹಿತಿ ನೀಡೋಕೆ ಕಿಂಗ್ಸ್ ಕ್ಲಬ್‌ನಲ್ಲಿ ಪ್ರೆಸ್ ಮೀಟ್ ಕೂಡ ಆಯೋಜಿಸಲಾಗಿತ್ತು. ಆಯೋಜಕ ವಿನಯ್ ಹೇಳೋದ್ರ ಪ್ರಕಾರ “15 ವರ್ಷಗಳಾದರೂ ಹೊಸ ಹಾಡುಗಳಿಗಿಂತ ಈ ಜೋಡಿಯ ಹಾಡುಗಳೇ ಹೆಚ್ಚು ಕೇಳಿಸುತ್ತಿವೆ. ಆ ಕಾಲದ ಮ್ಯಾಜಿಕ್ ಇಂದಿನ ಜನರಿಗೆ ತೋರಿಸಬೇಕು ಅನ್ನೋದೇ ಈ ಕಾರ್ಯಕ್ರಮದ ಉದ್ದೇಶ” ಅಂದ್ರು. ಸುಮಾರು 10 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದ್ದು ಚಿರಂಜೀವಿ, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ಸ್ಟಾರ್ಸ್ ಕೂಡ ಭಾಗವಹಿಸುವ ಸಾಧ್ಯತೆ ಇದೆ ಎಂದರು.
ಇನ್ನೊಂದು ಕಡೆ ರವಿಚಂದ್ರನ್ ಮಾತುಗಳು ಫ್ಯಾನ್ಸ್‌ಗೆ ಎಮೋಶನಲ್ ಟಚ್ ಕೊಟ್ಟಿವೆ. “ನನ್ನನ್ನು ಕ್ರೇಜಿ ಸ್ಟಾರ್ ಮಾಡಿದ್ದು ಹಂಸಲೇಖ ನಾವು ಸಿನಿಮಾ ಮಾಡದಿರಬಹುದು, ಆದರೆ ನಮ್ಮ ಸ್ನೇಹ ಎಂದಿಗೂ ಕಡಿಮೆಯಾಗಿಲ್ಲ ಅಂದ್ರು. ಹಂಸಲೇಖ ಕೂಡ ನಾವು ಸಿನಿಮಾದಲ್ಲೇ ಇರಬೇಕೆಂದು ಇಲ್ಲ… ವೇದಿಕೆಯಲ್ಲಿ ಒಂದಾಗಿ ಅಭಿಮಾನಿಗಳಿಗೆ ನೆನಪುಗಳ ಹಬ್ಬ ಕೊಡ್ತೇವೆ ಅಂತ ಹೇಳಿದ್ದಾರೆ. ಈ ಮಾತುಗಳೇ ಈಗ ‘ಕ್ರೇಜಿ ಬ್ರಹ್ಮ’ ಈವೆಂಟ್‌ಗೆ ಇನ್ನಷ್ಟು ಸ್ಪೆಷಲ್ ಟಚ್ ನೀಡಿವೆ.
ಒಟ್ಟಿನಲ್ಲಿ ಹಂಸಲೇಖ – ರವಿಚಂದ್ರನ್ ಮತ್ತೆ ಯಾವಾಗ ಒಂದಾಗಿ ಕೆಲಸ ಮಾಡ್ತಾರೆ ಎಂದು ಕಾತುರದಿಂದ ಕಾಯ್ತಿದ್ದ ಕನ್ನಡ ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್. ಇದು ಕೇವಲ ಒಂದು ಕಾರ್ಯಕ್ರಮ ಅಲ್ಲ ಕನ್ನಡ ಸಿನಿ ಇತಿಹಾಸದ ಗೋಲ್ಡನ್ ಜರ್ನಿಯ ಸಂಭ್ರಮ ಆಗಲಿದೆ. 40 ವರ್ಷಗಳ ಮ್ಯಾಜಿಕ್ ಒಂದೇ ವೇದಿಕೆಯಲ್ಲಿ ಮತ್ತೆ ಜೀವಂತವಾಗೋ ಕ್ಷಣಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಮೇ 30 ‘ಕ್ರೇಜಿ ಬ್ರಹ್ಮ’ ಇದು ನಾಸ್ಟಾಲ್ಜಿಯಾ ಮಾತ್ರ ಅಲ್ಲ ಇದು ಒಂದು ಎಮೋಶನ್.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





