ಸ್ಯಾಂಡಲ್ವುಡ್ನಲ್ಲಿ ಹೊಸತನ ಬರಬೇಕು..ಹೊಸಬರು ಬೆರಬೇಕು ಅನ್ನೋ ಮಾತಿದೆ.. ಆ ಮಾತಿಗೆ ತಕ್ಕಂತೆ ಈಗ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ ಯುವ ನಟ ಅಶ್ವಿನ್. ಈ ಯಂಗ್ಸ್ಟರ್ಗೆ ಸಾಥ್ ಕೊಟ್ಟಿದ್ದು ಸ್ಯಾಂಡಲ್ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಟೈಟಲ್ ಟೀಸರ್ ಲಾಂಚ್ ಮಾಡುವ ಮೂಲಕ ಅಶ್ವಿನ್ಗೆ ಆಲ್ ದಿ ಬೆಸ್ಟ್ ಹೇಳಿದ್ರು ಕಿಚ್ಚ. ಹಾಗಾದ್ರೆ ಚಿಕ್ಕನಾಯನಹಳ್ಳಿಯಲ್ಲಿ ನಡೆದ ಗ್ರ್ಯಾಂಡ್ ಇವೆಂಟ್ ಹೇಗಿತ್ತು..? ‘ಸೆಲೆಬ್ರಿಟಿ’ ಟೈಟಲ್ ಟೀಸರ್ ಹೇಗಿದೆ..? ಇಷ್ಟಕ್ಕೂ ಅಶ್ವಿನ್ ಯಾರು..? ಹೇಳ್ತೀವಿ ನೋಡಿ…
- ಸ್ಯಾಂಡಲ್ವುಡ್ಗೆ ಬಂದ ನಯಾ ‘ಸೆಲೆಬ್ರಿಟಿ’ಗೆ ಕಿಚ್ಚ ಸಾಥ್
- ಖ್ಯಾತ ರಾಜಕಾರಣಿ ಸಾ.ರಾ. ಮಹೇಶ್ ಈಗ ನಿರ್ಮಾಪಕ..!
- ಡ್ಯಾನ್ಸ್ಗೂ ಸೈ.. ಫೈಟ್ಗೂ ಜೈ.. ರೊಮ್ಯಾನ್ಸ್ಗೂ ಓಕೆ ಅಶ್ವಿನ್
- ಚಿಕ್ಕನಾಯಕನಹಳ್ಳಿಯಲ್ಲಿ ಗ್ರ್ಯಾಂಡ್ ಟೀಸರ್ ಲಾಂಚ್ ಇವೆಂಟ್
ಯೆಸ್.. ಚಿತ್ರರಂಗಕ್ಕೆ ಯುವ ನಟನ ಎಂಟ್ರಿ ಆಗಿದೆ.. ಅವರ ಹೆಸರೇ ಅಶ್ವಿನ್. ತುಮಕೂರು ಜಿಲ್ಲೆ,ಚಿಕ್ಕನಾಯಕನಹಳ್ಳಿಯ ಪ್ರತಿಭೆಯಾದ ಅಶ್ವಿನ್ ಈಗ ಸಿನಿಲೋಕಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಅದ್ಧೂರಿ ಈವೆಂಟ್ ಮೂಲಕ ಟೈಟಲ್ ಲಾಂಚ್ ಮಾಡಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಯುವ ನಟ ಅಶ್ವಿನ್ಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಷ್ಟೇ ಅಲ್ಲದೇ ಚಿಕ್ಕನಾಯಕನಹಳ್ಳಿಯ ಈವೆಂಟ್ಗೆ ಬಂದು ಅಶ್ವಿನ್ ಆ್ಯಂಡ್ ಇಡೀ ತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ.. ಕಿಚ್ಚನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು ಈವೆಂಟ್ಗೆ ಮತ್ತಷ್ಟು ಕಳೆತಂದಿತ್ತು.
ಚಿತ್ರದ ಹೆಸರೇ ‘ಸೆಲೆಬ್ರೆಟಿ’.. ಟೈಟಲ್ ಟೀಸರ್ ಅದ್ಭುತವಾಗಿ ಮೂಡಿಬಂದಿದೆ. ಮೇಕಿಂಗ್..ಸಿನಿಮಾಟೋಗ್ರಫಿ ಅದ್ಭುತವಾಗಿ ಬಂದಿದೆ.. ಈ ಟೀಸರ್ ಮೂಲಕ ಯುವ ನಟ ಅಶ್ವಿನ್ ಕನ್ನಡ ಪ್ರೇಕ್ಷಕರಿಗೆ ಒಂದು ಪ್ರಾಮಿಸ್ ಮಾಡಿದ್ದಾರೆ. ಅದೇನಂದ್ರೆ ನಾನು ಎಲ್ಲಾ ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದೇನೆ ಅಂತ. ಹೌದು ರಿಲೀಸ್ ಆಗಿರೋ ಟೀಸರ್ನಲ್ಲಿ ಎನರ್ಜಿಟಿಕ್ ಡ್ಯಾನ್ಸ್ ಇದೆ.. ಜಬರ್ದಸ್ತ್ ಫೈಟ್ಸ್ ಇದೆ. ರೊಮ್ಯಾಂಟಿಕ್ ಮೂಡ್ ಇದೆ..ಜಿಮ್ನ್ಯಾಸ್ಟಿಕ್ ಇದೆ. ಸೋ ಈ ಮೂಲಕ ನಾನು ಯಾವುದೇ ಪಾತ್ರ ಆದ್ರೂ ಮಾಡ್ತೀನಿ ಅಂತ ಈ ಟೀಸರ್ ಮೂಲಕ ತೋರಿಸಿದ್ದಾರೆ. ಚಿತ್ರರಂಗಕ್ಕೆ ಬರಬೇಕು ಅಂದ್ರೆ ಎಲ್ಲಾ ಕಲೆಗಳು ಗೊತ್ತಿರಬೇಕು ಅಂತ ಅರಿಯ ಅಶ್ವಿನ್ ಎಲ್ಲಾ ತಯಾರಿ ಮಾಡಿಕೊಂಡೇ ಚಿತ್ರರಂಗಕ್ಕೆ ಪವರ್ ಪ್ಯಾಕ್ಡ್ ಆಗಿ ಎಂಟ್ರಿಕೊಟ್ಟಿದ್ದಾರೆ.
ಎಸ್..ಟೈಟಲ್ ಟೀಸರ್ ಲಾಂಚ್ ಮಾಡಿದ ಕಿಚ್ಚ ಮಾತ್ನಾಡಿ.. ಟೀಸರ್ ಅದ್ಭುತವಾಗಿ ಮೂಡಿಬಂದಿದೆ..ಅದ್ಭುತವಾಗಿ ಡ್ಯಾನ್ಸ್ ಕೂಡ ಮಾಡಿದ್ದೀರಿ.. ಒಳ್ಳೇದಾಗಲಿ.. ಸಾ ರಾ ಮಹೇಶ್ ಅವರಿಗೆ ಒಳ್ಳೇದಾಗಲಿ.. ಇಡೀ ಚಿತ್ರರಂಗಕ್ಕೆ ಒಳ್ಳೆದಾಗಲಿ..ಚಿಕ್ಕನಾಯಕನಹಳ್ಳಿಯ ನನ್ನ ಎಲ್ಲಾ ಅಭಿಮಾನಿಗಳು ಅಶ್ವಿನ್ಗೆ ಸಪೋರ್ಟ್ ಮಾಡಿ.. ಅವರ ಸಿನಿಮಾ ಸೂಪರ್ರ ಸಕ್ಸಸ್ ಆಗಲಿ ಅಂತ ಆಶೀರ್ವಾದ ಮಾಡಿದ್ರು.
ಇದೇ ವೇಳೆ ಯುವ ನಟ ಅಶ್ವಿನ್ ಮಾತ್ನಾಡಿ ಕಿಚ್ಚ ಸುದೀಪ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ರು..ಇದೇ ವೇಳೆ ಚಿಕ್ಕನಾಯಕಹಳ್ಳಿಯ ಎಂ ಎಲ್ ಎ ಟಿ ಸುರೇಶ್ ಬಾಬು, ನಿರ್ಮಾಪಕ ಸಾರಾ ಮಹೇಶ್, ನಿರ್ದೇಶಕರಾದ ಕಿರಣ್ ವಿಶ್ವನಾಥ್ ಅವರು ಕೂಡ ಮಾತ್ನಾಡಿದ್ರು.. ಟಿ ಸುರೇಶ್ ಅವರೇ ಸೆಲೆಬ್ರೆಟಿ ಸಿನಿಮಾವನ್ನು ಪ್ರೆಸೆಂಟ್ ಮಾಡ್ತಾಯಿರೋದು ಮತ್ತೊಂದು ವಿಶೇಷ..ಸದ್ಯಕ್ಕೆ ಟೈಟಲ್ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಸಾಕಷ್ಟು ಅಪ್ಡೇಟ್ ಕೊಡಲಿದೆ.
ಎನಿವೇ..ಸ್ಯಾಂಡಲ್ವುಡ್ಗೆ ಯಂಗ್ ಹೀರೋ ಅಶ್ವಿನ್ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದು ಟೈಟಲ್ ಟೀಸರ್ ಮೂಲಕ ಭರವಸೆ ಮೂಡಿಸಿದ್ದಾರೆ. ಡ್ಯಾನ್ಸ್ ಫೈಟ್ಸ್ ಮೂಲಕ ಅಪ್ಪು ಅವರನ್ನು ನೆನಪಿಸಿದ್ರೆ, ಆಟಿಟ್ಯೂಡ್ ಮೂಲಕ ಕಿಚ್ಚನ ನೆನಪು ಮಾಡಿದ್ದಾರೆ..ಒಟ್ಟಾರೆ ಒಬ್ಬ ಹೀರೋಗೆ ಇರಬೇಕಾದ ಎಲ್ಲಾ ಲಕ್ಷಣಗಳು ಅಶ್ವಿನ್ ಅವರಲ್ಲಿ ಇದೆ ಅನ್ನೋದನ್ನ ತೋರಿಸಿದ್ದಾರೆ..ಆಲ್ ದಿ ಬೆಸ್ಟ್ ಅಶ್ವಿನ್.. ಸೆಲೆಬ್ರೆಟಿ ಸಿನಿಮಾ ಸೂಪರ್ ಹಿಟ್ ಆಗಿ ನೀವೂ ಕೂಡ ಸಕ್ಸಸ್ಫುಲ್ ಸೆಲೆಬ್ರೆಟಿ ಆಗಲಿ ಎಂಬುದೇ ನಮ್ಮ ಆಶಯ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





