ಸ್ಯಾಂಡಲ್​ವುಡ್​ಗೆ ಬಂದ ನಟ ಅಶ್ವಿನ್..‘ಸೆಲೆಬ್ರಿಟಿ’ಗೆ ಕಿಚ್ಚ ಸುದೀಪ್ ಸಾಥ್

ಡ್ಯಾನ್ಸ್​ಗೂ ಸೈ.. ಫೈಟ್​ಗೂ ಜೈ.. ರೊಮ್ಯಾನ್ಸ್​ಗೂ ಓಕೆ ಅಶ್ವಿನ್

Untitled design 2026 03 01T204044.459

ಸ್ಯಾಂಡಲ್​ವುಡ್​ನಲ್ಲಿ ಹೊಸತನ ಬರಬೇಕು..ಹೊಸಬರು ಬೆರಬೇಕು ಅನ್ನೋ ಮಾತಿದೆ.. ಆ ಮಾತಿಗೆ ತಕ್ಕಂತೆ ಈಗ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ ಯುವ ನಟ ಅಶ್ವಿನ್​. ಈ ಯಂಗ್​ಸ್ಟರ್‌ಗೆ​ ಸಾಥ್ ಕೊಟ್ಟಿದ್ದು ಸ್ಯಾಂಡಲ್​ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​. ಟೈಟಲ್​ ಟೀಸರ್ ಲಾಂಚ್ ಮಾಡುವ ಮೂಲಕ ಅಶ್ವಿನ್​ಗೆ ಆಲ್ ದಿ ಬೆಸ್ಟ್​ ಹೇಳಿದ್ರು ಕಿಚ್ಚ. ಹಾಗಾದ್ರೆ ಚಿಕ್ಕನಾಯನಹಳ್ಳಿಯಲ್ಲಿ ನಡೆದ ಗ್ರ್ಯಾಂಡ್ ಇವೆಂಟ್​ ಹೇಗಿತ್ತು..? ‘ಸೆಲೆಬ್ರಿಟಿ’ ಟೈಟಲ್ ಟೀಸರ್ ಹೇಗಿದೆ..? ಇಷ್ಟಕ್ಕೂ ಅಶ್ವಿನ್ ಯಾರು..? ಹೇಳ್ತೀವಿ ನೋಡಿ…

ಯೆಸ್​​.. ಚಿತ್ರರಂಗಕ್ಕೆ ಯುವ ನಟನ ಎಂಟ್ರಿ ಆಗಿದೆ.. ಅವರ ಹೆಸರೇ ಅಶ್ವಿನ್​. ತುಮಕೂರು ಜಿಲ್ಲೆ,ಚಿಕ್ಕನಾಯಕನಹಳ್ಳಿಯ ಪ್ರತಿಭೆಯಾದ ಅಶ್ವಿನ್​ ಈಗ ಸಿನಿಲೋಕಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಅದ್ಧೂರಿ ಈವೆಂಟ್​ ಮೂಲಕ ಟೈಟಲ್ ಲಾಂಚ್ ಮಾಡಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಯುವ ನಟ ಅಶ್ವಿನ್​ಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಷ್ಟೇ ಅಲ್ಲದೇ ಚಿಕ್ಕನಾಯಕನಹಳ್ಳಿಯ ಈವೆಂಟ್​ಗೆ ಬಂದು ಅಶ್ವಿನ್ ಆ್ಯಂಡ್​ ಇಡೀ ತಂಡಕ್ಕೆ ಬೆಸ್ಟ್ ವಿಷಸ್​ ತಿಳಿಸಿದ್ದಾರೆ.. ಕಿಚ್ಚನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು ಈವೆಂಟ್​ಗೆ ಮತ್ತಷ್ಟು ಕಳೆತಂದಿತ್ತು.

ಚಿತ್ರದ ಹೆಸರೇ ‘ಸೆಲೆಬ್ರೆಟಿ’.. ಟೈಟಲ್ ಟೀಸರ್ ಅದ್ಭುತವಾಗಿ ಮೂಡಿಬಂದಿದೆ. ಮೇಕಿಂಗ್..ಸಿನಿಮಾಟೋಗ್ರಫಿ ಅದ್ಭುತವಾಗಿ ಬಂದಿದೆ.. ಈ ಟೀಸರ್ ಮೂಲಕ ಯುವ ನಟ ಅಶ್ವಿನ್​ ಕನ್ನಡ ಪ್ರೇಕ್ಷಕರಿಗೆ ಒಂದು ಪ್ರಾಮಿಸ್ ಮಾಡಿದ್ದಾರೆ. ಅದೇನಂದ್ರೆ ನಾನು ಎಲ್ಲಾ ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದೇನೆ ಅಂತ. ಹೌದು ರಿಲೀಸ್ ಆಗಿರೋ ಟೀಸರ್​ನಲ್ಲಿ ಎನರ್ಜಿಟಿಕ್ ಡ್ಯಾನ್ಸ್​ ಇದೆ.. ಜಬರ್ದಸ್ತ್ ಫೈಟ್ಸ್​ ಇದೆ. ರೊಮ್ಯಾಂಟಿಕ್​ ಮೂಡ್​ ಇದೆ..ಜಿಮ್ನ್ಯಾಸ್ಟಿಕ್ ಇದೆ. ಸೋ ಈ ಮೂಲಕ ನಾನು ಯಾವುದೇ ಪಾತ್ರ ಆದ್ರೂ ಮಾಡ್ತೀನಿ ಅಂತ ಈ ಟೀಸರ್ ಮೂಲಕ ತೋರಿಸಿದ್ದಾರೆ. ಚಿತ್ರರಂಗಕ್ಕೆ ಬರಬೇಕು ಅಂದ್ರೆ ಎಲ್ಲಾ ಕಲೆಗಳು ಗೊತ್ತಿರಬೇಕು ಅಂತ ಅರಿಯ ಅಶ್ವಿನ್​ ಎಲ್ಲಾ ತಯಾರಿ ಮಾಡಿಕೊಂಡೇ ಚಿತ್ರರಂಗಕ್ಕೆ ಪವರ್​ ಪ್ಯಾಕ್ಡ್​ ಆಗಿ ಎಂಟ್ರಿಕೊಟ್ಟಿದ್ದಾರೆ.

ಎಸ್​..ಟೈಟಲ್ ಟೀಸರ್ ಲಾಂಚ್ ಮಾಡಿದ ಕಿಚ್ಚ ಮಾತ್ನಾಡಿ.. ಟೀಸರ್ ಅದ್ಭುತವಾಗಿ ಮೂಡಿಬಂದಿದೆ..ಅದ್ಭುತವಾಗಿ ಡ್ಯಾನ್ಸ್ ಕೂಡ ಮಾಡಿದ್ದೀರಿ..​ ಒಳ್ಳೇದಾಗಲಿ.. ಸಾ ರಾ ಮಹೇಶ್ ಅವರಿಗೆ ಒಳ್ಳೇದಾಗಲಿ.. ಇಡೀ ಚಿತ್ರರಂಗಕ್ಕೆ ಒಳ್ಳೆದಾಗಲಿ..ಚಿಕ್ಕನಾಯಕನಹಳ್ಳಿಯ ನನ್ನ ಎಲ್ಲಾ ಅಭಿಮಾನಿಗಳು ಅಶ್ವಿನ್​ಗೆ ಸಪೋರ್ಟ್​ ಮಾಡಿ.. ಅವರ ಸಿನಿಮಾ ಸೂಪರ್ರ ಸಕ್ಸಸ್ ಆಗಲಿ ಅಂತ ಆಶೀರ್ವಾದ ಮಾಡಿದ್ರು.

ಇದೇ ವೇಳೆ ಯುವ ನಟ ಅಶ್ವಿನ್ ಮಾತ್ನಾಡಿ ಕಿಚ್ಚ ಸುದೀಪ್​ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ರು..ಇದೇ ವೇಳೆ  ಚಿಕ್ಕನಾಯಕಹಳ್ಳಿಯ ಎಂ ಎಲ್​ ಎ ಟಿ ಸುರೇಶ್​ ಬಾಬು, ನಿರ್ಮಾಪಕ ಸಾರಾ ಮಹೇಶ್​, ನಿರ್ದೇಶಕರಾದ ಕಿರಣ್ ವಿಶ್ವನಾಥ್​ ಅವರು ಕೂಡ ಮಾತ್ನಾಡಿದ್ರು.. ಟಿ ಸುರೇಶ್​ ಅವರೇ ಸೆಲೆಬ್ರೆಟಿ ಸಿನಿಮಾವನ್ನು ಪ್ರೆಸೆಂಟ್ ಮಾಡ್ತಾಯಿರೋದು ಮತ್ತೊಂದು ವಿಶೇಷ..ಸದ್ಯಕ್ಕೆ ಟೈಟಲ್ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಸಾಕಷ್ಟು ಅಪ್​ಡೇಟ್​ ಕೊಡಲಿದೆ.

ಎನಿವೇ..ಸ್ಯಾಂಡಲ್​ವುಡ್​ಗೆ ಯಂಗ್ ಹೀರೋ ಅಶ್ವಿನ್​ ಗ್ರ್ಯಾಂಡ್​​ ಎಂಟ್ರಿಕೊಟ್ಟಿದ್ದು ಟೈಟಲ್ ಟೀಸರ್​ ಮೂಲಕ ಭರವಸೆ ಮೂಡಿಸಿದ್ದಾರೆ. ಡ್ಯಾನ್ಸ್​ ಫೈಟ್ಸ್​ ಮೂಲಕ ಅಪ್ಪು ಅವರನ್ನು ನೆನಪಿಸಿದ್ರೆ, ಆಟಿಟ್ಯೂಡ್​ ಮೂಲಕ ಕಿಚ್ಚನ ನೆನಪು ಮಾಡಿದ್ದಾರೆ..ಒಟ್ಟಾರೆ ಒಬ್ಬ ಹೀರೋಗೆ ಇರಬೇಕಾದ ಎಲ್ಲಾ ಲಕ್ಷಣಗಳು ಅಶ್ವಿನ್​ ಅವರಲ್ಲಿ ಇದೆ ಅನ್ನೋದನ್ನ ತೋರಿಸಿದ್ದಾರೆ..ಆಲ್ ದಿ ಬೆಸ್ಟ್​ ಅಶ್ವಿನ್​.. ಸೆಲೆಬ್ರೆಟಿ ಸಿನಿಮಾ ಸೂಪರ್ ಹಿಟ್ ಆಗಿ ನೀವೂ ಕೂಡ ಸಕ್ಸಸ್​ಫುಲ್ ಸೆಲೆಬ್ರೆಟಿ ಆಗಲಿ ಎಂಬುದೇ ನಮ್ಮ ಆಶಯ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version