ಸಲ್ಮಾನ್ ಖಾನ್ ಹೊಸ ಅಸ್ತ್ರ..‘ಕರ್ಣ’ನಾಗ್ತಾರಾ ಭಾಯಿ‌ಜಾನ್?

Web Photo Editor (50)

ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್‌ಗೆ ಈಗ ಅರ್ಜೆಂಟಾಗಿ ಒಂದು ಬಿಗ್ ಹಿಟ್ ಬೇಕೇ ಬೇಕಾಗಿದೆ. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರೋ ಸಲ್ಲು ಮಿಯಾ, ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟವನ್ನು ಮರಳಿ ಪಡೆಯಲು ಭೀಕರ ಪ್ಲಾನ್ ಮಾಡ್ತಿದ್ದಾರೆ. ಇಷ್ಟು ದಿನ ಆಕ್ಷನ್ ಅವತಾರದಲ್ಲೇ ಅಬ್ಬರಿಸ್ತಿದ್ದ ಸಲ್ಲು, ಈಗ ಮೊದಲ ಬಾರಿಗೆ ಪೌರಾಣಿಕ ಪಾತ್ರಕ್ಕೆ ಕೈ ಹಾಕಿದ್ದಾರೆ. ಹೌದು, ಮಹಾಭಾರತದ ಶೂರ ‘ಕರ್ಣ’ನಾಗಿ ಸಲ್ಲು ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಬಿ-ಟೌನ್‌ನಲ್ಲಿ ಜಗಜಗಿಸ್ತಿದೆ. ಹಾಗಾದ್ರೆ ಪ್ರಭಾಸ್‌ಗೆ ಟಕ್ಕರ್ ಕೊಡೋಕೆ ಸಲ್ಲು ರೆಡಿಯಾಗ್ತಿದ್ದಾರಾ?

ಸಲ್ಮಾನ್ ಖಾನ್ ಹೊಸ ಅಸ್ತ್ರ..‘ಕರ್ಣ’ನಾಗ್ತಾರಾ ಭಾಯಿ‌ಜಾನ್..?

ಸಲ್ಲುಗೆ ಸೂಟ್ ಆಗುತ್ತಾ ಪೌರಾಣಿಕ ಕ್ಯಾರೆಕ್ಟರ್..!?

ಪ್ರಭಾಸ್ ಬೆಂಚ್‌ಮಾರ್ಕ್ ಬ್ರೇಕ್ ಮಾಡ್ತಾರಾ ಸಲ್ಲು..?

ಭಾಯಿಜಾನ್‌ನ ಬಿಗ್‌ಗೇಸ್ಟ್ ಟ್ರಾನ್ಸ್‌ಫಾರ್ಮೇಷನ್..!

ಬಾಲಿವುಡ್‌ನ ಗಾಡ್‌ಫಾದರ್, ಕಲೆಕ್ಷನ್ ಕಿಂಗ್ ಸಲ್ಮಾನ್ ಖಾನ್ ಮಾರ್ಕೆಟ್ ಸದ್ಯಕ್ಕೆ ಕೊಂಚ ಡಲ್ ಹೊಡೆದಿದೆ ಅನ್ನೋದು ಕಹಿ ಸತ್ಯ. ಬ್ಯಾಕ್ ಟು ಬ್ಯಾಕ್ ಫ್ಲಾಪ್‌ಗಳಿಂದ ಕಂಗೆಟ್ಟಿರೋ ಭಾಯ್ಜಾನ್‌ಗೆ ಈಗ ಒಂದು ಬ್ರೇಕಿಂಗ್ ಸಕ್ಸಸ್‌ನ ಅನಿವಾರ್ಯತೆ ಎದುರಾಗಿದೆ. ಇದಕ್ಕಾಗಿಯೇ ಕಾಯ್ತಿರೋ ಸಲ್ಲು ಸದ್ಯ ‘ಮಾತೃಭೂಮಿ’ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಕೊಂಡಿದ್ದಾರೆ. ಆಲ್ರೆಡಿ ಶೂಟಿಂಗ್ ಮುಗಿಸಿರೋ ಈ ಚಿತ್ರದ ರಿಲೀಸ್ ಡೇಟ್‌ಗಾಗಿ ಫ್ಯಾನ್ಸ್ ಕಣ್ಣಿಗೆ ಎಣ್ಣೆ ಬಿಟ್ಟು ಕಾಯ್ತಿದ್ದಾರೆ. ಇದರ ಬೆನ್ನಲ್ಲೇ ಸಲ್ಲು ಸೂಪರ್ ಹೀರೊ ಆಗಿ ಕಾಣಿಸಿಕೊಳ್ತಾರೆ ಅನ್ನೋ ಟಾಕ್ ನಡುವೆ, ಈಗ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ಹಿಸ್ಟರಿಯಲ್ಲೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಪೌರಾಣಿಕ ಕತೆಯುಳ್ಳ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಅದೂ ಸಣ್ಣಪುಟ್ಟ ಪಾತ್ರವಲ್ಲ, ಮಹಾಭಾರತದ ಅಪ್ರತಿಮ ಯೋಧ, ದಾನಶೂರ ‘ಕರ್ಣ’ನ ಕ್ಯಾರೆಕ್ಟರ್‌ನಲ್ಲಿ ಸಲ್ಲು ಅಬ್ಬರಿಸಲಿದ್ದಾರೆ. ‘ರಂಗ್ ದೇ ಬಸಂತಿ’ಯಂತಹ ಐಕಾನಿಕ್ ಸಿನಿಮಾ ಕೊಟ್ಟಿರೋ ಡೈರೆಕ್ಟರ್ ರಾಕೇಶ್ ಓಂಪ್ರಕಾಶ್ ಮೆಹ್ರಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸಂಪೂರ್ಣವಾಗಿ ಕರ್ಣನ ಜೀವನದ ಸುತ್ತಲೇ ಸಾಗೋ ಈ ಹೈ-ಬಜೆಟ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಒನ್ ಮ್ಯಾನ್ ಶೋ ನಡೆಸಲಿದ್ದಾರೆ ಅನ್ನೋದು ಬಿ-ಟೌನ್ ಲೇಟೆಸ್ಟ್ ಗಾಸ್ಸಿಪ್.

ಆದರೆ ಇಲ್ಲೇ ಇರೋದು ಅಸಲಿ ಟ್ವಿಸ್ಟ್. ಸದ್ಯ ಸಿನಿಮಾ ಪ್ರೇಮಿಗಳಿಗೆ ‘ಕರ್ಣ’ ಅಂದ ತಕ್ಷಣ ನೆನಪಾಗೋದು ರೆಬೆಲ್ ಸ್ಟಾರ್ ಪ್ರಭಾಸ್ ಮಾತ್ರ. ಯಾಕಂದ್ರೆ 2024ರ ಬ್ಲಾಕ್‌ಬಸ್ಟರ್ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಡೈರೆಕ್ಟರ್ ನಾಗ್ ಅಶ್ವಿನ್, ಪ್ರಭಾಸ್ ಅವರನ್ನ ಕರ್ಣನಾಗಿ ತೋರಿಸಿ ಥಿಯೇಟರ್‌ನಲ್ಲಿ ಬೆಂಕಿ ಹಚ್ಚಿದ್ರು. ಪ್ರಭಾಸ್ ಇಟ್ಟಿರೋ ಆ ಬೆಂಚ್‌ಮಾರ್ಕ್ ರೀಚ್ ಆಗೋದು ಅಷ್ಟು ಸುಲಭವಲ್ಲ. ಹೀಗಿರುವಾಗ ಸಲ್ಮಾನ್ ಖಾನ್, ಪ್ರಭಾಸ್ ಕ್ರೇಜ್‌ಅನ್ನು ಮೀರಿಸಿ ಕರ್ಣನ ಪಾತ್ರಕ್ಕೆ ಜೀವ ತುಂಬಬಲ್ಲರಾ ಅನ್ನೋ ದೊಡ್ಡ ಪ್ರಶ್ನೆ ಸದ್ಯ  ಬಾಲಿವುಡ್‌ನಲ್ಲಿ ಸೌಂಡ್ ಮಾಡ್ತಿದೆ.

ಇತ್ತ ಸಲ್ಮಾನ್ ಖಾನ್ ಖುದ್ದಾಗಿ ಈ ಚಾಲೆಂಜಿಂಗ್ ಪಾತ್ರ ಒಪ್ಪಿಕೊಂಡಿದ್ದರೂ, ಅವರ ಅಭಿಮಾನಿಗಳಲ್ಲಿ ಮಾತ್ರ ಒಂದು ರೇಂಜ್‌ಗೆ ನಡುಕ ಶುರುವಾಗಿದೆ. ಯಾಕಂದ್ರೆ ಶರ್ಟ್ ಬಿಚ್ಚಿ ವಿಲನ್‌ಗಳನ್ನ ಚಚ್ಚೋ ಸಲ್ಲು ಭಾಯ್ ಇಮೇಜ್ ಬೇರೆ, ಗಾಂಭೀರ್ಯವಿರೋ ಪೌರಾಣಿಕ ಪಾತ್ರದ ತೂಕವೇ ಬೇರೆ. ಧೋತಿ ಕಟ್ಟಿ, ಕಿರೀಟ ಇಟ್ಟುಕೊಂಡು ಸಲ್ಮಾನ್ ಖಾನ್ ಡೈಲಾಗ್ ಹೊಡೆದ್ರೆ ಜನ ಒಪ್ತಾರಾ..? ಪ್ರಭಾಸ್ ಲುಕ್‌ಗೆ ಕಾಂಪಿಟೇಷನ್ ಕೊಡೋಕೆ ಸಲ್ಮಾನ್ ಗೆ ಸಾಧ್ಯನಾ? ಅನ್ನೋ ಹಾಟ್ ಡಿಬೇಟ್ ಸೋಶಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಶುರು ಆಗಿದೆ.

ಏನೇ ಇರಲಿ, ಸಲ್ಲು ಭಾಯ್ ಮಾತ್ರ ಸೈಲೆಂಟ್ ಆಗಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸೋಕೆ ರೆಡಿಯಾಗ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಕ್ರೇಜಿ ಪ್ರಾಜೆಕ್ಟ್‌ಗಳಿವೆ. ಮಾತೃಭೂಮಿ ಮುಗಿಯುತ್ತಿದ್ದಂತೆ ರಾಜ್ ಮತ್ತು ಡಿಕೆ ನಿರ್ದೇಶನದ ಸೂಪರ್ ಹೀರೋ ಸಿನಿಮಾ ಸೆಟ್ಟೇರಲಿದೆ. ಅದರ ಬೆನ್ನಲ್ಲೇ ಯಶ್ ರಾಜ್ ಫಿಲ್ಮ್ಸ್‌ನ ‘ಟೈಗರ್’ ಸರಣಿಯ ಹೊಸ ಧಮಾಕಾ ಇರಲಿದೆ. ಇಷ್ಟೇ ಅಲ್ಲ, ಸೌತ್ ಸ್ಟಾರ್ ಡೈರೆಕ್ಟರ್ ಅಟ್ಲಿ ಜೊತೆಯೂ ಸಲ್ಲು ಸಿನಿಮಾ ಕನ್ಫರ್ಮ್ ಆಗಿದೆ. ಈ ಸಾಲಿನ ಸಿನಿಮಾಗಳ ಜೊತೆಗೆ ‘ಕರ್ಣ’ನಾಗಿ ಸಲ್ಮಾನ್ ಖಾನ್ ಕಂಬ್ಯಾಕ್ ಮಾಡ್ತಾರಾ? ಬಾಕ್ಸ್ ಆಫೀಸ್ ಧೂಳೀಪಟ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

Exit mobile version