ಕಳೆದ ವಾರ ತೆರೆಕಂಡ ಬ್ರ್ಯಾಟ್ನ ಕನ್ನಡಿಗರು ಒಪ್ಪಿ, ಮೆಚ್ಚಿಕೊಂಡಿದ್ದಾಯ್ತು. ಇದೀಗ ಶಶಾಂಕ್-ಕೃಷ್ಣ ಜೋಡಿ ಪರಭಾಷೆಗಳತ್ತ ಪಯಣಿಸೋ ಮನಸ್ಸು ಮಾಡಿದ್ದಾರೆ. ಜೆನ್ ಝೀ ಹುಡುಗರ ಕ್ರಿಕೆಟ್ ಬೆಟ್ಟಿಂಗ್, ಲವ್, ಕಾನೂನು ಸುವ್ಯವಸ್ಥೆ, ದುಡ್ಡಿನ ದುನಿಯಾ ವಿಷಯಗಳ ಮೇಲೆ ಕೇಂದ್ರೀಕೃತವಾಗಿರೋ ಬ್ರ್ಯಾಟ್ ಸಕ್ಸಸ್ ಕಹಾನಿ ತಿಳ್ಕೊಬೇಕಂದ್ರೆ ಒಮ್ಮೆ ಈ ಸ್ಟೋರಿ ನೋಡಿ.
ಬ್ರ್ಯಾಟ್.. ಕಳೆದ ಶುಕ್ರವಾರ ಬಿಡುಗಡೆಯಾದ ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರ ಜೊತೆ ವಿಮರ್ಶಕರ ಮನಸ್ಸು ಕೂಡ ಗೆದ್ದಿದೆ. ಡಾರ್ಲಿಂಗ್ ಕೃಷ್ಣ ಕೌಸಲ್ಯ ಸುಪ್ರಜಾ ರಾಮ ಚಿತ್ರದ ಬಳಿಕ ಮಗದೊಮ್ಮೆ ಶಶಾಂಕ್ ಜೊತೆ ಹಿಟ್ ನೀಡಿದ್ದಾರೆ. ಒಂದ್ಕಡೆ ಶಾರ್ಟ್ ಕಟ್ನಲ್ಲಿ ಹಣ ಮಾಡೋಕೆ ಹಪಹಪಿಸೋ ಜನ್ ಝೀ ಹುಡುಗರು. ಮತ್ತೊಂದ್ಕಡೆ ಅವ್ರ ಬೆನ್ನತ್ತುವ ಲಾ ಅಂಡ್ ಆರ್ಡರ್.
ಬ್ರ್ಯಾಟ್ ಬಿಗ್ ಹಿಟ್.. ಪರಭಾಷೆಯತ್ತ ಶಶಾಂಕ್ ಕೃಷ್ಣ ಚಿತ್ತ
ಕ್ಲಾಸ್ ಹಾಗೂ ಮಾಸ್ ಆಡಿಯೆನ್ಸ್ ದಿಲ್ ಗೆದ್ದ ‘ಬ್ರ್ಯಾಟ್’..!
ಕಳ್ಳ ಪೊಲೀಸ್ ಆಟದಲ್ಲಿ ಕೃಷ್ಣಲೀಲೆ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಡಾಲರ್ ಮಣಿಯಾಗಿ ಡ್ರ್ಯಾಗನ್ ಮಂಜು, ಪೊಲೀಸ್ ಕಾಪ್ ಆಗಿ ರಮೇಶ್ ಇಂದಿರಾ ಮಸ್ತ್ ಮ್ಯಾಜಿಕ್ ಮಾಡಿದ್ದಾರೆ. ಇನ್ನು ನಾಯಕನಟಿ ಮನಿಶಾ ಕಂದಕೂರು ಚೊಚ್ಚಲ ಚಿತ್ರದಲ್ಲೇ ಫುಲ್ ಮಾರ್ಕ್ಸ್ ಸ್ಕೋರ್ ಮಾಡಿ, ಭವಿಷ್ಯದ ಭರವಸೆಯ ಸ್ಟಾರ್ ನಟಿಮಣಿ ಅನಿಸಿಕೊಂಡಿದ್ದಾರೆ.
ಮೊದಲಿಗೆ ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಿದ ಈ ಸಿನಿಮಾ, ಇಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದ ಹಿನ್ನೆಲೆ, ಇದೀಗ ಪರಭಾಷೆಗಳಿಗೂ ಇದನ್ನ ತಲುಪಿಸೋಕೆ ಸಜ್ಜಾಗಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಬ್ರ್ಯಾಟ್ ರಿಲೀಸ್ ಆಗಲಿದೆ. ಡಿಸೆಂಬರ್ನಲ್ಲಿ ಚಿತ್ರ ಹೊರ ರಾಜ್ಯಗಳಲ್ಲಿ ರಂಜಿಸಲಿದ್ದು, ಕ್ಲಾಸ್ ಹಾಗೂ ಮಾಸ್ ಆಡಿಯೆನ್ಸ್ ಮೆಚ್ಚಿದ ಬ್ರ್ಯಾಟ್ ಬಗ್ಗೆ ಕೃಷ್ಣ ಖುಷಿ ವ್ಯಕ್ತಪಡಿಸಿದ್ರು.

