ಕನ್ನಡ ಚಿತ್ರರಂಗದಲ್ಲೀಗ ಒಂದರಹಿಂದೆ ಒಂದರಂತೆ ಯಶಸ್ವಿ ಚಿತ್ರಗಳು ಬರುತ್ತಿದೆ. ಈಗ ಆ ಸಾಲಿಗೆ ಮಂಜುನಾಥ್ ಕಂದಕೂರ್ ನಿರ್ಮಾಣದ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ “ಬ್ರ್ಯಾಟ್” ಚಿತ್ರ ಕೂಡ ಸೇರಿದೆ. ಕಳೆದವಾರ ತೆರೆಕಂಡ ಈ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಯಶಸ್ಸಿನ ಋಷಿಯನ್ನು ಹಂಚಿಕೊಂಡರು.
ನಮ್ಮ ನಿರೀಕ್ಷೆಗೂ ಮೀರಿ ಜನ ಈ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ ಎಂದು ಮಾತನಾಡಿದ ನಿರ್ದೇಶಕ ಶಶಾಂಕ್, ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರ ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತದೆ ಅಂದುಕೊಂಡಿದ್ದೆ. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ಯುವಕರ ಜೊತೆಗೆ ಫ್ಯಾಮಿಲಿ ಆಡಿಯನ್ಸ್ ಕೂಡ ಹೆಚ್ಚು ಬರುತ್ತಿದ್ದಾರೆ. ಕ್ಲಾಸ್ ಅಥವಾ ಮಾಸ್ ಆಡಿಯನ್ಸ್ ಎಂಬ ಭೇದವಿಲ್ಲದೆ ಎಲ್ಲರೂ ಈ ಚಿತ್ರವನ್ನು ಇಷ್ಟಪಡುತ್ತಿದ್ದಾರೆ.
ನಮ್ಮ ಚಿತ್ರತಂಡ ಬಿಡುಗಡೆಯಾದ ದಿನದಿಂದ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿದೆ. ಹೋದ ಕಡೆ ಎಲ್ಲಾ ಜನರು ಚಿತ್ರದ ಪ್ರತಿ ಸನ್ನಿವೇಶವನ್ನು ಎಂಜಾಯ್ ಮಾಡುತ್ತಾ ನೋಡುತ್ತಿದ್ದಾರೆ. ಕೃಷ್ಣ ಅವರ ಕ್ರಿಸ್ಟಿ ಪಾತ್ರಕ್ಕೆ ಜನ ಫಿದಾ ಆಗಿದ್ದಾರೆ. ಸಹ ಕಲಾವಿದರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ನಮ್ಮ ಚಿತ್ರಕ್ಕೆ ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಇನ್ನೂ ಚಿತ್ರ ನೋಡದವರು ಕುಟುಂಬ ಸಮೇತ ಹತ್ತಿರದ ಚಿತ್ರಮಂದಿರಗಳಿಗೆ ಹೋಗಿ ನೋಡಿ. ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲೂ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಆ ಪೈಕಿ ಮೊದಲಿಗೆ ತೆಲುಗಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದರು.