ಸಕ್ಸಸ್‌ಫುಲ್ ಸಿನಿಮಾಗಳ ಮಾಸ್ಟರ್‌ಮೈಂಡ್ ಮೊಗ್ಗಿನ ಮನಸ್ಸು ಶಶಾಂಕ್ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ಬರ್ತಿದೆ. ಡಾರ್ಲಿಂಗ್ ಕೃಷ್ಣ ಜೊತೆ ಮತ್ತೊಮ್ಮೆ ಕೈ ಜೋಡಿಸಿರೋ ಡೈರೆಕ್ಟರ್, ಬ್ರ್ಯಾಟ್ ಚಿತ್ರವನ್ನ ಇದೇ ತಿಂಗಳಾಂತ್ಯಕ್ಕೆ ಪ್ರೇಕ್ಷಕರಿಗೆ ಉಣಬಡಿಸ್ತಿದ್ದಾರೆ. ಕಿಚ್ಚನ ಬಚ್ಚನ್ ಬಳಿಕ ಮಗದೊಮ್ಮೆ ಅದೇ ಎಕ್ಸ್‌ಪೆರಿಮೆಂಟ್ ಮಾಡಿರೋ ಶಶಾಂಕ್ ಕುರಿತ ಸ್ಪೆಷಲ್ ಖಬರ್ ಇಲ್ಲಿದೆ.
- ಬಚ್ಚನ್ ಶೈಲಿಯ ಬ್ರ್ಯಾಟ್.. ಶಶಾಂಕ್ ಮತ್ತೆ ಆ ಎಕ್ಸ್‌ಪೆರಿಮೆಂಟ್
- ಸಸ್ಪೆನ್ಸ್ ಥ್ರಿಲ್ಲರ್ ಜಾನರ್.. ಕೃಷ್ಣಗೆ ಇದು 100% ನ್ಯೂ ಚಾಪ್ಟರ್..!
- ಸಾಂಗ್ಸ್ ಸೂಪರ್ ಹಿಟ್.. ಡ್ರ್ಯಾಗನ್ ಮಂಜು ಖಡಕ್ ಖಳನಟ
- ಅಕ್ಟೋಬರ್ 17ಕ್ಕೆ ಟ್ರೈಲರ್.. ಅಕ್ಟೋಬರ್ 31ಕ್ಕೆ ಫುಲ್ ಪಿಕ್ಚರ್
ಬ್ರ್ಯಾಟ್.. ಇದೇ ಅಕ್ಟೋಬರ್ 31ಕ್ಕೆ ತೆರೆಗೆ ಬರೋಕ್ಕೆ ಸಜ್ಜಾಗಿರೋ ಕನ್ನಡದ ನಿರೀಕ್ಷಿತ ಸಿನಿಮಾ. ಸಾಲು ಸಾಲು ಸಿನಿಮಾಗಳ ಹಿಟ್ ಡೈರೆಕ್ಟರ್ ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಲೀಡ್‌ನಲ್ಲಿ ನಟಿಸಿರೋ ಸಿನಿಮಾ ಇದು. ಕೌಸಲ್ಯ ಸುಪ್ರಜಾ ರಾಮ ಚಿತ್ರದ ಬಳಿಕ ಮತ್ತೊಮ್ಮೆ ಶಶಾಂಕ್-ಕೃಷ್ಣ ಒಂದಾಗಿದ್ದು, ಈ ಬಾರಿ ಕೂಡ ಮತ್ತೊಂದು ಮ್ಯಾಜಿಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ.
ಯೆಸ್.. ಈಗಾಗ್ಲೇ ಬ್ರ್ಯಾಟ್ ಚಿತ್ರದ ಟೀಸರ್ ಹಾಗೂ ಎರಡು ಸಾಂಗ್ಸ್ ರಿಲೀಸ್ ಆಗಿವೆ. ಸ್ಯಾಂಪಲ್ಸ್ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದ್ದು, ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುವಂತಿವೆ. ನಾನೇ ನೀನಂತೆ ನೀನಂತೆ.. ನೀನೇ ನಾನಂತೆ ನಾನಂತೆ ಸಾಂಗ್ ಎಲ್ಲರ ಗುಂಗಿಡಿಸಿದೆ. ಸಿದ್ ಶ್ರೀರಾಮ್ ಜೊತೆ ಲವ್ 360 ಬಳಿಕ ಶಶಾಂಕ್ ಮತ್ತೊಮ್ಮೆ ಹಿಟ್ ಸಾಂಗ್ ನೀಡಿದ್ದಾರೆ. ಅದ್ರಲ್ಲೂ ಹತ್ತನೇ ತರಗತಿ ಓದುತ್ತಿರೋ ಶಾಲಾ ಬಾಲಕಿಗೆ ಇದರಲ್ಲಿ ಅವಕಾಶ ನೀಡಿ, ಭೇಷ್ ಅನಿಸಿಕೊಂಡಿದ್ದಾರೆ ಶಶಾಂಕ್.
ಜವಾರಿ ಱಪ್ ಸಾಂಗ್ ಗಂಗಿ ಕೂಡ ವಿಶ್ಯುವಲ್ ಟ್ರೀಟ್ ಕೊಡ್ತಿದೆ. ಹಾಟ್ ಹುಡುಗಿ, ಬೊಂಬಾಟ್ ಡ್ಯಾನ್ಸರ್ಸ್ ಹಾಗೂ ಕಲರ್‌ಫುಲ್ ಸೆಟ್‌ನಿಂದ ಲಕಲಕ ಅಂತಿದೆ. ಶಶಾಂಕ್ ಯುಎಸ್‌ಪಿಗಳಲ್ಲಿ ಮ್ಯೂಸಿಕ್ ಕೂಡ ಒಂದು. ಕಥೆ, ಪಾತ್ರಗಳ ಜೊತೆ ಮ್ಯೂಸಿಕ್‌ಗೂ ಹೆಚ್ಚು ಒತ್ತು ಕೊಡುವ ಸ್ಟಾರ್ ಡೈರೆಕ್ಟರ್ ಈ ಬಾರಿ ಮತ್ತೊಂದು ಹೊಸ ಪ್ರಯೋಗ ಮಾಡಿದ್ದಾರೆ. ಅಂದ್ರೆ ಅವರದ್ದೇ ಆ ಹಳೆಯ ಎಕ್ಸ್‌ಪೆರಿಮೆಂಟ್‌ನ ಇಲ್ಲಿ ಅಪ್ಲೈ ಮಾಡಿದ್ದಾರಂತೆ ಶಶಾಂಕ್. ಯೆಸ್.. ಈ ಹಿಂದೆ ಬಚ್ಚನ್ ಸಿನಿಮಾದಲ್ಲಿನ ಸ್ಕ್ರೀನ್ ಪ್ಲೇ ರೀತಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಬ್ರ್ಯಾಟ್‌ಗೆ ಅಪ್ಲೈ ಮಾಡಿ ಕಟ್ಟಿದ್ದಾರೆ ಎನ್ನಲಾಗ್ತಿದೆ.
ಸುದೀಪ್ ಜೊತೆ ಶಶಾಂಕ್ ಮಾಡಿದ ಆ ಸಿನಿಮಾ, ಬಿಗ್ ಸ್ಕೇಲ್‌ನಲ್ಲಿ ಆಗಿತ್ತು. ನೋಡುಗರಿಗೆ ರುಚಿಸುವ ಮೂಲಕ, ಬಾದ್‌ಷಾ ಸುದೀಪ್‌ಗೆ ಕೋಟ್ಯಂತರ ರೂಪಾಯಿ ಸಂಭಾವನೆ ಕೂಡ ನೀಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸಹ ಬಿಗ್ ಧಮಾಕ ಮಾಡಿತ್ತು. ಇದೀಗ ಅದೇ ಸಿನಿಮಾದ ಶೈಲಿಯಲ್ಲಿ ಬ್ರ್ಯಾಟ್ ಮಾಡಿದ್ದಾರಂತೆ. ಈ ಬಗೆಯ ಜಾನರ್‌ನ ಟ್ರೈ ಮಾಡಿ ಬಹಳ ದಿನಗಳೇ ಆಗಿತ್ತು ಶಶಾಂಕ್. ಆದ್ರೀಗ ಕೃಷ್ಣನ ಕರಿಯರ್‌ಗೆ ಅಂಥದ್ದೊಂದು ಮೆಗಾ ಟ್ವಿಸ್ಟ್ ಕೊಡುವ ಲಕ್ಷಣ ತೋರಿದೆ ಬ್ರ್ಯಾಟ್.
ಬ್ರ್ಯಾಟ್ ಸಿನಿಮಾದ ಟ್ರೈಲರ್ ಇದೇ ಅಕ್ಟೋಬರ್ 17ಕ್ಕೆ ಲಾಂಚ್ ಆಗ್ತಿದ್ದು, ಅಕ್ಟೋಬರ್ 31ಕ್ಕೆ ಫುಲ್ ಪಿಕ್ಚರ್ ಪ್ರೇಕ್ಷಕರ ಮುಂದೆ ಬರ್ತಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡುಗರಿಗೆ ರುಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ಇಲ್ಲಿ ಶಶಾಂಕ್ ಬರೀ ಡೈರೆಕ್ಟರ್ ಮಾತ್ರವಲ್ಲ. ಒಳ್ಳೆಯ ಬರಹಗಾರರೂ ಹೌದು. ಒಳ್ಳೆಯ ಪ್ರೇಕ್ಷಕ ಕೂಡ ಹೌದು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್