ರೇಣುಕಾಸ್ವಾಮಿ ಮರ್ಡರ್ ಕೇಸ್ ಹಾಗೂ ಡಿ ಗ್ಯಾಂಗ್‌ನ ಹೋಲುವಂತಿರೋ ಬಾಸ್ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿತ್ತು. ಟೀಸರ್ ಸಖತ್ ವೈರಲ್ ಆದ ಹಿನ್ನೆಲೆ ಬಹುದೊಡ್ಡ ವಿವಾದಕ್ಕೂ ಅದು ಕಾರಣವಾಯ್ತು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ನೋಟಿಸ್ ಕೂಡ ನೀಡಿದ್ರು. ಆದ್ರೀಗ ಬಾಸ್ ಚಿತ್ರಕ್ಕೆ ಡಿಬಾಸ್ ಪತ್ನಿ ವಿಜಯಲಕ್ಷ್ಮೀ ದರ್ಶನ್‌ರಿಂದ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಅದು ನಿಜಾನಾ ಅಲ್ವಾ ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.
- ಬಾಸ್‌ಗೆ ಡಿಬಾಸ್ ಪತ್ನಿ ವಿಜಯಲಕ್ಷ್ಮೀಯಿಂದ ಕ್ಲೀನ್ ಚಿಟ್?
- ಸೆನ್ಸಾರ್ ಬೋರ್ಡ್‌ಗೆ ಸರ್ಟಿಫಿಕೇಟ್ ನೀಡದಂತೆ ನೋಟಿಸ್
- ನೋಟಿಸ್ ನೀಡಿದ್ರೂ ‘ಬಾಸ್’ ಚಿತ್ರಕ್ಕೆ U/A ಪ್ರಮಾಣಪತ್ರ..!!
ಬಾಸ್.. ಸಿಂಗಲ್ ಟೀಸರ್‌ನಿಂದಲೇ ಹಂಗಾಮ ಮಾಡಿದಂತಹ ಸಿನಿಮಾ. ಥೇಟ್ ಡಿಬಾಸ್ ದರ್ಶನ್‌ರ ಡಿ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ, ಕೊಲೆ ಮಾಡಿರೋ ಪ್ರಕರಣದ ಕೈಗನ್ನಡಿ ರೀತಿ ಇದೆ ಬಾಸ್ ಚಿತ್ರದ ಟೀಸರ್. ತನುಷ್ ಶಿವಣ್ಣ ಲೀಡ್‌ನಲ್ಲಿ ನಟಿಸುವುದರ ಜೊತೆ ಸಿನಿಮಾಗೆ ಬಂಡವಾಳ ಹಾಕಿ ನಿರ್ಮಾಣ ಕೂಡ ಮಾಡಿದ್ದಾರೆ. ಇನ್ನೂ ಈ ಹಿಂದೆ ಅದೇ ತನುಷ್ ಜೊತೆ ನಟ್ವರ್‌ಲಾಲ್ ಸಿನಿಮಾ ಮಾಡಿದ್ದ ನಿರ್ದೇಶಕ ಲವ ಅವ್ರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸೀನ್ ಟು ಸೀನ್ ಕಣ್ಣಿಗೆ ಕಟ್ಟಿದಂತೆ ಡಿ ಗ್ಯಾಂಗ್ ಮಾಡಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಂತಿರೋ ಬಾಸ್ ಚಿತ್ರಕ್ಕೆ ಡಿಬಾಸ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಚೆಕ್‌ಮೇಟ್ ಇಟ್ಟಿದ್ರು. ವಕೀಲರಿಂದ ನೇರವಾಗಿ ಸೆನ್ಸಾರ್ ಬೋರ್ಡ್‌ಗೆ ಸೆನ್ಸಾರ್ ಪ್ರಮಾಣ ಪತ್ರ ನೀಡದಿರಲು ನೋಟಿಸ್ ನೀಡಿದ್ರು. ಅದು ನಿಜಕ್ಕೂ ದರ್ಶನ್ ಕುರಿತ ಚಿತ್ರವಾದ್ರೆ ಸದ್ಯ ಕೋರ್ಟ್ ಟ್ರಯಲ್ಸ್ ನಡೆಯುತ್ತಿರೋದ್ರಿಂದ ಎಫೆಕ್ಟ್ ಆಗಲಿದೆ ಅನ್ನೋ ಉದ್ದೇಶದಿಂದ ಹಾಗೆ ಮಾಡಿದ್ರು.
ಆದ್ರೀಗ ಸೆನ್ಸಾರ್ ಮಂಡಳಿಯಿಂದ ಬಾಸ್ ಚಿತ್ರತಂಡಕ್ಕೆ ಯು/ಎ ಸರ್ಟಿಫಿಕೇಟ್ ಸಿಗೋ ಮೂಲಕ ಬಹುತೇಕ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ರಿಲೀಸ್‌ಗೆ ಯಾವುದೇ ಅಡ್ಡಿ ಆತಂಕ ಇಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಇದು ಸ್ವತಃ ವಿಜಯಲಕ್ಷ್ಮೀ ದರ್ಶನ್ ಅವರೇ ಸಿನಿಮಾದ ರಿಲೀಸ್‌ಗೆ ಅನುವು ಮಾಡಿಕೊಟ್ರಾ..? ಇಷ್ಟು ಸುಲಭವಾಗಿ ಸಮಸ್ಯೆ ಬಗೆಹರಿದುಬಿಡ್ತಾ ಅನ್ನೋ ಪ್ರಶ್ನೆಗಳು ಮೂಡುತ್ತಿವೆ. ಆದ್ರೆ ಸೆನ್ಸಾರ್ ಪ್ರಮಾಣ ಪತ್ರ ಕೈಗೆ ಸಿಗ್ತಾ ಇದ್ದಂತೆ ಬಾಸ್ ಚಿತ್ರತಂಡ ಸಿನಿಮಾದ ಮೊದಲ ಸಾಂಗ್ ರಿಲೀಸ್ ಮಾಡಿದೆ.
- ಮತ್ತೆ ವಿವಾದ ಸೃಷ್ಟಿಸುವಂತಿದೆ ‘ಬಾಸ್’ ಮಾಯೆ ಸಾಂಗ್
- ಸ್ಟೇಷನ್‌ನಲ್ಲಿ ದರ್ಶನ್-ಪವಿತ್ರಾ.. ವಿಜಯಲಕ್ಷ್ಮೀ ಕಣ್ಣೀರು
- ಪೊಲೀಸ್ ವ್ಯಾನ್‌ನಲ್ಲಿ ಕೋರ್ಟ್‌ನತ್ತ ಡಿ ಗ್ಯಾಂಗ್ ಜರ್ನಿ..!
- 100% ಕಣ್ಣಿಗೆ ಕಟ್ಟಿದಂತಿದೆ ರೇಣುಕಾಸ್ವಾಮಿ ಮರ್ಡರ್ ಕೇಸ್
ಇದು ಬಾಸ್ ಚಿತ್ರದ ಮೊಟ್ಟ ಮೊದಲ ಸಾಂಗ್. ಲಿರಿಕಲ್ ಸಾಂಗ್ ಆದ್ರೂ ಸಖತ್ ಇಂಪ್ಯಾಕ್ಟ್ ಆಗುವಂತಿದೆ. ಯಾಕಂದ್ರೆ ಇದು ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಅರೆಸ್ಟ್ ಆದಂತಹ ದರ್ಶನ್, ಪವಿತ್ರಾ ಗೌಡ ಹಾಗೂ ಡಿ ಗ್ಯಾಂಗ್‌ನ ಹೋಲುವಂತಿದೆ. ಒಂದೊಂದು ಫ್ರೇಮ್ ಕೂಡ ಅಂದಿನ ಚಿತ್ರಣವನ್ನ ಎಳೆ ಎಳೆಯಾಗಿ ಬಿಚ್ಚಿಡುವಂತಿದೆ. ಅದ್ರಲ್ಲೂ ಬದುಕು ಗಡಿಯಾರ ನಿಂತಂತಾಗಿದೆ. ಕಾಲವೇ ಮೋಸ ಮಾಡಿತಾ..? ಹೇಗಿದ್ದ ಸೂಪರ್ ಸ್ಟಾರ್ ದರ್ಶನ್ ಹೀಗೆ ಖಾಕಿ ಎದುರು ಮಂಕಾದ ಅನ್ನೋದನ್ನ ಡಿಟೈಲ್ಡ್ ಆಗಿ ಹೇಳಲಾಗಿದೆ.
ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿರೋ ಈ ಹಾಡಿಗೆ ನವೀನ್ ಸಜ್ಜು ಗಾಯನವಿದೆ. ದಾವಿ ಸುರೇಶ್ ಸಂಗೀತದ ಈ ಹಾಡು ಇದೀಗ ಮತ್ತೊಮ್ಮೆ ವಿವಾದಕ್ಕೆ ನಾಂದಿ ಹಾಡುವಂತಿದೆ. ಯಾಕಂದ್ರೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್‌ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ತಮ್ಮ ಮೊಬೈಲ್ ಫೋನ್‌ಗಳನ್ನ ಹ್ಯಾಂಡೋವರ್ ಮಾಡುವ ಸನ್ನಿವೇಶದಿಂದ ಹಿಡಿದು, ಅದೇ ಖಾಕಿ ವಾಹನದಲ್ಲಿ ಕೋರ್ಟ್ ಗೆ ತೆರಳುವ ದೃಶ್ಯಗಳಿವೆ. ಅದನ್ನ ಕಂಡು ವಿಜಯಲಕ್ಷ್ಮೀ ಪಾತ್ರಧಾರಿ ಬಿಕ್ಕಿ ಬಿಕ್ಕಿ ಅಳುವ ಸನ್ನಿವೇಶವಿದೆ. ವಿಜಿ ದರ್ಶನ್ ಆಗಿ ಪಾಯಲ್, ಪವಿತ್ರ ಆಗಿ ವಂದಿತಾ ಗೌಡ ಕಾಣಸಿಗಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





