ದಿ ವೆಯ್ಟ್ ಈಸ್ ಓವರ್.. ಡಿಬಾಸ್ ದರ್ಶನ್ ಹಾಗೂ ರೇಣುಕಾಸ್ವಾಮಿ ಮರ್ಡರ್ ಕೇಸ್ ಕುರಿತ ಸಿನಿಮಾ ಎನ್ನಲಾಗಿದ್ದ ಬಾಸ್ ಸಿನಿಮಾ ಕೊನೆಗೂ ರಿಲೀಸ್ ಹಂತಕ್ಕೆ ಬಂದಿದೆ. ಇದೇ ಆಗಸ್ಟ್ 7ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದ್ದು, ಕೋರ್ಟ್ ಸೇರಿದಂತೆ ದಚ್ಚು ಹಾಗೂ ದಾಸನ ಕುಟುಂಬ ತನುಷ್ ಶಿವಣ್ಣಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಅದ್ರ ಡಿಟೈಲ್ಡ್ ರಿಪೋರ್ಟ್ ನಿಮಗಾಗಿ ಕಾಯ್ತಿದೆ. ನೋಡಿ.
- ಡಿಬಾಸ್ ವಕೀಲರಿಗೆ ‘ಬಾಸ್’ ಪ್ರದರ್ಶನ.. ತನುಷ್‌ಗೆ ಕ್ಲೀನ್‌ಚಿಟ್
- ಸುಪ್ರೀಂಗೆ ತೆರಳದಿರಲು ದರ್ಶನ್ ಆದೇಶ.. ವಿಜಿ ಗ್ರೀನ್ ಸಿಗ್ನಲ್..!
- ಬಾಸ್ ಫಸ್ಟ್ ಪ್ರೇಕ್ಷಕ ದಚ್ಚು ಪರ ವಕೀಲ.. ಪ್ರಥಮ್ ಹೇಳಿದ್ದೇನು?
- ಗ್ಯಾರಂಟಿ ನ್ಯೂಸ್ನಲ್ಲಿ ಆ ರೋಚಕ ಕಾನೂನು ಸಮರದ ಕಹಾನಿ.!
ಬಾಸ್ ಅಂದಾಕ್ಷಣ ನೆನಪಾಗೋದೇ ಡಿಬಾಸ್ ದರ್ಶನ್. ಅದ್ರಲ್ಲೂ ಬಾಸ್ ಚಿತ್ರದ ಟೀಸರ್ ಹಾಗೂ ಸಾಂಗ್‌ನ ನೋಡಿದಾಗ ಅದು ಪಕ್ಕಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರೇಣುಕಾಸ್ವಾಮಿ ಮರ್ಡರ್ ಕೇಸ್ ಕುರಿತ ಸಿನಿಮಾದಂತೆ ಇದೆಯಲ್ವಾ ಅನ್ನೋ ಅನುಮಾನ ಕಾಡದೇ ಇರಲ್ಲ. ಅದೇ ಕಾರಣದಿಂದ ಚಿತ್ರತಂಡದ ವಿರುದ್ಧ ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ದರ್ಶನ್ ಕಾನೂನು ಸಮರಕ್ಕೆ ಮುಂದಾಗಿದ್ರು.
ಮೊದಲು ಸೆಷನ್ಸ್ ಕೋರ್ಟ್.. ನಂತರ ಹೈ ಕೋರ್ಟ್ ಅಂತೆಲ್ಲಾ ಹೋಗಿ ನಾಯಕನಟ ಕಮ್ ಪ್ರೊಡ್ಯೂಸರ್ ತನುಷ್ ಶಿವಣ್ಣ ಕೋರ್ಟ್‌ಗಳಿಗಾಗಿಯೇ ಲಕ್ಷಾಂತರ ರೂಪಾಯಿ ವ್ಯಯಿಸಿದ್ರು. ಆದ್ರೆ ಎಲ್ಲೆಡೆ ತೀರ್ಪು ನಿರ್ದೇಶಕ ಲವ ಹಾಗೂ ತನುಷ್ ಶಿವಣ್ಣ ಪರವೇ ಬಂತು. ಹೈ ಕೋರ್ಟ್ ತನಕ ಹೋದಂತಹ ದರ್ಶನ್.. ಕೊನೆಗೆ ಸುಪ್ರೀಂಗೆ ಹೋಗದಿರಲು ನಿರ್ಧರಿಸಿದ್ರು. ದಚ್ಚು ಆದೇಶದಂತೆ ವಿಜಯಲಕ್ಷ್ಮೀ ಅವರು ಸುಪ್ರೀಂಗೆ ತೆರಳದೆ, ಬಾಸ್ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದು ಖುಷಿಯ ವಿಚಾರ. ಅದಕ್ಕೆ ಧನ್ಯವಾದ ಹೇಳುವ ಮೂಲಕ ತುನುಷ್ ಶಿವಣ್ಣ ಕೂಡ ಪೋಸ್ಟ್ ಹಂಚಿಕೊಂಡಿದ್ರು.
ಎಲ್ಲಕ್ಕಿಂತ ಮಿಗಿಲಾಗಿ ತನುಷ್ ಶಿವಣ್ಣ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ, ದರ್ಶನ್ ಪರ ವಕೀಲ ಪ್ರಥಮ್ ಬಾಸ್ ಸಿನಿಮಾನ ವೀಕ್ಷಿಸಿದ್ದಾರೆ. ಅವರು ಚಿತ್ರ ನೋಡಿದ ಬಳಿಕ ವಿಜಯಲಕ್ಷ್ಮೀ ಹಾಗೂ ದರ್ಶನ್ ಜೊತೆ ಚರ್ಚಿಸಿ, ರಿಲೀಸ್‌ಗೆ ಓಕೆ ಮಾಡಿದ್ದಾರಂತೆ. ಹಾಗಾಗಿ ದಚ್ಚು ಪರ ವಕೀಲ ಪ್ರಥಮ್ ಅವ್ರೇ ಬಾಸ್ ಮೊದಲ ವೀಕ್ಷಕ ಅಂದ್ರೆ ತಪ್ಪಾಗಲ್ಲ.
ಬಾಸ್ ಸಿನಿಮಾದಲ್ಲಿ ವಂದಿತಾ ಗೌಡ ಹಾಗೂ ಪಾಯಲ್ ಚಂಗಪ್ಪ ಇಬ್ಬರು ನಾಯಕನಟಿಯರಿದ್ದು, ಗ್ಲಾಮರ್‌ಗೂ ಕೊರತೆ ಇಲ್ಲ. ಟೀಸರ್, ಟ್ರೈಲರ್ ನೋಡಿದ್ರೆ ಸಿನಿಮಾದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರೋ ಸಾಧ್ಯತೆ ಜಾಸ್ತಿಯಿದೆ. ಕ್ಲೈಮ್ಯಾಕ್ಸ್ ಸಖತ್ ಇಂಪ್ರೆಸ್ಸೀವ್ ಆಗಿರಲಿದ್ದು, ಡಿ ಬಾಸ್ ದರ್ಶನ್ ಫ್ಯಾನ್ಸ್‌ಗೆ ಇದು ಜಾಸ್ತಿ ಕನೆಕ್ಟ್ ಆಗಲಿದೆ ಅನ್ನೋ ಮಾತುಗಳು ಕೇಳಿಬರ್ತಿವೆ.
ಒಟ್ಟಾರೆ ಈ ಎಲ್ಲಾ ಏಳು ಬೀಳುಗಳ ನಡುವೆ ಬಾಸ್ ಸಿನಿಮಾ ಗ್ರ್ಯಾಂಡ್ ಆಗಿ ಇದೇ ಆಗಸ್ಟ್ 7ರಂದು ಬಿಡುಗಡೆ ಆಗ್ತಿದೆ. ಎಲ್ಲಾ ಅಂತೆ ಕಂತೆಗಳಿಗೂ ಅಂದೇ ಉತ್ತರ ಸಿಗಲಿದ್ದು, ಚಿತ್ರತಂಡ ಮಾತ್ರ ತಮ್ಮ ಸಿನಿಮಾದ ಕುರಿತು ಸಿಕ್ಕಾಪಟ್ಟೆ ಕಾನ್ಫಿಡೆಂಟ್ ಆಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
