ರಾಮಾಯಣ ಟ್ರೈಲರ್ ಬಳಿಕ ಸೀತೆ ರೋಲ್ ಸಖತ್ ಸೆನ್ಸೇಷನ್: ಶ್ರೀನಿಧಿ ಶೆಟ್ಟಿ ಹೇಳಿದ್ದೇನು?

Untitled design (30)

ರಾಮಾಯಣ ಟ್ರೈಲರ್ ರಿಲೀಸ್ ಆಗಿದ್ದೇ ಆಗಿದ್ದು ಸೀತೆ ಪಾತ್ರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಯೆಸ್.. ಸಾಯಿ ಪಲ್ಲವಿ ಸೂಟ್ ಆಗಲ್ಲ. ಆಕೆ ಹಿಂದೆ ನಿಂತಿರೋ ಜ್ಯೂನಿಯರ್ ಆರ್ಟಿಸ್ಟ್ ಚೆನ್ನಾಗಿದ್ದಾರೆ. ಹಾಗೆ ಹೀಗೆ ಅಂತೆಲ್ಲಾ ಮಾತುಗಳು ಕೇಳಿಬರ್ತಿವೆ. ಈ ಮಧ್ಯೆ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಸೀತೆ ರೋಲ್ ರಿಜೆಕ್ಟ್  ಮಾಡಿರೋ ಸುದ್ದಿ ಕೂಡ ಜೋರಾಗಿ ಹರಿದಾಡ್ತಿದೆ. ಆದ್ರೆ ಗ್ಯಾರಂಟಿ ನ್ಯೂಸ್‌‌ನಲ್ಲಿ ಖುದ್ದು ಶ್ರೀನಿಧಿ ನೀಡಿರೋ ಎಕ್ಸ್‌‌ಕ್ಲೂಸಿವ್ ಸ್ಪಷ್ಟನೆಯನ್ನ ಕಣ್ತುಂಬಿಕೊಳ್ಳಿ.

ರಾಮಾಯಣ.. ಭಾರತೀಯ ಚಿತ್ರರಂಗದ ದುಬಾರಿ ಸಿನಿಮಾ. ಹೌದು.. ಬರೋಬ್ಬರಿ 4 ಸಾವಿರ ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಾಗ್ತಿರೋ ಈ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗ್ತಿದ್ದು, ಮೊದಲ ಭಾಗದ ಟ್ರೈಲರ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ದೀಪಾವಳಿಗೆ ತೆರೆಗೆ ಬರ್ತಿರೋ ರಾಮಾಯಣ ಪಾರ್ಟ್-1ನಲ್ಲಿ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ, ನಮಿತ್ ಮಲ್ಹೋತ್ರಾ ನಿರ್ಮಾಣದ ರಾಮಾಯಣ ಸೀತೆ ಪಾತ್ರದಿಂದ ಅತೀವ ಚರ್ಚೆಗೆ ಗ್ರಾಸವಾಗಿದೆ.

ಯೆಸ್.. ಸಾಯಿ ಪಲ್ಲವಿ ಸೀತೆ ಪಾತ್ರಕ್ಕೆ ಸೂಟ್ ಆಗ್ತಿಲ್ಲ. ಇನ್ನೂ ಬೇರೆ ಯಾರನ್ನಾದ್ರೂ ಆಯ್ಕೆ ಮಾಡಿಕೊಳ್ಳಬಹುದಿತ್ತು ಅನ್ನೋ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರ್ತಿವೆ. ಅದ್ರಲ್ಲೂ ಸಾಯಿ ಪಲ್ಲವಿ ಹಿಂದೆ ದೀಪ ಹಿಡಿದು ನಿಂತಿದ್ದ ಜೂನಿಯರ್ ಆರ್ಟಿಸ್ಟ್ ಸುರಭಿ ದಾಸ್ ಸೀತೆ ಪಾತ್ರಧಾರಿ ಸಾಯಿ ಪಲ್ಲವಿಗಿಂತ ಬ್ಯೂಟಿಫುಲ್ ಆಗಿದ್ದಾರೆ ಅನ್ನೋ ಮೀಮ್ಸ್, ಟ್ರೋಲ್ಸ್ ಜಾಸ್ತಿ ಆಗ್ತಿವೆ. ರಾತ್ರೋ ರಾತ್ರಿ ಸುರಭಿ ದಾಸ್ ಫುಲ್ ಫೇಮಸ್ ಕೂಡ ಆಗಿಬಿಟ್ಟಿದ್ದಾರೆ.

ಆದ್ರೆ ಅಸಲಿ ಮ್ಯಾಟರ್ ಏನಪ್ಪಾ ಅಂದ್ರೆ.. ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಸೀತೆಯಾಗಿ ರಣ್‌ಬೀರ್ ಕಪೂರ್‌ಗೆ ನಮ್ಮ ಕನ್ನಡತಿ ಶ್ರೀನಿಧಿ ಶೆಟ್ಟಿ ಜೋಡಿಯಾಗಬೇಕಿತ್ತು. ಯಶ್ ಜೊತೆ ಮತ್ತೊಮ್ಮೆ ನಟಿಸಬೇಕಿತ್ತು ಕೆಜಿಎಫ್‌‌ ಕ್ವೀನ್ ಶ್ರೀನಿಧಿ ಶೆಟ್ಟಿ. ಆಡಿಷನ್‌ಗೆ ಹೋಗಿದ್ದಂತಹ ಕೆಜಿಎಫ್ ಚೆಲುವೆ, ಸೀತೆ ಪಾತ್ರವನ್ನ ರಿಜೆಕ್ಟ್ ಮಾಡಿ ಬಂದಿದ್ದಾರೆ ಅನ್ನೋ ಸುದ್ದಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆದ್ರೆ ಅದಕ್ಕೆ ನಮ್ಮ ಗ್ಯಾರಂಟಿ ನ್ಯೂಸ್‌‌ ಮೂಲಕ ಅಧಿಕೃತವಾಗಿ ಸ್ಪಷ್ಟನೆ ನೀಡಿರೋ ಶ್ರೀನಿಧಿ ಶೆಟ್ಟಿ, ನಾನು ಆಡಿಷನ್ಸ್‌ಗೆ ಹೋಗಿದ್ದು ನಿಜ. ಆದ್ರೆ ಆ ಪಾತ್ರಕ್ಕಾಗಿ ಸಾಯಿ ಪಲ್ಲವಿ ಆಯ್ಕೆ ಆಗಿದ್ದಾರೆ. ನಾನು ಸೆಲೆಕ್ಟ್ ಆಗಿಲ್ಲ. ಅದ್ಯಾಕೆ ಅದನ್ನ ಹೀಗೆ ಎಲ್ಲೆಡೆ ತಿರುಚಿ ಸುದ್ದಿ ಮಾಡ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಹೌದು.. ರಾಮಾಯಣ ಸಿನಿಮಾದಂತಹ ಬಿಗ್ ಸ್ಕೇಲ್ ಬಿಗ್ ಬಜೆಟ್ ಬಿಗ್ ಕ್ಯಾನ್ವಾಸ್ ಚಿತ್ರದಲ್ಲಿ ಸೀತೆ ಪಾತ್ರದ ಆಫರ್ ಬಂದ್ರೆ ನಾನ್ಯಾಕೆ ಅದನ್ನ ರಿಜೆಕ್ಟ್ ಮಾಡಲಿ..? ಆಯ್ಕೆ ಆಗಲಿಲ್ಲ ಅಷ್ಟೇ ಎಂದಿದ್ದಾರೆ. ಅಂದಹಾಗೆ ಶ್ರೀನಿಧಿ ಶೆಟ್ಟಿ ಈ ಸ್ಪಷ್ಟನೆ ಕೊಟ್ಟು ಒಂದು ವರ್ಷವೇ ಕಳೆದಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಆಕೆ ರಿಜೆಕ್ಟ್ ಮಾಡಿದ್ದಾರೆ ಅನ್ನೋ ಸುದ್ದಿ ಸುಂಟರಗಾಳಿ ರೀತಿ ಗಿರಕಿ ಹೊಡೆಯುತ್ತಿದೆ.

ನಾನಿ ಜೊತೆ ಹಿಟ್-3 ಸಿನಿಮಾದ ಪ್ರಮೋಷನ್ಸ್ ವೇಳೆ ನಮ್ಮ ಗ್ಯಾರಂಟಿ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ರಾಮಾಯಣದ ಸೀತೆ ಪಾತ್ರದ ಆಡಿಷನ್ ಬಗ್ಗೆ ಮುಕ್ತವಾಗಿ ಮಾತನಾಡಿದ್ರು ಶ್ರೀನಿಧಿ ಶೆಟ್ಟಿ. ಅಂದಹಾಗೆ ರಾಮಾಯಣ ಸಿನಿಮಾ ಬರೀ ದೃಶ್ಯಕಾವ್ಯವಲ್ಲ.. ನಮ್ಮ ಎಮೋಷನ್. ನಮ್ಮ ನಂಬಿಕೆ. ನಮ್ಮ ಭಕ್ತಿಯ ಪ್ರತೀಕವೇ ಸರಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

 

 

 

Exit mobile version